ನಿಮ್ಮ ಮಕ್ಕಳ ಆರೋಗ್ಯ ಮತ್ತು ನೆಮ್ಮದಿಗೆ 5 ದಿನಗಳ ವಿಶೇಷ ಯೋಗ ಶಿಬಿರ!

By Pavan Cs | 05-05-2026

ಯೋಗ ಶಿಬಿರದ ವಿವರ: ಇದೇ ಮೇ 11 ರಿಂದ 15 ರವರೆಗೆ ಐದು ದಿನಗಳ ಕಾಲ ಮಕ್ಕಳಿಗೆ ವಿಶೇಷ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರವನ್ನು ಆಯೋಜಿಸಲಾಗಿದೆ.

2

ಶಕ್ತಿ ವೃದ್ಧಿ: ಈ ಶಿಬಿರದಲ್ಲಿ ಮಕ್ಕಳಿಗೆ ಜ್ಞಾಪಕ ಶಕ್ತಿ, ಏಕಾಗ್ರತೆ ಮತ್ತು ಓದಿನಲ್ಲಿ ಮುಂದುವರಿಯಲು ಬೇಕಾದ ವೈಜ್ಞಾನಿಕ ಸೂತ್ರಗಳನ್ನು ಮಕ್ಕಳ ಭಾಷೆಯಲ್ಲೇ ಮನವರಿಕೆ ಮಾಡಿಕೊಡಲಾಗುತ್ತದೆ.

2

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲೇ ಶುಗರ್, ಕ್ಯಾನ್ಸರ್ ಮತ್ತು ಕಿಡ್ನಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಇವುಗಳನ್ನು ತಡೆಗಟ್ಟಲು ಯೋಗದ ಮೊರೆ ಹೋಗುವುದು ಅನಿವಾರ್ಯವಾಗಿದೆ.

2

ಜಂಕ್ ಫುಡ್‌ನಿಂದ ದೂರ: ಬ್ರೆಡ್, ಬಿಸ್ಕೆಟ್, ಚಾಕಲೇಟ್‌ನಂತಹ ಜಂಕ್ ಫುಡ್‌ಗಳಿಂದ ಮಕ್ಕಳನ್ನು ದೂರವಿಟ್ಟು, ಉತ್ತಮ ಆಹಾರ ಪದ್ಧತಿಯನ್ನು ಬೆಳೆಸುವುದು ಈ ಶಿಬಿರದ ಮುಖ್ಯ ಉದ್ದೇಶ.

2

ಸಂಸ್ಕೃತಿ ಮತ್ತು ಸಂಸ್ಕಾರ: ಮಕ್ಕಳಲ್ಲಿ ಬಾಲ್ಯದಲ್ಲೇ ಒಳ್ಳೆಯ ಸಂಸ್ಕಾರ ಮತ್ತು ಆರೋಗ್ಯದ ಅರಿವು ಮೂಡಿಸಿದರೆ ಮಾತ್ರ ಭವ್ಯ ಭಾರತವನ್ನು ಕಟ್ಟಲು ಸಾಧ್ಯ ಎಂಬುದು ಆಯೋಜಕರ ಆಶಯವಾಗಿದೆ.

2

ವಂಶವಾಹಿ ಸಮಸ್ಯೆಗಳ ತಡೆ: ಹೆರಿಡಿಟಿ (Heredity) ಮೂಲಕ ಬರುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಯೋಗ ಮತ್ತು ಸರಿಯಾದ ಆಹಾರ ಪದ್ಧತಿ ಬಹಳ ಮುಖ್ಯ ಎಂದು ಇಲ್ಲಿ ತಿಳಿಸಿಕೊಡಲಾಗುತ್ತದೆ.

2

ಹೆಸರು ನೋಂದಾಯಿಸಿ: ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವ ಸಾಧ್ಯತೆ ಇರುವುದರಿಂದ, ಆಸಕ್ತ ಪೋಷಕರು ಮೊದಲೇ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

2