ಎಲ್ಲರಿಗೂ ನಮಸ್ಕಾರ, ಇಂಡಿಯನ್ ರೈಲ್ವೇಸ್ ಭಾರತದ ನರನಾಡಿ ಅಷ್ಟೇ ಅಲ್ಲ ಜೀವನಾಡಿ ಇವತ್ತಿಗೂ ಪ್ರತಿದಿನ ಎಂಟುವರೆ ಕೋಟಿ ಭಾರತೀಯರನ್ನ ಹೊತ್ತು ಸಾಗಿಸುತ್ತೆ 12 ಮಿಲಿಯನ್ ಜನಕ್ಕೆ ಅನ್ನ ಹಾಕುತ್ತೆ ದೇಶದ ಆರ್ಥಿಕತೆಗೆ ಎರಡುವರೆ ಲಕ್ಷ ಕೋಟಿ ರೂಪಾಯಿ ಆದಾಯ ಹರಿದು ತರುತ್ತೆ ಅಂತ ರೈಲ್ವೆಯಲ್ಲಿ ಈಗ ದೊಡ್ಡ ಬದಲಾವಣೆ ತರೋಕೆ ಮೋದಿ ಸರ್ಕಾರ ಮುಂದಾಗಿದೆ.
ರೈಲ್ವೆ ಚಹರೆಯನ್ನೇ ಬದಲಾಯಿಸುವಂತಹ ಹೊಸ ಕಾಯ್ದೆಯನ್ನ ದೇಶದ ಸಂಸತ್ತಿನಲ್ಲಿ ಮಂಡಿಸಿದೆ ರೈಲ್ವೆ ತಿದ್ದುಪಡಿ ಮಸೂದೆ 2024 ಅನ್ನು ರೈಲ್ವೆಯನ್ನ ಖಾಸಗೀಕರಣಕ್ಕೆ ಓಪನ್ ಮಾಡುವ ಮಸೂದೆಯನ್ನ ಮಂಡಿಸ್ತಾ ಇದೆ ಅಂತ ಭಾರಿ ಸಂಚಲನಕ್ಕೆ ಕಾರಣ ಆಗಿದೆ ಹಾಗಿದ್ರೆ ಈ ಕಾನೂನಿನಲ್ಲಿ ಏನೇನಿದೆ ರೈಲ್ವೆಯಲ್ಲಿ ಏನೇನು ಬದಲಾಗುತ್ತೆ ರೈಲ್ವೆ ಖಾಸಗೀಕರಣ ಆಗುತ್ತಾ ಭಾರತದ ಖಾಸಗಿ ಕಂಪನಿಗಳು ರೈಲ್ ಓಡಿಸ್ತಾವ ಖಾಸಗಿ ಎಂಟ್ರಿಯಿಂದ ಆಗೋ ಲಾಭ ನಷ್ಟ ಏನು ಎಲ್ಲವನ್ನ ಅನಲೈಸ್ ಮಾಡ್ತಾ ಹೋಗೋಣ
Indian Railways Amendment Bill 2024
ಸ್ನೇಹಿತರೆ ತಿದ್ದುಪಡಿ ಗುದ್ದು ರೈಲ್ವೆಗೆ ಹೊಸ ನೀತಿ ಸ್ನೇಹಿತರೆ 13 ಲಕ್ಷ ಕಿಲೋಮೀಟರ್ ಉದ್ದದ ಹಳಿಗಳು 8000ಕ್ಕೂ ಅಧಿಕ ಸ್ಟೇಷನ್ಗಳು 21000ಕ್ಕೂ ಅಧಿಕ ಟ್ರೈನ್ ಗಳನ್ನ ಭಾರತ ಹೊಂದಿದೆ ಅಮೆರಿಕಾ ಚೈನಾ ರಷ್ಯಾ ಬಿಟ್ರೆ ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲ್ವೆ ನೆಟ್ವರ್ಕ್ ನಮ್ದು ಈ ಬೃಹತ್ ಸಾರಿಗೆ ಸಂಸ್ಥೆಗೆ 171 ವರ್ಷಗಳ ಇತಿಹಾಸ ಇದೆ 1853 ರಲ್ಲಿ ಮೊದಲ ಬಾರಿಗೆ ಬ್ರಿಟಿಷರು ಮುಂಬೈನಿಂದ ಠಾಣೆಯವರೆಗೆ ಟ್ರೈನ್ ಓಡಿಸಿ ಭಾರತದಲ್ಲಿ ರೈಲ್ ವ್ಯವಸ್ಥೆ ಶುರು ಮಾಡಿದರು ಹೀಗಾಗಿ ಇಂಡಿಯನ್ ರೈಲ್ವೇಸ್ ಜಗತ್ ಅತ್ಯಂತ ಹಳೆಯ ರೈಲ್ವೆ ವ್ಯವಸ್ಥೆಗಳಲ್ಲೂ ಕೂಡ ಒಂದು ಆದರೆ ರೈಲ್ವೆ ಎಷ್ಟು ಹಳೆಯದೋ ಭಾರತದಲ್ಲಿ ರೈಲ್ವೆ ಕಾನೂನುಗಳು ಕೂಡ ಅಷ್ಟೇ ಹಳೆಯದು.
ಈಗ ಈ ಹಳೆಯ ಸಿಸ್ಟಮ್ ಗೆ ಹೊಸ ಬದಲಾವಣೆಗಳನ್ನು ತರೋಕೆ ಮೋದಿ ಸರ್ಕಾರ ರೈಲ್ವೆ ಆಕ್ಟ್ ನ ಕೂಡ ಚೇಂಜ್ ಮಾಡೋಕೆ ಮುಂದಾಗಿದೆ ನಮ್ಮಲ್ಲಿ ರೈಲ್ವೆ ಸಂಬಂಧ ಎರಡು ಕಾಯ್ದೆಗಳಿವೆ ಒಂದು 1989 ರ ರೈಲ್ವೇಸ್ ಆಕ್ಟ್ ಬ್ರಿಟಿಷ್ ಟೈಮ್ನಲ್ಲಿ 1890 ರಲ್ಲಿ ಜಾರಿಯಾಗಿದ್ದ ಇಂಡಿಯನ್ ರೈಲ್ವೇಸ್ ಆಕ್ಟ್ ನ ತೆಗೆದುಹಾಕಿ 1989 ರಲ್ಲಿ ಈ ಕಾಯ್ದೆ ತರಲಾಗಿತ್ತು ಭಾರತದಲ್ಲಿ ರೈಲ್ವೆಗೆ ಸಂಬಂಧಪಟ್ಟಂತೆ ಏನೇ ಮಾಡಬೇಕಿದ್ರು, ಈ ಕಾನೂನು ಪ್ರಕಾರನೇ ಆಗಬೇಕು ಮತ್ತೊಂದು ರೈಲ್ವೇಸ್ ಬೋರ್ಡ್ ಆಕ್ಟ್ ಇದನ್ನ ಕೂಡ ಬ್ರಿಟಿಷರೇ ತಂದಿದ್ರು 1905 ರಲ್ಲಿ ಜಾರಿಯಾಗಿತ್ತು ಈ ಆಕ್ಟ್ ನಲ್ಲಿ ರೈಲ್ವೆ ಬೋರ್ಡ್ ಸ್ಥಾಪನೆ ಮಾಡಲಾಯಿತು ರೈಲ್ವೆ ಮ್ಯಾನೇಜ್ಮೆಂಟ್ ಗೆ ಸಂಬಂಧಪಟ್ಟ ತನ್ನ ಅಥಾರಿಟಿಯನ್ನ ಕೇಂದ್ರ ಸರ್ಕಾರ ಇಲ್ಲಿ ರೈಲ್ವೆ ಬೋರ್ಡ್ ಗೆ ಕೊಟ್ಟಿತ್ತು.
ಬಟ್ ಒಂದೇ ಕ್ಷೇತ್ರಕ್ಕೆ ಎರಡೆರಡು ಕಾನೂನು ಇದ್ದಿದ್ದರಿಂದ ಸಿಕ್ಕಾಪಟ್ಟೆ ಕನ್ಫ್ಯೂಷನ್ ಇತ್ತು ಹೀಗಾಗಿ ಕೇಂದ್ರ ಸರ್ಕಾರ ಈಗ ರೈಲ್ವೇಸ್ ಬೋರ್ಡ್ ನೀತಿಯನ್ನ ತೆಗೆದು ಅದರಲ್ಲಿರುವ ಅಂಶಗಳನ್ನ ಮೂಲ ರೈಲ್ವೇಸ್ ಆಕ್ಟ್ ಗೆ ಸೇರಿಸ್ತಾ ಇದೆ ಅದಕ್ಕಾಗಿ ರೈಲ್ವೇಸ್ ಅಮೆಂಡ್ಮೆಂಟ್ ಬಿಲ್ 2024 ಅನ್ನ ಮಸೂದೆಯನ್ನ ಮಂಡಿಸಿದೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ರೂಲ್ಸ್ ಚೇಂಜ್.!





