ಕಫಕ್ಕೆ ಲೋಮಫಲ ಗಿಡದ ಕಷಾಯವೇ ರಾಮಬಾಣ!
By Pavan Cs | 29-04-2026
ಲೋಮಫಲ ಗಿಡ:
ಈ ಗಿಡದ ಹಣ್ಣಿನ ಮೇಲೆ ಕೂದಲಿನಂತಹ ರಚನೆ ಇರುವುದರಿಂದ ಇದನ್ನು ಲೋಮಫಲ ಎಂದು ಕರೆಯುತ್ತಾರೆ; ಇದರ ವೈಜ್ಞಾನಿಕ ಹೆಸರು 'ಪ್ಯಾಸಿಫ್ಲೋರಾ ಫಯೋಟಿಡ'.
2
ನಿದ್ರಾಹೀನತೆ ಮತ್ತು ಒತ್ತಡ:
ನಿಮಗೆ ಅತಿಯಾದ ಸ್ಟ್ರೆಸ್, ಆತಂಕ (Anxiety) ಅಥವಾ ನಿದ್ರೆ ಬರದೇ ಇದ್ದರೆ ಲೋಮಫಲದ 2-3 ಎಲೆಗಳು ಮತ್ತು ಬ್ರಾಹ್ಮಿ ಎಲೆಗಳ ಕಷಾಯ ಸೇವಿಸುವುದು ಉತ್ತಮ.
2
ತಯಾರಿಸುವ ವಿಧಾನ:
200 ml ನೀರಿಗೆ ಈ ಎಲೆಗಳನ್ನು ಹಾಕಿ 100 ml ಆಗುವವರೆಗೆ ಕುದಿಸಿ; ಈ ಕಷಾಯವನ್ನು ರಾತ್ರಿ ಸೇವಿಸುವುದರಿಂದ ಆರಾಮವಾಗಿ ನಿದ್ರೆ ಬರುತ್ತದೆ.
2
ಕಫ ನಿವಾರಣೆ:
ಎದೆಯಲ್ಲಿ ಕಫ ತುಂಬಿಕೊಂಡಿದ್ದರೆ ಲೋಮಫಲದ ಎಲೆಗಳು, ತುಳಸಿ ಮತ್ತು ಶುಂಠಿಯನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ದಿನಕ್ಕೆ 2-3 ಬಾರಿ ಕುಡಿಯಿರಿ.
2
ತಲೆನೋವು ಮತ್ತು ಕೀಲು ನೋವು:
ತಲೆನೋವು ಅಥವಾ ಜಾಯಿಂಟ್ ಪೇನ್ ಇದ್ದರೆ ಈ ಗಿಡದ ಎಲೆಗಳ ಪೇಸ್ಟ್ ಅನ್ನು ಬಾಧಿತ ಜಾಗಕ್ಕೆ ನೇರವಾಗಿ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ.
2
ಗಾಯ ವಾಸಿ ಮಾಡಲು:
ಈ ಎಲೆಗಳಲ್ಲಿ ಆಂಟಿ-ಬ್ಯಾಕ್ಟೀರಿಯಲ್ ಗುಣಗಳಿದ್ದು, ಗಾಯಗಳಿಗೆ ಹಚ್ಚುವುದರಿಂದ ಗಾಯಗಳು ಬೇಗನೆ ಒಣಗುತ್ತವೆ.
2
ಬಹುಪಯೋಗಿ ಗಿಡ:
ಸುಂದರವಾದ ಹೂವುಗಳನ್ನು ಬಿಡುವ ಈ ಗಿಡವು ಕೇವಲ ಅಲಂಕಾರಿಕವಲ್ಲದೆ, ಹಲವಾರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಉತ್ತಮ ಔಷಧಿಯಾಗಿದೆ.
2