ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕ ರಾಜ್ಯದ BPL ಹಾಗೂ APL ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಇದೀಗ ಹೊಸ ಶಾಕಿಂಗ್ ನ್ಯೂಸ್ ಬಂದಿದೆ. KH ಮುನಿಯಪ್ಪನವರು ಕರ್ನಾಟಕದ ಜನರಿಗೆ ಒಂದು ದೊಡ್ಡ ಸ್ಟೇಟ್ಮೆಂಟ್ ಅನ್ನು ನೀಡಿದ್ದಾರೆ.
ಈ ಹಿಂದೆ ಆಹಾರ ಇಲಾಖೆಯು ಸಾಕಷ್ಟು ಬಿಪಿಎಲ್ ಕಾರ್ಡ್ ಮತ್ತು ಎಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವುದಾಗಿ ಹೇಳಿದ್ದು. ಎಷ್ಟೋ ನಕಲಿ ದಾಖಲಾತಿಗಳನ್ನು ನೀಡಿ ಸಾಕಷ್ಟು ಜನರು BPL ಹಾಗೂ APL ಕಾರ್ಡನ್ನು ಹೊಂದಿದ್ದಾರೆ ಇವುಗಳನ್ನು ರದ್ದು ಮಾಡುತ್ತೇವೆ ಎಂದು ಹೇಳಿದ್ದು. ಇದೀಗ ಕೆ ಎಸ್ ಮುನಿಯಪ್ಪನವರು ಹೊಸದೊಂದು ಹೇಳಿಕೆಯನ್ನು ನೀಡಿದ್ದಾರೆ. ಇದರ ಬಗ್ಗೆ ವಿವರವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.
ಯಾವುದೇ BPL ಅಥವಾ APL ಕಾರ್ಡ್ Ban ಮಾಡುತ್ತಿಲ್ಲ
ಇಷ್ಟು ದಿನಗಳವರೆಗೆ ಕರ್ನಾಟಕದಲ್ಲಿ ಸಾಕಷ್ಟು ನಕಲಿ ದಾಖಲಾತಿಗಳು ಹೊಂದಿರುವ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಗಳು ಇದ್ದಾವೆ. ಈ ರೀತಿಯ ಕಾರ್ಡ್ ಅನ್ನು ಹೊಂದಿರುವವರನ್ನು ನಾವು ಆದಷ್ಟು ಬೇಗ ಪತ್ತೆ ಮಾಡಿ ಅವರ ಕಾರ್ಡುಗಳನ್ನು ರದ್ದು ಮಾಡುತ್ತೇವೆ ಎಂದು ಆಹಾರ ಇಲಾಖೆ ಹೇಳುತ್ತಿತ್ತು.
ಆದರೆ ಈಗ ಕರ್ನಾಟಕದಲ್ಲಿ ಯಾವುದೇ ಕಾರ್ಡ್ ಅಮಾನತು ನಡೆಯುವುದಿಲ್ಲ.
ಕರ್ನಾಟಕದಲ್ಲಿ BPL ಆಗು APL ಕಾರ್ಡ್ ರದ್ದು ಮಾಡುತ್ತಿಲ್ಲ:
ಈ ಹಿಂದೆ BPL ಕಾರ್ಡ್ ಗಳು ಮತ್ತು APL ಕಾರ್ಡ್ಗಳನ್ನು ರದ್ದು ಮಾಡುವ ವಿಷಯವಾಗಿ ಶಾಕಿಂಗ್ Statement ನೀಡಿದರು. ಕರ್ನಾಟಕದಲ್ಲಿ ಯಾವುದೇ ಬಿಪಿಎಲ್ ಆಗು ಎಪಿಎಲ್ ಕಾರ್ಡ್ ಗಳು ರದ್ದಾಗುವುದಿಲ್ಲ, ಸುಮ್ಮನೆ ರಾಜಕೀಯವಾಗಿ ಮಾತನಾಡುತ್ತಿದ್ದಾರೆ ಅಷ್ಟೇ ಎಂದು ಕೆ ಎಚ್ ಮುನಿಯಪ್ಪನವರು ಹೇಳಿದ್ದಾರೆ.
ಕೆ ಎಚ್ ಮುನಿಯಪ್ಪನವರು ಹೇಳಿರುವ ಪ್ರಕಾರ ದಕ್ಷಿಣ ಭಾರತದ ರಾಜ್ಯದಲ್ಲಿ 80% ನಷ್ಟು ಬಿಪಿಎಲ್ ದಾರಾರು ಇದ್ದಾರೆ. ಇದರಲ್ಲಿ ಕೆಲವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರೆ ಇಲ್ಲದಿರುವವರು ಇದ್ದಾರೆ ಅಂತವರನ್ನು ಪತ್ತೆ ಮಾಡಿ APL ಕಾರ್ಡ್ ಗೆ ಶಿಫ್ಟ್ ಮಾಡುತ್ತೇವೆ ಹಾಗೂ ಯಾವುದೇ ಕಾರ್ಡ್ಗಳನ್ನು ರದ್ದು ಮಾಡುವುದಿಲ್ಲ. ಇಂದು ದೇವನಹಳ್ಳಿಯಲ್ಲಿ ಆಹಾರ ಸಚಿವರಾಗಿರುವ ಕೆಎಚ್ ಮುನಿಯಪ್ಪನವರು ಈ ಹೇಳಿಕೆಯನ್ನು ನೀಡಿದ್ದಾರೆ.
BPL ಕಾರ್ಡಿಗೆ ಮಾನದಂಡವೇನು?
- ಸರ್ಕಾರಿ ಅಥವಾ ಅರೆ ಸರ್ಕಾರಿ ಉದ್ಯೋಗದಲ್ಲಿ ಇರುವವರು ಅರ್ಹರಲ್ಲ.
- ಕುಟುಂಬದ ವಾರ್ಷಿಕ ಆದಾಯ 1.2 ಲಕ್ಷ ಮೀರಿರಬಾರದು.
- ವೈಟ್ ಬೋರ್ಡಿನ ನಾಲ್ಕು ಚಕ್ರದ ಸ್ವಂತ ವಾಹನ ಇರಬಾರದು.
- ಜಿಎಸ್‌ಟಿ ಪಾವತಿದಾರರಾಗಿರಬಾರದು ಅಥವಾ ಐಟಿ ರಿಟರ್ನ್ ಪಡೆಯುತ್ತಿರಬಾರದು.
ಇದನ್ನೂ ಓದಿ: ರೇಷನ್ ಕಾರ್ಡ್ ರದ್ದಾಗಿರುವ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಸ್ಪಷ್ಟನೆ!!





