ಎಲ್ಲರಿಗೂ ನಮಸ್ಕಾರ, ಕೊಳವೆ ಬಾವಿ ತೆಗ್ಗಿಸೋವರಿಗೆ ಹೊಸ ರೂಲ್ಸ್ ಬಾವಿ ಮುಚ್ಚದಿದ್ದರೆ ಜೈಲು ಶಿಕ್ಷೆ ಸಿದ್ದು ಸರ್ಕಾರದ ಹೊಸ ಅಂತರ್ಜಲ ಕಾನೂನು, ರಾಜ್ಯ ಸರ್ಕಾರ ಬೋರ್ವೆಲ್ ಗಳ ವಿಚಾರಕ್ಕೆ ಈಗ ದೊಡ್ಡ ಹೆಜ್ಜೆ ಇಡೋಕೆ ಹೊರಟಿದೆ ಕೊಳವೆ ಬಾವಿಗಳ ಆಹುತ ಹೆಚ್ಚಾಗುತ್ತಿರುವ ಹೊತ್ತಲ್ಲಿ ಆ ದುರಂತಗಳನ್ನ ತಡೆಯುವ ಸಲುವಾಗಿ ಕಠಿಣ ರೂಲ್ಸ್ ಹೇರ್ತಾ ಇದ್ದು ಇನ್ಮೇಲೆ ಯಾರೇ ಬೋರ್ವೆಲ್ ತೋಡಿಸಿದರು ಕೂಡ ಹೊಸ ನಿಯಮಗಳು ಅನ್ವಯ ಆಗ್ತವೆ.
ಇದನ್ನ ಉಲ್ಲಂಘನೆ ಮಾಡಿದ್ರೆ ಜನ ಮತ್ತು ಬೋರ್ವೆಲ್ ತೋಡೋ ಕಂಪನಿಗಳಿಗೂನು ಜೈಲು ಶಿಕ್ಷೆ ಆಗಬಹುದು, ಬೋರ್ವೆಲ್ ತೆಗೆಯೋದ್ರಿಂದ ಮುಚ್ಚೋತನಕ ಸಾಕಷ್ಟು ರೂಲ್ಸ್ ಅನ್ನ ಸರ್ಕಾರ ತಗೊಂಡು ಬಂದಿದೆ.
ಹೊಸ ಬೋರ್ವೆಲ್ ನಿಯಮಗಳು ಏನೇನು?
ಕೊಳವೆ ಬಾವಿಗೆ ಮಷೀನ್ ಇಳಿಸೋಕು ಮುನ್ನ ಏನೆಲ್ಲಾ ಮಾಡಬೇಕಾಗುತ್ತೆ ಅಸಲಿಗೆ ಈ ಬೋರ್ವೆಲ್ ಗಳು ಕೆಲವೊಂದು ಸಲ ಖಾಲಿಯಾಗಿ ಡೆಡ್ ಬೋರ್ವೆಲ್ಸ್ ಆಗ್ತಾವಲ್ಲ ಹೆಂಗೆ ನೀರು ನಿಂತು ಹೋಗೋದು ಯಾಕೆ ಫಸ್ಟ್ ಆಫ್ ಆಲ್ ಬೋರ್ವೆಲ್ ಗೆ ನೀರು ಎಲ್ಲಿಂದ ಬರುತ್ತೆ ಭೂಮಿಲಿ ಅಷ್ಟಡಿಲಿ ಈ ನದಿ ಹರಿತಾ ಇರುತ್ತಾ ಎಲ್ಲಿಂದ ನೀರು ಅದು ಬರೋದು ತಿಳಿದುಕೊಳ್ಳೋಣ. ಏನಿದೆ ಹೊಸ ರೂಲ್ಸ್ ನಲ್ಲಿ ಸದ್ಯ ಸಿಕ್ತಿರೋ ಮಾಹಿತಿ ಪ್ರಕಾರ ಸಿಕ್ಕ ಸಿಕ್ಕ ಕಡೆಯಲ್ಲಿ ಮನಸ್ಸಿಗೆ ಬಂದ ಹಾಗೆ ಬೋರ್ವೆಲ್ ತೊಡಂಗಿಲ್ಲ ಕಡಿವಾಣ ಬೀಳುತ್ತೆ.
ಜಮೀನು ಮಾಲಿಕರು ಅಥವಾ ಬೋರ್ ಕೊರೆಯುವವರು ಕನಿಷ್ಠ 15 ದಿನ ಅಡ್ವಾನ್ಸ್ ಆಗಿ ಸ್ಥಳೀಯ ಪ್ರಾಧಿಕಾರ ಅಥವಾ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗೆ ನಾವು ಇಲ್ಲಿ ಬೋರೆಲ್ ತೋಡ್ತೀವಿ ಅಂತ ಲಿಖಿತವಾಗಿ ಮಾಹಿತಿ ಕೊಡಬೇಕು ಈ ನಿಯಮ ಆಲ್ರೆಡಿ ಇದೆ ಆದರೆ ಅದು ಅಧಿಸೂಚಿತ ಪ್ರದೇಶಗಳಿಗೆ ಮಾತ್ರ ಅನ್ವಯ ಆಗ್ತಾ ಇತ್ತು. ನೀರಿನ ಲಭ್ಯತೆ ಅಂತರ್ಜಲ ಮಟ್ಟ ಕಡಿಮೆ ಇರೋ ಪ್ರದೇಶಗಳಿಗೆ ಇದನ್ನ ಅನ್ವಯ ಮಾಡ್ತಿದ್ರು ಅಂತಹ ಪ್ರದೇಶಗಳಲ್ಲಿ ಕಬ್ಬು ಭತ್ತ ಬೆಳೆಯೋಕು ಸರ್ಕಾರ ಒಂದಷ್ಟು ನಿರ್ಬಂಧಗಳನ್ನ ಹಾಕ್ತಾ ಇತ್ತು.
ಈಗ ಹೊಸ ಮಸೂದೆ ಪ್ರಕಾರ ಎಲ್ಲಾ ಕಡೆ ಕರ್ನಾಟಕದಾದ್ಯಂತ ಈ ರೂಲ್ಸ್ ಅನ್ವಯ ಆಗುತ್ತೆ. ಪರ್ಮಿಷನ್ ತಗೊಂಡೆ ತೋಡಬೇಕು ಅನ್ನೋ ರೂಲ್ಸ್ ಅನ್ನ ತರ್ತಾ ಇದ್ದಾರೆ.
2. ಬಾವಿ ಕೊರೆದ 24 ಗಂಟೆಯಲ್ಲಿ ಕಡ್ಡಾಯವಾಗಿ ಮುಚ್ಚಲೇಬೇಕು
ಬೋರ್ವೆಲ್ ಕೊರಸಿ ನೀರು ಬರಲಿಲ್ಲ ಅಂದ್ರೆ ಆಯ್ತು ಅಂತ ಎದ್ದು ಹೋಗಂಗಿಲ್ಲ ಸಾಮಾನ್ಯವಾಗಿ ನಮ್ಮಲ್ಲಿ ಕೊಳವೆ ಬಾವಿಗೆ ಒಂದು ಗೋಣಿ ಚೀಲ ಹಾಕಿ ಪ್ಲಾಸ್ಟಿಕ್ ಕವರ್ ಇಟ್ಟು ಅಥವಾ ಒಂದು ಕಲ್ಲಿಟ್ಟು ಹೋಗಿಬಿಡ್ತಾರೆ ಇನ್ನು ಕೆಲವರು ಪಾತಾಳ ಲೋಕದ ದರ್ಶನ ಮಾಡಿಸ್ತೀವಿ ಅನ್ನೋತರ ಅದನ್ನ ಹಾಗೆ ಇಟ್ಟಿರುತ್ತಾರೆ. ಯಾರಾದರೂ ಇಣಕು ನೋಡ್ಲಿ ಅಂತ ಅಂತ ಮಕ್ಕಳೆಲ್ಲ ಬಿದ್ದ ಅನಾಹುತ ಆಗುತ್ತೆ.
ಇನ್ನು ಮುಂದೆ ಹಾಗೆಲ್ಲ ಇಲ್ಲ ಕೊಳವೆ ಬಾವಿ ಕೊರೆದ 24 ಗಂಟೆಯಲ್ಲಿ ಕಡ್ಡಾಯವಾಗಿ ಮುಚ್ಚಲೇಬೇಕು ಇಲ್ಲಾಂದ್ರೆ ಶಿಕ್ಷಾರ್ಹ ಅಪರಾಧ ಕೊಳವೆ ಬಾವಿ ಕೊರೆಸಿದ ಜಮೀನು ಮಾಲಿಕರು ಕೊರೆದ ಏಜೆನ್ಸಿಗಳು ಬೋಲ್ಟ್ ಮತ್ತು ನಟ್ ಗಳ ಸ್ಟೀಲ್ ಕ್ಯಾಪ್ ನಿಂದ ಅಥವಾ ಥ್ರೆಡ್ ಕ್ಯಾಪ್ ನಿಂದ ಅದನ್ನ ಫುಲ್ ಕವರ್ ಮಾಡಲೇಬೇಕು.
ಯಾವುದೇ ಕಾರಣಕ್ಕೂ ಒಂದು ಕಲ್ಲು ಕೂಡ ಅದರಲ್ಲಿ ತೂರಿ ಹೋಗೋ ರೀತಿ ಇಲ್ಲ ಆ ರೀತಿ ಅದನ್ನ ಸೀಲ್ ಮಾಡಲೇಬೇಕು ಆ ಬಳಿಕ ಕೊಳವೆ ಆವಿಗಳು ಗುಂಡಿ ಬೀಳಬಾರದು ಕುಸಿಬಾರದು ಅಂತ ಅದಕ್ಕೆ ಕಲ್ಲುಗಳನ್ನು ಹಾಕಿ ತುಂಬಿಸಬೇಕು ಸುತ್ತ ನೆಲಮಟ್ಟದಿಂದ ಎರಡು ಅಡಿ ಎತ್ತರದಲ್ಲಿ ಗುಡ್ಡ ನಿರ್ಮಾಣ ಮಾಡಬೇಕು.
3. ಕೊಳವೆ ಬಾವಿ ಮುಚ್ಚಿರುವುದಕ್ಕೆ ಪ್ರಮಾಣಪತ್ರ
ಕೊರೆದಿರೋ ಏಜೆನ್ಸಿ ಮತ್ತು ಜಮೀನು ಮಾಲಿಕರು ಸಂಬಂಧಪಟ್ಟ ಪ್ರಾಧಿಕಾರಕ್ಕೆ ತಿಳಿಸಬೇಕು ಆಯಾ ನಗರಸಭೆಯ ಆಯುಕ್ತರು ಅಥವಾ ನಗರ ಸ್ಥಳೀಯ ಸಂಸ್ಥೆಯ ಮುಖ್ಯ ಅಧಿಕಾರಿಯ ಅಡಿಯಲ್ಲಿ ಕೆಲಸ ಮಾಡುವ ಕಿರಿಯ ಇಂಜಿನಿಯರ್ ಗೆ ಮತ್ತು ಗ್ರಾಮ ಪಂಚಾಯತಿ ಅಥವಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಜಂಟಿ ಘೋಷಣೆಯನ್ನು ಸಲ್ಲಿಸಬೇಕು. ಒಂದು ವೇಳೆ ಯಾವುದೋ ಒಂದು ಕಳಬೆ ಯನ್ನ ಪುನರುಜ್ಜೀವನಗೊಳಿಸುತ್ತೇವೆ ಮತ್ತೆ ಅದನ್ನ ನೀರು ಬರೋತರ ಮಾಡ್ತೀವಿ ರಿಚಾರ್ಜ್ ಮಾಡ್ತೀವಿ ಅಂತಿದ್ರು ಕೂಡ ಅದನ್ನ ಓಪನ್ ಮಾಡಿ ಮತ್ತೆ ಬಿಡಂಗಿಲ್ಲ ಹಾಗೆ ಅಗೈನ್ ಮುಚ್ಚಿ ಅದೆಲ್ಲ ಪ್ರೊಸೀಜರ್ ಮಾಡಬೇಕು.
ಅದಾದ್ಮೇಲೆ ಪ್ರಾಧಿಕಾರದ ಅಧಿಕಾರಿಗಳು ಕೂಡ ತಪಾಸಣೆ ಮಾಡ್ತಾರೆ ಎಲ್ಲಾ ಸರಿ ಇದ್ರೆ ಮತ್ತೆ ಅದಕ್ಕೆ ಪ್ರಮಾಣಪತ್ರವನ್ನು ಪಡಿಬೇಕಾಗುತ್ತೆ ಜೊತೆಗೆ ಕೊಳವೆ ಬಾವಿ ಕೊರೆಸುವ ಸ್ಥಳದಲ್ಲಿ ಜಮೀನು ಮಾಲಿಕರು ಮತ್ತು ಬಾವಿ ಕೊರೆಯೋ ಕಂಪನಿಯ ವಿಳಾಸದ ಫಲಕವನ್ನು ಹಾಕಬೇಕು ಇಷ್ಟು ಪ್ರೊಸೀಜರ್ ಅನ್ನ ಫಾಲೋ ಮಾಡಲೇಬೇಕು ಇಲ್ಲ ಅಂತ ಹೇಳಿದ್ರೆ ಅಧಿಕಾರಿಗಳು ಕೊರಿಯೋ ಏಜೆನ್ಸಿಯವರು ಮತ್ತು ಜಮೀನು ಮಾಲಿಕರು ಎಲ್ಲರೂ ಶಿಕ್ಷೆಗೆ ಗುರಿಯಾಗಬೇಕಾಗುತ್ತೆ ಈ ಎಲ್ಲವೂ ಈ ತಿದ್ದುಪಡಿ ಮಸೂದೆಯಲ್ಲಿದೆ.
4. ಒಂದು ವರ್ಷ ಜೈಲು 25,000 ದಂಡ ರೂಲ್ಸ್ ಫಾಲೋ ಮಾಡಿಲ್ಲ ಅಂದ್ರೆ
ಜಮೀನಿನ ಮಾಲಿಕರಿಗೆ ಅಥವಾ ಬೋರ್ ಕೊರೆಸೋವರಿಗೆ ಆರು ತಿಂಗಳ ಜೈಲು ಶಿಕ್ಷೆ ಇರುತ್ತೆ ಇದರೊಟ್ಟಿಗೆ 10,000 ದಂಡ ಕೂಡ ಇರುತ್ತೆ ಇನ್ನು ಬೋರ್ ಕೊರೆಯೋ ಏಜೆನ್ಸಿ ಅವರಿಗೆ ಮ್ಯಾಕ್ಸಿಮಮ್ ಒಂದು ವರ್ಷದ ತನಕ ಜೈಲು ಶಿಕ್ಷೆ ವಿಧಿಸಬಹುದು 25,000 ತನಕ ದಂಡ ಹಾಕಬಹುದು ಜೊತೆಗೆ ಈ ಮುಂಚಿನ ಒಂದಷ್ಟು ಶಿಕ್ಷೆ ಇದರಲ್ಲಿ ಇರುತ್ತೆ.
ಕೊಳವೆ ಬಾವಿಯ ದುರಂತಕ್ಕೆ ಕಾರಣವಾಗುವ ಬೋರ್ವೆಲ್ ಏಜೆನ್ಸಿಗಳ ಯಂತ್ರಗಳನ್ನು ಸರ್ಕಾರ ಸೀಜ್ ಮಾಡಬಹುದು ಅಷ್ಟೇ ಅಲ್ಲ ವಿಳಾಸದ ಫಲಕ ಹಾಕದೆ ಹಾಗೆ ಹೋದರೆ ಮೂರು ತಿಂಗಳು ಜೈಲು ಹಾಗೂ 5,000 ದಂಡವನ್ನು ಹಾಕಬಹುದು ಕೇವಲ ಜಮೀನಿನ ಮಾಲಿಕರು ಮಾತ್ರ ಅಲ್ಲ ಎಲ್ಲರನ್ನು ಜಮೀನಿನ ಮಾಲಿಕರು ಏಜೆನ್ಸಿಯವರು ಅಧಿಕಾರಿಗಳು ಎಲ್ಲರನ್ನು ಹೊಣೆಗಾರರನ್ನಾಗಿ ಮಾಡುವ ಪ್ರಯತ್ನ ನಡೀತಾ ಇದೆ.
ಕೊಳವೆ ಬಾವಿ ದುರಂತಕ್ಕೆ ಅಧಿಕಾರಿಗಳು ಕಾರಣರಾದರೆ ಅವರ ನಿರ್ಲಕ್ಷ ದುಷ್ಕೃತ್ಯ ಕರ್ತವ್ಯ ಲೋಪ ಅಂತ ಪರಿಗಣಿಸಿ ಶಿಸ್ತು ಕ್ರಮ ತಗೊಳ್ಳಲಾಗುತ್ತೆ
ಬೋರ್ವೆಲ್ ಗೆ ನೀರು ಎಲ್ಲಿಂದ ಬರುತ್ತೆ ಖಾಲಿಯಾಗೋದು ಯಾಕೆ?
ಪ್ರಪಂಚದಲ್ಲಿ ಶುದ್ಧ ಸಿಹಿ ನೀರು ಇರೋ ರಾಷ್ಟ್ರಗಳ ಪಟ್ಟಿಯಲ್ಲಿ ನಾವು ಭಾರತ ಹತ್ತನೇ ಸ್ಥಾನದಲ್ಲಿದ್ದೇವೆ ಆದರೆ ಅತಿ ಹೆಚ್ಚು ಅಂತರ್ಜಲವನ್ನು ತೆಗೆದು ಬಗೆದು ಕುಡಿತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡ್ಕೊಂಡಿದ್ದೇವೆ ಅಧಿಕೃತ ಲೆಕ್ಕಾಚಾರದ ಪ್ರಕಾರ ಆರು ಕೋಟಿ ಆಕ್ಟಿವ್ ಬೋರ್ವೆಲ್ಸ್ ಇವೆ ಕರ್ನಾಟಕದಲ್ಲಿ 14 ಲಕ್ಷ ಬೋರ್ವೆಲ್ಸ್ ಇವೆ ಇದು 2019ರ ಲೆಕ್ಕ ಇವತ್ತಿಗೂ ಶೇಕಡಾ 80 ರಷ್ಟು ಕೃಷಿಗೆ ನಮ್ಮ ರಾಜ್ಯದಲ್ಲಿ ಅಂತರ್ಜಲದ ನೀರನ್ನೇ ಬಳಸ್ತಾ ಇದ್ದೀವಿ ಬರಿ 20% ನೀರನ್ನ ಮಾತ್ರ ನದಿ ಕೆರೆ ಇತ್ಯಾದಿ ಮೂಲಗಳಿಂದ ಪಡಿತಾ ಇದ್ದೀವಿ. ಹೀಗಾಗಿ ಅಂತರ್ಜಲ ಮಟ್ಟ ಖಾಲಿಯಾಗ್ತಿದೆ
ಈ ಅಂತರ್ಜಲ ಅಂದ್ರೆ ಏನು? ಎಲ್ಲಿಂದ ಬರುತ್ತೆ:
ಅಂತರ್ಜಲ ನೀರು ಸಂಗ್ರಹವಾಗುವುದು ಹೀಗೆ ಮೊದಲಿಗೆ ಮಳೆ ಬರುತ್ತೆ ಅದು ಮಣ್ಣಿಗೆ ಬಿದ್ದು ಅಥವಾ ಕೆರೆ, ಹಳ್ಳ ಇತ್ಯಾದಿಗಳಿಗೆ ಬಿದ್ದು ಹಿಂಗೋಕೆ ಶುರುವಾಗುತ್ತೆ ಅಲ್ಲಿಂದ ಇನ್ನಷ್ಟು ಆಳಕ್ಕೆ ಈ ನೀರು ಇಳಿಯುತ್ತೆ ಅಲ್ಲಿ ಕಲ್ಲು ಮಣ್ಣು ಮತ್ತು ಬಂಡೆಗಳ ಅಡಿಯಲ್ಲಿ ಎಲ್ಲಾ ಹೋಗಿ ನೀರು ಟ್ರಾಪ್ ಆಗುತ್ತೆ.
ಸಂಗ್ರಹ ಆಗುತ್ತೆ ಹಾಗಂತ ಭೂಮಿಯಲ್ಲಿ 10 ಕಿಲೋಮೀಟರ್ ಇಳಿಯುತ್ತೆ ಅಂತ ಅಲ್ಲ ನಾರ್ಮಲ್ ಆಗಿ 10 ರಿಂದ 2,000 ಮೀಟರ್ ತನಕ ಎರಡು ಕಿಲೋಮೀಟರ್ ತನಕವೂ ಈ ಅಂತರ್ಜಲ ಇಳಿದು ಸಂಗ್ರಹ ಆಗುತ್ತೆ. ಕೆಲವೊಂದು ಕಡೆ ನಾಲ್ಕರಿಂದ ಐದು ಕಿಲೋಮೀಟರ್ ತನಕವೂ ನೀರು ಇರುತ್ತೆ. ಆದರೆ ಆಳಕ್ಕೆ ಹೋದಂತೆಲ್ಲ ಖನಿಜಗಳು ಇರುತ್ತವೆ ಕೆಮಿಕಲ್ಸ್ ಇರುತ್ತವೆ. ಮನುಷ್ಯ ಯೂಸ್ ಮಾಡಕ್ಕೆ ಆಗಲ್ಲ ನಿಮಗೆ ಗೊತ್ತಿರಲಿ ಪ್ರಪಂಚದಲ್ಲಿ ಒಟ್ಟು ನೀರಿನ ಪೈಕಿ ಕುಡಿಯೋಕೆ ಶುದ್ಧವಾಗಿರುವ ನೀರು 3% ಅದರಲ್ಲಿ ಅಂತರ್ಜಲದ್ದೆ 0.76% ಇದೆ.
ಆಲ್ಮೋಸ್ಟ್ ಮೂರನೇ ಒಂದು ಭಾಗ ಅಂತರ್ಜಲನೆ ಆಗುತ್ತೆ ಮನುಷ್ಯರಿಗೆ ಯೋಗ್ಯವಾಗಿರುವ ನೀರು ನಾವು ಆ ನೀರನ್ನ ಎಳೆದು ಎಳೆದು ತೆಗಿತಾ ಇದ್ದೀವಿ ಆದರೆ ಅಷ್ಟೇ ಪ್ರಮಾಣದಲ್ಲಿ ನೀರು ವಾಪಸ್ ಭೂಮಿಗೆ ಹೋಗ್ತಾ ಇಲ್ಲ ಹೆಚ್ಚಿನ ಮಳೆನೀರು ಹಳ್ಳ ಕೊಳ್ಳಗಳ ಮೂಲಕ ಸಮುದ್ರ ಸೇರ್ತಾ ಇದೆ. ಕಾಂಕ್ರೀಟ್ ಕಾಡನ್ನು ಕೂಡ ನಗರಗಳಲ್ಲಿ ಮಾಡಿಕೊಳ್ಳುತ್ತಿದ್ದೇವೆ ಹೀಗಾಗಿ ಅಂತರ್ಜಲ ನೀರು ನಮಗೆ ಕಮ್ಮಿ ಆಗ್ತಿದೆ ಹೀಗಾಗಿ ಸಮಸ್ಯೆ ಆಗ್ತಿದೆ ಇದೇ ಕಾರಣಕ್ಕೆ ಬೋರ್ವೆಲ್ ರೀಚಾರ್ಜಿಂಗ್ ಈಗ ಪಾಪ್ಯುಲರ್ ಆಗ್ತಾ ಇದೆ.
ಇದನ್ನೂ ಓದಿ: ಬೆಂಗಳೂರು ಮುಂದಿನ ಐದು ದಿನಗಳವರೆಗೆ ಭಾರಿ ಮಳೆ.!





