ಎಲ್ಲರಿಗೂ ನಮಸ್ಕಾರ, ಕಾಶ್ಮೀರದ ಕೇಸರಿ ಈಗ ಕರುನಾಡಿನ ಮಣ್ಣಿನಲ್ಲಿ ಜಗತ್ತಿನ ದುಬಾರಿ ಮಸಾಲಾ ಪದಾರ್ಥ ಕೇಸರಿಯನ್ನ ಈಗ ಬೆಳಿಬಹುದು ನಿಮ್ಮ ಮನೆಯ ಬೆಡ್ರೂಮ್ ನಲ್ಲಿ, ಒಂದೇ ಒಂದು ಕೆಜಿ ಕೇಸರಿ ನಿಮಗೆ ಲಕ್ಷ ಲಕ್ಷ ಗ್ಯಾರಂಟಿ. ಮಣ್ಣು ಬೇಡ ನೀರು ಬೇಡ ಬರೀ ಗಾಳಿಯಲ್ಲಿ ಬೆಳೆಯುವ ಕಾಸ್ಟ್ಲಿ ಕೇಸರಿ.
ಕಾಶ್ಮೀರದ ಕೇಸರಿ ಬಗ್ಗೆ ಸಂಪೂರ್ಣ ಮಾಹಿತಿ
ಸ್ನೇಹಿತರೆ ಕೇಸರಿ ಅಂದ್ರೆ ನಮ್ಮ ಕಣ್ಣು ಮುಂದೆ ಕೆಂಪಗೆ ಪುಟ್ಟ ಪುಟ್ಟ ದಾರದ ರೀತಿ ಇರುವಂತಹ ಒಂದು ಗ್ರಾಂ ಗೆ 1,000 2,000 ಬೆಲೆ ಸಿಹಿ ತಿಂಡಿಗಳಿಗೆ ವಿಶೇಷ ರುಚಿ ಕೊಡುವಂತಹ ಬಾಣಂತಿಯರ ಬಯಕೆಗಾಗಿರಬಹುದು ಮಗು ಕೆಂಪುಗು ಹುಟ್ಟಲಿ ಅಂತ ತಿನ್ನುವಂತಹ ಅಧಿಕ ಪೌಷ್ಟಿಕಾಂಶಗಳ ಕಾಸ್ಟ್ಲಿಯಸ್ಟ್ ರೆಡ್ ಗೋಲ್ಡ್ ಅಂತ ಕಣ್ಣು ಮುಂದೆ ನಮಗೆ ಬರುವಂತದ್ದು, ಕೇಸರಿಯನ್ನ ರೆಡ್ ಗೋಲ್ಡ್ ಅಂತ ಕರೀತಾರೆ. ಯಾಕಂತಂದ್ರೆ ಅದಕ್ಕೆ ಮಾರುಕಟ್ಟೆಯಲ್ಲಿ ಅಷ್ಟು ಬೆಲೆ ಇದೆ. ಪ್ರತಿವರ್ಷ ಜಗತ್ತಿನಲ್ಲಿ 300 ಟನ್ ಕೇಸರಿಯನ್ನ ಬೆಳಿತಾರೆ.
ಭಾರತದಲ್ಲಿ ನಾವು ನೋಡೋದಾದ್ರೆ 4 ಟನ್ ಅಷ್ಟು ಕೇಸರಿಯನ್ನ ಬೆಳೆಯುವಂತದ್ದು ಆದರೆ ಭಾರತದ ಕೇಸರಿ ಡಿಮ್ಯಾಂಡ್ ಇರೋದು 100 ಟನ್ ಅಷ್ಟು ಅಂದ್ರೆ ಸುಮಾರು 95 ಟನ್ ಅಷ್ಟು ಕೇಸರಿಯನ್ನ ನಾವು ಬೇರೆ ಬೇರೆ ದೇಶಗಳಿಂದ ಇಂಪೋರ್ಟ್ ಮಾಡ್ಕೊಳ್ತಾ ಇದೀವಿ, ಅಂದ್ರೆ ನೀವೇ ಲೆಕ್ಕ ಹಾಕಿ ಭಾರತದಲ್ಲಿ ಕೇಸರಿಯ ಡಿಮ್ಯಾಂಡ್ ಯಾವ ರೀತಿಯಾಗಿ ಇದೆ ಅನ್ನುವಂತದ್ದು. ಸರಿಯಾಗಿ ಕೇಸರಿ ಬೆಳೆದರೆ ಲಾಸ್ ಇಲ್ಲ ಅನ್ನುವಂತದ್ದು ಮಾತಿದೆ ಒಂದು ಕೆಜಿ ಕೇಸರಿ ಬೆಲೆ ಇವತ್ತಿನ ರೇಟ್ ನಾವು ನೋಡೋದಾದ್ರೆ 1 ಕೆಜಿ ಗೆ ನಾನು ಹೇಳ್ತಾ ಇರೋದು 5 ಲಕ್ಷದ ತನಕ ಇದೆ ಕ್ವಾಲಿಟಿ ಮೇಲೆ ಅದನ್ನ ಡಿಪೆಂಡ್ ಆಗಿರುತ್ತೆ ಕ್ವಾಲಿಟಿ ಮೇಲೆ ವೇರಿಯಾಗುತ್ತೆ.
ಯಾಕೆ ಇಷ್ಟು ಎಷ್ಟು ಕಾಸ್ಟ್ಲಿ ಅಂತ ನೀವು ಪ್ರಶ್ನೆ ಮಾಡಬಹುದು?
ಭಾರತದ ಕಾಶ್ಮೀರ ಹಾಗೆ ಹೊರದೇಶಗಳಾದಂತಹ ಅಫ್ಘಾನಿಸ್ತಾನಗಳಂತಹ ತೀರ ತಂಡಿ ಪ್ರದೇಶದಲ್ಲಿ ಮಾತ್ರ ಕೇಸರಿಯನ್ನ ಬೆಳೆಯೋದಕ್ಕೆ ಸಾಧ್ಯ ಸ್ನೇಹಿತರೆ ಆದರೆ ನೀವು ಕೇಳಬಹುದು ಕೇಸರಿಯನ್ನ ಬೆಳೆಯೋಕೆ ಕರ್ನಾಟಕದಲ್ಲಿ ಯಾವ ತಂಡಿ ಇದೆ ಸಾಧ್ಯನೇ ಇಲ್ಲ ಅಂತ ಆದ್ರೆ ಆರ್ಟಿಫಿಷಿಯಲ್ ಎನ್ವಿರಾನ್ಮೆಂಟ್ ಅಂದ್ರೆ ಕೇಸರಿ ಬೆಳೆಯೋದಕ್ಕೆ ಬೇಕಿರುವಂತಹ ವಾತಾವರಣವನ್ನ Artificial ಆಗಿ ನೀವೇ ಕ್ರಿಯೇಟ್ ಮಾಡೋದು ಅದನ್ನ ಏರೋಪೋನಿಕ್ ಕೃಷಿ ಅಂತ ಕರೀತಾರೆ ಅಂದ್ರೆ ಇನ್ನೂ ಈಸಿಯಾಗಿ ಹೇಳಬೇಕು ಅಂತ ಅಂದ್ರೆ ಮಣ್ಣಿಲ್ಲದೆ ನೀರು ಕೂಡ ಇಲ್ಲದೆ ಒಂದು ಕ್ಲೋಸ್ ಸ್ಪೇಸ್ ನಲ್ಲಿ ಕೇಸರಿಗೆ ಬೇಕಾದಷ್ಟು ತಂಡಿಯ ವಾತಾವರಣವನ್ನ ನಾವೇ ಕ್ರಿಯೇಟ್ ಮಾಡಿಕೊಳ್ಳುವಂತದ್ದು ಅದರ ಮೂಲಕ ಬೆಳೆಯುವಂತದ್ದು.
ಈಗಾಗಲೇ ಸಾಕಷ್ಟು ಜನ ರೈತರು ಈ ರೀತಿ ಕೇಸರಿ ಕೃಷಿ ಮಾಡಿ ಯಶಸ್ವಿ ಕೂಡ ಆಗಿರುವಂತದ್ದು
ಕೇಸರಿ ಹೇಗೆ ಬೆಳೆಯಬಹುದು ಅನ್ನೋದನ್ನ ನೋಡ್ತಾ ಹೋಗೋಣ:
ಒಂದು ಚಿಕ್ಕ ರೂಮ್ನಲ್ಲಿ ಎಸಿ ಆಗಿರಬಹುದು ಚಿಲ್ಲರ್ ಆಗಿರಬಹುದು ಹ್ಯುಮಿಡಿ ಫೈಯರ್ ನಂತಹ ಮಿಷಿನ್ ಗಳನ್ನ ಬಳಸಿ ರೂಮಿನ ವಾತಾವರಣವನ್ನ 10 ಡಿಗ್ರಿಗೆ ನೀವು ಕಂಪ್ಲೀಟ್ ಆಗಿ ಇಳಿಸಬೇಕು ನಂತರ ಟ್ರೇಗಳಲ್ಲಿ ಕೇಸರಿ ಗೆಡ್ಡೆಗಳನ್ನ ಇಟ್ಟು ದಿನ ಅವುಗಳನ್ನ ಗಮನಿಸ್ತಾ ಇರಬೇಕಾಗುತ್ತೆ ಅಬ್ಸರ್ವ್ ಮಾಡ್ತಾ ಇರಬೇಕಾಗುತ್ತೆ ಅವುಗಳಿಗೆ ಎಷ್ಟು ಟೆಂಪರೇಚರ್ ಬೇಕೋ ಅದನ್ನ ನೀವು ಮೈಂಟೈನ್ ಮಾಡ್ತಾ ಬರಬೇಕಾಗುತ್ತೆ ಅಂದ್ರೆ ವಾತಾವರಣಕ್ಕೆ ತಕ್ಕಂತೆ ನಾವು ಇಲ್ಲಿ ಅದನ್ನ ಮಾನಿಟರ್ ಮಾಡಬೇಕು ಕೇಸರಿ ಅದೊಂದು ಸೀಸನ್ ನಲ್ಲಿ ಮಾತ್ರ ಬೆಳೆಯುವಂತಹ ಬೆಳೆ ಅಂತಂದ್ರೆ ಚಳಿಗಾಲದ ಪ್ರಾರಂಭದಿಂದ ಚಳಿಗಾಲ ಮುಗಿಯುವಷ್ಟರಲ್ಲಿ ಮೂರು ಬೆಳೆಗಳನ್ನ ನೀವು ಕಟಾವು ಮಾಡಬಹುದು.
ಅಂದ್ರೆ ಸೆಪ್ಟೆಂಬರ್ ಇಂದ ಶುರು ಮಾಡಿದ್ರೆ ಡಿಸೆಂಬರ್ ಮುಗಿಯುವಷ್ಟರಲ್ಲಿ ನೀವು ಮೂರು ಬಾರಿ ಕೇಸರಿನ ಕಟಾವು ಮಾಡಿರ್ತೀರಾ 1 kg ಕೇಸರಿ ಗೆಡ್ಡೆಗೆ 500 ರಿಂದ 1000 ಆಗುತ್ತೆ. ಸುಮಾರು 150 ಕೇಸರಿ ಗೆಡ್ಡೆಗಳಲ್ಲಿ 500 ಗ್ರಾಂ ನಿಂದ ಒಂದು ಕೆಜಿ ವರೆಗೆ ಕೇಸರಿಯನ್ನ ನೀವು ಬೆಳೆಯಬಹುದು.
ನೀವು ಕೇಳಬಹುದು ಏನಿದು ಕೇಸರಿ ಗೆಡ್ಡೆ:
ಪುಟ್ಟ ಪುಟ್ಟ ಈರುಳ್ಳಿ ತರ ಇರುವಂತಹ ಕೇಸರಿ ಗೆಡ್ಡೆಗಳನ್ನ ಭೂಮಿಯೊಳಗೆ ಇಡಬೇಕಾಗುತ್ತೆ ಚಳಿಗಾಲದಲ್ಲಿ ಇದು ಹೂ ಬಿಡುವಂತದ್ದು ಆ ಹೂವಿನ ಒಳಗೆ ಇರುವಂತಹ ಸಣ್ಣ ಸಣ್ಣ ಒಂದು ಪೋರ್ಸ್ ಗಳೇ ಈ ಒಂದು ಕೇಸರಿಯ ದಳಗಳು ನೀವು ಒಮ್ಮೆ ಕೇಸರಿ ಗೆಡ್ಡೆಗಳನ್ನ ಖರೀದಿಸಿದರೆ ಕೇಸರಿ ಕಟಾವು ಮುಗಿದ ಮೇಲೆ ಅವುಗಳನ್ನ ಸೂಕ್ತ ಮಣ್ಣಿನಲ್ಲಿ ಹೂತಿಟ್ಟರೆ ಮತ್ತೆ ಮುಂದಿನ ಕೇಸರಿ ಬೆಳೆಯೋಕೆ ಗೆಡ್ಡೆಗಳು ರೆಡಿ ಆಗುವಂತದ್ದು ಬಳಕೆಯಾಗುತ್ತೆ.
ಇನ್ನು ಕಟಾವಿನ ಬಗ್ಗೆ ಮಾತನಾಡುವುದಾದರೆ ಕೇಸರಿ ಗೆಡ್ಡೆಗಳನ್ನ ಟ್ರೇಗಳಲ್ಲಿ ಇಟ್ಟು ಸೂಕ್ತ ವಾತಾವರಣ ಕಲ್ಪಿಸಿದರೆ ಒಂದು ತಿಂಗಳಲ್ಲಿ ಹೂವು ಬಿಡೋದಕ್ಕೆ ಶುರುವಾಗುತ್ತೆ ಆ ಒಂದು ಹೂಗಳ ಮಧ್ಯೆ ಇರುವಂತಹ ಈ ಒಂದು ಎಳೆಗಳನ್ನ ಪ್ಲಕ್ಕರ್ ಸಹಾಯದಿಂದ ನೀವು ಕಿತ್ತು ಒಣಗಿಸಿದರೆ ಕೆಂಪಾದ ಕೇಸರಿ ದಳಗಳು ನಿಮಗೆ ಸಿಗುವಂತದ್ದು, ಕೇಸರಿ ಹೂವಿನಲ್ಲಿ ಅವುಗಳ ಪೆಟಲ್ ಆಗಿರಬಹುದು ಪೋರ್ಸ್ ಪ್ರತಿಯೊಂದು ಕೂಡ ಉಪಯೋಗಕ್ಕೆ ಬರುತ್ತೆ.
ಸಾಕಷ್ಟು ಸಿಹಿ ತಿಂಡುಗಳಲ್ಲಿ ಆಗಿರಬಹುದು ಕಾಸ್ಮೆಟಿಕ್ಸ್ ಗಳಲ್ಲಿ ಆಗಿರಬಹುದು ಮೆಡಿಸಿನ್ ಗಳಲ್ಲಿ ಕೇಸರಿಯನ್ನ ಬಳಸುವುದರಿಂದ ಕೇಸರಿಗೆ ಭಾರತದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ ಇನ್ನು ಮಾರುಕಟ್ಟೆ ಬಗ್ಗೆ ನೋಡೋದಾದ್ರೆ ಗ್ರೇಡ್ ಅನ್ನ ಆಧರಿಸಿ 1 ಕೆಜಿ ಕೇಸರಿಗೆ 5 ಲಕ್ಷದಿಂದ 10 ಲಕ್ಷದ ತನಕ ಬೆಲೆ ಇದೆ ಒಳ್ಳೆ ಕ್ವಾಲಿಟಿ ಕೊಟ್ರೆ 10 ಲಕ್ಷದವರೆಗೆ ಕೂಡ ಸಿಗುತ್ತೆ ಫಸ್ಟ್ ಗ್ರೇಡ್ ಕೇಸರಿ ದಳಗಳು ಮೆಡಿಸಿನ್ ಕಾಸ್ಮೆಟಿಕ್ ಗಳಿಗೆ ಬಳಸಲಾಗಿದೆ ಆಗುತ್ತೆ.
ಅಂಗಡಿಗಳಲ್ಲಿ ಗ್ರಾಂ ಲೆಕ್ಕದಲ್ಲಿ ಕೇಸರಿಯನ್ನ ಮಾರಾಟ ಮಾಡ್ತಾರೆ ಮಸಾಲಾ ಪದಾರ್ಥಗಳಲ್ಲಿ ಅತೀ ಹೆಚ್ಚು ಬೆಲೆ ಇರುವಂತಹ ಕೇಸರಿಗೆ ಇಂಡಿಯಾದಲ್ಲಿ ಭಾರತದಲ್ಲಿ ದೊಡ್ಡ ಮಾರ್ಕೆಟ್ ಇದೆ.
ಬೇಡಿಕೆ ಇರುವಷ್ಟು ಕೇಸರಿ ನಮ್ಮ ಒಂದು ಭಾರತದಲ್ಲಿ ಬೆಳೆಯುವುದಕ್ಕೆ ಆಗದೆ ಇರೋ ಕಾರಣ ನಾವು ಬೇರೆ ಬೇರೆ ದೇಶಗಳಿಂದ ಅದನ್ನ ತರಿಸಿಕೊಳ್ಳುತ್ತಾ ಇದ್ದೀವಿ ಅಂದ್ರೆ ಇಂಪೋರ್ಟ್ ಮಾಡಿಸ್ಕೊತಾ ಇದ್ದೀವಿ
ರೈತರು ಕೇಸರಿಯನ್ನ ಬೆಳೆದರೆ ಸುಲಭವಾಗಿ ಅಧಿಕ ಲಾಭವನ್ನ ಗಳಿಸಬಹುದು.
ಇದನ್ನೂ ಓದಿ: ಪಾನ್ ಕಾರ್ಡ್ 2.0 ಅಂದರೆ ಏನು?





