ನಮಸ್ಕಾರ ದೋಸ್ತ್ರ, ಗವರ್ನಮೆಂಟ್ ಇಂದ ಒಂದು ಸೂಪರ್ ಇಂಪಾರ್ಟೆಂಟ್ ಅಪ್ಡೇಟ್ ಬಂದಿದೆ. ನಿಮ್ಮ ಆಧಾರ್ ಕಾರ್ಡ್ 10 ವರ್ಷ ಹಳೆಯದಾಗಿದ್ರೆ, ಈಗಲೇ ಡಾಕ್ಯುಮೆಂಟ್ಸ್ ಅಪ್ಡೇಟ್ ಮಾಡೋದು ತುಂಬಾನೇ ಮುಖ್ಯ. ಇದಕ್ಕೆ ನೀವು ಎಲ್ಲಿಗೂ ಓಡಾಡಬೇಕಾಗಿಲ್ಲ, ಆಧಾರ್ ಸೆಂಟರ್‌ಗೆ ಹೋಗೋ ಅವಶ್ಯಕತೆಯೂ ಇಲ್ಲ.
ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ಇಂದಾನೆ, ಮನೆಯಲ್ಲಿ ಕೂತು, ಕೇವಲ 5 ನಿಮಿಷದಲ್ಲಿ, ಸಂಪೂರ್ಣವಾಗಿ ಫ್ರೀಯಾಗಿ ಅಪ್ಡೇಟ್ ಮಾಡಬಹುದು.
ಈ ಪ್ರೊಸೆಸ್ ಹೇಗೆ ಮಾಡೋದು ಅಂತ ಕಂಪ್ಲೀಟ್ Step By Step ಗೈಡ್ ಇಲ್ಲಿದೆ. ಬೇಗ ಇದನ್ನು ಯೂಸ್ ಮಾಡ್ಕೊಳ್ಳಿ!
ಯಾಕೆ ಆಧಾರ್ ಡಾಕ್ಯುಮೆಂಟ್ ಅಪ್ಡೇಟ್ ಇಂಪಾರ್ಟೆಂಟ್?
ಸದ್ಯ ಗವರ್ನಮೆಂಟ್ ರೂಲ್ಸ್ ಪ್ರಕಾರ, ನಿಮ್ಮ ಆಧಾರ್ ಕಾರ್ಡ್ ಹತ್ತು ವರ್ಷಕ್ಕಿಂತ ಹಳೆಯದಾಗಿದ್ರೆ, ಅದಕ್ಕೆ ಹೊಸದಾಗಿ ಎರಡು ಡಾಕ್ಯುಮೆಂಟ್ಸ್ – Proof ಆಫ್ ಐಡೆಂಟಿಟಿ (PoI) ಮತ್ತು ಪ್ರೂಫ್ ಆಫ್ ಅಡ್ರೆಸ್ (PoA) ಅಪ್ಡೇಟ್ ಮಾಡೋದು ಕಡ್ಡಾಯ. ಇದು ನಿಮ್ಮ ಐಡೆಂಟಿಟಿ ಮತ್ತೆ ಅಡ್ರೆಸ್ ಮಾಹಿತಿಯನ್ನು ಸರಿಯಾಗಿ ಇಡೋಕೆ ಹೆಲ್ಪ್ ಮಾಡುತ್ತೆ. ನಿಮ್ಮ ಎಲ್ಲಾ ಸರ್ಕಾರಿ ಸೇವೆಗಳು, ಸಬ್ಸಿಡಿಗಳು ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರೋದ್ರಿಂದ, ಇದನ್ನು ಅಪ್ಡೇಟ್ ಮಾಡ್ಕೊಳ್ಳೋದು ತುಂಬಾನೇ ಮುಖ್ಯ. ಇಲ್ಲಾಂದ್ರೆ ಫ್ಯೂಚರ್ ಅಲ್ಲಿ ಪ್ರಾಬ್ಲಮ್ಸ್ ಆಗೋ ಚಾನ್ಸ್ ಇದೆ.
ಮನೆಯಲ್ಲೇ ಫ್ರೀಯಾಗಿ ಅಪ್ಡೇಟ್ ಮಾಡಿ, ಚಾರ್ಜ್ ತಪ್ಪಿಸಿ!
ಸಾಮಾನ್ಯವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡೋಕೆ ನೀವು ಆಧಾರ್ ಸೆಂಟರ್‌ಗೆ ಹೋಗಿದ್ರೆ, ₹75 ಚಾರ್ಜ್ ಮಾಡ್ತಾರೆ. ಆದರೆ ಈಗ ಇರೋ ಬಿಗ್ ಚಾನ್ಸ್ ಏನಂದ್ರೆ, ನೀವು ಜೂನ್ 14, 2026 ರ ತನಕ ನಿಮ್ಮ ಆಧಾರ್ ಕಾರ್ಡ್ ಡಾಕ್ಯುಮೆಂಟ್ಸ್ ಅನ್ನು ಆನ್ಲೈನ್‌ನಲ್ಲಿ ಫ್ರೀಯಾಗಿ ಅಪ್ಡೇಟ್ ಮಾಡಬಹುದು. ಈ ದಿನಾಂಕ ಆದ್ಮೇಲೆ ಮತ್ತೆ ಚಾರ್ಜ್ ಅಪ್ಲೈ ಆಗೋ ಸಾಧ್ಯತೆ ಇದೆ. ಸೋ, ಈ ಫ್ರೀ ಆಫರ್ ಇರೋವಾಗ್ಲೇ ಟೈಮ್ ವೇಸ್ಟ್ ಮಾಡ್ದೆ ಅಪ್ಡೇಟ್ ಮಾಡ್ಕೊಂಡು ಹಣ ಉಳಿಸಿ.
ಆಧಾರ್ ಡಾಕ್ಯುಮೆಂಟ್ ಅಪ್ಡೇಟ್ ಗೆ ಏನೆಲ್ಲಾ ಬೇಕು?
- ನಿಮ್ಮ ಮೊಬೈಲ್ ಫೋನ್ ಅಥವಾ ಲ್ಯಾಪ್ಟಾಪ್.
- ಒಳ್ಳೆ ಇಂಟರ್ನೆಟ್ ಕನೆಕ್ಷನ್.
- ನಿಮ್ಮ ಆಧಾರ್ ನಂಬರ್ ಮತ್ತು ಅದಕ್ಕೆ ಲಿಂಕ್ ಆಗಿರೋ ಮೊಬೈಲ್ ನಂಬರ್ (OTP ಬರೋಕೆ).
- ಪ್ರೂಫ್ ಆಫ್ ಐಡೆಂಟಿಟಿ (PoI) ಡಾಕ್ಯುಮೆಂಟ್ (ಉದಾ: ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್).
- ಪ್ರೂಫ್ ಆಫ್ ಅಡ್ರೆಸ್ (PoA) ಡಾಕ್ಯುಮೆಂಟ್ (ಉದಾ: ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್). ಎಲ್ಲಾ ಡಾಕ್ಯುಮೆಂಟ್ಸ್ ಕ್ಲಿಯರ್ ಸ್ಕ್ಯಾನ್ ಕಾಪಿ ಇರಲಿ.
ಮೊದಲಿಗೆ ಆಧಾರ್ ಪೋರ್ಟಲ್ ಗೆ ಲಾಗಿನ್ ಆಗೋದು ಹೇಗೆ?
ಮೊದಲು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್‌ನಲ್ಲಿ Chrome ಅಥವಾ ಬೇರೆ ಯಾವುದಾದ್ರೂ ಬ್ರೌಸರ್ ಓಪನ್ ಮಾಡಿ. ಅಲ್ಲಿ ‘SSUP’ ಅಂತ ಟೈಪ್ ಮಾಡಿ ಸರ್ಚ್ ಮಾಡಿ.
ಫಸ್ಟ್ ಬರೋ ಲಿಂಕ್ (ಸಾಮಾನ್ಯವಾಗಿ UIDAI ಅಧಿಕೃತ ಪೋರ್ಟಲ್) ಮೇಲೆ ಕ್ಲಿಕ್ ಮಾಡಿ.
ಪೋರ್ಟಲ್ ಓಪನ್ ಆದ್ಮೇಲೆ, ನಿಮಗೆ ‘Login’ ಅನ್ನೋ ಆಪ್ಷನ್ ಕಾಣಿಸುತ್ತೆ, ಅದರ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ನಿಮ್ಮ 12 ಅಂಕಿಯ ಆಧಾರ್ ನಂಬರ್ ಮತ್ತೆ ಸ್ಕ್ರೀನ್ ಮೇಲೆ ಕಾಣಿಸೋ ಕ್ಯಾಪ್ಚಾ ಕೋಡ್ ಅನ್ನು ಎಂಟರ್ ಮಾಡಿ. ಆಮೇಲೆ ‘Login with OTP‘ ಬಟನ್ ಕ್ಲಿಕ್ ಮಾಡಿ.
OTP ಎಂಟರ್ ಮಾಡಿ ಪೋರ್ಟಲ್ ಗೆ ಲಾಗಿನ್ ಮಾಡಿ
ನೀವು ‘Login with OTP’ ಕ್ಲಿಕ್ ಮಾಡಿದ ಕೂಡಲೇ, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರೋ ಮೊಬೈಲ್ ನಂಬರ್‌ಗೆ ಒಂದು One Time Password (OTP) ಬರುತ್ತೆ. ಆ OTP ನ ಕರೆಕ್ಟ್ ಆಗಿ ಅಲ್ಲಿರೋ ಬಾಕ್ಸ್‌ನಲ್ಲಿ ಎಂಟರ್ ಮಾಡಿ.
OTP ಎಂಟರ್ ಮಾಡಿದ್ಮೇಲೆ, ಮತ್ತೆ ‘Login’ ಬಟನ್ ಮೇಲೆ ಕ್ಲಿಕ್ ಮಾಡಿ. ಇವಾಗ ನೀವು ಆಧಾರ್ ಪೋರ್ಟಲ್ ಒಳಗೆ Successful ಲಾಗಿನ್ ಆಗಿರ್ತೀರ. ಇಲ್ಲಿ ನಿಮಗೆ ಆಧಾರ್ ಕಾರ್ಡ್‌ಗೆ ಸಂಬಂಧಪಟ್ಟ ಹಲವು ಸೇವೆಗಳು ಕಾಣಿಸುತ್ತೆ.
ಡಾಕ್ಯುಮೆಂಟ್ ಅಪ್ಡೇಟ್ ಸರ್ವಿಸ್ ಅನ್ನು ಹುಡುಕಿ
ಪೋರ್ಟಲ್ ಗೆ ಲಾಗಿನ್ ಆದ್ಮೇಲೆ ನಿಮಗೆ ತುಂಬಾ ಆಪ್ಷನ್ ಗಳು ಕಾಣಿಸುತ್ತೆ. ಇವುಗಳಲ್ಲಿ ನೀವು ‘Document Update‘ ಅನ್ನೋ ಸರ್ವಿಸ್ ಅನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಬೇಕು. ಈ ಆಪ್ಷನ್ ಕ್ಲಿಕ್ ಮಾಡಿದ ಮೇಲೆ, ನಿಮಗೆ ಇನ್ನೊಂದು ಸಾರಿ ಫ್ರೀ ಅಪ್ಡೇಟ್ ಮಾಡೋ ಕೊನೆಯ ದಿನಾಂಕ – ಜೂನ್ 14, 2026 ಅನ್ನು ತೋರಿಸುತ್ತೆ. ಇದು ನಿಮಗೆ ಇರೋ ಟೈಮ್ ಲಿಮಿಟ್ ಅನ್ನು ನೆನಪಿಸುತ್ತೆ. ಈ ಅವಕಾಶವನ್ನು ಮಿಸ್ ಮಾಡ್ಕೋಬೇಡಿ.
ಅಪ್ಡೇಟ್ ಗೈಡ್‌ಲೈನ್ಸ್ & ನಿಮ್ಮ ಡೀಟೇಲ್ಸ್ ಚೆಕ್ ಮಾಡಿ
‘Document Update’ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ಮೇಲೆ ಒಂದು ಹೊಸ ಪೇಜ್ ಓಪನ್ ಆಗುತ್ತೆ. ಅಲ್ಲಿ ಡಾಕ್ಯುಮೆಂಟ್ಸ್ ಅಪ್ಡೇಟ್ ಬಗ್ಗೆ ಕೆಲವು ಇಂಪಾರ್ಟೆಂಟ್ ಗೈಡ್‌ಲೈನ್ಸ್ ಮತ್ತು ಇನ್ಫರ್ಮೇಷನ್ ಇರುತ್ತೆ.
ಇವೆಲ್ಲಾ ಒಂದ್ಸಲ ನೀಟಾಗಿ ಓದ್ಕೊಂಡು ‘Next’ ಬಟನ್ ಮೇಲೆ ಕ್ಲಿಕ್ ಮಾಡಿ. ಆಮೇಲೆ ನಿಮ್ಮ ಕರೆಂಟ್ ಆಧಾರ್ ಡೀಟೇಲ್ಸ್ (ಹೆಸರು, ಅಡ್ರೆಸ್) ಸ್ಕ್ರೀನ್ ಮೇಲೆ ಕಾಣಿಸುತ್ತೆ.
ಎಲ್ಲವೂ ಸರಿ ಇದೆಯಾ ಅಂತ ಚೆಕ್ ಮಾಡಿ, ಬಾಕ್ಸ್ ಟಿಕ್ ಮಾಡಿ, ಮತ್ತೊಮ್ಮೆ ‘Next’ ಕ್ಲಿಕ್ ಮಾಡಿ.
ಡಾಕ್ಯುಮೆಂಟ್ ಅಪ್ಲೋಡ್ ಮಾಡೋ ರೂಲ್ಸ್ ನಿಮಗೆ ಗೊತ್ತಿರಲಿ
- ಡಾಕ್ಯುಮೆಂಟ್ ಫೈಲ್ ಸೈಜ್ 2MB ಗಿಂತ ಕಮ್ಮಿ ಇರಬೇಕು.
- PDF, JPEG ಅಥವಾ PNG ಫಾರ್ಮ್ಯಾಟ್ ನಲ್ಲಿ ಮಾತ್ರ ಅಪ್ಲೋಡ್ ಮಾಡಬೇಕು.
- ಅಪ್ಲೋಡ್ ಮಾಡೋ ಡಾಕ್ಯುಮೆಂಟ್ ಕ್ಲಿಯರ್ ಆಗಿ ಸ್ಕ್ಯಾನ್ ಆಗಿರಬೇಕು, ಮಸುಕಾಗಿ ಇರಬಾರದು.
- ಒರಿಜಿನಲ್ ಡಾಕ್ಯುಮೆಂಟ್ಸ್ ನ ಫೋಟೋ/ಸ್ಕ್ಯಾನ್ ಮಾತ್ರ ಹಾಕಿ, ಎಡಿಟ್ ಮಾಡಿರೋದು ಹಾಕಿದ್ರೆ ನಿಮ್ಮ ರಿಕ್ವೆಸ್ಟ್ ರಿಜೆಕ್ಟ್ ಆಗುತ್ತೆ. ಇವೆಲ್ಲಾ ಕರೆಕ್ಟ್ ಆಗಿ ಫಾಲೋ ಮಾಡಿ.
ಪ್ರೂಫ್ ಆಫ್ ಐಡೆಂಟಿಟಿ (PoI) ಅಪ್ಲೋಡ್ ಮಾಡಿ
ಮೊದಲಿಗೆ ‘Proof of Identity’ (PoI) ಸೆಲೆಕ್ಟ್ ಮಾಡಬೇಕು. ‘Select Proof of Identity’ ಡ್ರಾಪ್‌ಡೌನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಹತ್ರ ಇರೋ ಡಾಕ್ಯುಮೆಂಟ್ (ಉದಾಹರಣೆಗೆ: ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್) ಲಿಸ್ಟ್ ನಿಂದ ಸೆಲೆಕ್ಟ್ ಮಾಡಿ. ‘Accept’ ಆಪ್ಷನ್ ಕ್ಲಿಕ್ ಮಾಡಿ.
ಆಮೇಲೆ ‘Select supporting document‘ ಮೇಲೆ ಕ್ಲಿಕ್ ಮಾಡಿ, ನಿಮ್ಮ ಫೋನ್ ಅಥವಾ ಲ್ಯಾಪ್ಟಾಪ್ ನಿಂದ ಸೆಲೆಕ್ಟ್ ಮಾಡಿರೋ ಡಾಕ್ಯುಮೆಂಟ್ ನ ಅಪ್ಲೋಡ್ ಮಾಡಿ. ಅಪ್ಲೋಡ್ ಆದ್ಮೇಲೆ ಗ್ರೀನ್ ಬಣ್ಣದ ಪರ್ಸಂಟೇಜ್ ಕಾಣಿಸುತ್ತೆ.
ಪ್ರೂಫ್ ಆಫ್ ಅಡ್ರೆಸ್ (PoA) ಅಪ್ಲೋಡ್ ಮಾಡಿ ಅಂತಿಮ ಸಬ್ಮಿಟ್
Next ‘Proof of Address’ (PoA) ಡಾಕ್ಯುಮೆಂಟ್ ಅಪ್ಲೋಡ್ ಮಾಡಬೇಕು. ‘Select Proof of Address’ ಡ್ರಾಪ್‌ಡೌನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಹತ್ರ ಇರೋ ಡಾಕ್ಯುಮೆಂಟ್ (ಉದಾಹರಣೆಗೆ: ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್) ಲಿಸ್ಟ್ ನಿಂದ ಸೆಲೆಕ್ಟ್ ಮಾಡಿ. ‘Accept’ ಆಪ್ಷನ್ ಕ್ಲಿಕ್ ಮಾಡಿ. ಆಮೇಲೆ ‘Select supporting document’ ಮೇಲೆ ಕ್ಲಿಕ್ ಮಾಡಿ, ನಿಮ್ಮ ಫೋನ್ ಅಥವಾ ಲ್ಯಾಪ್ಟಾಪ್ ನಿಂದ ಸೆಲೆಕ್ಟ್ ಮಾಡಿರೋ ಡಾಕ್ಯುಮೆಂಟ್ ನ ಅಪ್ಲೋಡ್ ಮಾಡಿ. ಎರಡೂ ಡಾಕ್ಯುಮೆಂಟ್ಸ್ ಅಪ್ಲೋಡ್ ಆದ್ಮೇಲೆ, ಬಾಕ್ಸ್ ಟಿಕ್ ಮಾಡಿ ‘Next’ ಕ್ಲಿಕ್ ಮಾಡಿ. ನಂತರ ‘OK’ ಕ್ಲಿಕ್ ಮಾಡಿ, ‘Submit’ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ರಿಕ್ವೆಸ್ಟ್ ಸಕ್ಸಸ್ಫುಲಿ ಸಬ್ಮಿಟ್ ಆಗುತ್ತೆ.
ತೀರ್ಮಾನ: ನಿಮ್ಮ ಅಪ್ಲಿಕೇಶನ್ ಸಬ್ಮಿಟ್ ಆದ್ಮೇಲೆ, ರಿಕ್ವೆಸ್ಟ್ ಸಕ್ಸಸ್ಫುಲಿ ಆಗಿದೆ ಅನ್ನೋ ಕನ್ಫರ್ಮೇಶನ್ ಬರುತ್ತೆ. ಇದರ ಸ್ಟೇಟಸ್ ಚೆಕ್ ಮಾಡೋಕೆ, ಹೋಮ್ ಪೇಜ್‌ಗೆ ಬಂದು ಕೆಳಗೆ ಸ್ಕ್ರಾಲ್ ಮಾಡಿದ್ರೆ ಕಾಣಿಸುತ್ತೆ. ಆಧಾರ್ ಕಾರ್ಡ್‌ನಲ್ಲಿ ಡಾಕ್ಯುಮೆಂಟ್ಸ್ ಅಪ್ಡೇಟ್ ಆಗೋಕೆ 1 ರಿಂದ 3 ವಾರಗಳ ಟೈಮ್ ತಗೊಳ್ಳುತ್ತೆ.
ಇಷ್ಟು ದಿನದೊಳಗೆ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಡೀಟೇಲ್ಸ್ ಅಪ್ಡೇಟ್ ಆಗಿರುತ್ತೆ. ಸೋ, ನಿಮ್ಮ ಆಧಾರ್ 10 ವರ್ಷ ಹಳೆಯದಾಗಿದ್ರೆ, ಈ ಸರಳ ವಿಧಾನ ಫಾಲೋ ಮಾಡಿ, ಬೇಗ ಅಪ್ಡೇಟ್ ಮಾಡ್ಕೊಳ್ಳಿ!





