8 ರೂಲ್ಸ್ ಫಾಲೋ ಮಾಡಿದರೆ BPL ಕಾರ್ಡ್ ರದ್ದು ಆಗುವುದಿಲ್ಲ.! 30 ಲಕ್ಷ ರೇಷನ್ ಕಾರ್ಡ್ ಕ್ಯಾನ್ಸಲ್!!

November 26, 2024 10:39 AM
8 ರೂಲ್ಸ್ ಫಾಲೋ ಮಾಡಿದರೆ BPL ಕಾರ್ಡ್ ರದ್ದು ಆಗುವುದಿಲ್ಲ.! 30 ಲಕ್ಷ ರೇಷನ್ ಕಾರ್ಡ್ ಕ್ಯಾನ್ಸಲ್!!

ಎಲ್ಲರಿಗೂ ನಮಸ್ಕಾರ, BPL ಕಾರ್ಡ್ ದಾರರಿಗೆ ಶಾಕ್! 30 ಲಕ್ಷ ರೇಷನ್ ಕಾರ್ಡ್ ಕ್ಯಾನ್ಸಲ್ ಬಿಪಿಎಲ್ ಕಾರ್ಡ್ ಏನಿದು ನಮ್ಮ ರಾಜ್ಯದಲ್ಲಿ ಸರ್ಕಾರದ ಯೋಜನೆಗಳ ತಿಜೋರಿಯನ್ನು ಓಪನ್ ಮಾಡಿ ಬೆನಿಫಿಟ್ ತಗೊಳೋಕೆ ಜನರಿಗೆ ಬೀಗದ ಕೈತರ ಇದು ಇದಿದ್ರೆ ಸಿಗುತ್ತೆ. ಅನ್ನೋ ತರದಲ್ಲಿ ಇಂತಹ BPL ಕಾರ್ಡ್ಗಳ ವಿಚಾರದಲ್ಲಿ ರಾಜ್ಯ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ ಬರೋಬರಿ 30 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನ ರದ್ದು ಮಾಡೋಕೆ ಮುಂದಾಗಿದೆ ಬಹಳ ಜನರ ಬಿಪಿಎಲ್ ಕಾರ್ಡ್ಗಳು ಆಲ್ರೆಡಿ ದಿಡೀರ್ ಅಂತ ಕ್ಯಾನ್ಸಲ್ ಆಗ್ತಿವೆ.

ಈಗ ಆಲ್ರೆಡಿ 4 ಲಕ್ಷ ಕಾರ್ಡ್ಗಳು ರದ್ದಾಗಿವೆ. ಕೆಲವೊಬ್ಬರಿಗೆ ಅಕ್ರಮ ಬಿಪಿಎಲ್ ಕಾರ್ಡ್ ಇಟ್ಕೊಂಡಿದ್ದಾರೆ ಅಂತ ಲಕ್ಷ ಲಕ್ಷ ರೂಪಾಯಿ ದಂಡ ಕಟ್ಟಿ ಅಂತ ನೋಟೀಸ್ ಬರ್ತಾ ಇದೆ ಇದು ರಾಜ್ಯದಲ್ಲಿ ಭಾರಿ ಕೋಲಾಹಲಕ್ಕೆ ಕಾರಣ ಆಗಿದೆ ಹಾಗಿದ್ರೆ ಸಿದ್ದು ಸರ್ಕಾರ ಈ BPL ಮೆಗಾ ಆಪರೇಷನ್ ಗೆ ಕೈ ಹಾಕಿರೋದು ಯಾಕೆ? BPL ಪರಿಷ್ಕರಣೆ ಒಂದೇ ಉದ್ದೇಶನಾ ಅಥವಾ ಇದರ ಹಿಂದೆ ರಾಜಕೀಯ ಲೆಕ್ಕಾಚಾರ ಏನಾದರೂ ಅಡಗಿದ್ಯಾ ಈಗ ಯಾರ್ಯಾರ ಕಾರ್ಡ್ ರದ್ದಾಗುತ್ತೆ ಅಸಲಿಗೆ ಬಿಪಿಎಲ್ ಕಾರ್ಡ್ ಯಾರಿಗೆ ಸಿಗಬೇಕು BPL ಕಾರ್ಡ್ ಗಿರೋ ಮಾನದಂಡಗಳು ಯಾವುದು ಅನ್ನೋದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಜನರ BPL Card ಯಾಕೆ Ban

BPL ಅಂದ್ರೆ ಬಿಲೋ ಪಾವರ್ಟಿ ಲೈನ್ ಬಡತನ ರೇಖೆಗಿಂತ ಕೆಳಗಿರುವರು ಅಂತ ಅರ್ಥ ಬಡವರನ್ನ ಗುರುತಿಸೋಕೆ ಭಾರತದಲ್ಲಿ ಬೆಂಚ್ ಮಾರ್ಕ್ ಇಂಥವರಿಗೆ ಸರ್ಕಾರಿ ಯೋಜನೆಗಳನ್ನ ತಲುಪಿಸೋಕೆ ರಾಜ್ಯ ಸರ್ಕಾರಗಳು ಬಿಪಿಎಲ್ ಕಾರ್ಡ್ಗಳನ್ನ ಕೊಡುತ್ತವೆ ಸಾಮಾನ್ಯವಾಗಿ ಆಹಾರ ಇಲಾಖೆ ಈ ಕಾರ್ಡ್ಗಳನ್ನ ವಿತರಣೆ ಮಾಡುತ್ತೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಮಾನದಂಡ ಇದೆ ಅದೇ ರೀತಿ ಕರ್ನಾಟಕದಲ್ಲೂ ಕೂಡ ಸುಮಾರು ಒಂದು ಕಾಲು ಕೋಟಿ 12.5 ಕ್ರೋರ್ ಬಿಪಿಎಲ್ ಕಾರ್ಡ್ ಗಳಿವೆ ಈಗ ಅದರಲ್ಲಿ ಸುಮಾರು 22.62 ಲಕ್ಷ ಕಾರ್ಡ್ಗಳನ್ನ ಕ್ಯಾನ್ಸಲ್ ಮಾಡೋಕೆ ರಾಜ್ಯ ಸರ್ಕಾರ ಮುಂದಾಗಿದೆ.

ಕೆಲ ಸರ್ಕಾರಿ ಮೂಲಗಳ ಪ್ರಕಾರ ಈ ಸಂಖ್ಯೆ 30 ಲಕ್ಷ ಕೂಡ ದಾಟಬಹುದು. ಈ ಸಂಬಂಧ ಕಳೆದ ಜೂನ್ ನಲ್ಲಿ ಸರ್ಕಾರ ಮಾಜಿ ಸಚಿವ ಕಾಂಗ್ರೆಸ್ ನಾಯಕ ಆರ್ ವಿ ದೇಶ್ಪಾಂಡೆ ನೇತೃತ್ವದಲ್ಲಿ ಒಂದು ಪರಿಶೀಲನಾ ಸಮಿತಿಯನ್ನು ಕೂಡ ರಚನೆ ಮಾಡಿತ್ತು ಈ ಸಮಿತಿ ಇನ್ನು ತನ್ನ ವರದಿಯನ್ನ ಕೊಟ್ಟಿಲ್ಲ ಆದರೆ ಕೆಲ ಉಪಸಮಿತಿಗಳನ್ನ ರಚಿಸಿತ್ತು ಆದರೆ ಸಮಿತಿ ವರದಿ ಬರೋಕು ಮೊದಲೇ ಬಿಪಿಎಲ್ ಕಾರ್ಡ್ ನ ಡಿಲೀಟ್ ಮಾಡೋ ಪ್ರಾಸೆಸ್ ಶುರುವಾಗಿ ಹೋಗಿದೆ.

ಯಾರ್ಯಾರ BPL ಕಾರ್ಡ್ಗಳು ರದ್ದಾಗಲಿವೆ

1. ಕರ್ನಾಟಕದಲ್ಲಿ ಆಹಾರ ಇಲಾಖೆ 2017 ರಲ್ಲಿ ವೃತ್ತಿ, ಆದಾಯ, ವಾಹನ, ಭೂಮಿ, ಆಧಾರದ ಮೇಲೆ ಕ್ರೈಟೀರಿಯಾ ಸೆಟ್ ಮಾಡಿದೆ ಅದರಂತೆ ಬಿಪಿಎಲ್ ಕಾರ್ಡ್ ಪಡಿಬೇಕು ಅಂತ ಇರೋರು ಸರ್ಕಾರಿ ಅರೆ ಸರ್ಕಾರಿ ನೌಕರರು ಆಗಿರೋ ಹಾಗಿಲ್ಲ ರಾಜ್ಯ ಕೇಂದ್ರ ಎಲ್ಲೂ ಸರ್ಕಾರಿ ಜಾಬ್ ಅಲ್ಲಿ ಇರಂಗಿಲ್ಲ, ನಿಮ್ಮ ಕುಟುಂಬದಲ್ಲಿ ಅಣ್ಣ ತಮ್ಮ ಮಗ ಯಾರೇ ಸರ್ಕಾರಿ ಹುದ್ದೆಯಲ್ಲಿ ಇದ್ದರೂ ಕೂಡ ನಿಮ್ಮ ಫ್ಯಾಮಿಲಿ ಬಿಪಿಎಲ್ ಕಾರ್ಡ್ ಗೆ ಅರ್ಹ ಆಗಲ್ಲ.

2. ಅರೆ ಸರ್ಕಾರಿ ಅಂದ್ರೆ ಗುತ್ತಿಗೆ ನೌಕರ ಆದರೂ ಕೂಡ ಬಿಪಿಎಲ್ ಕಾರ್ಡ್ ಸಿಗಲ್ಲ ಸರ್ಕಾರ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆ ಅಥವಾ ಮಂಡಳಿ ನಿಗಮ ಯಾವುದರಲ್ಲೂ ಕೆಲಸ ಮಾಡುತ್ತಿದ್ದರೂನು ಸಿಗಲ್ಲ ಅವರ ಕಾರ್ಡ್ ಇದ್ರೂನು ರದ್ದಾಗುತ್ತೆ ಕಳೆದ ವರ್ಷ ಈ ರೀತಿ 60 ರಿಂದ 70,000 ನೌಕರರ ಕಾರ್ಡನ್ನ ಕ್ಯಾನ್ಸಲ್ ಮಾಡಲಾಗಿತ್ತು ವಾರ್ಷಿಕ ಆದಾಯ 1.20 ಲಕ್ಷ ಮೀರಿರಬಾರದು.

3. ಇನ್ನು ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯ 1,20,000 ದಾಟಿದರೆ ಅವರ ಕುಟುಂಬ ಕೂಡ ಬಿಪಿಎಲ್ ಗೆ ಅರ್ಹ ಅಲ್ಲ ಅದೇ ರೀತಿ ಆದಾಯ ತೆರಿಗೆ ವ್ಯಾಟ್ ವೃತ್ತಿ ತೆರಿಗೆ ಪಾವತಿಸಿರುವ ಕುಟುಂಬ ಕೂಡ ಅನರ್ಹ ಆಗುತ್ತೆ.

4. ಇನ್ನು ಪಿಂಚಣಿದಾರರನ್ನ ಒಳಗೊಂಡಿರುವ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ ಮಾಸಿಕ 10,000 ನಗರ ಪ್ರದೇಶದಲ್ಲಿ 15,000ಕ್ಕಿಂತ ಹೆಚ್ಚು ಆದಾಯ ಗಳಿಸುವ ಸದಸ್ಯರಿದ್ದರೆ ಅವರ ಬಿಪಿಎಲ್ ಕಾರ್ಡ್ ಕೂಡ ಡಿಲೀಟ್ ಆಗುತ್ತೆ

5. ಎಕರೆಗಿಂತ ಹೆಚ್ಚು ಜಮೀನು ಇರಬಾರದು ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ ಗಿಂತ ಹೆಚ್ಚು ಜಮೀನು ಹೊಂದಿರುವ ಕುಟುಂಬ ಕೂಡ ಬಿಪಿಎಲ್ ಗೆ ಅರ್ಹ ಅಲ್ಲ ಇದು ಒಣಭೂಮಿ ಆಗಿರಬಹುದು ನೀರಾವರಿ ಭೂಮಿ ಕಮ್ಮಿ ಆಗಿರಬಹುದು ಅಷ್ಟು ಡಿಫರೆನ್ಸ್ ಆಗಲ್ಲ.

6. ನಗರ ಪ್ರದೇಶದಲ್ಲಿ 1000 ಚದರ ಅಡಿ ವಿಸ್ತೀರ್ಣಕ್ಕಿಂತ ಹೆಚ್ಚಿನ ಮನೆ ಇರಬಾರದು. ನಿಮಗೆ ಆಶ್ಚರ್ಯ ಆಗಬಹುದು ನಗರ ಪ್ರದೇಶದಲ್ಲಿ ನಾಲ್ಕು ಗೋಡೆ ಹೊಂದಿರುವಂತಹ ಮೂರು ಕೋಣೆ ಪಕ್ಕ ಮೇಲ್ಚಾವಣೆ ಹೊಂದಿರುವ ಕುಟುಂಬ ಕೂಡ ಬಿಪಿಎಲ್ ಗೆ ಅನರ್ಹ ಆಗುತ್ತೆ.

7. ನಾಲ್ಕು ಚಕ್ರದ ವೈಟ್ ಬೋರ್ಡ್ ವಾಹನ ಇರಬಾರದು ಇನ್ನು ನಾಲ್ಕು ಚಕ್ರದ ವಾಹನ ಹೊಂದಿರುವ ಎಲ್ಲಾ ಕುಟುಂಬಗಳು ಪಡಿತರ ಚೀಟಿಗೆ ಅರ್ಹ ಅಲ್ಲ ಆದರೆ ಇಲ್ಲಿ ಜೀವನೋಪಾಯಕ್ಕಾಗಿ ಅಂದ್ರೆ ಸ್ವತಃ ಓಡಿಸೋ ಒಂದು ವಾಣಿಜ್ಯ ವಾಹನ ಟ್ರ್ಯಾಕ್ಟರ್ ಮ್ಯಾಕ್ಸಿ ಕ್ಯಾಬ್ ಟ್ಯಾಕ್ಸಿ ಎಲ್ಲೋ ಬೋರ್ಡ್ ಹೊಂದಿದ್ರೆ ಅವರಿಗೆ ವಿನಾಯತಿ ಇದೆ.

8. 150 ಯೂನಿಟ್ ವಿದ್ಯುತ್ ಬಳಸುತ್ತಿರಬಾರದು ತಿಂಗಳಿಗೆ 150 ಯೂನಿಟ್ ಗಿಂತ ಹೆಚ್ಚು ಕರೆಂಟ್ ಬಳಸುತ್ತಿರುವ ಕುಟುಂಬಗಳು ಕೂಡ ಬಿಪಿಎಲ್ ಕಾರ್ಡ್ ಅನ್ನ ಕಳೆದುಕೊಳ್ಳುತ್ತಾರೆ ಅಂದ್ರೆ ಅವರ ಹತ್ರ ಜಾಸ್ತಿ ಕರೆಂಟ್ ಬಳಸುವಂತಹ ಈ ಸ್ವಲ್ಪ ಲಕ್ಸುರಿ ಗೂಡ್ಸ್ ಎಲ್ಲಾ ಇರುತ್ತೆ. ವಾಷಿಂಗ್ ಮಷೀನ್, ರೆಫ್ರಿಜರೇಟರ್, ಐರನ್ ಬಾಕ್ಸ್, ಫ್ಯಾನ್ ಇದೆಲ್ಲ ಹಿಡ್ಕೊಂಡಿರುತ್ತಾರೆ ಅವರು ಬಡವರಲ್ಲ ಅನ್ನೋ ಲೆಕ್ಕಾಚಾರದಲ್ಲಿ ಅವರಿಗೂ ಕೂಡ ಕೊಡೋದಿಲ್ಲ BPL.

ಇದನ್ನೂ ಓದಿ: 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಗುಡ್ ನ್ಯೂಸ್!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment