ಎಲ್ಲರಿಗೂ ನಮಸ್ಕಾರ, ವಾರದ ಮೊದಲ ದಿನವೇ ಭಾರತೀಯ ಶೇರ್ ಮಾರುಕಟ್ಟೆ ಮುಗ್ಗರಿಸಿ ಬಿದ್ದಿದೆ ಅಂತ ಹೇಳಬಹುದು ಪ್ರಮುಖ ಸೂಚಂಕಗಳಾದ ನಿಫ್ಟಿ ಮತ್ತೆ ಸೆನ್ಸೆಕ್ಸ್ ಎರಡು ಕೂಡ ಮಕಡೆ ಮಲ್ಕೊಂಡಿದ್ದಾವೆ 26,000 ದಾಟಿದಂತಹ ನಿಫ್ಟಿ ಈಗ ಮತ್ತೆ 25,900 ಕ್ಕಿಂತ ಕೆಳಗಡೆ ಇದ್ದಿದೆ ಅದರಲ್ಲೂ ಸೆನ್ಸೆಕ್ಸ್ ಒಂದೇ ದಿನ 1,200 ಪಾಯಿಂಟ್ಸ್ ಪತನ ಹೊಂದಿದೆ ಹಾಗಿದ್ರೆ ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಶೇರ್ ಮಾರುಕಟ್ಟೆ ಕುಸಿತಕ್ಕೆ ಏನು ಕಾರಣ ಸೋ ಈ ಕುರಿತು ಈ ಒಂದು ಲೇಖನದಲ್ಲಿ ಮಾಹಿತಿಯನ್ನ ತಿಳಿಯೋಣ.
ಶೇರುಪೇಟೆ ಕುಸಿತಕ್ಕೆ ಪ್ರಮುಖ ಕಾರಣಗಳು
ಭಾರತೀಯ ಶೇರ್ ಮಾರುಕಟ್ಟೆ ವಾರದ ಮೊದಲ ದಿನವೇ ಭಾರಿ ಕುಸಿತವನ್ನ ಕಂಡಿದೆ ಎಲ್ಲಾ ಕಡೆ Red ಮಾರ್ಕ್ ನಲ್ಲಿ ವಹಿವಾಟು ಕಂಡುಬಂದಿದೆ ಇವತ್ತು ಅದರಲ್ಲೂ ಸೆನ್ಸೆಕ್ಸ್ ಒಂದೇ ದಿನ 1,200 ಪಾಯಿಂಟ್ಸ್ ಅನ್ನ ಕಳೆದುಕೊಂಡು 84,370 ರಲ್ಲಿ ವಹಿವಾಟನ್ನ ಮುಗಿಸಿದೆ ಇನ್ನು 26,000 ದಾಟಿದಂತಹ ನಿಫ್ಟಿ ಕೂಡ ಒಂದೇ ದಿನ 350ಕ್ಕೂ ಹೆಚ್ಚು ಪಾಯಿಂಟ್ಸ್ ಅನ್ನ ಕಳೆದುಕೊಂಡಿದೆ ಹಾಗಿದ್ರೆ ಒಂದೇ ದಿನದಲ್ಲಿ ಇಷ್ಟು ಇಷ್ಟು ಪ್ರಮಾಣದಲ್ಲಿ ಮಾರುಕಟ್ಟೆ ಕುಸಿಯುವುದಕ್ಕೆ ಏನು ಕಾರಣ ಎಂಬುದಕ್ಕೆ ಮಾರುಕಟ್ಟೆ ತಜ್ಞರು ಕೆಲವು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದೆ.
ಆ ಪ್ರಮುಖ ಕಾರಣಗಳು ಹೀಗಿವೆ:
1. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಉದ್ವಿಜ್ಞತೆ
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವಂತಹ ಉದ್ವಿಜ್ಞತೆ ಕೂಡ ಶೇರ್ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ ಅಂತ ಹೇಳಬಹುದು ಏನಪ್ಪಾ ಅಂದ್ರೆ ನಿಮಗೆಲ್ಲ ಗೊತ್ತಿರುವ ಹಾಗೆ ಇರಾನ್ ಬೆಂಬಲಿತ ಪಡೆಗಳ ಮೇಲೆ ಇಸ್ರೇಲ್ ದಾಳಿಯನ್ನು ನಡೆಸಿದ ನಂತರ ಮಧ್ಯಪ್ರಾಚ ರಾಷ್ಟ್ರಗಳಲ್ಲಿ ಮತ್ತೆ ಉದ್ವಿಜ್ಞತೆ ಹೆಚ್ಚಾಗಿದೆ.
ಇದು ಏನಾಗಿದೆ ಹಿಜಬುಲ್ ಮತ್ತೆ ಹೌದಿ ಪಡೆಗಳ ನಡುವೆ ದಾಳಿ ಹೆಚ್ಚಾಗುವಂತಹ ಸಾಧ್ಯತೆ ಹೆಚ್ಚಿದೆ. ಇದು ಹೂಡಿಕೆದಾರರಿಗೆ ಆತಂಕವನ್ನು ಹೆಚ್ಚಿಸಿದೆ ಹೀಗಾಗಿ ಇದು ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ ಅಂತ ಹೇಳಬಹುದು.
2. ಚೀನಾ ಪ್ರಚೋದನೆ
ಚೀನಾ ಸರ್ಕಾರ ಇತ್ತೀಚಿಗೆ ಹಲವಾರು ವಿತ್ತೀಯ ನೀತಿಗಳಲ್ಲಿ ಸುಧಾರಣೆಗಳನ್ನು ತಂದಿದೆ. ಇದು ಅಲ್ಲಿನ ಶೇರ್ ಮಾರುಕಟ್ಟೆಯಲ್ಲಿ ಭಾರಿ ಏರಿಕೆಗೆ ಕಾರಣ ಆಗಿದೆ ಚೀನಾದ ಮಾರುಕಟ್ಟೆ ಸೂಚಂಕ ಕಳೆದ ಈ ಈ ತಿಂಗಳಲ್ಲಿ ಅಂದ್ರೆ October ತಿಂಗಳು ಒಂದೇ ತಿಂಗಳಲ್ಲಿ ಶೇಕಡಾ 18 ರಷ್ಟು ಹೆಚ್ಚಾಗಿದೆ ಇದೇನು ಮಾಡುತ್ತಪ್ಪ ಅಂದ್ರೆ ಈ ಫಾರಿನ್ ಇನ್ವೆಸ್ಟರ್ಸ್ ಗಳ ಮೇಲೆ ಎಫ್ ಐ ಅದರಲ್ಲೂ ಪ್ರಮುಖವಾಗಿ ಎಫ್ ಐ ಏನಂತ ಹೇಳ್ತಿವಿ ವಿದೇಶಿ ಸಾಂಸ್ತಿಕ ಹೂಡಿಕೆದಾರರ ಮೇಲೆ ಹೆಚ್ಚಾಗಿ ಪ್ರಭಾವವನ್ನ ಬೀರುತ್ತೆ.
ಯಾಕಪ್ಪಾ ಅಂದ್ರೆ ಈ ವಿದೇಶಿ ಸಾಂಸ್ತಿಕ ಹೂಡಿಕೆದಾರರು ಕುಸಿತ ಇರುವಂತಹ ಮಾರುಕಟ್ಟೆಗಳಿಂದ ತಮ್ಮ ಹೂಡಿಕೆಯನ್ನ ಹಿಂಪಡೆದು ಯಾವ ಮಾರುಕಟ್ಟೆ ಹೇರಿಕೆ ಆಗ್ತಾ ಇದೆ ಆ ಒಂದು ಮಾರುಕಟ್ಟೆ ಮೇಲೆ ಹೂಡಿಕೆಯನ್ನ ತೊಡಗಿಸುತ್ತಾರೆ ಅಂದ್ರೆ ಭಾರತದ ಮಾರುಕಟ್ಟೆ ಈಗ ಕುಸಿತ ಇದೆ ಚೀನಾ ಮಾರುಕಟ್ಟೆ ಇವಾಗ ಹೆಚ್ಚಾಗ್ತಾ ಇದೆ ಭಾರತದಿಂದ ತಮ್ಮ ಹೂಡಿಕೆಯನ್ನು ಹಿಂಪಡೆದು ಚೀನಾ ಮೇಲೆ ಹೂಡಿಕೆಯನ್ನ ಮಾಡುವಂತಹ ಸಾಧ್ಯತೆ ಹೆಚ್ಚಿದೆ ಇದು ಕೂಡ ಭಾರತದ ನಮ್ಮ ದೇಶೀಯ ಮಾರುಕಟ್ಟೆ ಮೇಲೆ ಪ್ರಭಾವವನ್ನ ಬೀರುತ್ತಾ.
3. Profit ಬುಕಿಂಗ್
ಪ್ರಾಫಿಟ್ ಬುಕಿಂಗ್ ಅಂತ ಹೇಳಬಹುದು ಮೊದಲೇ ಹೇಳಿದ ಹಾಗೆ ಕಳೆದ ವಾರದಲ್ಲಿ ನಮ್ಮ ದೇಶೀಯ ಮಾರುಕಟ್ಟೆ ಸಿಕ್ಕಾಪಟ್ಟೆ ಏರಿಕೆಯಾಗಿತ್ತು ಅಂದ್ರೆ ಸತತವಾಗಿ 5 ದಿನ ಕಂಟಿನ್ಯೂಸ್ ಆಗಿ ಏರಿಕೆ ಆಗ್ತಾನೆ ಬಂತು ಸೋ ಇಂತಹ ಒಂದು ಸಂದರ್ಭದಲ್ಲಿ ಹೂಡಿಕೆದಾರರು ಏನು ಮಾಡ್ತಾರೆ ಪ್ರಾಫಿಟ್ ಬುಕಿಂಗ್ ಗೆ ಮುಂದಾಗ್ತಾರೆ ಈ ಒಂದು ಕಾರಣದಿಂದಲೇ ಕಳೆದ ಶುಕ್ರವಾರ ಕೂಡ ಸ್ವಲ್ಪ ಮಟ್ಟಿಗೆ ಕುಸಿತದೊಂದಿಗೆ ಮುಚ್ಚಿದಂತಹ ಶೇರ್ ಮಾರುಕಟ್ಟೆ ಇವತ್ತು Saturday ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ ಅಂತ ಹೇಳಬಹುದು.
4. ಜಾಗತಿಕ ಮಾರುಕಟ್ಟೆಗಳಿಂದ ಮಿಶ್ರ ಸೂಚನೆಗಳು
ಜಾಗತಿಕ ಮಾರುಕಟ್ಟೆಗಳಿಂದ ಮಿಶ್ರ ಸೂಚನೆಗಳಿವೆ ಹೇಗೆ ನಮ್ಮ ದೇಶೀಯ ಮಾರುಕಟ್ಟೆ ಜಾಗತಿಕ ಮಾರುಕಟ್ಟೆಗಳನ್ನ ಅನುಸರಿಸುತ್ತಾ ಇರುತ್ತೆ ಹೇಗಪ್ಪಾ ಅಂದ್ರೆ ಇದಕ್ಕೂ ಮುನ್ನ Japan ನ ಮಾರುಕಟ್ಟೆ ತೀವ್ರವಾಗಿ ಕುಸಿತ ಕಂಡಿದೆ ಯಾಕೆ ಅಂದ್ರೆ ಜಪಾನ್ ನಲ್ಲಿ ಹಲವು ರಾಜಕೀಯ ಬೆಳವಣಿಗೆಗಳು ಆಗ್ತಾ ಇದೆ. ಅಲ್ಲಿ ಹೊಸ ಪ್ರಧಾನಿ ಬರ್ತಾ ಇದ್ದಾರೆ.
ಈ ಒಂದು ಹಿನ್ನೆಲೆಯಲ್ಲಿ ಅಲ್ಲಿನ ಶೇರ್ ಮಾರುಕಟ್ಟೆ ಒಂದೇ ದಿನದಲ್ಲಿ ಶೇಕಡಾ ಐದರಷ್ಟು ಕುಸಿತ ಕಂಡಿದೆ ಇದಕ್ಕೆ ವಿರುದ್ಧವಾಗಿ ಚೀನಾ ಮಾರುಕಟ್ಟೆ ಏನಾಗಿದೆ ಒಂದೇ ದಿನದಲ್ಲಿ ಶೇಕಡಾ ನಾಲ್ಕರಷ್ಟು ಏರಿಕೆ ಕಂಡಿದೆ ಹೀಗೆ ಜಾಗತಿಕ ಮಾರುಕಟ್ಟೆಗಳಿಂದ ಮಿಶ್ರ ಸೂಚನೆಗಳು ಬಂದಿರೋದ್ರಿಂದ ಭಾರತೀಯ ಮಾರುಕಟ್ಟೆ ಏನಾಗಿದೆ ಕುಸಿತಕ್ಕೆ ಒಳಗಾಗಿದೆ ಅಂತಾನೂ ಹೇಳಬಹುದು.
5. ಫೆಡರಲ್ ರಿಸರ್ವ್ ಮತ್ತೆ ಬಡ್ಡಿ ದರ ಇಳಿಕೆಯ ಸೂಚನೆ
ಪ್ರಮುಖವಾಗಿ ಅಮೆರಿಕದ ಫೆಡ್ ರಿಸರ್ವ್ ಮತ್ತೊಮ್ಮೆ ಬಡ್ಡಿ ಕಡಿತ ಮಾಡಬಹುದು ಎಂಬಂತಹ ಸೂಚನೆಗಳಿವೆ ಈಗಾಗಲೇ ಇತ್ತೀಚೆಗಷ್ಟೇ ಅಮೆರಿಕದ ಫೆಡ್ ರಿಸರ್ವ್ ಶೇಕಡಾ ಅರ್ಧ ಪರ್ಸೆಂಟ್ ಬಡ್ಡಿಯನ್ನ ಕಡಿತ ಮಾಡಿತ್ತು ಈಗ ಮತ್ತೊಮ್ಮೆ ಡಿಸೆಂಬರ್ ಅಲ್ಲಿ ಮತ್ತೆ ಬಡ್ಡಿ ಕಡಿತವನ್ನ ಮಾಡಬಹುದು ಅಂತ ಸೂಚನೆಗಳಿವೆ ಇದಲ್ಲದೆ ಅಮೆರಿಕದಲ್ಲಿ ನಿರುದ್ಯೋಗ ಮತ್ತೆ ಉದ್ಯೋಗಕ್ಕೆ ಸಂಬಂಧಪಟ್ಟಂತಹ ಆರ್ಥಿಕ ಅಂಕಿ ಅಂಶಗಳು ಹೊರಗೆ ಬರ್ತಾ ಇದೆ. ಈ ಅಂಕಿ ಅಂಶಗಳ ಮೇಲೆ ಹೂಡಿಕೆದಾರರು ಗಮನ ಇಟ್ಟಿದ್ದಾರೆ.
ಈ ಎಲ್ಲಾ ಅಂಶಗಳು ಸೇರಿ ಇವತ್ತಿನ ದೇಶೀಯ ಮಾರುಕಟ್ಟೆ ಕುಸಿಗಿತಕ್ಕೆ ಕಾರಣ ಅಂತ ಹೇಳಬಹುದು
ಇದನ್ನೂ ಓದಿ: Stock Analysis: ಈ ಕೆಲವು Stocks ಗಳು 43% ಏರಿಕೆ ಆಗುವ ಸಾಧ್ಯತೆಗಳಿದೆ





