Updated March 11: ನಮಸ್ಕಾರ ಸ್ನೇಹಿತರೆ! ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಒಳ್ಳೆ ಶಿಕ್ಷಣ ಬೇಕು ಅಂದ್ರೆ, RTE ಕರ್ನಾಟಕ ಕರ್ನಾಟಕ (Right to Education) ನಿಮಗೊಂದು ಉತ್ತಮ ಅವಕಾಶ.
ಪ್ರತಿ ವರ್ಷದಂತೆ, ಈ ವರ್ಷವೂ ಆರ್.ಟಿ.ಇ 2026-27ನೇ ಸಾಲಿನ ಅಪ್ಲಿಕೇಶನ್ ನೋಟಿಫಿಕೇಶನ್ ಬಂದಿದೆ.
ನಿಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣ ಕೊಡಿಸಬೇಕು ಅಂತ ಇದ್ರೆ, ಈ ಪೋಸ್ಟ್ ನಿಮಗೆ ತುಂಬಾನೇ ಹೆಲ್ಪ್ ಆಗುತ್ತೆ. ಅರ್ಜಿ ಸಲ್ಲಿಸೋದು ಹೇಗೆ, ಯಾವೆಲ್ಲಾ ಡಾಕ್ಯುಮೆಂಟ್ಸ್ ಬೇಕು, ವಯಸ್ಸಿನ ಮಿತಿ ಏನು ಅನ್ನೋದರ ಬಗ್ಗೆ ಇಲ್ಲಿ ಡೀಟೇಲ್ಸ್ ಆಗಿ ತಿಳಿಸಿಕೊಡ್ತೀವಿ.
Updated: RTE (Right To Education) ಆನ್ಲೈನ್ ಅಪ್ಲಿಕೇಶನ್ ಬಗ್ಗೆ ಒಂದು ಇಂಪಾರ್ಟೆಂಟ್ ಅಪ್ಡೇಟ್ ಇದೆ. ಫೆಬ್ರವರಿ 24, 2026 ರಿಂದ ಶುರು ಆಗಬೇಕಿದ್ದ ಅಪ್ಲಿಕೇಶನ್ಗಳು ಈಗ ಪೋಸ್ಟ್ಪೋನ್ ಆಗಿವೆ.
ಹೊಸ ಡೇಟ್ಸ್ ಅನೌನ್ಸ್ ಆಗಿದ್ದು, ಅದನ್ನ ಡೀಟೇಲ್ ಆಗಿ ಹೇಳ್ತೀವಿ.
RTE ಕರ್ನಾಟಕ 2026-27: Eligibility, Last Date ಮತ್ತು ಮಾಹಿತಿ

ಸರ್ಕಾರ ಮತ್ತೊಮ್ಮೆ 11-03- 2026 ಹೊಸ RTE 2026 ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಹಳೆಯ ವೇಳಾಪಟ್ಟಿಯನ್ನು ಬದಲಾಯಿಸಿ ಹೊಸ ಪಟ್ಟಿಯನ್ನು ಹಿಂದು ಬಿಡುಗಡೆ ಮಾಡಿದ್ದಾರೆ.
ಈ ಕೂಡಲೇ ಅದನ್ನು ನೀವು ವೀಕ್ಷಿಸಿ
ಇದನ್ನೂ ಓದಿ
RTE Karnataka New Revised Schedule 2026: ಮತ್ತೆ ಬದಲಾದ RTE ಅರ್ಜಿ ದಿನಾಂಕ! ಹೊಸ ವೇಳಾಪಟ್ಟಿ ಇಲ್ಲಿದೆRTE ಕರ್ನಾಟಕ ಯಾರು ಅಪ್ಲೈ ಮಾಡಬಹುದು?
ಈ RTE ಕರ್ನಾಟಕ ಅಪ್ಲಿಕೇಶನ್ಗೆ ಮುಖ್ಯವಾಗಿ ಕರ್ನಾಟಕದ ನಿವಾಸಿಗಳು ಮಾತ್ರ ಅಪ್ಲೈ ಮಾಡಬಹುದು. ಬೇರೆ ರಾಜ್ಯದವರಿಗೆ ಅವರವರ ರಾಜ್ಯದ ನೋಟಿಫಿಕೇಶನ್ ನೋಡಿಕೊಳ್ಳಬೇಕು.
ಇಲ್ಲಿ, ಎಲ್ಕೆಜಿ (LKG) ಅಥವಾ ಮೊದಲನೇ ತರಗತಿ (1st Standard) ಸೇರಲು ಬಯಸುವ ಮಕ್ಕಳಿಗೆ ಮಾತ್ರ ಸೀಟ್ ಸಿಗುತ್ತೆ. ನಿಮ್ಮ ಮಗು ಈ ಎರಡರಲ್ಲಿ ಯಾವುದಾದರೂ ಒಂದಕ್ಕೆ ಸೇರ್ಪಡೆ ಆಗಲು ಅರ್ಹರಾಗಿರಬೇಕು. ಇದು ಒಂದು ಒಳ್ಳೆಯ ಅವಕಾಶ, ಮಿಸ್ ಮಾಡಿಕೊಳ್ಳಬೇಡಿ.
ಮಕ್ಕಳ ವಯಸ್ಸಿನ ಮಿತಿ ಏನು?
- ಎಲ್ಕೆಜಿ (LKG) ಗೆ ಅಪ್ಲೈ ಮಾಡೋ ಮಕ್ಕಳಿಗೆ 4 ವರ್ಷದಿಂದ 6 ವರ್ಷದ ಒಳಗಿರಬೇಕು.
- ಮೊದಲನೇ ತರಗತಿ (1st Standard) ಗೆ ಅಪ್ಲೈ ಮಾಡೋ ಮಕ್ಕಳಿಗೆ 6 ವರ್ಷದಿಂದ 8 ವರ್ಷದ ಒಳಗಿರಬೇಕು.
ಬೇಕಾಗುವ ಪ್ರಮುಖ ಡಾಕ್ಯುಮೆಂಟ್ಸ್ ಏನೇನು?
- ಮಗುವಿನ ಬರ್ತ್ ಸರ್ಟಿಫಿಕೇಟ್ (Birth Certificate).
- ಪೋಷಕರ ಮತ್ತು ಮಗುವಿನ ಆಧಾರ್ ಕಾರ್ಡ್ (Aadhar Card).
- ಮಗುವಿನ ಆದಾಯ ಪ್ರಮಾಣಪತ್ರ (Income Certificate) – ನಿಗದಿತ ಆದಾಯ ಮಿತಿ ಒಳಗಿರಬೇಕು.
- ಮಗುವಿನ ಒಂದು ಪಾಸ್ಪೋರ್ಟ್ ಸೈಜ್ ಫೋಟೋ.
ಸರ್ಕಾರಿ ಶಾಲಾ ನಿಯಮ – ಏನಿದು ವಿವಾದ?
ಇಲ್ಲಿ ಒಂದು ಇಂಪಾರ್ಟೆಂಟ್ ರೂಲ್ ಇದೆ. ನಿಮ್ಮ ಮನೆಯಿಂದ ಒಂದು ಕಿಲೋಮೀಟರ್ ಅಂತರದಲ್ಲಿ ಸರ್ಕಾರಿ ಶಾಲೆ ಇದ್ರೆ, ನಿಮಗೆ ಪ್ರೈವೇಟ್ ಸ್ಕೂಲ್ ಆಯ್ಕೆ ಸಿಗೋದಿಲ್ಲ.
ಆಗ ನೀವು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಅಪ್ಲೈ ಮಾಡಬೇಕಾಗುತ್ತೆ. ಈ ನಿಯಮದಿಂದ ಕೆಲವರಿಗೆ ಪ್ರೈವೇಟ್ ಸ್ಕೂಲ್ ಸೀಟ್ ಸಿಗೋಕೆ ಕಷ್ಟ ಆಗುತ್ತೆ. ಸರ್ಕಾರ ಈ ನಿಯಮವನ್ನು ಬದಲಿಸಿದ್ರೆ, ಇನ್ನೂ ಹೆಚ್ಚಿನ ಪೋಷಕರಿಗೆ ಅನುಕೂಲ ಆಗುತ್ತೆ ಅಂತ ಹಲವರು ಅಭಿಪ್ರಾಯ ಪಡ್ತಾರೆ.
ವಿದ್ಯಾರ್ಥಿಗಳಿಗೆ School ಲಿಸ್ಟ್ ಯಾವಾಗ ರಿಲೀಸ್?
ಮೊದಲಿಗೆ, ಯಾವೆಲ್ಲಾ ಸ್ಕೂಲ್ಗಳಲ್ಲಿ RTE ಸೀಟ್ಗಳು ಲಭ್ಯ ಇವೆ ಅನ್ನೋದನ್ನ ತಿಳ್ಕೋಬೇಕು ಅಲ್ಲವಾ? ಅದಕ್ಕಾಗಿ, ಸ್ಕೂಲ್ಗಳ ಲಿಸ್ಟ್ ಮಾರ್ಚ್ 10, 2026 ರಂದು ವೆಬ್ಸೈಟ್ನಲ್ಲಿ ರಿಲೀಸ್ ಆಗುತ್ತೆ.
ಈ ಲಿಸ್ಟ್ನಲ್ಲಿ ನೀವು ನಿಮ್ಮ ಏರಿಯಾದಲ್ಲಿರುವ ಅಥವಾ ನಿಮಗೆ ಇಷ್ಟವಾದ ಸ್ಕೂಲ್ಗಳನ್ನು ನೋಡಬಹುದು. ಸ್ಕೂಲ್ ಲಿಸ್ಟ್ ಚೆಕ್ ಮಾಡೋದು ತುಂಬಾ ಇಂಪಾರ್ಟೆಂಟ್.
ಯಾಕಂದ್ರೆ, ನಿಮ್ಮ ಮಕ್ಕಳು ಯಾವ ಸ್ಕೂಲ್ಗೆ ಅಪ್ಲೈ ಮಾಡಬೇಕು ಅನ್ನೋ ಡಿಸೈಡ್ ಮಾಡೋಕೆ ಇದು ಹೆಲ್ಪ್ ಮಾಡುತ್ತೆ.
RTE ಅರ್ಜಿ ಸಲ್ಲಿಕೆ 2026

- ಟ್ರಯಲ್ ಅಪ್ಲಿಕೇಶನ್ (Trial Application): ಆನ್ಲೈನ್ ಫಾರ್ಮ್ ತುಂಬುವ ವಿಧಾನವನ್ನು ತಿಳಿಯಲು ಮಾರ್ಚ್ 11 ಮತ್ತು 12, 2026 ರಂದು ಟ್ರಯಲ್ ಅಪ್ಲಿಕೇಶನ್ಗೆ ಅವಕಾಶವಿರುತ್ತದೆ.
- ತಪ್ಪುಗಳ ತಡೆಗಟ್ಟುವಿಕೆ: ನಿಜವಾದ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪುಗಳಾಗದಂತೆ ತಡೆಯಲು ಮತ್ತು ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆ ಎಂದು ಅರ್ಥಮಾಡಿಕೊಳ್ಳಲು ಈ ಟ್ರಯಲ್ ಸಹಕಾರಿಯಾಗಿದೆ.
- ನಿಜವಾದ ಅರ್ಜಿ ಸಲ್ಲಿಕೆ ಆರಂಭ: RTE ಅಧಿಕೃತ ಆನ್ಲೈನ್ ಅರ್ಜಿ ಸಲ್ಲಿಕೆಯು ಮಾರ್ಚ್ 16, 2026 ರಿಂದ ಪ್ರಾರಂಭವಾಗುತ್ತದೆ.
- ಕೊನೆಯ ದಿನಾಂಕ: ಅರ್ಜಿ ಸಲ್ಲಿಸಲು ಏಪ್ರಿಲ್ 15, 2026 ರವರೆಗೆ ಪೂರ್ತಿ ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ.
- ಮುನ್ನೆಚ್ಚರಿಕೆ: ಕೊನೆಯ ಕ್ಷಣದ ಸರ್ವರ್ ದಟ್ಟಣೆ (Traffic) ತಪ್ಪಿಸಲು ಪೋಷಕರು ಮತ್ತು ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.
RTE ಆನ್ಲೈನ್ನಲ್ಲಿ ಅಪ್ಲೈ ಮಾಡೋದು ಹೇಗೆ?
ಅಪ್ಲಿಕೇಶನ್ ಪ್ರಾರಂಭವಾದ ತಕ್ಷಣ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸೋಕೆ ಡೀಟೇಲ್ಡ್ ಗೈಡ್ ಅನ್ನು ನಮ್ಮ ಬ್ಲಾಗ್ನಲ್ಲಿ ಪಬ್ಲಿಷ್ ಮಾಡ್ತೀವಿ.
ಸ್ಟೆಪ್-ಬೈ-ಸ್ಟೆಪ್ ಪ್ರೋಸೆಸ್ ಏನು, ಫಾರ್ಮ್ ಹೇಗೆ ಫಿಲ್ ಮಾಡಬೇಕು, ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡೋದು ಹೇಗೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಅಲ್ಲಿ ಸಿಗುತ್ತೆ.
ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡುತ್ತಾ ಇರಿ, ಇದರಿಂದ ಯಾವುದೇ ಮಾಹಿತಿ ಮಿಸ್ ಆಗೋದಿಲ್ಲ. ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತೆ.
RTE ಪ್ರವೇಶದ ನಿಖರ ಮಾಹಿತಿ
ಈ ಒಂದು ಯೋಜನೆಯ ಬಗ್ಗೆ ಜನರಿಗೆ ಕೊಂಚ ಗೊಂದಲವಿದೆ ಅದನ್ನು ಇಲ್ಲಿ ಬಗೆಹರಿಸಿಕೊಳ್ಳಿ:
ಪ್ರವೇಶದ ಹಂತ (Entry Point): RTE ಅಡಿಯಲ್ಲಿ ಮಕ್ಕಳು ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದು ಕೇವಲ LKG ಅಥವಾ 1ನೇ ತರಗತಿಗೆ ಮಾತ್ರ.
ಆದರೆ ಇಲ್ಲಿ ಗಮನಿಸಬೇಕು ಅದೇನೆಂದರೆ, ಒಂದು ಮಗು ಮೊದಲ ಬಾರಿಗೆ ಶಾಲೆಗೆ ಸೇರುವಾಗ ಮಾತ್ರ ಈ ಯೋಜನೆಯಡಿ ಉಚಿತ ಸೀಟು ಪಡೆಯಲು ಸಾಧ್ಯ.
6 ರಿಂದ 14 ವರ್ಷದ Rules: ಒಮ್ಮೆ ಮಗು ಈ ಯೋಜನೆಯಡಿ ಎಲ್ಕೆಜಿ ಅಥವಾ 1ನೇ ತರಗತಿಗೆ ಸೇರಿದರೆ, ಆ ಮಗುವಿಗೆ 14 ವರ್ಷ ತುಂಬುವವರೆಗೆ (ಅಥವಾ 8ನೇ ತರಗತಿಯವರೆಗೆ) ಸರ್ಕಾರವೇ ಉಚಿತ ಶಿಕ್ಷಣದ ವೆಚ್ಚವನ್ನು ಭರಿಸುತ್ತದೆ.
ಮಧ್ಯಂತರ ಪ್ರವೇಶವಿಲ್ಲ: ಮಗು ಈಗಾಗಲೇ 3ನೇ ಅಥವಾ 5ನೇ ತರಗತಿಯಲ್ಲಿ ಓದುತ್ತಿದ್ದರೆ, ಈಗ ಹೊಸದಾಗಿ ಆರ್ಟಿಇ ಅಡಿಯಲ್ಲಿ ಉಚಿತ ಸೀಟು ಪಡೆಯಲು ಅರ್ಜಿ ಸಲ್ಲಿಸಲು ಬರುವುದಿಲ್ಲ.
ಸರ್ಕಾರಿ ಶಾಲೆಗಳ ಲಭ್ಯತೆ: ನಿಮ್ಮ ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ (Aided) ಶಾಲೆಗಳಿದ್ದರೆ, ಅಂತಹ ಕಡೆಗಳಲ್ಲಿ ಖಾಸಗಿ ಶಾಲೆಗಳ ಆರ್ಟಿಇ ಸೀಟುಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಕೊನೆಯ ಮಾತು
ಒಟ್ಟಾರೆ, RTE ಕರ್ನಾಟಕ 2026-27 ಬಡ ಮತ್ತು ಅಗತ್ಯವಿರುವ ಕುಟುಂಬಗಳ ಮಕ್ಕಳಿಗೆ ಉಚಿತ ಮತ್ತು ಉತ್ತಮ ಶಿಕ್ಷಣ ನೀಡಲು ಒಂದು ಅದ್ಭುತ ಅವಕಾಶ.
ಎಲ್ಲಾ ಡೀಟೇಲ್ಸ್, ಏಜ್ ಲಿಮಿಟ್, ಡಾಕ್ಯುಮೆಂಟ್ಸ್ ಬಗ್ಗೆ ಮಾಹಿತಿ ಸಿಕ್ಕಿದೆ ಅಂದುಕೊಂಡಿದೀವಿ.
ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಈ ಮಾಹಿತಿ ನಿಮಗೆ ಇಷ್ಟ ಆಗಿದ್ರೆ, ನಮ್ಮ ಪೋಸ್ಟ್ ಅನ್ನು ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಬ್ಲಾಗ್ಗೆ Follow madi. ಮುಂದಿನ ಪೋಸ್ಟ್ನಲ್ಲಿ ಮತ್ತೆ ಸಿಗೋಣ, ಧನ್ಯವಾದಗಳು!
FAQ
RTE ಅಂದ್ರೆ ಏನು?
RTE ಅಂದ್ರೆ ‘Right to Education’ ಅಥವಾ ‘ಶಿಕ್ಷಣದ ಹಕ್ಕು’. ಇದರಡಿ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಲಾಗುತ್ತದೆ.
ಯಾರ್ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?
ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ಅರ್ಜಿ ಸಲ್ಲಿಸಬಹುದು. ಇದರಲ್ಲಿ ಎಸ್ಸಿ (SC), ಎಸ್ಟಿ (ST), ಒಬಿಸಿ (OBC), ಇಡಬ್ಲ್ಯೂಎಸ್ (EWS) ಮತ್ತು ಅಲ್ಪಸಂಖ್ಯಾತ (Minorities) ವರ್ಗದವರು ಸೇರಿದ್ದಾರೆ.
RTE ಅರ್ಜಿ ಸಲ್ಲಿಸಲು ದಿನಾಂಕ ಯಾವಾಗ?
ಮಾರ್ಚ್ 16, 2026 ರಿಂದ ಏಪ್ರಿಲ್ 15, 2026 ರವರೆಗೆ ಅರ್ಜಿ ಸಲ್ಲಿಸೋಕೆ ನಿಮಗೆ ಅವಕಾಶ ಇರುತ್ತೆ
ಈ ಯೋಜನೆಯಿಂದ ಏನು ಲಾಭ?
ಈ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಪೋಷಕರು ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಒಂದು ರೂಪಾಯಿ ಖರ್ಚಿಲ್ಲದೆ ಓದಿಸಬಹುದು.
ಅರ್ಜಿ ಸಲ್ಲಿಸುವಾಗ ಆದಾಯದ ಮಿತಿ ಇರುತ್ತದೆಯೇ?
ಹೌದು, ಅರ್ಜಿ ಸಲ್ಲಿಸುವ ಕುಟುಂಬದ ಆದಾಯವು ಸರ್ಕಾರ ನಿಗದಿಪಡಿಸಿದ ಮಿತಿಯ ಒಳಗಿರಬೇಕು. ಆಗಲೇ ಈ ಸೌಲಭ್ಯ ಸಿಗಲು ಸಾಧ್ಯ.
ಅರ್ಹ ಕೆಟಗರಿಗಳು
SC, ST, OBC, EWS (ಆರ್ಥಿಕವಾಗಿ ದುರ್ಬಲ ವರ್ಗ) ಮತ್ತು ಅಲ್ಪಸಂಖ್ಯಾತರು
ಸೀಟಿನ ಸೌಲಭ್ಯ
ಖಾಸಗಿ ಶಾಲೆಗಳಲ್ಲಿ (Private Schools) ಉಚಿತ ಸೀಟುಗಳು
Read More:
ಕರ್ನಾಟಕದ ಟಾಪ್ 10 Government ಮೆಡಿಕಲ್ ಕಾಲೇಜುಗಳು 2026!
SC ವಿದ್ಯಾರ್ಥಿಗಳ ಗಮನಕ್ಕೆ: ಹೊಸ ಜಾತಿ ಪ್ರಮಾಣಪತ್ರ ಪಡೆಯುವುದು ಈಗ ಕಡ್ಡಾಯ! 2026ರ ಹೊಸ ಗೈಡ್ ಇಲ್ಲಿದೆ.
2nd ಪಿಯುಸಿ 2026 ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ! ಯಾವತ್ತು ಯಾವ ಪರೀಕ್ಷೆ? ಇಲ್ಲಿದೆ ನೋಡಿ.










