Top 6 News: HDFC ಉದ್ಯೋಗಿಗಳಿಗೆ ಕೇವಲ 30 ದಿನ ನೋಟಿಸ್!! Credit Card ಬಾಕಿ ಪಾವತಿಗೆ ಹೆಚ್ಚುವರಿ?

November 12, 2024 2:22 AM
ಈರುಳ್ಳಿ ಬೆಲೆ ಏರಿಕೆಯಾಗಲಿ

ಎಲ್ಲರಿಗೂ ನಮಸ್ಕಾರ, HDFC ಉದ್ಯೋಗಿಗಳಿಗೆ ಈಗ ಕೇವಲ 30 ದಿನ ನೋಟೀಸ್ ಪಿರಿಯಡ್, ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ HDFC ಬ್ಯಾಂಕ್ ಕಂಪನಿಗೆ ರಾಜೀನಾಮೆ ನೀಡಿ ಬೇರೆ ಕಂಪನಿಗೆ ಹೋಗುವ ಉದ್ಯೋಗಿಗಳಿಗೆ ವಿಶೇಷವಾದ ಅನುಕೂಲ ನೀಡಿದೆ. ನೋಟೀಸ್ ಪಿರಿಯಡ್ ಕಡಿಮೆ ಮಾಡಿದೆ ಅಂದ್ರೆ ನೌಕರರು ಈಗ 90 ದಿನಗಳ ಬದಲಾಗಿ ಕೇವಲ 30 ದಿನಗಳ ನೋಟೀಸ್ ಪಿರಿಯಡ್ ನಲ್ಲಿ ಕೆಲಸವನ್ನ ಮಾಡಬೇಕಾಗುತ್ತೆ.

ರಿಪೋರ್ಟಿಂಗ್ ಮ್ಯಾನೇಜರ್ ಅಪ್ರೂವ್ ಮಾಡಿದರೆ ನೌಕರರಿಗೆ ನೋಟೀಸ್ ಪಿರಿಯಡ್ ಕಡಿಮೆ ಮಾಡಿ ಸುಗಮವಾಗಿ ಬೇರೆ ಕಡೆ ಕೆಲಸಕ್ಕೆ ಹೋಗುವುದಕ್ಕೆ ಅವಕಾಶ ಮಾಡಿಕೊಡುವುದು ಇದರ ಉದ್ದೇಶವಾಗಿದೆ. HDFC ಬ್ಯಾಂಕ್ ತನ್ನ ನೋಟೀಸ್ ಪಿರಿಯಡ್ ಕಡಿಮೆ ಮಾಡಿದ ಎರಡನೆಯ ಖಾಸಗಿ ಬ್ಯಾಂಕ್ ಆಗಿದೆ ಇದಕ್ಕೂ ಮೊದಲು 2020 ರಲ್ಲಿ ICICI ಬ್ಯಾಂಕ್ ತನ್ನ ನೋಟೀಸ್ ಪಿರಿಯಡ್ ಅನ್ನ 90 ದಿನಗಳಿಂದ 30 ದಿನಗಳಿಗೆ ಇಳಿಸಿತ್ತು.

ಭಾರತದ GDP ಸ್ಥಾನ ಏರಿಕೆ ಆಗಲಿದೆ

ಅಮಿತಾಬ್ ಕಾಂತ್ ಅಂದಾಜಿನ ಪ್ರಕಾರ ಭಾರತ 2025ರ ವೇಳೆಗೆ ಜಪಾನನ್ನ ಹಿಂದಿಕ್ಕಿ ವಿಶ್ವದ ನಾಲ್ಕನೆಯ ಅತಿ ದೊಡ್ಡ ಆರ್ಥಿಕತೆಯಾಗಲಿದೆ ನೀತಿ ಆಯೋಗದ ಮಾಜಿ CEO ಅಮಿತಾಬ್ ಕಾಂತ್ ಅವರು 2025ರ ವೇಳೆಗೆ ಭಾರತ ಜಪಾನನ್ನ ಹಿಂದಿಕ್ಕಿ ವಿಶ್ವದ ನಾಲ್ಕನೆಯ ಅತಿ ದೊಡ್ಡ ಆರ್ಥಿಕತೆಯಾಗಬಹುದು ಎಂದು ಅಂದಾಜಿಸಿದ್ದಾರೆ.

ಪ್ರಸ್ತುತ ಜಿಡಿಪಿಯ ಪ್ರಕಾರ ಭಾರತ ಅಮೆರಿಕಾ ಚೀನಾ ಜರ್ಮನಿ ಮತ್ತು ಜಪಾನ್ ನಂತಹ ಐದನೆಯ ಅತಿ ದೊಡ್ಡ ಆರ್ಥಿಕತೆಯಾಗಿದೆ ಭಾರತ ಈಗಾಗಲೇ 2022 ರಲ್ಲಿ ಯುಕೆ ಯನ್ನ ಹಿಂದಿಕ್ಕಿತ್ತು ಒಂದು ದಶಕದ ಹಿಂದೆ ಭಾರತದ ಜಿಡಿಪಿ ವಿಶ್ವದ 11ನೇ ಸ್ಥಾನದಲ್ಲಿತ್ತು ಪ್ರಸ್ತುತ ಭಾರತದ ಜಿಡಿಪಿ ಸುಮಾರು 37 ಟ್ರಿಲಿಯನ್ US ಡಾಲರ್ ಆಗಿದೆ ಆಗಿದ್ದು ಐದನೆಯ ಸ್ಥಾನದಲ್ಲಿದೆ.

ಈರುಳ್ಳಿ ಬೆಲೆ ಏರಿಕೆಯಾಗಲಿ

ಈರುಳ್ಳಿ ಬೆಲೆ ಏರಿಕೆ ತಡೆಗೆ ಸರ್ಕಾರ ನಿಯಮ ಬಿಗಿ ಬಫರ್ ಸ್ಟಾಕ್ ಗಾಗಿ ಐದು ಲಕ್ಷ ಟನ್ ಈರುಳ್ಳಿ ಖರೀದಿ ಪ್ರಾರಂಭ ಸರ್ಕಾರ ತನ್ನ ಬಫರ್ ಸ್ಟಾಕ್ ಗೆ ಎಂದು ಈ ವರ್ಷ 5 ಲಕ್ಷ ಟನ್ ಈರುಳ್ಳಿಯನ್ನು ಖರೀದಿಸುವುದಕ್ಕೆ ಯೋಜಿಸಿದೆ ಬೆಲೆ ಏರಿಕೆಯ ಸಂದರ್ಭದಲ್ಲಿ ಇದನ್ನ ಬಳಸಿ ಬೆಲೆಯನ್ನು ನಿಯಂತ್ರಿಸಬಹುದು.

ಗ್ರಾಹಕ ವ್ಯವಹಾರಿಗಳ ಸಚಿವಾಲಯದ ಅಧಿಕಾರಿಯೊಬ್ಬರು ಹೇಳುವ ಪ್ರಕಾರ 2024-25 ಕ್ಕೆ 5 ಲಕ್ಷ ಟನ್ ಗಳಷ್ಟು ಸಫರ್ ಸ್ಟಾಕ್ ಸಂಗ್ರಹಿಸುವುದಕ್ಕೆ ಕೇಂದ್ರ ಸರ್ಕಾರ ರೈತರಿಂದ ಮಾರುಕಟ್ಟೆಯ ದರದಲ್ಲಿ ಈರುಳ್ಳಿ ಖರೀದಿಯನ್ನ ಪ್ರಾರಂಭಿಸಿದೆ ಮತ್ತು ಬೆಲೆ ಏರಿಕೆಯ ಸಂದರ್ಭದಲ್ಲಿ ಪೂರೈಕೆಯನ್ನ ಹೆಚ್ಚಿಸಲಿದೆ ಈರುಳ್ಳಿ ಬೆಲೆ ಏರಿಕೆಯಾದರೆ ಮಾರುಕಟ್ಟೆಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸಲು ಈ ಬಫರ್ ಸ್ಟಾಕ್ ಅವಕಾಶ ನೀಡುತ್ತೆ.

ಅದರಲ್ಲೂ ಕಳೆದ ವಾರ ಈರುಳ್ಳಿ ರಫ್ತಿನ ಮೇಲಿನ ನಿರ್ಬಂಧವನ್ನು ತೆಗೆದು ಹಾಕುವುದಾಗಿ ಸರ್ಕಾರ ಘೋಷಣೆ ಮಾಡಿದಾಗ ಈ ಬಫರ್ ಸ್ಟಾಕ್ ನ ಅಗತ್ಯ ಹೆಚ್ಚಾಗಿದೆ.

ಪ್ಯಾಕೇಜ್ ಮಾಡಿದ ಆಹಾರದ ಲೇಬೆಲ್ನಲ್ಲಿ ತಪ್ಪು ಮಾಹಿತಿ

ಪ್ಯಾಕೇಜ್ ಮಾಡಿದ ಆಹಾರದ ಲೇಬೆಲ್ನಲ್ಲಿ ತಪ್ಪು ಮಾಹಿತಿಯ ಎಚ್ಚರಿಕೆ ನೀಡಿದ ICMR ಎಚ್ಚರಿಕೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅಂದ್ರೆ ಐಸಿಎಂಆರ್ ಪ್ಯಾಕ್ ಮಾಡಿದ ಆಹಾರದ ಮೇಲಿನ ಹಚ್ಚಿದಂತಹ ಲೇಬೆಲ್ಗಳು ತಪ್ಪು ದಾರಿಗೆ ಎಳೆಯಬಹುದು ಎಂದು ಹೇಳಿದೆ ಗ್ರಾಹಕರು ಪ್ಯಾಕ್ ಮಾಡಿದ ಆಹಾರದ ಬಗ್ಗೆ ನೀಡಿರುವ ಮಾಹಿತಿಯನ್ನು ಎಚ್ಚರಿಕೆಯಿಂದ ಓದಬೇಕು.

ಇದರಿಂದ ಅವರಿಗೆ ತಿಳುವಳಿಕೆ ಸಿಗುತ್ತದೆ ಮತ್ತು ಆರೋಗ್ಯಕರ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಸಕ್ಕರೆ ಮುಕ್ತ ಎಂದು ಹೇಳಿಕೊಳ್ಳುವ ಅನೇಕ ಉತ್ಪನ್ನಗಳು ವಾಗಿ ಕೊಬ್ಬನ್ನ ಹೊಂದಿರಬಹುದು ಎಂದು ಐಸಿಎಂಆರ್ ಹೇಳುತ್ತದೆ. ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್ ನಲ್ಲಿ ಕೇವಲ 10% ಹಣ್ಣಿನ ರಸ ಇರುತ್ತದೆ.

ಇತ್ತೀಚಿಗೆ ಬಿಡುಗಡೆಯಾದ ಮಾರ್ಗ ಸೂಚಿಗಳಲ್ಲಿ ಪ್ಯಾಕ್ ಮಾಡಿದ ಆಹಾರದ ಮೇಲೆ ಬರೆದಿರುವ ಆರೋಗ್ಯಕ್ಕೆ ಸಂಬಂಧಿಸಿದ ಹೇಳಿಕೆಗಳನ್ನ ಗ್ರಾಹಕರ ಗಮನ ಸೆಳೆಯಲು ಮತ್ತು ಉತ್ಪನ್ನ ಆರೋಗ್ಯಕರವಾಗಿದೆ ಎಂದು ಹೇಳಲು ಮಾತ್ರ ವಿನ್ಯಾಸಗೊಳಿಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.

April ನಲ್ಲಿ ಗೋಲ್ಡ್ ಇಟಿಎಫ್ ನಲ್ಲಿ 396 ಕೋಟಿ ರೂಪಾಯಿ

ಗೋಲ್ಡ್ ಇಟಿಎಫ್ ಕಳೆದ ತಿಂಗಳು ಅಂದ್ರೆ ಏಪ್ರಿಲ್ ನಲ್ಲಿ 396 ಕೋಟಿ ರೂಪಾಯಿಗಳ ನೆಟ್ ವಿಥ್ಡ್ರಾ ಆಗಿದೆ ಹೂಡಿಕೆದಾರರು ಲಾಭ ಪಡೆಯುವ ನಿರ್ಧಾರಕ್ಕೆ ಇಳಿದಿದ್ದರಿಂದ ವಿಥ್ಡ್ರಾ ಹೆಚ್ಚಾಗಿದೆ ಈ ಹಿಂದೆ ಮಾರ್ಚ್ 2023 ರಲ್ಲಿ 266 ಕೋಟಿ ರೂಪಾಯಿ ವಿಥ್ ಡ್ರಾ ಮಾಡಿದ್ರು.

ಭಾರತದಲ್ಲಿನ ಮ್ಯೂಚುವಲ್ ಫಂಡ್ ಗಳ ಅಸೋಸಿಯೇಷನ್ ಅಂದ್ರೆ ಎಂ ಎಫ್ ಐ ಇದರ ಮಾಹಿತಿಯ ಪ್ರಕಾರ ಈ ವಿಥ್ಡ್ರಾ ಹೊರತಾಗಿಯೂ ಚಿನ್ನದ ರಿಸರ್ವ್ ಗಳ ನಿರ್ವಹಣೆಯ ಅಡಿಯಲ್ಲಿ AUM ಶೇಕಡಾ ಐದರಷ್ಟು ಏರಿಕೆಯಾಗಿದೆ ಏಪ್ರಿಲ್ ಅಂತ್ಯದ ವೇಳೆಗೆ 32,789 ಕೋಟಿ ರೂಪಾಯಿ ಆಗಿದೆ ಹಿಂದಿನ ತಿಂಗಳು ಇದು 31,224 ಕೋಟಿ ರೂಪಾಯಿ ಆಗಿತ್ತು ಬೆಲೆ ಏರಿಕೆಯು ಈಗ ಚಿನ್ನದ ಎಟಿಎಫ್ ಗಳ ಮೇಲೆಯೂ ಗೋಚರಿಸುತ್ತಿವೆ.

ಹೂಡಿಕೆದಾರರು ಪ್ರಸ್ತುತ ಚಿನ್ನದ ಬೆಲೆ ಹೆಚ್ಚಳದ ಲಾಭವನ್ನು ಪಡೆಯುವುದಕ್ಕೆ ನಿರ್ಧರಿಸಿದ್ದಾರೆ. ಹೀಗಾಗಿ ತುಂಬಾ ದಿನಗಳ ನಂತರ ಮೊದಲ ಬಾರಿಗೆ ಗೋಲ್ಡ್ ಎಟಿಎಫ್ ಗಳಲ್ಲಿ ಔಟ್ ಫ್ಲೋ ಕಂಡುಬಂದಿದೆ.

Credit Card ಬಾಕಿ ಪಾವತಿಗೆ ಹೆಚ್ಚುವರಿ ಮೂರು ದಿನ ಅವಕಾಶ

ಪಾರದರ್ಶಕತೆಗೆ ಮತ್ತು ಗ್ರಾಹಕರ ಹಿತಾಸಕ್ತಿ ವೀಕ್ಷಣೆಗೆ ಆರ್ ಬಿಐ ಕ್ರೆಡಿಟ್ ಕಾರ್ಡ್ ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನ ಮಾಡಿದೆ ದೊಡ್ಡ ಬದಲಾವಣೆ ಎಂದರೆ ಅದು ಕ್ರೆಡಿಟ್ ಕಾರ್ಡ್ ಬಾಕಿ ಪೇಮೆಂಟ್ ಮಾಡಲು ನಿಗದಿತ ದಿನಾಂಕದಿಂದ ಮೂರು ದಿನಗಳವರೆಗೆ ಹೆಚ್ಚುವರಿ ಸಮಯ ಸಿಗುತ್ತದೆ.

ನೀವು ಕೊನೆಯ ದಿನಾಂಕದ ನಂತರ ಮೂರು ದಿನಗಳಾದ ಮೇಲು ಕ್ರೆಡಿಟ್ ಕಾರ್ಡ್ ಡ್ಯೂ ಪೇಮೆಂಟ್ ಅನ್ನ ಮಾಡದೆ ಇದ್ದರೂ ನಿಮಗೆ ಹೆಚ್ಚುವರಿ ಶುಲ್ಕವನ್ನ ವಿಧಿಸಲಾಗುವುದಿಲ್ಲ ಇದಲ್ಲದೆ ಈಗ ಗ್ರಾಹಕರು ತಮಗೆ ಬೇಕಾದ ಕಾರ್ಡ್ ನೆಟ್ವರ್ಕ್ ಅನ್ನ ಆಯ್ಕೆ ಮಾಡಿಕೊಳ್ಳಬಹುದು ಕ್ರೆಡಿಟ್ ಕಾರ್ಡ್ ಅನ್ನ ಏಳು ದಿನಗಳಲ್ಲಿ ಕ್ಲೋಸ್ ಮಾಡಬಹುದು ಹೀಗೆ ಪರಿಷ್ಕೃತ ನಿಯಮಗಳ ಅಡಿಯಲ್ಲಿ ಕಾರ್ಡ್ ನೀಡುವ ಬ್ಯಾಂಕುಗಳು ರಿಕ್ವೆಸ್ಟ್ ಕಳಿಸಿದ 7 ಕೆಲಸದ ದಿನಗಳಲ್ಲಿ ಕ್ರೆಡಿಟ್ ಕಾರ್ಡನ್ನ ಕ್ಲೋಸ್ ಮಾಡಬೇಕಾಗುತ್ತೆ ಹಾಗೆ ಮಾಡದಿದ್ದರೆ ಕಾರ್ಡ್ ಹೊಂದಿರುವವರಿಗೆ ಲೇಟ್ ಫೀಸ್ ಆಗಿ ದಿನಕ್ಕೆ 500 ಪೇಮೆಂಟ್ ಮಾಡಲಾಗುತ್ತೆ. ನೀವು ರಿಕ್ವೆಸ್ಟ್ ಕಳಿಸಿದ ದಿನಾಂಕದಿಂದ ಕಾರ್ಡನ್ನ ಕ್ಲೋಸ್ ಮಾಡುವುದಕ್ಕೆ ಕಾರ್ಡ್ ಇಶ್ಯೂರ್ 10 ದಿನಗಳನ್ನು ತೆಗೆದುಕೊಂಡರೆ ಅದನ್ನು 3 ದಿನಗಳ ಕಾಲ ತಡ ಎಂದು ಪರಿಗಣಿಸಲಾಗುತ್ತದೆ.

ಇಷ್ಟು ವಿಳಂಬ ಮಾಡಿದರೆ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ರೂಪಾಯಿ 1,500 ಪರಿಹಾರವನ್ನ ಇಶ್ಯೂವರ್ ನೀಡುತ್ತದೆ.

ಟಾಟಾ ನೆಕ್ಸಾನ್ ಎಂಟ್ರಿ ಲೆವೆಲ್ ವೇರಿಯಂಟ್

ಟಾಟಾ ನೆಕ್ಸಾನ್ ಎಂಟ್ರಿ ಲೆವೆಲ್ ವೇರಿಯಂಟ್ ಭಾರತದಲ್ಲಿ ಬಿಡುಗಡೆ ಈಗ ಹೊಸ ಬೇಸ್ ವೇರಿಯಂಟ್ ಗೆ 7.99 ಲಕ್ಷ ಬೆಲೆ ಟಾಟಾ ಮೋಟಾರ್ಸ್ ತನ್ನ ಜನಪ್ರಿಯ UV ನೆಕ್ಸಾನ್ ನ ಹೊಸ ಎಂಟ್ರಿ ಲೆವೆಲ್ ವೇರಿಯಂಟ್ ಗಳನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ ಇದು ಪೆಟ್ರೋಲ್ ಮಾದರಿಗಳಲ್ಲಿ ಸ್ಮಾರ್ಟ್ ಓ ವೇರಿಯಂಟ್ ಗಳನ್ನ ಮತ್ತು ಡೀಸೆಲ್ ಮಾಡೆಲ್ ಗಳಲ್ಲಿ ಸ್ಮಾರ್ಟ್ ಪ್ಲಸ್ ಮತ್ತು ಸ್ಮಾರ್ಟ್ ಪ್ಲಸ್ ಎಸ್ ವೇರಿಯಂಟ್ ಗಳನ್ನ ಒಳಗೊಂಡಿದೆ.

ಕಂಪನಿಯ ಇತ್ತೀಚಿಗೆ ಬಿಡುಗಡೆಯಾದ Mahindra xu 3x ಗೆ ಸ್ಪರ್ಧಿಸುವುದಕ್ಕೆ Nexon ನ ಹೊಸ ವೇರಿಯಂಟ್ ಗಳನ್ನ ಪರಿಚಯಿಸಿದೆ ಹೊಸ ಸ್ಮಾರ್ಟ್ ಓ ಪೆಟ್ರೋಲ್ ಮಾಡೆಲ್ನ ಬೆಲೆ 7.99 ಲಕ್ಷ ರೂಪಾಯಿಗಳಾಗಿದೆ.

ಡೀಸೆಲ್ ಇಂಜಿನ್ ನ ಆಯ್ಕೆಯೊಂದಿಗೆ ಸ್ಮಾರ್ಟ್ ಪ್ಲಸ್ ನ ಬೆಲೆ 9.99 ಲಕ್ಷ ರೂಪಾಯಿ ಮತ್ತು ಸ್ಮಾರ್ಟ್ ಪ್ಲಸ್ ಎಸ್ ವೇರಿಯಂಟ್ ನ ಬೆಲೆ 1059 ಲಕ್ಷ ರೂಪಾಯಿ ಬೆಲೆ.

ಇವು ಎಕ್ಸ್ ಶೋರೂಮ್ ಬೆಲೆ ಆಗಿದೆ ಭಾರತದಲ್ಲಿ ಈ XUV ಕಾರು Kia Sonet, Maruti, Brezza, Hyundai venue, Mahindra XUV 3 ಎಕ್ಸ್ಓ Nissan ಮ್ಯಾಗ್ನೆಟ್ ಮತ್ತು ರೆನಾಲ್ಡ್ ಕೈಗರ್ ಜೊತೆ ಸ್ಪರ್ಧಿಸುತ್ತದೆ.

ಇದನ್ನೂ ಓದಿ: EPFO ಸೇವೆಗಳಲ್ಲಿ ಬದಲಾವಣೆ 2024!! ಎಲ್ಲಾ ಆನ್ಲೈನ್ UPI ಸೇವೆಗಳು ಒಂದೇ ಕಡೆ?

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment