Ration Card: ಈ ಜಿಲ್ಲೆಯಲ್ಲಿ 4,000 BPL ಕಾರ್ಡ್ ಗಳು APL ಕಾರ್ಡ್ ಗೆ ಬದಲಾವಣೆ!! ಸಾಕಷ್ಟು ಕಾರ್ಡ್ ಗಳು Transfer

November 19, 2024 9:58 AM
ಈ ಜಿಲ್ಲೆಯಲ್ಲಿ 4,000 BPL ಕಾರ್ಡ್ ಗಳು APL ಕಾರ್ಡ್ ಗೆ ಬದಲಾವಣೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಹಾಸನ ಜಿಲ್ಲೆಯ ಜನರಿಗೆ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಹೊಸದೊಂದು ಶಾಕಿಂಗ್ ಅಪ್ಡೇಟ್ ಬಿಡುಗಡೆಯಾಗಿದೆ. ಕರ್ನಾಟಕ ರಾಜ್ಯದ ಎಲ್ಲಾ ಕಡೆ ಸಾಕಷ್ಟು ಬಿಪಿಎಲ್ ಕಾರ್ಡ್ಗಳನ್ನು APL ಕಾರ್ಡ್ ಗೆ ಟ್ರಾನ್ಸ್ಫರ್ (Transfer) ಮಾಡಲಾಗುತ್ತಿದೆ.

ಇದೀಗ ಹಾಸನ ಜಿಲ್ಲೆಯಲ್ಲಿ ಕೂಡ ಬಹುದೊಡ್ಡ ಮೊತ್ತದಲ್ಲಿ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ ಗೆ ಬದಲಾವಣೆ ಮಾಡಲಾಗಿದೆ. ಹಾಗಾದರೆ ಈ ರೀತಿ ಬಿಪಿಎಲ್ ಕಾರ್ಡ್ಗಳನ್ನು ಏಕೆ? APL ಕಾರ್ಡಿಗೆ ಚೇಂಜ್ ಮಾಡಲಾಗುತ್ತದೆ. ನಿಮ್ಮ ಕಾರ್ಡ್ APL ಕಾರ್ಡ್ ಗೆ ಬದಲಾವಣೆ ಆಗಬಾರದು ಎಂದರೆ ಏನು ಮಾಡಬೇಕು? ಇದರ ಬಗ್ಗೆ ವಿವರವಾಗಿ ಈ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಪೂರ್ತಿಯಾಗಿ ಓದಿ. 

ಹಾಸನದಲ್ಲಿ 4,000 BPL ಕಾರ್ಡ್ ಗಳು APL ಕಾರ್ಡ್ ಗೆ ಬದಲಾವಣೆ.:

ಸ್ನೇಹಿತರೆ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ಸುಮಾರು ನಾಲ್ಕು ಸಾವಿರ ಬಿಪಿಎಲ್ ಕಾರ್ಡುಗಳನ್ನು ಆಹಾರ ಇಲಾಖೆಯು APL ಕಾರ್ಡ್ ಗೆ ಬದಲಾವಣೆ ಮಾಡಿದೆ. ಹಾಸನ ಜಿಲ್ಲೆಯಲ್ಲಿ 4,40,000 ಪಡಿತರ ಚೀಟಿಗಳು ಇವೆ. ಇದರಲ್ಲಿ ಸುಮಾರು 4 ಸಾವಿರ ಪಡಿತರ ಚೀಟಿಗಳನ್ನು APL ಕಾರ್ಡಿಗೆ ಬದಲಾವಣೆ ಮಾಡಲಾಗಿದೆ.

ಸುಮಾರು 102 ಸರ್ಕಾರಿ ನೌಕರರ ಪಡಿತರ ಚೀಟಿಯನ್ನು ಎಪಿಎಲ್ ಗೆ ಬದಲಾವಣೆ ಮಾಡಲಾಗಿದೆ. ಹಾಸನ ಜಿಲ್ಲೆಯ  ಟ್ಯಾಕ್ಸ್ ಪಾವತಿಸುತ್ತಿರುವವರ 3,408 ಜನರ ಬಿಪಿಎಲ್ ಕಾರ್ಡ್ಗಳನ್ನು APL ಕಾರ್ಡಿಗೆ ಟ್ರಾನ್ಸ್ಫರ್ ಮಾಡಿದ್ದಾರೆ. ಇರುವ ಅಂತ್ಯೋದಯ ಕಾರ್ಡುಗಳು 23,068.

ಆಹಾರ ಇಲಾಖೆಯ ಜಂಟಿ ನಿರ್ದೇಶಕ ಅರುಣ್ ಕುಮಾರ್ ಸ್ವತಃ ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.   

Tax ಪಾವತಿ ಮಾಡುವುದೇ ಬೇರೆ ಇನ್ಕಮ್ ಟ್ಯಾಕ್ಸ್ ಫೈಲ್ ಮಾಡುವುದೇ ಬೇರೆ:

ಆಹಾರ ಇಲಾಖೆಯು ಟ್ಯಾಕ್ಸ್ ಪಾವತಿ ಮಾಡುವವರನ್ನು ಕೂಡ ಪತ್ತೆ ಮಾಡಿ ಅವರ ಬಿಪಿಎಲ್ ಕಾರ್ಡನ್ನು APL ಕಾರ್ಡಿಗೆ ಬದಲಾಯಿಸಿದ್ದಾರೆ. ಇದಕ್ಕೆ ಜನರು ಟ್ಯಾಕ್ಸ್ ಪಾವತಿ ಮಾಡುವುದೇ ಬೇರೆ ಹಾಗೂ ಇನ್ಕಮ್ ಟ್ಯಾಕ್ಸ್ ಫೈಲ್ ಮಾಡುವುದೇ ಬೇರೆ ಎಂದು ಹೇಳಿ ಜನರು ಆಕ್ರೋಶ ಪಡುತ್ತಿದ್ದಾರೆ. 

ಜನರು ಈ ರೀತಿಯ ಆಹಾರ ಇಲಾಖೆಯು ಎಲ್ಲಾ ಕಾರ್ಡುಗಳನ್ನು APL ಕಾರ್ಡಿಗೆ ಬದಲಾಯಿಸಿದರೆ ಬಡವರು ಏನು ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದರ ಜೊತೆ ಕೆಲವರಿಗೆ ಬೆರಳು ಪ್ರಿಂಟ್ ಸರಿಯಾಗಿ ಬರುತ್ತಿಲ್ಲ ಎಂದು ಸುಮಾರು ಎರಡು ತಿಂಗಳಿನಿಂದ ರೇಷನ್ ಕೊಡದೆ ಹಿಂತಿರುಗಿ ಕಳಿಸಿದ್ದಾರೆ. ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಇದನ್ನೂ ಓದಿ: BPL Card Shift ಮಾಡಲಾಗುತ್ತದೆ!! ಆದರೆ ರದ್ದು ಮಾಡುವುದಿಲ್ಲ

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment