ಎಲ್ಲರಿಗೂ ನಮಸ್ಕಾರ, ರೈತರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಗಳು ಬಂದಿವೆ ಹೌದು ಅವುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದಲ್ಲಿ ತಿಳಿದುಕೊಳ್ಳೋಣ. ಈ ವಾರದೊಳಗೆ ಈ ಪಟ್ಟಿಯಲ್ಲಿರುವ ರೈತರಿಗೆ ಬೆಳೆ ಪರಿಹಾರ ಜಮಾ ಆಗಲಿದೆ ಹೌದು ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡುವುದು ಹೇಗೆ ಎಲ್ಲವನ್ನು ಕೂಡ ಈ ಲೇಖನದಲ್ಲಿ ತಿಳಿಸಿಕೊಡ್ತಾ ಹೋಗ್ತೀವಿ.
ಈ ಪಟ್ಟಿಯಲ್ಲಿರುವ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಜಮಾ ಆಗಬಹುದು ಹೌದು ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡುವುದು ಹೇಗೆ ಇಲ್ಲಿ ತಿಳಿದುಕೊಳ್ಳಿ ಮಳೆಯ ಕಾರಣಕ್ಕೆ ರಾಜ್ಯಾದ್ಯಂತ 80,000 ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು ವಾರದೊಳಗೆ ಎಲ್ಲಾ ರೈತರಿಗೂ ಪರಿಹಾರ ನೀಡಲಾಗುವುದೆಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆಯನ್ನ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ರಾಜ್ಯಾದ್ಯಂತ ಕೃಷಿ ಬೆಳೆ 78,679 ಹೆಕ್ಟರ್ ಹಾನಿಯಾಗಿದ್ದರೆ ತೋಟಗಾರಿಕೆ ಬೆಳೆ 2,294 ಹೆಕ್ಟರ್ ಪ್ರದೇಶ ಹಾನಿಯಾಗಿದೆ.
ವಾರದೊಳಗೆ ಯಾವ ಯಾವ ಬೆಳೆಗಳು ಹಾನಿಯಾಗಿವೆ ಎಂಬ ಬಗ್ಗೆ ಖಚಿತ ಮಾಹಿತಿ ಸಿಗಲಿದೆ ತದನಂತರ ರೈತರಿಗೆ ಪರಿಹಾರ ನೀಡುವ ಕಾರ್ಯಕ್ಕೂ ಚಾಲನೆ ನೀಡಲಾಗುವುದು ಪ್ರಸ್ತುತ ರಾಜ್ಯ ಸರ್ಕಾರದ ಬೆಳೆ ಇರುವ ಸಂಪನ್ಮೂಲದಲ್ಲಿ ಪರಿಹಾರ ನೀಡಲಾಗುವುದು ಇನ್ನು ಒಂದೂವರೆ ತಿಂಗಳ ಮಳೆ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆ ಹಾನಿಯಾಗುವ ಸಾಧ್ಯತೆ ಇದೆ ಹೀಗಾಗಿ ಮುಂಗಾರಿನ ಸಂಪೂರ್ಣ ಅವಧಿ ಮುಗಿಯುವವರೆಗೂ ಕಾದು ತದನಂತರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳುವುದು ಹೇಗೆ
fruitspmk.karnataka.gov.in/MISReport/CheckStatus.aspx – ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಆಗ ಪೇಜ್ ಓಪನ್ ಆಗುತ್ತದೆ ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು ನಂತರ ಪೇಮೆಂಟ್ ಸಕ್ಸಸ್ ಕೇಸ್ ಮೇಲೆ ಸೆಲೆಕ್ಟ್ ಮಾಡಿ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ನಂತರ ನಿಮಗೆ ಈ ಕೆಳಗಿನಂತೆ ಪರಿಹಾರ ಯಶಸ್ಸಿನ ಪ್ರಕರಣಗಳ ಪಟ್ಟಿ ದೊರೆಯಲಿದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಬೆಳೆ ಹಾನಿ ಪರಿಹಾರ ಜಮಾ ಆಗಲಿದೆ. ರೈತರಿಗೆ ಬಂಪರ್ ಗುಡ್ ನ್ಯೂಸ್ ಅಂತಾನೆ ಹೇಳಬಹುದು.
ರೈತರಿಗೆ ಹೆಚ್ಚುವರಿ ಗೋಮಾಳ ಭೂಮಿ
ಹೆಚ್ಚುವರಿ ಗೋಮಾಳ ಭೂಮಿಯನ್ನ ರೈತರಿಗೆ ಮುಂಜೂರು ಮಾಡಲಾಗುತ್ತಿದೆ ಹೌದು ಕರ್ನಾಟಕದ ರೈತರಿಗೆ ಸರ್ಕಾರದ ಹೊಸ ತೀರ್ಮಾನವು ಮಹತ್ವದ ಸುದ್ದಿ ಎಂದೇ ಹೇಳಬಹುದು. ಪಶುಪಾಲನ ಅಗತ್ಯವಾದ ಭೂಮಿಯ ಮೇಲೆ ಯಾವುದೇ ಹೆಚ್ಚುವರಿ ಗೋಮಾಳ ಭೂಮಿ ಇದ್ದರೆ ಅದನ್ನ ರೈತ ಫಲಾನುಭಾವಿಗಳಿಗೆ ಮುಂಜೂರು ಮಾಡಲಾಗುವುದೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಘೋಷಣೆ ಮಾಡಿದ್ದಾರೆ.
ಈ ಮಹತ್ವದ ನಿರ್ಧಾರವು ಗೋಮಾಳ ಸಮಸ್ಯೆಯ ಬಗ್ಗೆ ರೈತ ಸಮುದಾಯವು ಎದುರಿಸುತ್ತಿದ್ದ ಸಮಸ್ಯೆಯನ್ನು ಪರಿಹರಿಸಲು ಕೈಗೊಳ್ಳುತ್ತಿದ್ದ ಪ್ರತಿ ರೈತನಿಗೆ ಅವರಿಗೆ ಬೇಕಾದಷ್ಟು ಗೋಮಾಳ ಭೂಮಿಯನ್ನ ಮಂಜೂರು ಮಾಡಲು ಕಂದಾಯ ಇಲಾಖೆ ಮುಂದಾಗಿದೆ ಹೌದು ಸ್ನೇಹಿತರೆ ಕಂದಾಯ ಸಚಿವರು ತಹಸೀಲ್ದಾರರು ಜಿಲ್ಲಾಧಿಕಾರಿಗಳು ಹಾಗೂ ಇತರ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಗ್ರಾಮಗಳಲ್ಲಿ ಇರುವ ಜಾನುವಾರುಗಳ ಸಂಖ್ಯೆ ಹಾಗೂ ಅವರಿಗೆ ಅಗತ್ಯವಿರುವ ಭೂಮಿಯ ಸಮೀಕ್ಷೆ ನಡೆಸಿ ಹೆಚ್ಚುವರಿ ಗೋಮಾಳ ಭೂಮಿಯನ್ನ ರೈತರಿಗೆ ನೀಡುವಂತೆ ಸೂಚನೆ ನೀಡಿದ್ದಾರೆ.
ಅವರ ಮಾತಿನ ಪ್ರಕಾರ ಸಮೀಕ್ಷೆಯಲ್ಲಿ ಎಷ್ಟು ಜಾನುವಾರುಗಳು ಎಷ್ಟು ಭೂಮಿಗೆ ಅವಲಂಬಿತವಾಗಿವೆ ಎಂಬುದು ನಿಖರ ಮಾಹಿತಿ ಪಡೆದು ಆ ಮಾಹಿತಿಯ ಆಧಾರದ ಮೇಲೆ ಹೆಚ್ಚಿನ ಗೋಮಾಳವನ್ನು ಹಂಚಿಕೆ ಮಾಡಬಹುದು ಈ ಮೂಲಕ ರೈತರಿಗೆ ಬೆಳೆ ಕಾಮಗಾರಿ ಹಾಗೂ ಪಶುಪಾಲನ ಹೆಚ್ಚಿನ ನೆರವು ಸಿಗಲಿದೆ ಅರ್ಜಿಗಳನ್ನ ತಿರಸ್ಕಾರ ಮಾಡಬಾರದು ಎಂದು ಹೇಳಲಾಗುತ್ತಿದೆ.
ಗೋಮಾಳೆ ಭೂಮಿಯ ಹಕ್ಕು ಕೇಳಿ ರೈತರು ಸಲ್ಲಿಸಿದ ಅರ್ಜಿಗಳನ್ನ ಯಾವ ಕಾರಣಕ್ಕೂ ತಿರಸ್ಕಾರ ಮಾಡಬಾರದು ಎಂದು ಸಚಿವರು ಕಾರವಾಗಿ ಸೂಚನೆ ನೀಡಿದ್ದು ಈ ರೀತಿ ಮಾಡಿದರೆ ನ್ಯಾಯಾಲಯಗಳಲ್ಲಿ ಕಾನೂನು ಸಂಬಂಧ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರೈತರ ಅರ್ಜಿಗಳನ್ನು ತುರ್ತು ಆದ್ಯತೆಯ ಆಧಾರದ ಮೇಲೆ ಪರಿಗಣಿಸಿ ತಹಸೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳು ಸಮರ್ಥ ನಿರ್ಧಾರ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ ಧನ್ಯವಾದಗಳು
ಇದನ್ನೂ ಓದಿ: ಬೆಳೆ ಹಾನಿ ಹಾಗೂ ಬೆಳೆ ವಿಮೆ ಪರಿಹಾರದ ಹಣ










