ಪೂಜೆಗೆ ಮಾತ್ರವಲ್ಲ, ಗರಿಕೆ ಹುಲ್ಲು ಹಲವು ರೋಗಗಳಿಗೆ ದಿವ್ಯೌಷಧ!
By Pavan Cs | 29-04-2026
ದೂರ್ವಾ (ಗರಿಕೆ ಹುಲ್ಲು): ಆಯುರ್ವೇದದಲ್ಲಿ ಗರಿಕೆ ಹುಲ್ಲನ್ನು 'ದೂರ್ವಾ' ಎಂದು ಕರೆಯಲಾಗುತ್ತದೆ. ಇದು ರಕ್ತಪಿತ್ತ, ಅತಿಸಾರ ಮತ್ತು ಕಫ-ವಾತ ಜ್ವರಗಳನ್ನು ಶಮನ ಮಾಡುವ ಶಕ್ತಿ ಹೊಂದಿದೆ.
2
ಮೂಗಿನಲ್ಲಿ ರಕ್ತ ಸೋರುವಿಕೆ: ಮೂಗಿನಿಂದ ರಕ್ತ ಬರುತ್ತಿದ್ದರೆ (Epistaxis), ಗರಿಕೆ ಹುಲ್ಲಿನ ರಸದ ಎರಡೆರಡು ಹನಿಗಳನ್ನು ಮೂಗಿಗೆ ಹಾಕುವುದರಿಂದ ರಕ್ತ ಸ್ರಾವ ತಕ್ಷಣ ನಿಲ್ಲುತ್ತದೆ.
2
ರಕ್ತಸ್ರಾವದ ಸಮಸ್ಯೆ: ಮಲವಿಸರ್ಜನೆಯಲ್ಲಿ ರಕ್ತ ಬೀಳುತ್ತಿದ್ದರೆ ಅಥವಾ ಮೂಲವ್ಯಾಧಿ (Piles) ಸಮಸ್ಯೆ ಇದ್ದರೆ, ಗರಿಕೆ ಕಷಾಯವನ್ನು ದಿನಕ್ಕೆ ಎರಡು ಬಾರಿ 50 ml ಸೇವಿಸುವುದು ಉತ್ತಮ.
2
ಉರಿ ಮೂತ್ರಕ್ಕೆ ಪರಿಹಾರ: ಮೂತ್ರ ವಿಸರ್ಜನೆ ಸಮಯದಲ್ಲಿ ಉರಿ ಅಥವಾ ಪಾದದ ಉರಿ ಕಾಣಿಸಿಕೊಳ್ಳುತ್ತಿದ್ದರೆ, ಗರಿಕೆ ಕಷಾಯವು ಅತ್ಯುತ್ತಮ ಮದ್ದಾಗಿ ಕೆಲಸ ಮಾಡುತ್ತದೆ.
2
ಪಾದದ ಉರಿ ನಿವಾರಣೆ: ಅತಿಯಾದ ದೇಹದ ಉಷ್ಣತೆಯಿಂದ ಪಾದದ ಉರಿ ಉಂಟಾಗುತ್ತಿದ್ದರೆ, ಬೆಳಿಗ್ಗೆ ಮತ್ತು ಸಂಜೆ ಈ ಕಷಾಯ ಸೇವನೆಯಿಂದ ಆರಾಮ ಸಿಗುತ್ತದೆ.
2
ಕಿಡ್ನಿ ಮತ್ತು ಲಿವರ್ ಆರೋಗ್ಯ: ಗರಿಕೆ ಹುಲ್ಲಿನ ನಿಯಮಿತ ಸೇವನೆಯು ಲಿವರ್ (Liver) ಮತ್ತು ಕಿಡ್ನಿ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸಲು ಬಹಳ ಪ್ರಯೋಜನಕಾರಿ.
2
ಬ್ಲೀಡಿಂಗ್ ಡಿಸಾರ್ಡರ್ಸ್: ದೇಹದ ಯಾವುದೇ ಭಾಗದಿಂದ ಅತಿಯಾದ ರಕ್ತಸ್ರಾವವಾಗುವ ಸಮಸ್ಯೆ ಇದ್ದರೆ ವೈದ್ಯರ ಸಲಹೆಯ ಮೇರೆಗೆ ಗರಿಕೆ ಹುಲ್ಲನ್ನು ಬಳಸಬಹುದು.