ಎಲ್ಲರಿಗೂ ನಮಸ್ಕಾರ, ಶಿಕ್ಷಣ ಮದುವೆ ಮತ್ತು ಮನೆಯ ನಿರ್ಮಾಣಕ್ಕೆ ಸೆಲ್ಫ್ ಕ್ಲೇಮ್ ಸೌಲಭ್ಯ ಒದಗಿಸಿದ ಇಪಿಎಫ್ ಓ ಅಡ್ವಾನ್ಸ್ ಕ್ಲೇಮ್ ಮಿತಿ 1 ಲಕ್ಷಕ್ಕೆ ಏರಿಕೆ ಇಪಿಎಫ್ ಓ ತನ್ನ ಸದಸ್ಯರಿಗೆ ಮಹತ್ವದ ಅನುಕೂಲ ಒಂದನ್ನ ಒದಗಿಸಿದೆ ಇಪಿಎಫ್ ಓ ಸ್ಕೀಮ್ 1952 ರ ಅಡಿಯಲ್ಲಿ ಶಿಕ್ಷಣ ಮನೆ ಮತ್ತು ಮದುವೆಗೆ ಹಣ ತೆಗೆದುಕೊಳ್ಳುವ ನಿಯಮದಲ್ಲಿ ಬದಲಾವಣೆ ಮಾಡಿದೆ. ಆಟೋ ಕ್ಲೇಮ್ ಅಡ್ವಾನ್ಸ್ ಸೆಟಲ್ಮೆಂಟ್ ಅನ್ನ ಈಗ ಆಟೋ ಮೋಡ್ ನಲ್ಲಿ ಸೆಟಲ್ ಮಾಡಲಾಗುತ್ತೆ ಜೊತೆಗೆ ಈಗ 50,000 ನಿಂದ ಒಂದು ಲಕ್ಷ ರೂಪಾಯಿ ವರೆಗೆ ಹೆಚ್ಚಿಸಲಾಗಿದೆ.
ಅಡ್ವಾನ್ಸ್ ತೆಗೆದುಕೊಳ್ಳುವುದಕ್ಕೆ ಮಾಡಿದ ಕ್ಲೈಮ್ ಅನ್ನ IT ಸಿಸ್ಟಮ್ ಸೆಟಲ್ ಮಾಡದೆ ಇದ್ದರೆ ಇದನ್ನ ರಿಟರ್ನ್ ಅಥವಾ ರಿಜೆಕ್ಟ್ ಮಾಡುವುದಿಲ್ಲ ಬದಲಿಗೆ ಕ್ಲೈಮ್ ಅನ್ನ ಎರಡನೆಯ ಹಂತದಲ್ಲಿ ಪರಿಶೀಲನೆ ಮಾಡಿ ಅಪ್ರೂವ್ ಮಾಡಲಾಗುತ್ತದೆ EPFO ಓ ನಿಂದ ಆಟೋ ಕ್ಲೈಮ್ ಮಾಡುವವರಿಗೆ ಮನೆ ಮದುವೆ ಅಥವಾ ಶಿಕ್ಷಣದ ಉದ್ದೇಶಕ್ಕೆ ಅಲ್ಪಾವಧಿಯಲ್ಲಿ ಹಣ ಒದಗಿಸಲಾಗುತ್ತದೆ. ಈಗ ಅಡ್ವಾನ್ಸ್ ಕ್ಲೈಮ್ ಸೆಟಲ್ಮೆಂಟ್ ಕೇವಲ ಮೂರರಿಂದ ನಾಲ್ಕು ದಿನಗಳಲ್ಲಿ ಮುಗಿಯುತ್ತದೆ. ಮೊದಲು ಇದಕ್ಕೆ ಸುಮಾರು 10 ದಿನ ಬೇಕಾಗುತ್ತಿತ್ತು.
ಬ್ರಾಂಡೆಡ್ ಮಸಾಲೆಗಳನ್ನ ಸ್ಟೋರ್ ಮಾಡದಂತೆ ವಿತರಕರಿಗೆ ಅಸೋಸಿಯೇಷನ್ ನಿಂದ ಸೂಚನೆ:
ಎಫ್ ಎಂ ಸಿಜಿ ವಿತರಕರ ಸಂಘವು ಬ್ರಾಂಡೆಡ್ ಮಸಾಲೆಗಳನ್ನ ಸಂಗ್ರಹಿಸದಂತೆ ವ್ಯಾಪಾರಿಗಳಿಗೆ ಸಲಹೆ ನೀಡಿದೆ ಭವಿಷ್ಯದಲ್ಲಿ ಅವುಗಳ ಮಾರಾಟದಲ್ಲಿ ಕುಸಿತ ಉಂಟಾಗಬಹುದು ಅನ್ನೋದು ಈ ಎಚ್ಚರಿಕೆಯ ಹಿಂದಿನ ಉದ್ದೇಶವಾಗಿದೆ ಆಲ್ ಇಂಡಿಯಾ ಕನ್ಸ್ಯೂಮರ್ ಪ್ರಾಡಕ್ಟ್ ಡಿಸ್ಟ್ರಿಬ್ಯೂಟರ್ಸ್ ಫೆಡರೇಶನ್ ಎಐ ಸಿಪಿ ಡಿಎಫ್ ಇದರ ಸೂಚನೆಯ ಪ್ರಕಾರ ಈ ಮಸಾಲೆಗಳನ್ನ ಎಫ್ ಎಸ್ ಎಸ್ ಎಐ ಸ್ಕ್ರೂಟಿನಿ ಮಾಡುತ್ತಿದೆ.
ಈ ಬ್ರಾಂಡ್ ಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯು ಕೂಡ ಇದೆ ಇದರಿಂದಾಗಿ ಈ ಮಸಾಲಾ ಬ್ರಾಂಡ್ ಗಳ ಮಾರಾಟದಲ್ಲಿ ಭಾರಿ ಕುಸಿತ ಉಂಟಾಗಬಹುದು ಹೀಗಾಗಿ ವಿತರಕರು ಎಚ್ಚರಿಕೆಯಿಂದ ವರ್ತಿಸಿ ಸ್ಟೋರ್ ಮಾಡಬೇಡಿ ನಿಗದಿತ ಮಿತಿಗಿಂತ ಹೆಚ್ಚು ಎಥಿಲಿನ್ ಆಕ್ಸೈಡ್ ಅನ್ನ ಸೇರಿಸಲಾಗಿದೆ ಎಂಬ ಆರೋಪ ಮಾಡಲಾಗಿರುವುದರಿಂದ ಈ ಮಸಾಲೆಯ ಬ್ರಾಂಡ್ ಗಳಿಗೆ ಸಮಸ್ಯೆಯಾಗಿದೆ.
ಚಿಲ್ಲರೆ ಹಣದುಬ್ಬರ ದರ ಏಪ್ರಿಲ್ ನಲ್ಲಿ ಶೇಕಡಾ 483 ಕ್ಕೆ ಕುಸಿತ:
11 ತಿಂಗಳಲ್ಲಿ ಅತ್ಯಂತ ಕಡಿಮೆ ಚಿಲ್ಲರೆ ಹಣದುಬ್ಬರ ಏಪ್ರಿಲ್ ನಲ್ಲಿ ಶೇಕಡಾ 4.83 ಕ್ಕೆ ಇಳಿದಿದೆ ಇದು 11 ತಿಂಗಳಲ್ಲಿಯೇ ಅತ್ಯಂತ ಕಡಿಮೆ ಹಣದುಬ್ಬರ ಜೂನ್ 2023 ರಲ್ಲಿ ಶೇಕಡಾ 4.81 ರಷ್ಟು ಇತ್ತು ಆದರೆ ಏಪ್ರಿಲ್ ತಿಂಗಳಿನಲ್ಲಿ ಆಹಾರ ಪದಾರ್ಥಗಳು ದುಬಾರಿಯಾಗಿವೆ ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್ ಸೋಮವಾರ ಮೇ 13 ರಂದು ಈ ಅಂಕಿ ಅಂಶಗಳನ್ನ ಬಿಡುಗಡೆ ಮಾಡಿದೆ ಆದರೆ ಒಂದು ತಿಂಗಳ ಹಿಂದೆ ಅಂದ್ರೆ ಮಾರ್ಚ್ 2024 ರಲ್ಲಿ ಹಣದುಬ್ಬರ ದರ 4.85% ಆಗಿತ್ತು ಆಹಾರ ಹಣದುಬ್ಬರ ದರ ಶೇಕಡಾ 8.52 ರಿಂದ ಶೇಕಡ 8.78 ಏರಿಕೆಯಾಗಿದೆ ಗ್ರಾಮೀಣ ಹಣದುಬ್ಬರ ದರ 5.45% ಇಂದ 5.43% ಗೆ ಇಳಿದಿದೆ ಮತ್ತು ನಗರ ಹಣದುಬ್ಬರ ದರ 4.14% ಇಂದ 4.11% ಗೆ ಇಳಿದಿದೆ.
ಎಲ್ಲಾ ಆನ್ಲೈನ್ ಸೇವೆಗಳು ಒಂದೇ ಕಡೆ
ಆಧಾರ್ ಯುಪಿಐ ಸೇರಿದಂತೆ ಎಲ್ಲಾ ಆನ್ಲೈನ್ ಸೇವೆಗಳು ಒಂದೇ ಕಡೆ ಸರ್ಕಾರದ ಹೊಸ ಯೋಜನೆ ಎಲ್ಲಕ್ಕೂ ಒಂದೇ ಪೋರ್ಟಲ್ ಆಧಾರ್ ಯುಪಿಐ ಮತ್ತು ಓ ಎನ್ ಡಿಸಿ ಅಂತಹ ಎಲ್ಲ ಡಿಜಿಟಲ್ ಸೇವೆಗಳನ್ನ ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡುವುದಕ್ಕೆ ಏಕೀಕೃತ ಪೋರ್ಟಲ್ ಅನ್ನ ಪ್ರಾರಂಭಿಸಲು ಸರ್ಕಾರ ಯೋಜಿಸುತ್ತಿದೆ.
ಈ ಪೋರ್ಟಲ್ ಅನ್ನ ಪ್ರಾರಂಭಿಸುವುದು ಮತ್ತು ಈ ಪ್ಲಾಟ್ಫಾರ್ಮ್ ನಲ್ಲಿ ಎಲ್ಲ ಸೇವೆಗಳನ್ನು ತರುವ ಜವಾಬ್ದಾರಿಯನ್ನ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ನೀಡಲಾಗುತ್ತೆ. ಈ ಯೋಜನೆಯ ಮೂಲಕ ಈಜಿ ಅಪ್ ಡೂಯಿಂಗ್ Business ಸರ್ಕಾರದ ಗುರಿಯಾಗಿದೆ ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಅಪ್ಲಿಕೇಶನ್ಗಳು ಮತ್ತು ಪೋರ್ಟಲ್ಗಳು ಜಾರಿಯಲ್ಲಿವೆ, ಹೀಗಾಗಿ ಸಾಮಾನ್ಯ ಬಳಕೆದಾರರು ಸರ್ಕಾರದ ಯೋಜನೆಗಳ ಪ್ರಯೋಜನೆಗಳನ್ನು ಪಡೆಯುವುದಕ್ಕೆ ವಿವಿಧ ಅಪ್ಲಿಕೇಶನ್ಗಳು ಮತ್ತು ಪೋರ್ಟಲ್ ಗಳಿಗೆ ಹೋಗಬೇಕಾಗಿದೆ.
ಅದರಲ್ಲೂ ಹಳ್ಳಿಗಳಲ್ಲಿ ಪರಿಸ್ಥಿತಿ ಹದಗಿಟ್ಟಿದ್ದು ಡಿಜಿಟಲ್ ಸೌಲಭ್ಯಕ್ಕಾಗಿ ಅಲ್ಲಿನ ಜನ ಕಂಪ್ಯೂಟರ್ ಸೆಂಟರ್ ಗಳ ಮೊರೆ ಹೋಗಬೇಕಾಗಿದೆ ಇದಕ್ಕಾಗಿ ಹಣ ಕೊಡಬೇಕಾಗಿದೆ ಹೀಗಾಗಿ ಎಲ್ಲ ಸರ್ಕಾರಿ ಡಿಜಿಟಲ್ ಸೇವೆಗಳು ಒಂದೇ ಸ್ಥಳದಲ್ಲಿ ಲಭ್ಯವಿದ್ದರೆ ಜನರಿಗೆ ಅನುಕೂಲವಾಗುತ್ತದೆ ಇದರಿಂದ ಯಾರು ಬೇಕಾದರೂ ಆನ್ಲೈನ್ ನಲ್ಲಿ ಸರ್ಕಾರಿ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದು.
UP ಸರ್ಕಾರದಿಂದ ವಿದ್ಯುತ್ ಗ್ರಾಹಕರಿಗೆ ರಿಟರ್ನ್ ಗಿಫ್ಟ್:
ಸೆಕ್ಯೂರಿಟಿ ಡೆಪಾಸಿಟ್ ನ ಇಂಟರೆಸ್ಟ್ ಗ್ರಾಹಕರಿಗೆ ಉತ್ತರಪ್ರದೇಶದ 3.30 ಕೋಟಿ ವಿದ್ಯುತ್ ಗ್ರಾಹಕರಿಗೆ ಒಂದು ಒಳ್ಳೆಯ ಸುದ್ದಿ ಇದೆ 2023-24ನೇ ಸಾಲಿನಲ್ಲಿ ಎಲೆಕ್ಟ್ರಿಸಿಟಿ ಕನ್ಸ್ಯೂಮರ್ ಗಳು ಡೆಪಾಸಿಟ್ ಮಾಡಿದ ಸೆಕ್ಯೂರಿಟಿ ಅಮೌಂಟ್ ಗೆ ಇಂಟರೆಸ್ಟ್ ಕೊಡಲಾಗುತ್ತದೆ 6.75% ದರದಲ್ಲಿ ಬಡ್ಡಿ ಕೊಡಲಾಗುತ್ತದೆ.
ಬಡ್ಡಿ ಮೊತ್ತವನ್ನ ಗ್ರಾಹಕರ ವಿದ್ಯುತ್ ಬಿಲ್ ಗೆ ಸೇರಿಸಲಾಗುತ್ತದೆ ಕಂಪನಿಗಳು ಮೇ ಮತ್ತು ಜೂನ್ ತಿಂಗಳ ಬಿಲ್ಗಳ ಬಡ್ಡಿ ಮೊತ್ತವನ್ನು ಕಟ್ ಮಾಡಿಕೊಂಡು ಉಳಿದ ಮೊತ್ತಕ್ಕೆ ಬಿಲ್ ಕೊಡುತ್ತವೆ ವಿದ್ಯುತ್ ಕಾಯ್ದೆ 2003ರ ನಿಬಂಧನೆಗಳ ಪ್ರಕಾರ ಗ್ರಾಹಕರು ಪ್ರತಿವರ್ಷ ಡೆಪಾಸಿಟ್ ಮಾಡುವ ಡೆಪಾಸಿಟ್ ಅಮೌಂಟ್ ಗೆ ಬಡ್ಡಿಯನ್ನ ಕೊಡಬೇಕಾಗುತ್ತೆ ಪವರ್ ಕಾರ್ಪೊರೇಷನ್ ಆಡಳಿತ ಮಂಡಳಿ ಈ ಆದೇಶವನ್ನ ಹೊರಡಿಸಿದೆ ಗ್ರಾಹಕರ ಡೆಪಾಸಿಟ್ ಅಮೌಂಟ್ ನಿಂದ ವಿದ್ಯುತ್ ಕಂಪನಿಗಳಿಗೆ 4500 ಕೋಟಿ ರೂಪಾಯಿ ಬಂದಿದೆ ಸದ್ಯ ಇದರ ಮೇಲೆ ಸುಮಾರು 303 ಕೋಟಿ ರೂಪಾಯಿ ಬಡ್ಡಿ ಬರುತ್ತಿದೆ ಇದನ್ನ ವಿದ್ಯುತ್ ಗ್ರಾಹಕರಿಗೆ ಒದಗಿಸಲಾಗುತ್ತದೆ.
ಇದನ್ನೂ ಓದಿ: Credit Card Close ಮಾಡಿದರೆ ಹೇಗೆ ನಿಮಗೆ ಅದು ಪರಿಣಾಮ ಬೀಳುತ್ತದೆ?





