ಚಳಿಗಾಲದಲ್ಲಿ ನೀರು ಕುಡಿಯುವುದರಿಂದ ಆಗುವ ಉಪಯೋಗಗಳು.!

December 9, 2024 2:33 PM
ಚಳಿಗಾಲದಲ್ಲಿ ನೀರು ಕುಡಿಯುವುದರಿಂದ ಆಗುವ ಉಪಯೋಗಗಳು.!

ಎಲ್ಲರಿಗೂ ನಮಸ್ಕಾರ, ಚಳಿಗಾಲದಲ್ಲಿ ನೀರು ಕುಡಿಯೋದನ್ನೇ ನೀವು ಕಮ್ಮಿ ಮಾಡಿದ್ದೀರಾ ಬಾಯಾರಿಕೆ ಆಗ್ತಿಲ್ಲ ಅಂತ ನೀರನ್ನೇ ಕುಡಿತಿಲ್ವಾ ಹಾಗಿದ್ರೆ ಈ ಆರೋಗ್ಯ ಸಮಸ್ಯೆ ಎದುರಾಗಬಹುದು ಎಚ್ಚರ ಚಳಿಗಾಲದಲ್ಲಿ ನೀರು ಕುಡಿಯೋದೇ ಕಮ್ಮಿಯಾಗಿದ್ಯಾ ಬಾಯ ಆಗ್ತಿಲ್ಲ ಅಂತ ನೀರನ್ನೇ ಕುಡಿಯುತ್ತಿಲ್ಲವೇ ಈ ಆರೋಗ್ಯ ಸಮಸ್ಯೆ ಎದುರಾಗಬಹುದು ಎಚ್ಚರ ಸಾಮಾನ್ಯವಾಗಿ ನಾವು ಚಳಿಗಾಲದಲ್ಲಿ ಹೆಚ್ಚಾಗಿ ಬಾಯಾರಿಕೆಯನ್ನು ಅನುಭವಿಸುವುದಿಲ್ಲ ವಾತಾವರಣ ತಣ್ಣಗಿರುವುದರಿಂದ ನೀರು ಕುಡಿಯಲೇಬೇಕು. ಅನ್ಸೋದು ಇಲ್ಲ ಈ ಕಾರಣದಿಂದಾಗಿ ಕೆಲವರು ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯುವುದಿಲ್ಲ ಬಾಯಾರಿಕೆ ಆಗದಿದ್ದರೆ.

ನೀರು ಯಾಕೆ ಕುಡಿಬೇಕು ಅಂತ ಕೆಲವರು ಯೋಚಿಸುತ್ತಾರೆ:

ಕೆಲವರು ಬಾಯಾರಿಕೆಯಾದಾಗ ಮಾತ್ರ ನೀರು ಕುಡಿತಾರೆ ಬಾಯಾರಿಕೆ ಆಗದಿದ್ದಲ್ಲಿ ದಿನಕ್ಕೆ ಒಂದು ಗ್ಲಾಸ್ ನೀರು ಕುಡಿಯುವುದು ಕೂಡ ಅನುಮಾನವೇ ಆದರೆ ಚಳಿಗಾಲದಲ್ಲೂ ಕೂಡ ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಲೀಟರ್ ನೀರನ್ನ ಕುಡಿಯಬೇಕು ಅದಕ್ಕಿಂತ ಕಡಿಮೆಯಾದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆಗಳ ಜೊತೆಗೆ ಇನ್ನು ಅನೇಕ ಸಮಸ್ಯೆಗಳು ಉಂಟಾಗಬಹುದು.

ಸಾಕಷ್ಟು ನೀರು ಕುಡಿಯುವುದರಿಂದ ಏನೆಲ್ಲಾ ಅಪಾಯಗಳಿವೆ ನೋಡ್ತಾ ಹೋಗೋಣ ಮೊದಲಿಗೆ ತಲೆನೋವು ಆಯಾಸ ಚಳಿಗಾಲದಲ್ಲಿ ದೇಹವು ಸಾಕಷ್ಟು ನೀರು ಕುಡಿಯದಿದ್ದರೆ ತಲೆನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ ಆಯಾಸ ಮತ್ತು ಆಲಸ್ಯದ ಭಾವನೆ ಉಂಟಾಗುತ್ತೆ ಬಾಯಾರಿಕೆ ಇಲ್ಲದಿದ್ದರೂ ದೇಹದಲ್ಲಿ ನಿರ್ಜಲೀಕರಣ ತಡೆಯುವುದಕ್ಕೆ ನೀರು ಕುಡಿಯುವುದು ಅತ್ಯಗತ್ಯ ಅದಕ್ಕಾಗಿಯೇ ಚಳಿಗಾಲದಲ್ಲಿ ವಿಶೇಷ ಕಾಳಜಿ ವಹಿಸಬೇಕು.

ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ ಇನ್ನು ಹೃದಯದ ಮೇಲೆ ಪರಿಣಾಮ ಸಾಕಷ್ಟು ನೀರು ಕುಡಿಯದಿದ್ದರೆ ದೇಹದಲ್ಲಿನ ಪೊಟ್ಯಾಶಿಯಂ ಮತ್ತು ಸೋಡಿಯಂನ ಎಲೆಕ್ಟ್ರೋಲೈಟ್ ಸಮತೋಲನದ ಮೇಲೆ ಪರಿಣಾಮ ಬೀರುತ್ತೆ ಇದು ಹೃದಯದ ಕಾರ್ಯ ನಿರ್ವಹಣೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತೆ.

ಹೃದಯದ ಪ್ರತಿಕ್ರಿಯೆಯಲ್ಲಿ ಅಸಮತೋಲನ ಹೆಚ್ಚಾಗುತ್ತೆ. ಕಡಿಮೆ ನೀರು ಕುಡಿದರೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ ಇದರಿಂದ ಹೃದಯದ ಮೇಲಿನ ಒತ್ತಡವು ಹೆಚ್ಚಾಗುತ್ತೆ ಒಟ್ಟಿನಲ್ಲಿ ಸಾಕಷ್ಟು ನೀರು ಕುಡಿಯದಿದ್ದರೆ ಹೃದಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರಬಹುದು ಇನ್ನು ಜೀರ್ಣಕಾರಿ ಸಮಸ್ಯೆಗಳು ಸಾಕಷ್ಟು ನೀರು ಸೇವನೆ ಮಾಡದಿದ್ದರೆ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುವುದಿಲ್ಲ ಇದರಿಂದ ತಿಂದ ಆಹಾರ ಬಹುಕಾಲ ಜೀರ್ಣವಾಗದೆ ದೇಹ ಭಾರವಾದಂತಾಗುತ್ತದೆ ಅಲ್ಲದೆ ನೀರು ಕುಡಿಯುವುದು ಕಡಿಮೆಯಾದರೆ ದೇಹದಲ್ಲಿರುವ ತ್ಯಾಜ್ಯಗಳು ಹೊರಗೆ ಹೋಗುವುದು ಕಷ್ಟವಾಗುತ್ತೆ ತ್ಯಾಜ್ಯದ ಶೇಖರಣೆಯು ಅಂಗಗಳ ಕಾರ್ಯ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತೆ.

ಇನ್ನು ಮೂತ್ರಪಿಂಡಗಳಿಗೆ ಅಪಾಯ ಕಡಿಮೆ ನೀರು ಕುಡಿದರೆ ಮೂತ್ರಪಿಂಡದ ಮೇಲೆ ಒತ್ತಡ ತೀವ್ರವಾಗಿರುತ್ತೆ ಮೂತ್ರಪಿಂಡಗಳಿಗೆ ರಕ್ತದಿಂದ ತ್ಯಾಜ್ಯವನ್ನು ಬೇರ್ಪಡಿಸಲು ಮತ್ತು ಹೊರಹಾಕಲು ಕಷ್ಟವಾಗುತ್ತೆ ಕಡಿಮೆ ನೀರು ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯವು ಕೂಡ ಹೆಚ್ಚಾಗುತ್ತೆ ಇದರಿಂದ ಮೂತ್ರಪಿಂಡಗಳಿಗೆ ಹಾನಿಯಾಗುವ ಅಪಾಯ ಇದೆ ಅದಕ್ಕಾಗಿಯೇ ಆರೋಗ್ಯಕರ ಹಾಗೆ ಉತ್ತಮ ಮೂತ್ರಪಿಂಡದ ಕಾರ್ಯಕ್ಕಾಗಿ ಸಾಕಷ್ಟು ನೀರು ಕುಡಿಯುವುದು ಅವಶ್ಯಕ ಇನ್ನು ಸ್ನಾಯು ಕೀಲುನೋವು ಚಳಿಗಾಲದಲ್ಲಿ ನೀವು ಸಾಕಷ್ಟು ನೀರು ಕುಡಿಯದಿದ್ದರೆ ದೇಹದಲ್ಲಿ ಸಾಕಷ್ಟು ಎಲೆಕ್ಟ್ರೋಲೈಟ್ ಗಳು ಇರುವುದಿಲ್ಲ ಇದು ಕೀಲು ನೋವನ್ನು ಹೆಚ್ಚಿಸುತ್ತೆ.

ಸಂಧಿವಾತ ಹೊಂದಿರುವ ಜನರಿಗೆ ನೋವು ಇನ್ನಷ್ಟು ತೀವ್ರವಾಗಿರುತ್ತೆ ನೀರಿನ ಕೊರತೆಯು ಕೂಡ ಸ್ನಾಯು ನೋವಿಗೆ ಕಾರಣವಾಗಬಹುದು ಮೂಳೆಯ ಬಲದ ಮೇಲು ಕೂಡ ಇದು ಪರಿಣಾಮ ಬೀರಬಹುದು ಇನ್ನು ಚರ್ಮ ತೊಂದರೆಗಳು ಚಳಿಗಾಲದಲ್ಲಿ ಚರ್ಮವು ಸಾಮಾನ್ಯವಾಗಿ ತುಂಬಾ ಶುಷ್ಕವಾಗಿರುತ್ತೆ. ನೀರು ಕಡಿಮೆ ಕುಡಿಯುವುದರಿಂದ ಇನ್ನಷ್ಟು ಸಮಸ್ಯೆಗಳು ಉದ್ಭವಿಸುತ್ತವೆ ಅಲ್ಲದೆ ನೀವು ಸಾಕಷ್ಟು ನೀರು ಕುಡಿಯದಿದ್ದರೆ ಚರ್ಮದ ಸಮಸ್ಯೆಗಳು ಉಲ್ಬಣಗೊಳ್ಳಬಹುದು ಚರ್ಮದಲ್ಲಿನ ತೇವಾಂಶವು ಹೆಚ್ಚು ಒಣಗಬಹುದು. ನೀರು ಕಡಿಮೆಯಾದರೆ ತುಟಿಗಳು ಕೂಡ ಒಣಗುತ್ತವೆ ಈ ಕಾರಣಗಳಿಂದಾಗಿ ಚಳಿಗಾಲವೇ ಇರಲಿ ಸಾಕಷ್ಟು ನೀರು ಕುಡಿಯೋದು ಅತ್ಯಗತ್ಯ ಚಳಿಗಾಲದಲ್ಲಿಯೂ ದೇಹವು ಸಾಕಷ್ಟು ನೀರನ್ನು ಕುಡಿಯಬೇಕು ದಿನಕ್ಕೆ ಕನಿಷ್ಠ ಮೂರು ಲೀಟರ್ ನೀರು ಕುಡಿಯಲೇಬೇಕು ಇದು ಅನೇಕ ಸಮಸ್ಯೆಗಳು ಉದ್ಭವಿಸುವುದನ್ನ ತಡೆಯುತ್ತೆ ನೀರು ಕುಡಿಯೋದನ್ನ ಎಂದಿಗೂ ನಿರ್ಲಕ್ಷಿಸಬಾರದು.

ಇದನ್ನೂ ಓದಿ: ಕಾಶ್ಮೀರಿ ಕೇಸರಿ ನಮ್ಮ ಕರ್ನಾಟಕದಲ್ಲಿ ಬೆಳೆಯುವುದು ಹೇಗೆ?

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment