ಎಲ್ಲರಿಗೂ ನಮಸ್ಕಾರ, ಎಲ್ಲಾ ರೈತರು ತಮ್ಮ ಫಾರ್ಮರ್ ಐಡಿಯನ್ನು ಹೊಂದಿರಬೇಕು. ನಿಮ್ಮ ಹತ್ತಿರದ ಸೈಬರ್ ಸೆಂಟರ್ಗಳು ಅಥವಾ ಆನ್ಲೈನ್ ಮೂಲಕ ನಿಮ್ಮ ಫಾರ್ಮರ್ ಐಡಿಯನ್ನು ಕ್ರಿಯೇಟ್ ಮಾಡಿಕೊಳ್ಳಬಹುದು. ಹಾಗೂ ರಿಜಿಸ್ಟರ್ ಆಗಬಹುದು.
Online ಮೂಲಕ ಫಾರ್ಮರ್ ಐಡಿಯನ್ನು ಮತ್ತು ಅದರ ಆಧಾರ್ ಕಾರ್ಡ್ Linking ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂದು ಈ ಲೇಖನೆಯಲ್ಲಿ ತಿಳಿಸಿ ಕೊಡುತ್ತೇವೆ ಆದ್ದರಿಂದ ಲೇಖನವನ್ನು ಓದಿ.
ಸ್ನೇಹಿತರೆ ರಾಜ್ಯದ ಎಲ್ಲಾ ರೈತರು ತಮ್ಮ ಫಾರ್ಮರ್ ಐಡಿಯನ್ನು ಹೊಂದಿರಲೇಬೇಕು ಹಾಗೂ ರಿಜಿಸ್ಟರ್ ಆಗಿರಬೇಕು. ಫಾರ್ಮರ್ ಐಡಿಗೆ ರೈತರ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಮಾತ್ರ ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗುತ್ತದೆ. ಇಲ್ಲ ಎಂದರೆ ರೈತರಿಗೆ ಬೆಳೆ ಪರಿಹಾರದ ಹಣ ಬಿಡುಗಡೆ ಆಗುವುದಿಲ್ಲ.
Farmers ID ಗೆ ಆಧಾರ್ ಕಾರ್ಡ್ ಲಿಂಕ ಆಗಿದೆಯೋ ಎಂದು ಹೇಗೆ ತಿಳಿಯುವುದು
ಸ್ನೇಹಿತರೆ ಆಧಾರ್ ಕಾರ್ಡ್ ಮತ್ತು ಫಾರ್ಮರ್ ಐಡಿ ಲಿಂಕ್ ಆಗಿದೆ ಎಂದು ಆನ್ಲೈನ್ ಮೂಲಕ ತಿಳಿದುಕೊಳ್ಳಬಹುದು. ನಿಮ್ಮ ಫೋನ್ ಅಥವಾ ಸಿಸ್ಟಮ್ ನಲ್ಲಿ FRUITS ಎಂಬ ವೆಬ್ಸೈಟ್ ಗೆ ಹೋಗಬೇಕು.
FRUITS ವೆಬ್ಸೈಟ್ನಲ್ಲಿ ಮೇಲ್ಭಾಗದಲ್ಲಿ ಮೂರು ಗೆರೆಯ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ರಿಜಿಸ್ಟ್ರೇಷನ್ ಎಂಬ ಆಪ್ಷನ್ ಕಾಣುತ್ತದೆ, ರಿಜಿಸ್ಟ್ರೇಷನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಹೊಸ ಪೇಜ್ ಓಪನ್ ಆಗುತ್ತದೆ.
ಈಗ ಬರುವ ಹೊಸ ಪೇಜ್ ನಲ್ಲಿ ಲಾಗಿನ್ ಆದರೆ ನಿಮ್ಮ ಫಾರ್ಮರ್ ಐಡಿ ಹಾಗೂ ಅದರ ಎಲ್ಲಾ ಡೀಟೇಲ್ಸ್ ಜೊತೆ ನಿಮ್ಮ ತಂದೆ ತಾಯಿಯ ಹೆಸರು ನಿಮ್ಮ ಪರ್ಸನಲ್ ವಿವರಗಳು ಎಲ್ಲಾ ತೋರಿಸುತ್ತದೆ.
ಈ ವೆಚ್ಚಪೇಜ್ ನಲ್ಲಿ ನಿಮ್ಮ ಸರ್ವೆ ನಂಬರ್ ಕೂಡ ಬರುತ್ತದೆ. ಹಾಗೂ ನಿಮ್ಮ ಬಳಿ ಎಷ್ಟು ಎಕ್ಕರೆ ಜಮೀನು ಇದೆ ಎಂದು ತೋರಿಸುತ್ತದೆ. ನಿಮ್ಮ ಫಾರ್ಮರ್ ಐಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹಾಗೂ ಬ್ಯಾಂಕ್ ಯಾವುದು ಎಂಬ ಎಲ್ಲಾ ವಿಷಯವನ್ನು ಇಲ್ಲಿ ತೋರಿಸುತ್ತದೆ.
ಇದೇ ವೆಸ್ಟೇಜ್ ನಲ್ಲಿ ಕೆಳಗೆ ಹೋದರೆ ಆಧಾರ್ ಕಾರ್ಡ್ ಡೀಟೇಲ್ಸ್ ಎಂಬ ಒಂದು ಸೆಕ್ಷನ್ ಇರುತ್ತದೆ. ಅಲ್ಲಿ ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಫಾರ್ಮರ್ ಐಡಿ ಗೆ ಲಿಂಕ್ ಆಗಿದ್ದರೆ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಡೀಟೇಲ್ಸ್ ಆಧಾರ್ ನಂಬರ್ ನಿಮ್ಮ ಹೆಸರು ಎಲ್ಲ ತೋರಿಸುತ್ತದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಮತ್ತು ಫಾರ್ಮರ್ ಐಡಿ ಲಿಂಕ್ ಆಗಿಲ್ಲ ಎಂದರೆ ಅಲ್ಲಿ ಯಾವುದೇ ಡೀಟೇಲ್ಸ್ ತೋರಿಸುವುದಿಲ್ಲ.
ಸ್ನೇಹಿತರೆ ಈ ರೀತಿಯಲ್ಲಿ ನಿಮ್ಮ ಫಾರ್ಮರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ಆನ್ಲೈನ್ ಮೂಲಕ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ಹಾಗೂ ಒಂದು ವೇಳೆ ಲಿಂಕ್ ಆಗಿಲ್ಲ ಎಂದರೆ ಆದಷ್ಟು ಬೇಗ ಆಧಾರ್ ಕಾರ್ಡ್ ಗೆ ಫಾರ್ಮರ್ ಐಡಿಯನ್ನು ಲಿಂಕ್ ಮಾಡಿಸಿಕೊಳ್ಳಿ.
ಇದನ್ನೂ ಓದಿ: NPS ವಾತ್ಸಲ್ಯ ಯೋಜನೆ ಎಂದರೆ ಏನು?










