ಎಲ್ಲರಿಗೂ ನಮಸ್ಕಾರ, ICC ಬ್ಯಾಟರ್ ಗಳ ನೂತನ ಪಟ್ಟಿ. ಈ ಬಾರಿ ದಿಗ್ಗಜರನ್ನೇ ಹಿಂದಿಕ್ಕಿ ಹಲವರು ಸ್ಥಾನವನ್ನು ಕೂಡ ಪಡೆದುಕೊಂಡಿದ್ದಾರೆ ಐಸಿಸಿ ರಾಂಕಿಂಗ್ ಪಟ್ಟಿ ಬಿಡುಗಡೆಯಾಗಿರೋದು ಇಂಗ್ಲೆಂಡ್ ತಂಡದ ಯುವದಾಂಡಿಗ ಹ್ಯಾರಿ ಬ್ರುಕ್ ಐಸಿಸಿ ಟೆಸ್ಟ್ ಬ್ಯಾಟರ್ ಗಳ ನೂತನ ರಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನ ಅಲಂಕರಿಸಿದ್ದಾರೆ.
ಅದು ಕೂಡ ಕೇವಲ 27 ತಿಂಗಳ ಅವಧಿಯಲ್ಲಿ ಅನ್ನೋದು ವಿಶೇಷ ಅಂದ್ರೆ 2022 ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದಂತಹ ಹ್ಯಾರಿ ಬ್ರುಕ್ ಕೇವಲ 23 ಪಂದ್ಯಗಳ ಮೂಲಕವೇ 2,208 ರನ್ಗಳನ್ನ ಗಳಿಸಿದ್ದಾರೆ. ಈ ವೇಳೆ ಎಂಟು ಶತಕ ಹಾಗೆಯೇ 10 ಅರ್ಧ ಶತಕಗಳನ್ನು ಕೂಡ ಬಾರಿಸಿದ್ದಾರೆ.
ಈ ಮೂಲಕ ಭರ್ಜರಿ ಪ್ರದರ್ಶನದೊಂದಿಗೆ 898 ಅಂಕಗಳನ್ನ ಕಲೆಹಾಕಿರುವ ಬ್ರುಕ್ ಟೆಸ್ಟ್ ಕ್ರಿಕೆಟ್ ನ ನಂಬರ್ ಒನ್ ಬ್ಯಾಟರ್ ಅಂತ ಕರೆಸಿಕೊಂಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಇಂಗ್ಲೆಂಡ್ ನ ಜೋ ರೂಟ್ ದ್ವಿತೀಯ ಸ್ಥಾನದಲ್ಲಿದ್ದು ಒಟ್ಟು 897 ಅಂಕಗಳನ್ನ ಪಡೆದುಕೊಂಡಿದ್ದಾರೆ. ಹಾಗೆ 812 ಅಂಕಗಳನ್ನ ಹೊಂದಿರುವ ನ್ಯೂಜಿಲ್ಯಾಂಡ್ ತಂಡದ ಕೇನ್ ವಿಲಿಯಂಸನ್ ಮೂರನೇ ಸ್ಥಾನ ಅಲಂಕರಿಸಿದ್ದಾರೆ.
ನಾಲ್ಕನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ಇದ್ದಾರೆ. ಒಟ್ಟು 811 ಅಂಕಗಳನ್ನ ಹೊಂದಿರುವ ಯಶಸ್ವಿ ಜೈಸ್ವಾಲ್ ಟಾಪ್ ಫೈವ್ ನಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಬ್ಯಾಟ್ಸ್ಮನ್ ಅನ್ನೋದು ವಿಶೇಷ. ಇನ್ನು ಅಡಿಲೇಟ್ ಟೆಸ್ಟ್ ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್ ಈ ಬಾರಿ ಆರನೇ ಸ್ಥಾನಕ್ಕೆ ಮೇಲೇರಿದ್ದಾರೆ ಅದರಂತೆ ನೂತನ ಟೆಸ್ಟ್ ರಾಂಕಿಂಗ್ ಪಟ್ಟಿಯಲ್ಲಿ 781 ಅಂಕಗಳೊಂದಿಗೆ ಅವರು ಐದನೇ ಸ್ಥಾನವನ್ನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: The Railways (AMENDMENT) Bill, 2024 ಬದಲಾವಣೆ





