ಎಲ್ಲರಿಗೂ ನಮಸ್ಕಾರ, ಭೂಮಾಪಕರ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಇಲಾಖೆಯು ಬಿಡುಗಡೆ ಮಾಡಿದೆ. ಇದೀಗ ಭೂಮಾಪಕರ ನೇಮಕಾತಿ ಅಧಿಸೂಚನೆಗೆ ಹೊಸ ಹುದ್ದೆಗಳನ್ನು ಇಲಾಖೆಯ ಸೇರಿಸಿದೆ.
ಒಂದು ಅಧಿಸೂಚನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳಿಗೆ ಹೊಸ ಅಧಿಸೂಚನೆ ಜೊತೆ ನಿಮಗೆ ನೇಮಕಾತಿಯನ್ನು ಪ್ರಕಟಣೆ ಮಾಡಲಾಗಿರುತ್ತದೆ. ಇದರ ಬಗ್ಗೆ ಲೇಖನೆಯಲ್ಲಿ ಪೂರ್ತಿಯಾಗಿ ತಿಳಿಸಿ ಕೊಡುತ್ತೇವೆ ಆದ್ದರಿಂದ ವಿಷಯವನ್ನು ಪೂರ್ತಿಯಾಗಿ ಓದಿ.
ಕರ್ನಾಟಕ ಲೋಕಸೇವಾ ಆಯೋಗದ ಪತ್ರಿಕಾ ಪ್ರಕಟಣೆ:
ಸ್ನೇಹಿತರೆ ನವೆಂಬರ್ 22ರಂದು ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗ ಸೌಧದಿಂದ ಪತ್ರಿಕ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದೆ. ಪ್ರಕಟಣೆಯಲ್ಲಿ – ಆಯೋಗವು 2023 24ನೇ ಸಾಲಿನ ಗ್ರೂಪ್ ಸಿ ವೃಂದದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿನ ಭೂಮಾಪಕರು ಉಳಿಕೆ ಮೂಲ ವೃಂದದ 264 ಮತ್ತು ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದ ನೂರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಫೆಬ್ರವರಿ 24 2024 ರಂದು ಹೋರಾಡಿಸಲಾಗಿತ್ತು.
ಬಿಡುಗಡೆ ಮಾಡಲಾಗಿದೆ ಅಧಿಸೂಚನೆಗೆ ಇನ್ನಷ್ಟು ಹುದ್ದೆಗಳನ್ನು ಸೇರಿಸಲಾಗಿದೆ:
ಅಭ್ಯರ್ಥಿಗಳಿಗೆ ಈ ಒಂದು ಅಧಿಸೂಚನೆಯನ್ನು ಇಲಾಖೆಯು ಹೊರಡಿಸಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಕೂಡ ಆಹ್ವಾನ ಮಾಡಿದ್ದು. ಇದೀಗ ಅಧಿಕೃತವಾಗಿ ಇಲಾಖೆಯ ಕಡೆಯಿಂದ ಈ ಅಧಿಸೂಚನೆಗೆ ಇನ್ನಷ್ಟು ಹುದ್ದೆಗಳನ್ನು ಸೇರಿಸಲಾಗಿದೆ.
ಪ್ರಸ್ತುತ ಜಾರಿಯಲ್ಲಿರುವಂತಹ ಮೀಸಲಾತಿ ನಿಯಮಗಳ ಅನ್ವಹಿತ ಸಂಬಂಧಿತ ನೇಮಕಾತಿ ಪ್ರಾಧಿಕಾರಿಗಳು ದೃಢೀಕರಿಸಿ ಸಲ್ಲಿಸಿರುವ ವರ್ಗೀಕರಣದ ಮೇರೆಗೆ ಉಳಿಕೆ ಮೂಲ ಮುಖ್ಯ ಅಧಿಸೂಚನೆಗೆ, 296 ಹೆಚ್ಚುವರಿ ಹುದ್ದೆಗಳನ್ನು ಸೇರ್ಪಡಿಸಲಾಗಿದೆ ಹಾಗೂ ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದ ಅಧಿಸೂಚನೆಗೆ 90 ಹೆಚ್ಚುವರಿ ಹುದ್ದೆಗಳನ್ನು ಸೇರ್ಪಡಿಸಲಾಗಿದೆ ಹಾಗೂ ಈ ವಿಷಯವಾಗಿ ಅಧಿಸೂಚನೆ ಕೂಡ ಹೋರಾಡಿಸಲಾಗಿದೆ.
ಸದರಿ ಸೇರ್ಪಡೆ ಅಧಿ ಸೂಚನೆಗಳಲ್ಲಿನ ಹುದ್ದೆಗಳನ್ನು ಸಹ ಫೆಬ್ರವರಿ 29ರ ಅಧಿಸೂಚನೆಗಳಲ್ಲಿ ನಿಗದಿಪಡಿಸಿರುವ ನಿಯಮಗಳ ಅನ್ವಹಿತ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುವುದು.
ಭೂಮಾಪಕರ ಹುದ್ದೆಗೆ ವಯೋಮಿತಿ:
- ಸಾಮಾನ್ಯ ಅರ್ಹತೆ – 38 ವರ್ಷಗಳು
- ಪ್ರವರ್ಗ 2A 2B 3A ಮತ್ತು 3B – 41 ವರ್ಷಗಳು
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ A – 43 ವರ್ಷಗಳು
ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ನವೆಂಬರ್ 25 ರಿಂದ ಡಿಸೆಂಬರ್ 9 2024 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ.
ವಿಶೇಷ ಸೂಚನೆ:
ಈ ಹಿಂದೆ ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.
ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು.
ಇದನ್ನೂ ಓದಿ: ಬೆಳಗಾವಿ District CUTOFF ಫಲಿತಾಂಶ.! VAO Result 2024.!










