ಎಲ್ಲರಿಗೂ ನಮಸ್ಕಾರ, ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸುನೀಗುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸುತ್ತಿದೆ 1 ನಿಮಿಷವೂ ಕೂಡ ವಿಶ್ರಾಂತಿ ಪಡೆದುಕೊಳ್ಳದೆ ಕಾರ್ಯ ನಿರ್ವಹಿಸುವಂತಹ ಹೃದಯ ನಿಂತರೆ ಬದುಕೇ ಮುಗಿದಂತೆ. ಹೀಗಾಗಿ ಹೃದಯದ ಕಡೆಗೆ ಹೆಚ್ಚಿನ ಲಕ್ಷ್ಯ ಅತ್ಯಗತ್ಯ. ಈ ನಿಟ್ಟಿನಲ್ಲಿ ಹೃದಯ ಆರೋಗ್ಯವಾಗಿ ಇರಬೇಕು ಅಂದ್ರೆ ಆಹಾರ ಪದ್ಧತಿ ಹೇಗಿರಬೇಕು ಏನು ತಿನ್ನಬೇಕು ಹಾಗೆಯೇ ಯಾವೆಲ್ಲಾ ಆಹಾರದಿಂದ ದೂರ ಇರಬೇಕು. ಅನ್ನೋದರ ಮಾಹಿತಿ ಇಲ್ಲಿದೆ.
ಹಾರ್ಟ್ ಚೆನ್ನಾಗಿರಬೇಕೆಂದರೆ ಏನು ತಿನ್ನಬೇಕು?
ಹೃದಯದ ಆರೋಗ್ಯಕ್ಕೆ ಇಲ್ಲಿದೆ ಆಹಾರ ಕ್ರಮ ಇತ್ತೀಚಿಗೆ ಹಲವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಹಾರ್ಟ್ ಅಟ್ಯಾಕ್ ನಿಂದ ಸಾವನಪ್ಪುತ್ತಿರುವುದನ್ನ ನೋಡುತ್ತಿರುತ್ತೇವೆ. ಇದಕ್ಕೆ ನಮ್ಮ ಜೀವನಶೈಲಿ ಕೂಡ ಕಾರಣ ಆಗಿರಬಹುದು ಆದರೆ ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರಗಳೇ ನಮ್ಮ ದೇಹಕ್ಕೆ ಮಾರಕವಾಗುತ್ತಿದೆ.
ಸರಿಯಾದ ಜೀವನಶೈಲಿ ಆಹಾರ ಕ್ರಮ ದೈಹಿಕ ಚಟುವಟಿಕೆಗಳು ಇಲ್ಲದೆ ಇರುವುದರಿಂದ ಹೃದಯದ ಕಾಯಿಲೆಗಳು ಯುವಜನತೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಹೀಗಾಗಿ ಸರಿಯಾದ ಜೀವನಶೈಲಿಯ ಜೊತೆಗೆ ದೈನಂದಿನ ಆಹಾರ ಪದ್ಧತಿಯನ್ನು ಕೂಡ ಸರಿಯಾಗಿ ಇಟ್ಟುಕೊಂಡರೆ ಹೃದಯದ ಆರೋಗ್ಯ ಸರಿಯಾಗಿರುತ್ತೆ.
ದೇಹದ ಅತ್ಯಂತ ಪ್ರಮುಖವಾದ ಹಾಗೂ ದಿನದ 24 ಗಂಟೆಯು ಕೂಡ ಕಾರ್ಯ ನಿರ್ವಹಿಸುವ ಅಂಗ ಎಂದರೆ ಅದು ನಮ್ಮ ಹೃದಯ ಹೀಗಾಗಿ ಇದರ ಆರೋಗ್ಯದಲ್ಲಿ ಸ್ವಲ್ಪವೂ ಕೂಡ ಹೆಚ್ಚು ಕಡಿಮೆ ಆಗದಂತೆ ನೋಡಿಕೊಳ್ಳಲು ಎಲ್ಲರೂ ಹೆಚ್ಚು ಗಮನಹರಿಸಬೇಕು.
ಈ ನಿಟ್ಟಿನಲ್ಲಿ ಹೃದಯದ ಆರೋಗ್ಯಕ್ಕೆ ಯಾವೆಲ್ಲಾ ಆಹಾರ ಸೂಕ್ತ ಹಾಗೂ ಯಾವ ಆಹಾರದಿಂದ ದೂರ ಇರಬೇಕು ಜೊತೆಗೆ ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಇರೋರು ಎಂತಹ ಆಹಾರ ಪದ್ಧತಿ ರೂಡಿಸಿಕೊಳ್ಳುವುದು ಉತ್ತಮ ಅನ್ನೋದರ ವಿಸ್ತೃತ ಮಾಹಿತಿ ಇಲ್ಲಿದೆ.
1. Apple
ದಿನಕ್ಕೊಂದು ಸೇಬು ಹಣ್ಣು ಸೇವನೆಯಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ದೂರ ಇರಬಹುದು ಅಂತ ಹಲವಾರು ಅಧ್ಯಯನಗಳು ತಮ್ಮ ವರದಿಯಲ್ಲಿ ತಿಳಿಸಿವೆ. ಪ್ರಮುಖವಾಗಿ ಈ ಹಣ್ಣಿನಲ್ಲಿ ಫ್ಲೇವನಾಯಿಡ್ ಅಂಶ ಯಥೇಚ್ಛವಾಗಿ ಕಂಡುಬರುವುದರಿಂದ ಹೃದಯಕ್ಕೆ ಏನು ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳುತ್ತೆ.
ಹೀಗಾಗಿ ಸಾಧ್ಯವಾದಷ್ಟು ಮಧ್ಯಾಹ್ನ ಊಟದ ನಂತರ ಈ ಹಣ್ಣನ್ನ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ಇನ್ನು ಮನೆಯಲ್ಲಿ ಮಕ್ಕಳು ಮತ್ತು ವಯಸ್ಸಾದವರು ಇದ್ದರೆ ಅವರಿಗೂ ಕೂಡ ಇದೇ ಅಭ್ಯಾಸ ಮಾಡಿಸಿದರೆ ಮನೆಯಲ್ಲಿರುವ ಎಲ್ಲಾ ಸದಸ್ಯರ ಹೃದಯ ಆರೋಗ್ಯ ಕೂಡ ಚೆನ್ನಾಗಿರುತ್ತೆ.
2. Dark Chocolate
ಎಲ್ಲರಿಗೂ ಕೂಡ ಇಷ್ಟವಾಗುವ ಸಿಹಿ ತಿನಿಸುಗಳಲ್ಲಿ ಚಾಕ್ಲೇಟ್ ಕೂಡ ಒಂದು ಅದರಲ್ಲೂ ಡಾರ್ಕ್ ಚಾಕ್ಲೇಟ್ ಅಂತೂ ಆರೋಗ್ಯಕ್ಕೆ ಬಹಳ ಒಳ್ಳೆಯದು ಮುಖ್ಯವಾಗಿ ಹೃದಯದ ಸಮಸ್ಯೆ ಬರಬಾರದು ಅಂದ್ರೆ ಎರಡು ದಿನಕ್ಕೊಮ್ಮೆಯಾದರೂ ಕೂಡ ಸಣ್ಣ ಪೀಸ್ ಡಾರ್ಕ್ ಚಾಕ್ಲೇಟ್ ತಿನ್ನೋ ಅಭ್ಯಾಸ ಇಟ್ಟುಕೊಳ್ಳಬೇಕಂತೆ.
ಇದಕ್ಕೆ ಮುಖ್ಯ ಕಾರಣ ಡಾರ್ಕ್ ಚಾಕ್ಲೇಟ್ ನಲ್ಲಿ ಕಂಡುಬರುವ ಫ್ಲೇವನಾಯ್ಡ್ ಅಂಶಗಳು ರಕ್ತದಲ್ಲಿ ಏರುಪೇರು ಉಂಟಾಗದಂತೆ ನೋಡಿಕೊಂಡು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಮುಖ್ಯವಾಗಿ ಹೃದಯಾಘಾತ ಮತ್ತು ಹೃದಯ ರಕ್ತನಾಳದ ಕಾಯಿಲೆಗಳನ್ನು ದೂರ ಮಾಡುತ್ತೆ.
ಹೀಗಾಗಿ ರಸ್ತೆ ಬದಿಯ ಜಂಕ್ ಫುಡ್ ಗಳನ್ನು ತಿಂದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ಡಾರ್ಕ್ ಚಾಕ್ಲೇಟ್ ತಿನ್ನೋ ಅಭ್ಯಾಸ ಮಾಡಿಕೊಂಡರೆ ಹೃದಯದ ಸಮಸ್ಯೆಯಿಂದ ದೂರ ಇರಲು ಸಹಾಯಕವಾಗುತ್ತೆ.
3. ಮೊಸರು
ಹಾಲಿನ ಉಪ ಉತ್ಪನ್ನವಾದ ಮೊಸರಿನಲ್ಲಿ ಅಪಾರ ಪ್ರಮಾಣದಲ್ಲಿ ಪೌಷ್ಟಿಕಾಂಶ ಸತ್ವಗಳು ಕಂಡುಬರುವ ಕಾರಣಕ್ಕೆ ಆರೋಗ್ಯಕ್ಕೆ ಇದರಿಂದ ಸಾಕಷ್ಟು ಲಾಭಗಳಿವೆ ಮುಖ್ಯವಾಗಿ ಇದರಲ್ಲಿ ಯಥೇಚ್ಛವಾಗಿ ಪ್ರೋಟೀನ್ ಕ್ಯಾಲ್ಸಿಯಂ ಮತ್ತು ಆರೋಗ್ಯಕ್ಕೆ ಬೇಕಾಗುವ ಹಲವು ಬಗೆಯ ವಿಟಮಿನ್ಸ್ ಅಂಶಗಳು ಹೇರಳವಾಗಿ ಕಂಡುಬರುವುದರಿಂದ ಇದೊಂದು ಆರೋಗ್ಯಕರವಾದ ಆಹಾರ ಪದಾರ್ಥ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ ಅದರಲ್ಲೂ ದಿನಕ್ಕೊಮ್ಮೆಯಾದರೂ ಊಟದ ಜೊತೆಗೆ ಮೊಸರನ್ನು ಸೇವಿಸುವುದರಿಂದ ಜೀರ್ಣ ಪ್ರಕ್ರಿಯೆ ಸರಿಯಾಗಿ ನಡೆಯುವುದರ ಜೊತೆಗೆ ಹೃದಯದ ಸಮಸ್ಯೆಗಳು ಕೂಡ ದೂರವಾಗುತ್ತವೆ.
ಸಾಧ್ಯವಾದಷ್ಟು ಮನೆಯಲ್ಲಿ ಮಾಡಿದ ಮೊಸರು ಸೇವಿಸಿ ಹಾಗೂ ಪ್ಲೇನ್ ಮೊಸರನ್ನ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ಜಾಸ್ತಿ ಉಪ್ಪು ಅಥವಾ ಸಕ್ಕರೆ ಬೆರೆಸಿ ಮೊಸರು ಸೇವನೆ ಮಾಡಬೇಡಿ.
4. Vegetables
ಆಹಾರ ಕ್ರಮದಲ್ಲಿ ಧಾನ್ಯಗಳು ತಾಜಾ ಹಣ್ಣು ತರಕಾರಿಗಳನ್ನು ಜಾಸ್ತಿಯಾಗಿ ಸೇರಿಸಿಕೊಳ್ಳಿ ಇವುಗಳಲ್ಲಿ ಅಧಿಕ ಪ್ರಮಾಣದ ವಿಟಮಿನ್ಸ್ ಖನಿಜಾಂಶಗಳು ನಾರಿನ ಅಂಶಗಳು ಹಾಗೂ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗುವ ಎಲ್ಲಾ ರೀತಿಯ ಪೌಷ್ಟಿಕ ಸತ್ವಗಳು ಹೇರಳವಾಗಿ ಕಂಡುಬರುವುದರಿಂದ ಆರೋಗ್ಯದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿ ಹೃದಯದ ಕಾಯಿಲೆ ಕೂಡ ದೂರವಾಗಲು ನೆರವಾಗುತ್ತೆ.
ಇನ್ನು ಆಲೂಗಡ್ಡೆ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾಗುತ್ತೆ. ಎನ್ನುವ ಒಂದೇ ಕಾರಣಕ್ಕೆ ಹೆಚ್ಚಿನವರು ಈ ತರಕಾರಿಯಿಂದ ದೂರವಿರುತ್ತಾರೆ ಆದರೆ ನಿಜ ಹೇಳಬೇಕೆಂದರೆ ಆಲೂಗಡ್ಡೆಯನ್ನು ಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ ಮುಖ್ಯವಾಗಿ ರಕ್ತದೊತ್ತಡ ಹಾಗೂ ಹೃದಯದ ಸಮಸ್ಯೆಗಳಿರುವ ರೋಗಿಗಳು ತಮ್ಮ ಆಹಾರ ಪದ್ಧತಿಯಲ್ಲಿ ಮಿತವಾಗಿ ಆಲೂಗಡ್ಡೆಯನ್ನು ಸೇವನೆ ಮಾಡುವ ಅಭ್ಯಾಸವನ್ನು ಇಟ್ಟುಕೊಂಡರೆ ಒಳ್ಳೆಯದು.
ಇನ್ನು ಆಲೂಗಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಸಿಕ್ಸ್ ಅಂಶ ಹಾಗೂ ಪೊಟ್ಯಾಶಿಯಂ ಅಂಶ ಹೆಚ್ಚಾಗಿ ಕಂಡುಬರುವುದರಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಗೂ ಹೃದಯದ ರಕ್ತನಾಳದ ಕಾಯಿಲೆಗಳಲ್ಲಿ ಕಂಡುಬರುವ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಪೊಟ್ಯಾಶಿಯಂ ಅಂಶದ ಪಾತ್ರವನ್ನು ಮರೆಯುವಂತಿಲ್ಲ. ನಾವು ಸೇವಿಸುವ ಆಹಾರದಲ್ಲಿ ಉಪ್ಪು ಸೋಡಿಯಂ ಮತ್ತು ಸಕ್ಕರೆಯ ಅಂಶ ಕಡಿಮೆ ಇರಬೇಕು.
ಅತ್ಯಂತ ಮಿತ ಹಾಗೆಯೇ ಅಗತ್ಯ ಪ್ರಮಾಣದಲ್ಲಿ ಇರಬೇಕು ಒಂದು ವೇಳೆ ಈ ಎಲ್ಲಾ ಅಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಿದರೆ ನಿಮಗೆ ಹೃದಯಘಾತವಾಗುವ ಅಪಾಯ ಹೆಚ್ಚಿರುತ್ತೆ ಫ್ರಿಡ್ಜ್ ನಲ್ಲಿ ಇರಿಸಿದ ಯಾವುದೇ ಪದಾರ್ಥಗಳನ್ನು ಸೇವಿಸುವುದನ್ನ ಆದಷ್ಟು ಕಡಿಮೆಗೊಳಿಸಿ ಸಾಧ್ಯವಾದಷ್ಟು ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಿದರೆ ಉತ್ತಮ ಇದರಿಂದ ನಮ್ಮ ದೇಹದ ಆರೋಗ್ಯಕ್ಕೂ ಒಳ್ಳೆಯದು.
5. Fish
ಇನ್ನು ಮೀನು ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅದರಲ್ಲೂ ಎಣ್ಣೆಯುಕ್ತ ಮೀನನ್ನ ಸೇವಿಸುವುದು ತುಂಬಾನೇ ಸೂಕ್ತ ಯಾಕಂದರೆ ಇದರಲ್ಲಿ ಒಮೆಗಾ 3 ಅಂಶವಿದೆ ಒಮೆಗಾ 3 ವಿಟಮಿನ್ ಟ್ರೈ ಗ್ಲಿಸರೈಡ್ ಗಳನ್ನ ಕಡಿಮೆಗೊಳಿಸಲು ಸಹಾಯ ಮಾಡುತ್ತೆ ಇನ್ನು ಆದಷ್ಟು ಫ್ರೆಶ್ ಮೀನುಗಳನ್ನು ಸೇವಿಸಿ ಫ್ರಿಡ್ಜ್ ನಲ್ಲಿ ಇರಿಸಿದ ಮೀನು ಆರೋಗ್ಯಕ್ಕೆ ಒಳ್ಳೆಯದಲ್ಲ ಇನ್ನೊಂದು ವಿಚಾರ ಅಂದ್ರೆ ಎಣ್ಣೆಯಲ್ಲಿ ಕರಿದ ಮೀನು ಸೇವಿಸಲು ಹೋಗಬೇಡಿ ಸಲ್ಮಾನ್ ಬಾಂಗ್ಡ ಹೆರಿಂಗ್ ಟ್ರೌಟ್ ಸಾರ್ಡಿನ್ ಇಂತಹ ಮೀನುಗಳು ಉತ್ತಮ.
ಇದನ್ನೂ ಓದಿ: ಕಾಶ್ಮೀರಿ ಕೇಸರಿ ನಮ್ಮ ಕರ್ನಾಟಕದಲ್ಲಿ ಬೆಳೆಯುವುದು ಹೇಗೆ?





