ಎಲ್ಲರಿಗೂ ನಮಸ್ಕಾರ, ಸಚಿವೆ ನಿರ್ಮಲ ಸೀತಾರಾಮನ್ ಅವರು ಮಹಿಳೆಯರು ಗ್ರಹಿಣಿಯರು ಖುಷಿ ಪಡುವ ಸುದ್ದಿಯನ್ನ ನೀಡಿದ್ದಾರೆ ಹೌದು ಮಂಗಳವಾರ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡಿಸಿದ ನಿರ್ಮಲ ಸೀತಾರಾಮನ್ ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದ್ದು. ಇದರಿಂದ ಬಂಗಾರ ಹಾಗೂ ಬೆಳ್ಳಿ ಬೆಲೆ ಭಾರಿ ಪ್ರಮಾಣದಲ್ಲಿ ಇಳಿದಿದ್ದು ಚಿನ್ನ ಖರೀದಿಸಬೇಕು ಎನ್ನುವವರಿಗೆ ಬೆಸ್ಟ್ ಅಂದ್ರೆ ಬೆಸ್ಟ್ ಸಮಯ ಬಂದಿದೆ.
ಅದಲ್ಲದೆ ಬೆಲೆ ಇಳಿಕೆಯಿಂದ ಚಿನ್ನ ಹಾಗೂ ಬೆಳ್ಳಿ ಖರೀದಿ ಕೂಡ ಹೆಚ್ಚಲಿದೆ. ಹಾಗಾದರೆ ನಿರ್ಮಲ ಸೀತಾರಾಮನ್ ಘೋಷಿಸಿದ್ದು ಏನು ವಿತ್ತ ಸಚಿವೆಯ ಘೋಷಣೆಯಿಂದ ಬಂಗಾರ ಹಾಗೂ ಬೆಳ್ಳಿ ದರ ಎಷ್ಟು ಇಳಿಯಲಿದೆ ಎಂಬುದರ ವಿವರ ಇಲ್ಲಿದೆ.
ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ನಿರ್ಮಲ
ಚಿನ್ನ ಬೆಳ್ಳಿ ಮೇಲಿನ ಕಸ್ಟಮ್ ಸುಂಕ ಇಳಿಸಿದ ಕೇಂದ್ರ. ಹೌದು ಮಂಗಳವಾರ ಕೇಂದ್ರ ಬಜೆಟ್ ಮಂಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಚಿನ್ನ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕವನ್ನ ಶೇಕಡಾ ಆರಕ್ಕೆ ಇಳಿಸಿದ್ದಾರೆ ಅದರ ಜೊತೆ ಪ್ಲಾಟಿನಂ ಮೇಲಿನ ಆಮದು ಸುಂಕವನ್ನು ಕೂಡ ಶೇಕಡಾ 6.4 ಕ್ಕೆ ಇಳಿಸಲಾಗಿದೆ ಇದು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಕಾರಣ ಆಗಲಿದ್ದು ಬೇಡಿಕೆಯನ್ನ ಹೆಚ್ಚಿಸಲಿದೆ.
ಸದ್ಯ ಚಿನ್ನ ಹಾಗೂ ಬೆಳ್ಳಿ ಮೇಲೆ ಶೇಕಡಾ ಹತ್ತರಷ್ಟು ಮೂಲ ಆಮದು ಸುಂಕ ಹಾಗೂ ಶೇಕಡಾ ಐದರಷ್ಟು ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ಸೇಸ್ಕೂಡಿ ಶೇಕಡಾ 15 ರಷ್ಟು ಕಸ್ಟಮ್ ಸುಂಕ ಇತ್ತು ಈಗ ಅದನ್ನ ಶೇಕಡಾ ಆರಕ್ಕೆ ಇಳಿಸಲು ಸರ್ಕಾರ ಮುಂದಾಗಿದೆ.
ಸುಂಕ ಕಡಿತದ ಬೆನ್ನಲ್ಲೇ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ
ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಅವರು ಚಿನ್ನ ಹಾಗೂ ಬೆಳ್ಳಿ ಮೇಲಿನ ಸುಂಕ ಕಡಿತ ಘೋಷಣೆ ಮಾಡಿದ ತಕ್ಷಣ ಬಂಗಾರ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ ಮಂಗಳವಾರ ಬೆಳಗ್ಗೆ M ಸಿಎಕ್ಸ್ ನಲ್ಲಿ 10 ಗ್ರಾಂ ಬಂಗಾರದ ಬೆಲೆ 72,838 ಇತ್ತು ಆದರೆ ಮಧ್ಯಾಹ್ನದ ಹೊತ್ತಿಗೆ 10 ಗ್ರಾಂ ಬಂಗಾರದ ಬೆಲೆ 68,500 ಆಗಿದೆ.
ಈ ಮೂಲಕ ಸುಮಾರು 4,000 ಇಳಿಕೆಯಾಗಿದೆ ಹೊಸ ಸುಂಕ ಪದ್ಧತಿ ಜಾರಿಗೆ ಬಂದರೆ ಸುಮಾರು 3,000 ದಿಂದ 5,000 ವರೆಗೆ ಬೆಲೆ ಕಮ್ಮಿಯಾಗುವ ಸಾಧ್ಯತೆ ಇದ್ದು ಜನ ಬಂಗಾರದ ಖರೀದಿ ಮುಗಿಬೀಳುವ ಸಾಧ್ಯತೆ ಕೂಡ ಇದೆ.
ಇನ್ನು ಬೆಳ್ಳಿ ಕೂಡ ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ಪ್ರತಿ ಕೆಜಿ ಗೆ 8,895 ರೂಪಾಯಿಗೆ ಏರಿಕೆಯಾಗಿತ್ತು ಆದರೆ ಮಧ್ಯಾಹ್ನದ ಹೊತ್ತಿಗೆ 84,275 ರೂಪಾಯಿಗೆ ಇಳಿಕೆಯಾಗಿತ್ತು ಇನ್ನೊಂದು ಪ್ರಮುಖವಾಗಿ ಗಮನಿಸಬೇಕಾದ ಅಂಶ ಏನೆಂದರೆ ಕೇವಲ ಶೇಕಡಾ ನಾಲ್ಕರಷ್ಟು ಸುಂಕವನ್ನು ಮಾತ್ರ ಇಳಿಸಲಾಗಿದೆ.
ಶೇಕಡಾ 10 ರಷ್ಟು ಮೂಲ ಕಸ್ಟಮ್ ಸುಂಕದಲ್ಲಿ ಶೇಕಡಾ ನಾಲ್ಕರಷ್ಟನ್ನ ಕಡಿತಗೊಳಿಸಿ ಶೇಕಡಾ ಆರಕ್ಕೆ ಇಳಿಸಲಾಗಿದೆ ಶೇಕಡಾ ಐದರಷ್ಟು ಇರುವ ಕೃಷಿ ಮೂಲ ಸೌಕರ್ಯ ವೃದ್ಧಿ ಸೆಸ್ ಹಾಗೆಯೇ ಮುಂದುವರೆಯಲಿದೆ ಎನ್ನಲಾಗಿದೆ ಆದ್ದರಿಂದ ಕಸ್ಟಮ್ ಸುಂಕ ಶೇಕಡಾ 11 ರಷ್ಟು ಮುಂದುವರೆಯಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಇದರ ಜೊತೆ ಕೇಂದ್ರ ಬಜೆಟ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ಬಗ್ಗೆ ಮಹತ್ತರ ಘೋಷಣೆಯಾಗುತ್ತಲೆ ಶೇರು ಮಾರುಕಟ್ಟೆಯಲ್ಲಿ ಆಭರಣ ಸಂಬಂಧಿತ ಶೇರುಗಳ ಮೌಲ್ಯ ಹೆಚ್ಚಾಗಿದೆ.
ಹೌದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಶೆನ್ಕೋ ಗೋಲ್ಡ್ ಶೇರುಗಳು ಶೇಕಡಾ 616 ರಷ್ಟು ಏರಿಕೆಯಾಗಿದ್ದರೆ ರಾಜೇಶ್ ಎಕ್ಸ್ಪೋರ್ಟ್ಸ್ ನಲ್ಲಿ ಶೇಕಡಾ 5.49 ರಷ್ಟು ಹೆಚ್ಚಳವಾಗಿದೆ ಇತ್ತ ಪಿಸಿ ಜುವೆಲರ್ಸ್ ಟೈಟಾನ್ ಕಂಪನಿ ಭೀಮ್ ಜಿ ಜವೇರಿ ಕಲ್ಯಾಣ್ ಜುವೆಲರ್ಸ್ ನ ಶೇರ್ಗಳು ಕೂಡ ಏರಿಕೆಯಾಗಿದೆ.
ಒಟ್ಟಿನಲ್ಲಿ ನಿರ್ಮಲ ಸೀತಾರಾಮನ್ ಮಂಡಿಸಿದ ಬಜೆಟ್ ಬಂಗಾರ ಪ್ರಿಯರಿಗೆ ಖುಷಿ ಸುದ್ದಿ ನೀಡಿರುವುದಂತೂ ಸತ್ಯ ಕಸ್ಟಮ್ ಸುಂಕ ಇಳಿಕೆಯು ಗ್ರಾಹಕರ ಜೇಬಿಗೆ ಎಷ್ಟು ಲಾಭ ತರುತ್ತೆ ಎಂಬುದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ: What Is ULI ಟೆಕ್ ಪ್ಲಾಟ್ ಫಾರ್ಮ್!!





