ಉತ್ತಮ ಆರೋಗ್ಯಕ್ಕೆ ಆಯುರ್ವೇದ ನಿದ್ದೆಯ
7 ಸೂತ್ರಗಳು!
By Pavan Cs | 27-04-2026
ದಿವಾ ಸ್ವಪ್ನ (ಹಗಲು ನಿದ್ದೆ):
ಆಯುರ್ವೇದದ ಪ್ರಕಾರ ಹಗಲಿನಲ್ಲಿ ನಿದ್ದೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಇದು ದೇಹದ ದೋಷಗಳನ್ನು ಹೆಚ್ಚಿಸುತ್ತದೆ.
2
ನಿದ್ದೆ ಮತ್ತು ಹೃದಯಘಾತ:
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಘಾತ ಹೆಚ್ಚಲು ಮುಖ್ಯ ಕಾರಣ ಸರಿಯಾದ ನಿದ್ದೆ ಇಲ್ಲದೆ ದೇಹಕ್ಕೆ ಅತಿಯಾದ ಒತ್ತಡ (Stress) ನೀಡುವುದು.
2
ಸರಿಯಾದ ನಿದ್ದೆಯ ಅವಧಿ:
ಪ್ರತಿ ದಿನ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ಕಣ್ಣುತುಂಬ ನಿದ್ದೆ ಮಾಡುವುದು ದೇಹದ ಮೂಲಭೂತ ಅವಶ್ಯಕತೆಯಾಗಿದೆ.
2
ನಿದ್ದೆಯ ಕೊರತೆ ಸರಿದೂಗಿಸುವುದು:
ಯಾವುದೋ ಕಾರಣಕ್ಕೆ ರಾತ್ರಿ ನಿದ್ದೆ ಕೆಟ್ಟರೆ, ಸೂರ್ಯೋದಯದ ನಂತರ ಅದರ ಅರ್ಧದಷ್ಟು ಸಮಯ ಮಾತ್ರ ನಿದ್ದೆ ಮಾಡಿ
ಹಗಲು ನಿದ್ದೆಗೆ ವಿನಾಯಿತಿ:
ಸಣ್ಣ ಮಕ್ಕಳು, ವಯಸ್ಸಾದವರು, ಅತಿಯಾದ ಕೆಲಸದಿಂದ ಸುಸ್ತಾದವರು ಮತ್ತು ಬೇಸಿಗೆ ಕಾಲದಲ್ಲಿ ಹಗಲು ನಿದ್ದೆ ಮಾಡಲು ಆಯುರ್ವೇದದಲ್ಲಿ ಅವಕಾಶವಿದೆ.
ಊಟದ ನಂತರದ ನಿದ್ದೆ ಬೇಡ:
ಮಧ್ಯಾಹ್ನ ಊಟದ ನಂತರ ಮಲಗುವುದು ದೋಷಗಳನ್ನು ಹೆಚ್ಚಿಸುತ್ತದೆ. ಆದರೆ ಊಟಕ್ಕೆ ಮೊದಲು ಸ್ವಲ್ಪ ವಿಶ್ರಾಂತಿ ಪಡೆದರೆ ಜೀರ್ಣಶಕ್ತಿ ವೃದ್ಧಿಸುತ್ತದೆ.
2
ಕಫದ ಕಾಯಿಲೆಗಳು:
ಮಧುಮೇಹ (Diabetes) ಮತ್ತು ಕಫದ ಸಮಸ್ಯೆ ಇರುವವರು ಹಗಲಿನಲ್ಲಿ ನಿದ್ದೆ ಮಾಡಬಾರದು, ಇದು ಅನಾರೋಗ್ಯವನ್ನು ಇನ್ನು ಹೆಚ್ಚು ಮಾಡುತ್ತದೆ.
2