ಅಬ್ಬಾ! ಕನ್ನಡ ಎಕ್ಸಾಮ್ ಮುಗೀತು ಅಂತ ರಿಲ್ಯಾಕ್ಸ್ ಆಗಿದ್ದೀರಾ? ಒಳ್ಳೇದೇ, ಎಕ್ಸಾಮ್ ಚೆನ್ನಾಗಿ ಆಯ್ತು ಅಂದ್ರೆ ಖುಷಿನೇ. ಆದ್ರೆ ಒಂದ್ಸಲ ಯೋಚನೆ ಮಾಡಿ, ಇನ್ನು 6 ಎಕ್ಸಾಮ್ಸ್ ಬಾಕಿ ಇದಾವೆ ಕಣ್ರೀ (including ನಮ್ಮ Hindi ಸಬ್ಜೆಕ್ಟ್ ಚೂಸ್ ಮಾಡಿರುವ ವಿದ್ಯಾರ್ಥಿಗಳು).
ಈಗಾಗಲೇ ನಮ್ಮ ವೆಬ್ಸೈಟ್ ಮೂಲಕ ಕನ್ನಡ ಎಕ್ಸಾಮ್ Question ಪೇಪರ್ ಹಾಗೂ ಅದರ ಕೀ ಉತ್ತರಗಳ ಎಲ್ಲ ಮಾಹಿತಿಯನ್ನು ನಾವು ಈಗಾಗಲೇ ಬಿಡುಗಡೆ ಮಾಡಿದ್ದೇವೆ
ಒಂದು ಎಕ್ಸಾಮ್ ಚೆನ್ನಾಗಿ ಆಯ್ತು ಅಂತ ಈಗಲೇ ಓದೋದು ಬಿಟ್ಟು ಆರಾಮಾಗಿ ಕೂತ್ರೆ ಕಷ್ಟ.
ಈ ಟೈಮ್ ಅನ್ನೋದು ಅಷ್ಟು ಇಂಪಾರ್ಟೆಂಟ್. ಅದಕ್ಕೆ ಮುಂದಿನ ಎಕ್ಸಾಮ್ಗಳಿಗೂ ಅದೇ ರೀತಿ ಓದಿ, ಒಳ್ಳೆ ಮಾರ್ಕ್ಸ್ ತೆಗಿಬೇಕು ಅಂದ್ರೆ ಈ ಪ್ಲಾನ್ ಫಾಲೋ ಮಾಡ್ಬೇಕಾಗುತ್ತೆ.
ಪ್ರತಿನಿತ್ಯ ಪ್ರತಿಗಳಿಗೆ ಕರ್ನಾಟಕ 2nd PUC Exams 2026 (Live Updates),ಈ ಲೇಖನದ ಮೂಲಕ Miss ಮಾಡದೆ ತಿಳಿದುಕೊಳ್ಳಿ.
2nd PUC Exam Karnataka 2026! ಇನ್ನು 6 ಎಕ್ಸಾಮ್ಸ್ ಬಾಕಿ ಇವೆ!
ಎಕ್ಸಾಮ್ ಮುಗಿದ ತಕ್ಷಣ ಸ್ವಲ್ಪ ರಿಲ್ಯಾಕ್ಸ್ ಆಗೋದು ಸಹಜ. ಮೈಂಡ್ ರಿಫ್ರೆಶ್ ಆದ್ರೆ ನೆಕ್ಸ್ಟ್ ಓದೋಕೆ ಫ್ರೆಶ್ ಆಗಿರ್ತೀವಿ. ಆದ್ರೆ ಈ ರಿಲ್ಯಾಕ್ಸ್ ಅನ್ನೋದು ಜಾಸ್ತಿ ಆಗ್ಬಿಟ್ರೆ ಅಷ್ಟೇ.
ಫಸ್ಟ್ ಎಕ್ಸಾಮ್ ಚೆನ್ನಾಗಿ ಆಯ್ತು ಅಂತ ತುಂಬಾ ಖುಷಿಯಲ್ಲಿ ಟೈಮ್ ವೇಸ್ಟ್ ಮಾಡೋಕೆ ಹೋಗ್ಬೇಡಿ.
6 ಎಕ್ಸಾಮ್ಸ್ ಬಾಕಿ ಇರೋದ್ರಿಂದ, ಈಗಲೇ ರಿಲ್ಯಾಕ್ಸ್ ಮೂಡ್ಗೆ ಹೋದ್ರೆ, ಮತ್ತೆ ಸ್ಟಡಿ ಮೂಡ್ಗೆ ಬರೋದು ಕಷ್ಟ ಆಗುತ್ತೆ. ಬ್ರೇಕ್ ತಗೋಳಿ, ಆದ್ರೆ ಶಾರ್ಟ್ ಆಗಿ ಇರ್ಲಿ.
ಸಮಯ ಅನ್ನೋದು ತುಂಬಾ ಇಂಪಾರ್ಟೆಂಟ್ ಕಣ್ರೀ!
ಈಗಿರೋ ಟೈಮ್ ಗೋಲ್ಡನ್ ಪಿರಿಯಡ್ ಇದ್ದ ಹಾಗೆ. ಪ್ರತಿ ಸೆಕೆಂಡ್, ಪ್ರತಿ ನಿಮಿಷ ಕೂಡ ನಿಮ್ಮ ಎಕ್ಸಾಮ್ ಪ್ರಿಪರೇಷನ್ಗೆ ಉಪಯೋಗ ಆಗ್ಬೇಕು. ಯಾಕಂದ್ರೆ ಈ ಟೈಮ್ ಮತ್ತೆ ಸಿಗಲ್ಲ.
ಓದಿರೋ ವಿಷಯಗಳನ್ನ ಸರಿಯಾಗಿ ರಿವಿಷನ್ ಮಾಡ್ಲಿಲ್ಲ ಅಂದ್ರೆ, ಎಕ್ಸಾಮ್ನಲ್ಲಿ ನೆನಪಿಗೆ ಬರೋದು ಕಷ್ಟ ಆಗಬಹುದು. ಹಾಗಾಗಿ, ಒಂದು ಕ್ಷಣವನ್ನೂ ವೇಸ್ಟ್ ಮಾಡದೆ, ಓದಿರೋದನ್ನ ಗಟ್ಟಿಗೊಳಿಸೋಕೆ ಈ ಸಮಯನ ಯೂಸ್ ಮಾಡ್ಕೋಳ್ಳಿ.
ರಿವಿಷನ್ ಯಾಕೆ ಮುಖ್ಯ? ಮರೆಯದೆ ಫೋಕಸ್ ಮಾಡಿ!
ಕೆಲವರು ಓದಿರೋದೆಲ್ಲ ನೆನಪಲ್ಲಿ ಇರುತ್ತೆ ಅಂದುಕೊಳ್ಳುತ್ತಾರೆ, ಆದ್ರೆ ಹಾಗಲ್ಲ. ಓದಿದ್ದು ಮರೆತುಹೋಗೋ ಚಾನ್ಸಸ್ ಜಾಸ್ತಿ. ಹಾಗಾಗಿ, ರಿವಿಷನ್ ತುಂಬಾನೇ ಮುಖ್ಯ.
ನೀವು ದಿನಾ ಓದಿದ್ರೂ, ರಿವಿಷನ್ ಮಾಡದೆ ಹೋದ್ರೆ ಎಕ್ಸಾಮ್ ಹಾಲ್ನಲ್ಲಿ ಕನ್ಫ್ಯೂಸ್ ಆಗ್ಬೋದು. ಸರಿಯಾಗಿ ರಿವೈಸ್ ಮಾಡಿದ್ರೆ ವಿಷಯಗಳು ತಲೆಯಲ್ಲಿ ಗಟ್ಟಿಯಾಗಿ ಕೂರುತ್ತೆ.
ಇದು ನಿಮಗೆ ಆತ್ಮವಿಶ್ವಾಸ ಹೆಚ್ಚಿಸುತ್ತೆ ಮತ್ತು ಉತ್ತಮ ಮಾರ್ಕ್ಸ್ ತಗೋಳೋಕೆ ಹೆಲ್ಪ್ ಮಾಡುತ್ತೆ.
ಪ್ರತಿ ನಿಮಿಷನೂ ಯುಟಿಲೈಸ್ ಮಾಡ್ಕೊಳ್ಳಿ!
ನಿಮ್ಮ ಎಕ್ಸಾಮ್ ಪ್ರಿಪರೇಷನ್ಗೆ ಪ್ರತಿ ನಿಮಿಷವನ್ನೂ ಸರಿಯಾಗಿ ಯುಟಿಲೈಸ್ ಮಾಡ್ಬೇಕು. ಒಂದು ಟೈಮ್ ಟೇಬಲ್ ಮಾಡ್ಕೊಂಡು, ಯಾವ ಸಬ್ಜೆಕ್ಟ್ಗೆ ಎಷ್ಟು ಟೈಮ್ ಕೊಡಬೇಕು ಅಂತ ಪ್ಲಾನ್ ಮಾಡ್ಕೊಳ್ಳಿ.
ಕಷ್ಟ ಅನ್ಸೋ ಸಬ್ಜೆಕ್ಟ್ಸ್ಗೆ ಜಾಸ್ತಿ ಟೈಮ್ ಕೊಡಿ.
ಹಾಗೆ, ಸುಲಭ ಅನ್ನೋ ವಿಷಯಗಳನ್ನೂ ಒಮ್ಮೆ ರಿವೈಸ್ ಮಾಡಿ.
ಪ್ರತಿದಿನ ಚಿಕ್ಕ ಪುಟ್ಟ ಗೋಲ್ಸ್ ಸೆಟ್ ಮಾಡ್ಕೊಂಡು ಓದಿದ್ರೆ, ಟೈಮ್ ಸರಿಯಾಗಿ ಯುಟಿಲೈಸ್ ಆಗುತ್ತೆ.
ಮೈಂಡ್ ರಿಫ್ರೆಶ್ಮೆಂಟ್ ಅಂದ್ರೆ ಇದಲ್ಲ!
ಖಂಡಿತವಾಗಿಯೂ ನಿದ್ದೆ ಮಾಡೋದು, ಸ್ವಲ್ಪ ಬ್ರೇಕ್ ತಗೋಳೋದು ಮೈಂಡ್ ರಿಫ್ರೆಶ್ಮೆಂಟ್ಗೆ ತುಂಬಾ ಮುಖ್ಯ. ಆದ್ರೆ ರೀಲ್ಸ್ ನೋಡೋದು, ಗೇಮ್ಸ್ ಆಡೋದು ಇದರಿಂದ ನಿಮ್ಮ ಮೈಂಡ್ಗೆ ಖಂಡಿತ ರಿಫ್ರೆಶ್ಮೆಂಟ್ ಸಿಗಲ್ಲ, ಬದಲಿಗೆ ಇನ್ನಷ್ಟು ಸ್ಟ್ರೆಸ್ ಆಗಬಹುದು.
ನಿದ್ದೆ ಮಾಡಿ, ವಾಕಿಂಗ್ ಹೋಗಿ, ಫ್ರೆಶ್ ಏರ್ ತಗೊಳ್ಳಿ. ಇದರಿಂದ ಮೈಂಡ್ ಫ್ರೆಶ್ ಆಗಿ, ಮತ್ತೆ ಓದೋಕೆ ಉತ್ಸಾಹ ಬರುತ್ತೆ. ಅನಾವಶ್ಯಕ ಡಿಸ್ಟ್ರಾಕ್ಷನ್ಸ್ ಅವಾಯ್ಡ್ ಮಾಡಿ.
ಒಂದು ಎಕ್ಸಾಮ್ ಚೆನ್ನಾಗಿ ಆಯ್ತು ಅನ್ನೋ ಖುಷಿಯ ಜೊತೆ, ಮುಂದಿನ ಐದು ಎಕ್ಸಾಮ್ಸ್ ಬಗ್ಗೆನೂ ಯೋಚನೆ ಮಾಡಿ. ಈ ಟೈಮ್ನಲ್ಲಿ ಸ್ವಲ್ಪ ಡಿಸಿಪ್ಲಿನ್ ಮೇಂಟೇನ್ ಮಾಡಿದ್ರೆ, ಒಳ್ಳೆ ರಿಸಲ್ಟ್ ಗ್ಯಾರಂಟಿ.
ಹಾಗಾಗಿ, ಸಿಕ್ಕಿರೋ ಪ್ರತಿ ಕ್ಷಣವನ್ನೂ ಸದುಪಯೋಗ ಪಡಿಸಿಕೊಳ್ಳಿ. ಚೆನ್ನಾಗಿ ಓದಿ, ಎಲ್ಲ ಎಕ್ಸಾಮ್ಗಳಲ್ಲೂ ಒಳ್ಳೆ ಮಾರ್ಕ್ಸ್ ತಗೊಳ್ಳಿ. ಆಲ್ ದ ಬೆಸ್ಟ್! ಜೈ ಹಿಂದ್, ವಂದೇ ಮಾತರಂ!










