KPTCL Final Print Download 2024!! ಈ ರೀತಿ ಸುಲಭವಾಗಿ ಡೌನ್ಲೋಡ್ ಮಾಡಿ.!

November 25, 2024 12:45 PM
KPTCL Final Print Download 2024!! ಈ ರೀತಿ ಸುಲಭವಾಗಿ ಡೌನ್ಲೋಡ್ ಮಾಡಿ.!

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ KPTCL ಗೆ ಅರ್ಜಿ  ಸಲ್ಲಿಸಿರುವವರಿಗೆ ಒಂದು ಮುಖ್ಯವಾದ ಅಪ್ಡೇಟ್ ಬಿಡುಗಡೆಯಾಗಿದೆ. ಸಾಕಷ್ಟು ಜನರು KPTCL ಅರ್ಜಿ ಸಲ್ಲಿಸಿ ಚಲನನ್ನು ಡೌನ್ಲೋಡ್ ಮಾಡಿಕೊಂಡಿದ್ದರು. ಚಲನ್ ಡೌನ್ಲೋಡ್ ಮಾಡಿಕೊಂಡ ನಂತರ ಪೋಸ್ಟ್ ಆಫೀಸ್ಗೆ ಹೋಗಿ ಹಣವನ್ನು ಕಟ್ಟಿದ್ದೀರ. 

ಅಫಿಶಿಯಲ್ ಆಗಿ ತಿಳಿದಿರುವ  ಪ್ರಕಾರ ಹಣವನ್ನು ಕಟ್ಟಿದ ಎರಡು ದಿನಗಳಲ್ಲಿ ಫೈನಲ್ ಪ್ರಿಂಟ್ ದೊರೆಯುತ್ತದೆ ಆದರೆ ಸಾಕಷ್ಟು ಜನರಿಗೆ ಐದು ದಿನಗಳು ಕಳೆದರೂ ಕೂಡ ಫೈನಲ್ ಪ್ರಿಂಟ್ ಡೌನ್ಲೋಡ್ ಆಗುತ್ತಿಲ್ಲ.  ಹಾಗಾದರೆ KPTCL  ಅರ್ಜಿಯ ಫೈನಲ್ ಪ್ರಿಂಟನ್ನು ಡೌನ್ಲೋಡ್ ಮಾಡುವುದು ಹೇಗೆ ಎಂದು ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

KPTCL ಫೈನಲ್ ಪ್ರಿಂಟ್ ಡೌನ್ಲೋಡ್  ಮಾಡಲು ಈ ಸ್ಟೆಪ್ಗಳನ್ನು ಫಾಲೋ ಮಾಡಿ:

ನೀವು ಹಣವನ್ನು ಕಟ್ಟಿದ 48 ಗಂಟೆಗಳ ನಂತರ ಯಾವಾಗ ಬೇಕಾದರೂ ನಿಮ್ಮ ಫೈನಲ್ ಪ್ರಿಂಟನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು. ಈಗ ಇಲಾಖೆಯು ಫೈನಲ್ ಪ್ರಿಂಟ್ ಡೌನ್ಲೋಡ್ ಮಾಡಿಕೊಳ್ಳಲು ಡಿಸೆಂಬರ್ 10ನೇ ತಾರೀಖಿನವರೆಗೆ ಸಮಯವನ್ನು ನೀಡಿದೆ. 

ನಿಮ್ಮ KPTCL  ಫೈನಲ್ ಪ್ರಿಂಟನ್ನು ಡೌನ್ಲೋಡ್ ಮಾಡಿಕೊಳ್ಳಲು ಮೊದಲು ಕರ್ನಾಟಕ ಪೋಸ್ಟ್ ಗೆ ಹೋಗಿ ನಿಮ್ಮ ಈ ಪೇಮೆಂಟ್ ಕಾಂಫಿರಂ ಆಗಿದೆ ಎಂದು ಚೆಕ್ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಪೇಮೆಂಟ್ ಕನ್ಫರ್ಮ್ ಆಗಿದ್ದರೆ ಫೈನಲ್ ಪ್ರಿಂಟನ್ನು ಡೌನ್ಲೋಡ್ ಮಾಡಿಕೊಳ್ಳಲು ಕೆಳಗೆ ನೀಡಿರುವ ಸ್ಟೆಪ್ಗಳನ್ನು ಫಾಲೋ ಮಾಡಿ. 

  • ಮೊದಲು KPTCL ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ – karnemaka.kar.nic.in/JPM_JSA_24/Home.aspx.
  • ಅಲ್ಲಿ ನಾಲ್ಕನೇ ಸ್ಟೆಪ್ ಅಥವಾ ಹಂತವಾಗಿರುವ ಅರ್ಜಿ ಮುದ್ರಿಸಿ ಅಥವಾ ಪ್ರಿಂಟ್ ಅಪ್ಲಿಕೇಶನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. 
  • ನಂತರ ಒಂದು ಹೊಸ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಫೈನಲ್ ಪ್ರಿಂಟನ್ನು ಡೌನ್ಲೋಡ್ ಮಾಡಲು ನಿಮ್ಮ ಅಪ್ಲಿಕೇಶನ್ ID ಮತ್ತು ಜನುಮ ದಿನಾಂಕವನ್ನು ಕೇಳುತ್ತದೆ.
  • ಕೇಳಿರುವ ಎಲ್ಲಾ ದಾಖಲಾತಿಗಳನ್ನು ನಮೂದಿಸಿದ ನಂತರ ಕ್ಯಾಪ್ಚ ಅನ್ನು ಫೀಲ್ ಮಾಡಿ ಸಬ್ಮಿಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಎನೆಬಲ್  ಪಾಪ್ ಅಪ್ ಬ್ರೌಸರ್ ಎಂಬ  ಆಪ್ಷನ್ ಬರುತ್ತದೆ ಅಲ್ಲಿ ಓಕೆ ಎಂದು ಕ್ಲಿಕ್ ಮಾಡಿ ನಂತರ ಆಲ್ವೇಸ್  ಶೋ ಎಂದು ಕ್ಲಿಕ್ ಮಾಡಿ. 
  • ಈಗ ನಿಮ್ಮ KPTCL ಫೈನಲ್ ಪ್ರಿಂಟ್  ಫೈಲ್ ಡೌನ್ಲೋಡ್  ಆಗಲು ಪ್ರಾರಂಭವಾಗುತ್ತದೆ. 

KPTCL ಫೈನಲ್ ಪ್ರಿಂಟ್ ನಲ್ಲಿ ವೆರಿಫೈ ಆಗಿರುವ ನಿಮ್ಮ ಎಲ್ಲ ದಾಖಲಾತಿಗಳು ಇರುತ್ತದೆ. ಪಿಡಿಎಫ್ ನ ಕೊನೆಯಲ್ಲಿ  ಡಿಜಿಟಲ್ಲಿ ಸೈನ್ಡ್  ಬೈ ಪರ್ಸನ್  ಆಫ್ KPTCL ಎಂದು ತೋರಿಸುತ್ತದೆ. ಇದರ ಜೊತೆ ನೀವು ಹಣ ಕಟ್ಟಿರುವ ಪೇಮೆಂಟ್ ಡೀಟೇಲ್ಸ್ ಕೂಡ ಅಲ್ಲಿ ತೋರಿಸುತ್ತದೆ. 

ಇದನ್ನೂ ಓದಿ: https://www.belagavivoice.in/kptcl-e-sign-date-extension/

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment