ಕಫಕ್ಕೆ ಲೋಮಫಲ ಗಿಡದ ಕಷಾಯವೇ ರಾಮಬಾಣ!

By Pavan Cs | 29-04-2026

ಲೋಮಫಲ ಗಿಡ: ಈ ಗಿಡದ ಹಣ್ಣಿನ ಮೇಲೆ ಕೂದಲಿನಂತಹ ರಚನೆ ಇರುವುದರಿಂದ ಇದನ್ನು ಲೋಮಫಲ ಎಂದು ಕರೆಯುತ್ತಾರೆ; ಇದರ ವೈಜ್ಞಾನಿಕ ಹೆಸರು 'ಪ್ಯಾಸಿಫ್ಲೋರಾ ಫಯೋಟಿಡ'.

2

ನಿದ್ರಾಹೀನತೆ ಮತ್ತು ಒತ್ತಡ: ನಿಮಗೆ ಅತಿಯಾದ ಸ್ಟ್ರೆಸ್, ಆತಂಕ (Anxiety) ಅಥವಾ ನಿದ್ರೆ ಬರದೇ ಇದ್ದರೆ ಲೋಮಫಲದ 2-3 ಎಲೆಗಳು ಮತ್ತು ಬ್ರಾಹ್ಮಿ ಎಲೆಗಳ ಕಷಾಯ ಸೇವಿಸುವುದು ಉತ್ತಮ.

2

ತಯಾರಿಸುವ ವಿಧಾನ: 200 ml ನೀರಿಗೆ ಈ ಎಲೆಗಳನ್ನು ಹಾಕಿ 100 ml ಆಗುವವರೆಗೆ ಕುದಿಸಿ; ಈ ಕಷಾಯವನ್ನು ರಾತ್ರಿ ಸೇವಿಸುವುದರಿಂದ ಆರಾಮವಾಗಿ ನಿದ್ರೆ ಬರುತ್ತದೆ.

2

ಕಫ ನಿವಾರಣೆ: ಎದೆಯಲ್ಲಿ ಕಫ ತುಂಬಿಕೊಂಡಿದ್ದರೆ ಲೋಮಫಲದ ಎಲೆಗಳು, ತುಳಸಿ ಮತ್ತು ಶುಂಠಿಯನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ದಿನಕ್ಕೆ 2-3 ಬಾರಿ ಕುಡಿಯಿರಿ.

2

ತಲೆನೋವು ಮತ್ತು ಕೀಲು ನೋವು: ತಲೆನೋವು ಅಥವಾ ಜಾಯಿಂಟ್ ಪೇನ್ ಇದ್ದರೆ ಈ ಗಿಡದ ಎಲೆಗಳ ಪೇಸ್ಟ್ ಅನ್ನು ಬಾಧಿತ ಜಾಗಕ್ಕೆ ನೇರವಾಗಿ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ.

2

ಗಾಯ ವಾಸಿ ಮಾಡಲು: ಈ ಎಲೆಗಳಲ್ಲಿ ಆಂಟಿ-ಬ್ಯಾಕ್ಟೀರಿಯಲ್ ಗುಣಗಳಿದ್ದು, ಗಾಯಗಳಿಗೆ ಹಚ್ಚುವುದರಿಂದ ಗಾಯಗಳು ಬೇಗನೆ ಒಣಗುತ್ತವೆ.

2

ಬಹುಪಯೋಗಿ ಗಿಡ: ಸುಂದರವಾದ ಹೂವುಗಳನ್ನು ಬಿಡುವ ಈ ಗಿಡವು ಕೇವಲ ಅಲಂಕಾರಿಕವಲ್ಲದೆ, ಹಲವಾರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಉತ್ತಮ ಔಷಧಿಯಾಗಿದೆ.

2