1548 ಕೋಟಿ UPI ಮೂಲಕ ಜನರು Transaction ಮಾಡಿದ್ದಾರೆ.! UPI Lite X? ಇಲ್ಲಿದೆ ಮಾಹಿತಿ 

December 7, 2024 3:27 PM
1548 ಕೋಟಿ UPI ಮೂಲಕ ಜನರು Transaction ಮಾಡಿದ್ದಾರೆ.! UPI Lite X? ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, UPI ಮೂಲಕ ನಡೀತಾ ಇರುವ ವಹಿವಾಟು ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ ಎನ್ ಪಿಸಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ನವೆಂಬರ್ ತಿಂಗಳಲ್ಲಿ UPI ಆಧಾರಿತವಾಗಿ ಆಗಿರುವ ಒಟ್ಟು ವಹಿವಾಟುಗಳ ಸಂಖ್ಯೆ 1548 ಬಿಲಿಯನ್ ಎನ್ನಲಾಗಿದೆ ಅಂದ್ರೆ ಒಂದೇ ತಿಂಗಳಲ್ಲಿ ಯುಪಿಐ ಮೂಲಕ 1548 ಕೋಟಿ ಟ್ರಾನ್ಸಾಕ್ಷನ್ ಗಳು ನವೆಂಬರ್ ನಲ್ಲಿ ನಡೆದಿದೆ.

ಕಳೆದ ವರ್ಷದ ನವೆಂಬರ್ ಗೆ ಹೋಲಿಸಿದರೆ ಈ ಬಾರಿ ವಹಿವಾಟು ಸಂಖ್ಯೆಯಲ್ಲಿ ಶೇಕಡ 38 ರಷ್ಟು ಏರಿಕೆಯಾಗಿದೆ 1548 ಕೋಟಿ ಯುಪಿಐ ವಹಿವಾಟಿನ ಒಟ್ಟು ಮೌಲ್ಯ 21.55 ಲಕ್ಷ ಕೋಟಿ ರೂಪಾಯಿ.

ನವೆಂಬರ್ ತಿಂಗಳಲ್ಲಿ ನಿತ್ಯವೂ ಸರಾಸರಿಯಾಗಿ 51.6 ಕೋಟಿ ಯುಪಿಐ ವಹಿವಾಟುಗಳು ಆಗ್ತಿವೆ. ಈ ವಹಿವಾಟು ಮೌಲ್ಯ ನಿತ್ಯ 71840 ಕೋಟಿ ರೂಪಾಯಿ ಆಗಿದೆ. ಎನ್ ಪಿಸಿಐ ದತ್ತಾಂಶದ ಪ್ರಕಾರ ಐಎಂ ಪಿಎಸ್ ಟ್ರಾನ್ಸಾಕ್ಷನ್ ಸಂಖ್ಯೆ ನವೆಂಬರ್ ನಲ್ಲಿ 40.8 ಕೋಟಿ ಇದೆ ಇವುಗಳ ಒಟ್ಟು ಮೌಲ್ಯ 5.58 ಲಕ್ಷ ಕೋಟಿ ರೂಪಾಯಿ ಇದೆ.

  • ಫಾಸ್ಟ್ ಟ್ಯಾಗ್ ಟ್ರಾನ್ಸಾಕ್ಷನ್ ಗಳ ಸಂಖ್ಯೆ 34.5 ಕೋಟಿಯಿಂದ 35.9 ಕೋಟಿಗೆ ಏರಿದೆ.
  • ಆಧಾರ್ ಚಾಲಿತ ಪೇಮೆಂಟ್ ಸಿಸ್ಟಮ್ ನಿಂದಾದ ಟ್ರಾನ್ಸಾಕ್ಷನ್ ಗಳ ಸಂಖ್ಯೆ 9.2 ಕೋಟಿಯಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ಯುಪಿಐ ಸಾರ್ವಕಾಲಿಕ ದಾಖಲೆಗಳನ್ನು ತಂದಿತ್ತು ಆ ತಿಂಗಳು ನಡೆದ ಒಟ್ಟು ವಹಿವಾಟು ಸಂಖ್ಯೆ 1658 ಕೋಟಿ ಒಟ್ಟು ವಹಿವಾಟು ಮೌಲ್ಯ 23.5 ಲಕ್ಷ ಕೋಟಿ ರೂಪಾಯಿ.

2016 ರಲ್ಲಿ ಯುಪಿಐ ಆರಂಭವಾದಾಗಿನಿಂದ ಒಂದು ತಿಂಗಳಲ್ಲಿ ದಾಖಲಾದ ಅತಿ ಹೆಚ್ಚು ವಹಿವಾಟಾಗಿದೆ.

Unified Payment Interface ಹೊಸ ದಾಖಲೆ

ಮರ್ಚೆಂಟ್ ಟ್ರಾನ್ಸಾಕ್ಷನ್ ಅಲ್ಲೂ ಯುಪಿಐ ಹೊಸ ದಾಖಲೆ ಯುಪಿಐ ಅಥವಾ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ನಿಂದ ಅಕ್ಟೋಬರ್ ತಿಂಗಳಿನಲ್ಲಿ 10 ಬಿಲಿಯನ್ ಅಥವಾ 1000 ಕೋಟಿ ಸಂಖ್ಯೆಯ ಮರ್ಚೆಂಟ್ ಟ್ರಾನ್ಸಾಕ್ಷನ್ ಗಳಾಗಿವೆ ಅಂದ್ರೆ ಅಷ್ಟು ಪ್ರಮಾಣದಲ್ಲಿ ಗ್ರಾಹಕರಿಂದ ವರ್ತಕರಿಗೆ ಹಣದ ಪಾವತಿಯಾಗಿದೆ ಹಬ್ಬದ ಸೀಸನ್ ನಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ವಾಣಿಜ್ಯತ್ಮಕ ವಹಿವಾಟುಗಳು ನಡೆದಿದೆ.

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಮೊಬೈಲ್ ವ್ಯಾಲೆಟ್ ಇತ್ಯಾದಿ ಪರ್ಯಾಯ ಪೇಮೆಂಟ್ ಸಿಸ್ಟಮ್ ಗಳಿಗಿಂತ ಯುಪಿಐ ನಲ್ಲೇ ಅತಿ ಹೆಚ್ಚು ವಹಿವಾಟುಗಳು ನಡೆದಿದೆ ಅಕ್ಟೋಬರ್ 31 ದೀಪಾವಳಿ ದಿನದಂದು 644 ಮಿಲಿಯನ್ ಸಂಖ್ಯೆಯಷ್ಟು ಯುಪಿಐ ಟ್ರಾನ್ಸಾಕ್ಷನ್ ಆಗಿದೆ ಅಂದರೆ ಆ ಒಂದೇ ದಿನದಲ್ಲಿ 64 ಕೋಟಿಗೂ ಅಧಿಕ ಸಂಖ್ಯೆಯ ಯುಪಿಐ ವಹಿವಾಟಾಗಿದೆ ಪಾವತಿಗಳಲ್ಲಿ ಅನುಕೂಲತೆಯನ್ನು ಸುಧಾರಿಸುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಅಂದ್ರೆ ಆರ್ ಬಿಐ ಗವರ್ನರ್ ಇತ್ತೀಚೆಗೆ ಯುಪಿಐ ಲೈಟ್ ಎಕ್ಸ್ ಅನ್ನೋ ಹೊಸ ವೈಶಿಷ್ಟ್ಯವನ್ನ ಪ್ರಾರಂಭ ಮಾಡಿದ್ದಾರೆ.

Unified Payment Interface Lite X

ಈ ವೈಶಿಷ್ಟ್ಯ ಬಳಕೆದಾರರು ಸಂಪೂರ್ಣವಾಗಿ ಆಫ್ಲೈನ್ ನಲ್ಲೂ ಇರುವಾಗ ಅಂದ್ರೆ ತಮ್ಮ ಮೊಬೈಲ್ನಲ್ಲಿ ಇಂಟರ್ನೆಟ್ ಇಲ್ಲದೆಯೂ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅನುಮತಿಸುತ್ತೆ.

ಯುಪಿಐ ಲೈಟ್ ಎಕ್ಸ್ ಎಂದರೇನು?

ಯುಪಿಐ ಲೈಟ್ ಎಕ್ಸ್ ಬಳಕೆದಾರರು ಯಾವುದೇ ಸಂಪರ್ಕವಿಲ್ಲದ ಸ್ಥಳಗಳಲ್ಲಿದ್ದಾಗ ವಹಿವಾಟುಗಳನ್ನು ಪ್ರಾರಂಭಿಸಲು ಮತ್ತು ಪೂರ್ಣಗೊಳಿಸಲು ಅನುಮತಿಸುತ್ತೆ.

ಇದು ಅಂಡರ್ ಗ್ರೌಂಡ್ ನಿಲ್ದಾಣಗಳು ರಿಮೋಟ್ ಪ್ರದೇಶಗಳು ಇಂಟರ್ನೆಟ್ ಇಲ್ಲದ ಪ್ರದೇಶಗಳಲ್ಲಿ ಬಳಸಲು ಅನುಕೂಲ ಯುಪಿಐ ಮತ್ತು ಯುಪಿಐ ಲೈಟ್ ಗಿಂತ ಯುಪಿಐ ಲೈಟ್ ಎಕ್ಸ್ ಹೇಗೆ ಭಿನ್ನವಾಗಿದೆ ಯುಪಿಐ ಲೈಟ್ ಒಂದು ಪಾವತಿ ಪರಿಹಾರವಾಗಿದ್ದು ಕಡಿಮೆ ಮೌಲ್ಯದ ವಹಿವಾಟುವನ್ನ ಪ್ರಕ್ರಿಯೆಗೊಳಿಸುವುದಕ್ಕೆ ಎನ್ ಪಿಸಿಐ ಕಾಮನ್ ಲೈಬ್ರರಿ ಸಿ ಎಲ್ ಅಪ್ಲಿಕೇಶನ್ ಅನ್ನ ಬಳಸುತ್ತೆ ಪ್ರಸ್ತುತ ಇದರ ವಹಿವಾಟಿನ ಮೊತ್ತವನ್ನು 500 ರೂಪಾಯಿ ಗಿಂತ ಕಡಿಮೆ ಮೌಲ್ಯಕ್ಕೆ ಬಳಸಬಹುದು ಯುಪಿಐ ಅಥವಾ ಯುಪಿಐ ಲೈಟ್ ಬಳಸಿಕೊಂಡು ವಹಿವಾಟು ಮಾಡುವಾಗ ಸ್ವೀಕರಿಸುವವರು ವಾಗಿ ಇರಬೇಕಾಗಿಲ್ಲ ಮತ್ತು ದೇಶದ ಎಲ್ಲಿಂದಲಾದರೂ ಹಣವನ್ನು ಸ್ವೀಕರಿಸಲು ಸಾಧ್ಯವಾಗುತ್ತೆ.

ಕ್ಯೂಆರ್ ಕೋಡ್ ಅನ್ನ ಸ್ಕ್ಯಾನ್ ಮಾಡುವ ಮೂಲಕ ಅಥವಾ ಸ್ವೀಕರಿಸುವವರ ಯುಪಿಐ ಐಡಿ ಅಥವಾ ಲಿಂಕ್ ಮಾಡಲಾದ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಈ ವಹಿವಾಟನ್ನ ಪೂರ್ಣಗೊಳಿಸಬಹುದು ಆದರೆ ಯುಪಿಐ ಲೈಟ್ ಎಕ್ಸ್ ವಹಿವಾಟುಗಳಿಗೆ ಕಳುಹಿಸುವವರು ಮತ್ತು ಸ್ವೀಕರಿಸುವವರ ಎರಡು ಸಾಧನಗಳು ಹತ್ತಿರದಲ್ಲಿ ಯುಪಿಐ ವಹಿವಾಟಿನ ಸಮಯದಲ್ಲಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣವನ್ನು ತಕ್ಷಣವೇ ಕಳುಹಿಸಲಾಗುತ್ತೆ ಯುಪಿಐ ಲೈಟ್ ಸಂದರ್ಭದಲ್ಲಿ ಹಣವನ್ನು ಕಳುಹಿಸುವವರ ಅನ್ ಡಿವೈಸ್ ವ್ಯಾಲೆಟ್ ಅಥವಾ ಯುಪಿಐ ಲೈಟ್ ಖಾತೆಯಿಂದ ಸ್ವೀಕರಿಸುವವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತೆ.

ಕಳುಹಿಸುವವರ ಅನ್ ಡಿವೈಸ್ ವ್ಯಾಲೆಟ್ ಮತ್ತು ಸ್ವೀಕರಿಸುವವರ ಅನ್ ಡಿವೈಸ್ ವ್ಯಾಲೆಟ್ ನಡುವೆ ಹಣವನ್ನು ವರ್ಗಾಯಿಸಲು ಯುಪಿಐ ಲೈಟ್ ಎಕ್ಸ್ ವಹಿವಾಟುಗಳು ಎನ್ ಎಫ್ ಸಿ ಯನ್ನ ಬಳಸುತ್ತೆ ಇದು ಇಂಟರ್ನೆಟ್ ಪ್ರವೇಶದ ಅಗತ್ಯವನ್ನ ನಿವಾರಿಸುತ್ತೆ ಯಾಕಂದ್ರೆ ವಹಿವಾಟು ಬ್ಯಾಂಕ್ ಖಾತೆಗಳಿಗಿಂತ ಸಾಧನದ ಈ ವ್ಯಾಲೆಟ್ ಗಳ ನಡುವೆ ನಡೆಯುತ್ತೆ ಯುಪಿಐ ಹಾಗಾಗಿ ಬ್ಯಾಂಕ್ ಖಾತೆಯಿಂದ ಒಂದು ದಿನದಲ್ಲಿ ವರ್ಗಾವಣೆ ಮಾಡಬಹುದಾದ ಗರಿಷ್ಠ ಮೊತ್ತ ಎರಡು ಲಕ್ಷ ರೂಪಾಯಿ ಯುಪಿಐ ಲೈಟ್ ನ ಗರಿಷ್ಠ ಮಿತಿ 500 ಒಂದು ದಿನದ ಗರಿಷ್ಠ ಮಿತಿ 4000 ಆಗಿದೆ ಯುಪಿಐ ಲೈಟ್ ಎಕ್ಸ್ ಗೆ ಅಂತಹ ಯಾವುದೇ ಮಿತಿಯನ್ನ ಘೋಷಿಸಲಾಗಿಲ್ಲ.

ಇದನ್ನೂ ಓದಿ: BESCOM: ಗ್ರಾಹಕರಿಗೆ ವಿದ್ಯುತ್ ಬಿಲ್ ಮುಖಾಂತರವಾಗಿ ಶಾಕ್.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment