ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕದಲ್ಲಿ ರೇಷನ್ ಕಾರ್ಡ್ ಹೊಂದಿರುವವರು ಮತ್ತು ಅಂತ್ಯೋದಯ ರೇಷನ್ ಕಾರ್ಡನ್ನು ಹೊಂದಿರುವವರಿಗೆ ಕರ್ನಾಟಕ ರಾಜ್ಯ ಸರ್ಕಾರವು ಒಂದು ಮುಖ್ಯವಾದ ಬಿಡುಗಡೆ ಮಾಡಿದೆ.
ಕರ್ನಾಟಕ ರಾಜ್ಯದಲ್ಲಿ ದೀಪಾವಳಿ ಸಂದರ್ಭದಲ್ಲಿ ರೇಷನ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರವು ಒಂದು ಶಾಕಿಂಗ್ ನ್ಯೂಸ್ ಅನ್ನು ನೀಡಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರವು ರೇಷನ್ ಕಾರ್ಡ್ ಹೊಂದಿರುವವರಿಗೆ ಈ ತಿಂಗಳಿನ ರೇಷನ್ ಬಿಡುಗಡೆ ಮಾಡುವುದು ಸದ್ಯಕ್ಕೆ ಅನುಮಾನವಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಅನ್ನು ಹೊಂದಿರುವವರ ರೇಷನ್ ದೋರಕುವುದು ಅನುಮಾನವಾಗಿದೆ. ಇದರ ಬಗ್ಗೆ ವಿವರವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.
BPL ಕಾರ್ಡ್ ಹೊಂದಿರುವವರಿಗೆ ಈ ತಿಂಗಳಿನ ರೇಷನ್ ದೊರಕುವುದಿಲ್ಲ
ಸ್ನೇಹಿತರೆ ರಾಜ್ಯ ಸರ್ಕಾರದಿಂದ ಇತ್ತೀಚೆಗೆ ಒಂದು ಬೇಸರದ ಸುದ್ದಿ ಬಿಡುಗಡೆಯಾಗಿದ್ದು BPL ಕಾರ್ಡ್ ಹೊಂದಿರುವವರಿಗೆ ಇದೊಂದು ಶಾಕಿಂಗ್ ನ್ಯೂಸ್ ಆಗಿದೆ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಈ ತಿಂಗಳಿನ ರೇಷನ್ ಅನ್ನು ರಾಜ್ಯ ಸರ್ಕಾರವು ವಿತರಣೆ ಮಾಡಲು ಆಗುವುದಿಲ್ಲ ಎಂದು ಹೇಳಿದೆ.
ಶೇಕಡಾ 10ರಷ್ಟು ಫಲಾನುಭವಿಗಳಿಗೆ ಮಾತ್ರ ರೇಷನ್:
ಕೆಲವೊಂದು ತಾಂತ್ರಿಕ ದೋಷಗಳಿಂದ ಅಕ್ಟೋಬರ್ ತಿಂಗಳಿನ ರೇಷನ್ ಹಾಗೂ ಅಕ್ಕಿಯನ್ನು BPL ಕಾರ್ಡ್ ದಾರರಿಗೆ ಸರ್ಕಾರವು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ತಿಂಗಳಿನಲ್ಲಿ ಶೇಕಡ ಹತ್ತ ರಷ್ಟು BPL ಕಾರ್ಡ್ ಫಲಾನುಭವಿಗಳಿಗೆ ಮಾತ್ರ ರೇಷನ್ ಅನ್ನು ವಿತರಣೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವೆಬ್ಸೈಟ್ ಹಾಗೂ ಪೋರ್ಟಲ್ ಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿರುವ ಕಾರಣ ಈ ತಿಂಗಳಿನ ರೇಷನ್ ಅಕ್ಕಿಯನ್ನು ರಾಜ್ಯದ ಫಲಾನುಭವಿಗಳಿಗೆ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಈಗ ಆಹಾರ ಇಲಾಖೆ ತಿಳಿಸಿದೆ.
ತಾಂತ್ರಿಕ ದೋಷ ಸರಿ ಹೋಗದಿದ್ದರೆ ಈ ತಿಂಗಳಿನ ರೇಷನ್ ಇಲ್ಲ:
ಈಗಾಗಲೇ ತಾಂತ್ರಿಕ ದೋಷವನ್ನು ಸರಿಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ. ಒಂದು ವೇಳೆ ತಾಂತ್ರಿಕ ದೋಷ ಸರಿ ಆಗದಿದ್ದರೆ, ಈ ತಿಂಗಳಿನ ರೇಷನ್ ಆಗೋ ಅಕ್ಕಿಯನ್ನು ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಹಾರ ಇಲಾಖೆ ತಿಳಿಸಿದೆ.
ಇದನ್ನೂ ಓದಿ: BSNL New Plans: ಕೇವಲ 197 ರೂಪಾಯಿಗೆ ಗಳಿಗೆ ಇಲ್ಲಿದೆ 70 ದಿನ ವ್ಯಾಲಿಡಿಟಿ BSNL Pack





