ಎಲ್ಲರಿಗೂ ನಮಸ್ಕಾರ, ನವೆಂಬರ್, ಡಿಸೆಂಬರ್ ನಲ್ಲಿ ಹಲವು ಬ್ಯಾಂಕ್ ಗಳು ತಮ್ಮ ಕ್ರೆಡಿಟ್ ಕಾರ್ಡ್ ರೂಲ್ಸ್ ಚೇಂಜ್ ಮಾಡಿವೆ. SBI, ICICI, Axis Bank, Yes Bank ಮುಂತಾದ ಬ್ಯಾಂಕ್ ಗಳು ತಮ್ಮ ಕ್ರೆಡಿಟ್ ಕಾರ್ಡ್ ಗಳ ಟ್ರಾನ್ಸಾಕ್ಷನ್ ಚಾರ್ಜಸ್ ರಿವಾರ್ಡ್ ರೂಲ್ಸ್ ಅನ್ನ ಚೇಂಜ್ ಮಾಡಿವೆ ಅದೇ ರೀತಿ ಆಧಾರ್ ಕಾರ್ಡ್ ಐಟಿ ಆರ್ ಫೈಲಿಂಗ್ ಇನ್ಕಮ್ ಟ್ಯಾಕ್ಸ್ ಫೈಲಿಂಗ್ ಗೆ ಸಂಬಂಧಪಟ್ಟಂತ ಡೆಡ್ ಲೈನ್ ಗಳು ಕೂಡ ಡಿಸೆಂಬರ್ ನಲ್ಲಿ ಮುಗಿಯುತ್ತೆ.
ಅದರಲ್ಲೂ ಫ್ರೀಯಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸೋಕೆ ಇನ್ನು ಕೆಲವೇ ಕೆಲವು ಸಮಯ ಇರುವುದು ಕೆಲವೇ ಕೆಲವು ಸಮಯ ಎಷ್ಟನೇ ತಾರೀಕು ಡೆಡ್ ಲೈನ್ ಏನು ಎಲ್ಲವನ್ನ ಕ್ವಿಕ್ ಆಗಿ ನಿಮಗೆ ಮಾಹಿತಿ ಕೊಡ್ತಾ ಹೋಗ್ತೀವಿ.
ನೀವೇನಾದ್ರು ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ರೆ ಅಥವಾ ಕ್ರೆಡಿಟ್ ಕಾರ್ಡ್ ತಗೋಬೇಕು ಅಂತಿದ್ರೆ ನಿಮಗೆ ಇಂಪಾರ್ಟೆಂಟ್ ಆಗಬಹುದು ಬಹಳ ಹೆಲ್ಪ್ ಫುಲ್ ಆಗಬಹುದು.
Axis Bank ಕ್ರೆಡಿಟ್ ಕಾರ್ಡ್
ಸ್ನೇಹಿತರೆ ಡಿಸೆಂಬರ್ 20 ರಿಂದ ಆಕ್ಸಿಸ್ ಕಾರ್ಡ್ ನಲ್ಲಿ ಎಡ್ಜ್ ರಿವಾರ್ಡ್ಸ್ ಹಾಗೂ ಮೈಲ್ಸ್ ರೆಡಿಮ್ ಮಾಡಿಕೊಳ್ಳುವ ಗ್ರಾಹಕರಿಗೆ ಹೊಸ ರಿಡೆಂಪ್ಷನ್ ಚಾರ್ಜಸ್ ಅಪ್ಲೈ ಆಗುತ್ತೆ. ಕ್ಯಾಶ್ ರಿಡೆಂಪ್ಷನ್ ಗೆ 99Rs ಮೈಲೇಜ್ ಪ್ರೋಗ್ರಾಮ್ ಗಳಿಗೆ ಪಾಯಿಂಟ್ಸ್ ಟ್ರಾನ್ಸ್ಫರ್ ಮಾಡಿದ್ರೆ 199Rs ಅಪ್ಲೈ ಆಗುತ್ತೆ. ಇದರ ಜೊತೆಗೆ 18% ಅದರ ಮೇಲ್ಗಡೆ GST
ನಿಮಗೆ ಗೊತ್ತಿರಲಿ ಈ ಕಾರ್ಡ್ ಆಕ್ಸಿಸ್ ಬ್ಯಾಂಕ್ ನ ಬೆಸ್ಟ್ ಸೆಲ್ಲಿಂಗ್ ಕ್ರೆಡಿಟ್ ಕಾರ್ಡ್ ಗಳಲ್ಲಿ ಒಂದು ಈ ಕಾರ್ಡ್ ನಿಂದ ತಿಂಗಳಿಗೆ ಎರಡು ಬಾರಿ Zomato ಆರ್ಡರ್ ನಲ್ಲಿ 120 ವರೆಗೆ ಡಿಸ್ಕೌಂಟ್ ಪಡ್ಕೋಬಹುದು.
Paytm ನಲ್ಲಿ ಈ ಆಪ್ ಮೂಲಕ ಯುಟಿಲಿಟಿ ಬಿಲ್ ಪೇ ಮಾಡಿದ್ರೆ 5% ಡಿಸ್ಕೌಂಟ್ ಸಿಗುತ್ತೆ ಇನ್ನು ಬುಕ್ ಮೈ ಶೋ ಹಾಗೂ ಬ್ಲಿಂಕ್ ಕಿಟ್ ಗಳಲ್ಲಿ 10% ಆಫ್ ಇದೆ ಇವೆಲ್ಲ ಪ್ರತಿ ತಿಂಗಳು ಸಿಗೋ ಡಿಸ್ಕೌಂಟ್ಸ್ ಜೊತೆಗೆ ಆಕ್ಸಿಸ್ ಬ್ಯಾಂಕ್ ನ ಪಾರ್ಟ್ನರ್ ರೆಸ್ಟೋರೆಂಟ್ ಗಳಲ್ಲಿ 15% ವರೆಗೂ ಡಿಸ್ಕೌಂಟ್ಸ್ ಪಡ್ಕೋಬಹುದು.
ಈ ಕಾರ್ಡ್ ನ ಬೆನಿಫಿಟ್ಸ್ ನೆಲ್ಲ ಸೇರಿಸಿದರೆ ಮೊದಲ ವರ್ಷ 10,560Rs ವರೆಗೆ ಎರಡನೇ ವರ್ಷದಿಂದ 10,360Rs ವರೆಗೆ ಉಳಿಸಬಹುದು ಅಂದಷ್ಟು ಲಾಭ ಮಾಡ್ಕೋಬಹುದು ಸರಿಯಾಗಿ ಜಾಣ್ಮೆಯಿಂದ ಕ್ರೆಡಿಟ್ ಕಾರ್ಡ್ ಬಳಸಿದರೆ ಅಂದ್ರೆ ನಿಮ್ಮ ಖರ್ಚುಗಳಲ್ಲಿ 10% ವರೆಗೆ ಸೇವಿಂಗ್ಸ್ ಮಾಡಬಹುದು.
ಈ ಕಾರ್ಡ್ ಪಡ್ಕೊಳೋಕೆ 18 ವರ್ಷ ಏಜ್ ದಾಟಿರುವರೆಲ್ಲರೂ ಕೂಡ ಅಪ್ಲೈ ಮಾಡಬಹುದು.
web.axisbank.co.in/Digital-Channel/Web-Form/ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಆಸಕ್ತರು ಅಪ್ಲೈ ಮಾಡಿ ನಿಮ್ಮ ಗಮನಕ್ಕೆ ಇರಲಿ ಲಿಮಿಟೆಡ್ ಪಿರಿಯಡ್ ಆಫರ್, ಲೈಫ್ ಟೈಮ್ ಫ್ರೀ ಕ್ರೆಡಿಟ್ ಕಾರ್ಡ್ ಆಗಿರುತ್ತೆ ಇದು ಕೂಡ ಕೆಲವೇ ಕೆಲವು ಸಮಯದ ಅವಧಿಯವರೆಗೆ ಈ ಆಫರ್ ಅವೈಲಬಲ್ ಅಂತ ಅವರ ವೆಬ್ಸೈಟ್ ಕೂಡ ಹೇಳ್ತಾ ಇದೆ.
Airtel ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಂಟರೆಸ್ಟ್ ರೇಟ್
ಇಂಟರೆಸ್ಟ್ ರೇಟ್ ಅಥವಾ ಫೈನಾನ್ಸ್ ರೇಟ್ ಚೇಂಜ್ ಆಗಿದೆ ಇದುವರೆಗೆ ತಿಂಗಳಿಗೆ 3.6% ಚಾರ್ಜಸ್ ಇತ್ತು ಅದನ್ನ ಈಗ 3.75% ಗೆ ಇಂಟರೆಸ್ಟ್ ರೇಟ್ ಗೆ ತಗೊಂಡು ಹೋಗಲಾಗಿದೆ ಇದರ ಜೊತೆಗೆ ಡಿಸಾನರ್ ಫೀಸ್ ಅಂದ್ರೆ ಕ್ರೆಡಿಟ್ ಕಾರ್ಡ್ ಲಿಮಿಟ್ ಕ್ರಾಸ್ ಆಗಿದ್ದಾಗ ಪೇಮೆಂಟ್ ಫೇಲ್ ಆದ್ರೆ ಜೊತೆಗೆ ಅಂತ ಟೈಮ್ನಲ್ಲಿ ಶೆಡ್ಯೂಲ್ ಆಗಿದ್ದ ಪೇಮೆಂಟ್ಸ್ ಗೆ ಹಣ ಸಿಗದೆ ಪೇಮೆಂಟ್ ರಿವರ್ಸಲ್ ಆದ್ರೆ ಆ ಫೇಲ್ ಆಗಿರೋ ಟ್ರಾನ್ಸಾಕ್ಷನ್ ಮೇಲಿನ ಫೀಸ್ ಅನ್ನ 450Rs ನಿಂದ 500Rs ರೂಪಾಯಿಗೆ ಜಾಸ್ತಿ ಮಾಡಲಾಗಿದೆ ಜೊತೆಗೆ ಇದುವರೆಗೆ ಇಂತಹ ಡಿಸಾನರ್ ಫೀಸ್ ರೂವರೆ ಸಾವಿರ ಕ್ರಾಸ್ ಆಗಬಾರದು ಅನ್ನೋ ಲಿಮಿಟ್ ಇತ್ತು ಈಗ ಆ ಲಿಮಿಟ್ ಅನ್ನ ತೆಗೆಯಲಾಗಿದೆ.
ಜೊತೆಗೆ ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಮೇಲಿನ ಮಿನಿಮಮ್ ಅಮೌಂಟ್ ಡ್ಯೂ ಅಥವಾ ಎಂ ಎಡಿ ಅಂದ್ರೆ ಬ್ಯಾಲೆನ್ಸ್ ಜಾಸ್ತಿ ಆಗಬಾರದು ಅನ್ನೋ ಕಾರಣಕ್ಕೆ ನೀವು ಕಟ್ಟೋ ಫೀಸ್ ಗೆ 100 ರೂಪಾಯಿಗಳ ಅಡಿಷನಲ್ ಫೀಸ್ ಇರುತ್ತೆ ಬರಿ ಮಿನಿಮಮ್ ಡ್ಯೂ ಮಾತ್ರ ಕಟ್ಟುತ್ತಾ ಹೋದ್ರೆ ಹಾಗಾಗಿ ಯಾವಾಗ್ಲೂ ಕೂಡ ಫುಲ್ ಬಿಲ್ ಕಟ್ಟಿ ಕ್ಲಿಯರ್ ಮಾಡೋದು ಅಭ್ಯಾಸ ಇಟ್ಕೋಬೇಕು. ನಾವು ಇನ್ನು ನಿರಂತರ ಎರಡು ಬಿಲ್ಲಿಂಗ್ ಸೈಕಲ್ ನಲ್ಲಿ ಡ್ಯೂ ಡೇಟ್ ಒಳಗಡೆ ಎಂ ಎಡಿ ಕಟ್ಟಿಲ್ಲ ಅಂದ್ರೆ ಇದು ಅಪ್ಲೈ ಆಗುತ್ತೆ. ಈ ಹೊಸ ನಿಯಮ.
Axis ಬ್ಯಾಂಕ್ ನ ಆಕ್ಸಿಸ್ ರಿಸರ್ವ್ ಕ್ರೆಡಿಟ್ ಕಾರ್ಡ್
ಅಟ್ಲಾಸ್ ಮ್ಯಾಗ್ನೆಸ್ ಫಾರ್ ಬರ್ಗಂಡಿ ಹಾಗೂ ಒಲಿಂಪಸ್ ಕಾರ್ಡ್ ಗಳಿಗೂ ಒಂದಷ್ಟು ಚೇಂಜಸ್ ಬಂದಿದೆ ಈ ಕಾರ್ಡ್ ಗಳ ವ್ಯಾಲೆಟ್ ಲೋಡ್ 10,000 ಕ್ಕಿಂತ ಜಾಸ್ತಿ ಇದ್ರೆ ಗೇಮಿಂಗ್ ಟ್ರಾನ್ಸಾಕ್ಷನ್ ತಿಂಗಳಿಗೆ 10,000 ಗಿಂತ ಜಾಸ್ತಿ ಆದ್ರೆ ಹೊಸ ಟ್ರಾನ್ಸಾಕ್ಷನ್ ಫೀಸ್ ಅಪ್ಲೈ ಆಗುತ್ತೆ. ಬ್ಯಾಂಕ್ ಬ್ರಾಂಚ್ ಗಳಲ್ಲಿ ಕ್ಯಾಶ್ ಪೇಮೆಂಟ್ ಮಾಡಿದ್ರು ಕೂಡ 175Rs ಚಾರ್ಜಸ್ ಬೀಳುತ್ತೆ.
SBI ಕ್ರೆಡಿಟ್ ಕಾರ್ಡ್:
ಇನ್ನು SBI ಕ್ರೆಡಿಟ್ ಕಾರ್ಡ್ ನಲ್ಲಿ ಆಗಿರೋ ರೂಲ್ಸ್ ಗಳ ವಿಚಾರಕ್ಕೆ ಬಂದ್ರೆ SBI ಕ್ರೆಡಿಟ್ ಕಾರ್ಡ್ ಮೂಲಕ ನೀವು ಯುಟಿಲಿಟಿ ಬಿಲ್ಗಳು ತಿಂಗಳಿಗೆ 50,000 ದಾಟಿದರೆ 1% ಚಾರ್ಜಸ್ ಅಪ್ಲೈ ಆಗುತ್ತೆ. ಯುಟಿಲಿಟಿ ಬಿಲ್ ಅಂದ್ರೆ ಟೆಲಿಫೋನ್ ಮೊಬೈಲ್ ವಿದ್ಯುತ್ ಬಿಲ್ ಇನ್ಶೂರೆನ್ಸ್ ಮುಂತಾದ ಬಿಲ್ಗಳು ಸೇರಿರುತ್ತವೆ ಡಿಸೆಂಬರ್ ಒಂದ ರಿಂದಲೇ ಈ 1% ಎಕ್ಸ್ಟ್ರಾ ಚಾರ್ಜಸ್ SBI ಕಾರ್ಡ್ ನಲ್ಲೂ ಕೂಡ ಅಪ್ಲೈ ಆಗೋಕೆ ಶುರುವಾಗಿದೆ 50,000 ದಾಟಿದಾಗ.
ಯಾವ ಕಾರ್ಡ್ ಗಳ ಮೇಲೆ ಈ ಚೇಂಜಸ್ ಅಪ್ಲೈ ಆಗುತ್ತೆ:
SBI ಇತ್ತೀಚಿಗೆ ನ್ಯೂ ಕ್ಲಬ್ ವಿಸ್ತಾರ SBI ಕ್ರೆಡಿಟ್ ಕಾರ್ಡ್ ಕ್ಲಬ್ ವಿಸ್ತಾರ SBI ಕ್ರೆಡಿಟ್ ಕಾರ್ಡ್ ಪ್ರೈಮ್ ಇಶ್ಯೂ ಮಾಡೋದನ್ನ ನಿಲ್ಲಿಸಿದೆ. ಆದರೆ ಈಗ ಆಲ್ರೆಡಿ ಈ ಕಾರ್ಡ್ಸ್ ಬಳಸುತ್ತಿರುವರು ಕಂಟಿನ್ಯೂ ಮಾಡಬಹುದು ಯೂಸ್ ಮಾಡಬಹುದು.
Yes ಬ್ಯಾಂಕ್ ಕ್ರೆಡಿಟ್ ಕಾರ್ಡ್:
Yes ಬ್ಯಾಂಕ್ ನ ಮಾಕಿ ಕ್ರೆಡಿಟ್ ಕಾರ್ಡ್ಸ್ ಮೂಲಕ ನೀವು ಹೋಟೆಲ್ ಬುಕ್ ಮಾಡಿದ್ರೆ ಅಥವಾ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ರೆ ಆ ಬುಕಿಂಗ್ ಇನ್ವಾಯ್ಸ್ ವ್ಯಾಲ್ಯೂನ 70% ಹಣಕ್ಕೆ ಮಾತ್ರ ಎಸ್ ರಿವಾರ್ಡ್ಸ್ ಪಾಯಿಂಟ್ಸ್ ರಿಡೀಮ್ ಮಾಡ್ಕೋಬಹುದು ಅಥವಾ ಮ್ಯಾಕ್ಸಿಮಮ್ ಅಂದ್ರೆ 3 ಲಕ್ಷ ರಿವಾರ್ಡ್ ಪಾಯಿಂಟ್ಸ್ ರಿಡೀಮ್ ಮಾಡ್ಕೋಬಹುದು ಎರಡರಲ್ಲಿ ಯಾವುದು ಕಡಿಮೆ ಇರುತ್ತೆ ಅದೇ ರಿಡೀಮ್ ಆಗುತ್ತೆ.
ಅದೇ ರೀತಿ ರಿಸರ್ವ್ ಕ್ರೆಡಿಟ್ ಕಾರ್ಡ್ ನಲ್ಲಿ ಅಪ್ ಟು ಎರಡು ಲಕ್ಷ ಎಸ್ ರಿವಾರ್ಡ್ಸ್ ಪಾಯಿಂಟ್ಸ್ ಹಾಗೆ yes ಬ್ಯಾಂಕ್ ನ ಬೇರೆ ಕ್ರೆಡಿಟ್ ಕಾರ್ಡ್ ಗಳಿಗೆ ಅಪ್ ಟು 1 ಲಕ್ಷ ಎಸ್ ರಿವಾರ್ಡ್ಸ್ ಪಾಯಿಂಟ್ಸ್ ಪಡ್ಕೋಬಹುದು ನೆನಪಿರಲಿ ಇದು ಏರ್ ಟಿಕೆಟ್ ಹಾಗೂ ಹೋಟೆಲ್ ಬುಕಿಂಗ್ ಮೇಲಿನ ರಿವಾರ್ಡ್ ಪಾಯಿಂಟ್ಸ್ ಮೇಲಿನ ರೂಲ್ಸ್.
ಇದರ ಜೊತೆಗೆ ಗಿಫ್ಟ್ ವೋಚರ್ ಹಾಗೂ ಸ್ಟೇಟ್ಮೆಂಟ್ ಕ್ರೆಡಿಟ್ ಮೇಲೆ ಈಗ ಆಲ್ರೆಡಿ ಇರೋ ರಿಡೆಂಪ್ಷನ್ ಮೇಲಿನ ಚಾರ್ಜಸ್ ರೂಲ್ಸ್ ಕಂಟಿನ್ಯೂ ಆಗುತ್ತೆ.
ICICI ಕ್ರೆಡಿಟ್ ಕಾರ್ಡ್:
ನವೆಂಬರ್ 15 ರಿಂದಲೇ ICICI ಕ್ರೆಡಿಟ್ ಕಾರ್ಡ್ ನ ಇಂಟರೆಸ್ಟ್ ರೇಟ್ 3.75% ಗೆ ಹೆಚ್ಚಾಗಿದೆ ಅಂದ್ರೆ ವರ್ಷಕ್ಕೆ 45% ಓವರ್ ಡ್ಯೂ ಇರೋ ಇಂಟರೆಸ್ಟ್ ಮೇಲೆ ಇದು ಅಪ್ಲೈ ಆಗುತ್ತೆ. ಲೇಟ್ ಪೇಮೆಂಟ್ ಚಾರ್ಜಸ್ ಕೂಡ ಬದಲಾಗಿದೆ 50,000 ಗಿಂತ ಜಾಸ್ತಿ ಬ್ಯಾಲೆನ್ಸ್ ಇದ್ರೆ 13,00 ವರೆಗೆ ಲೇಟ್ ಪೇಮೆಂಟ್ ಫೀಸ್ ಅಪ್ಲೈ ಆಗುತ್ತೆ.
ಇನ್ನು ಸರ್ಕಾರಿ ಸಂಬಂಧಿತ ಟ್ರಾನ್ಸಾಕ್ಷನ್ ಗಳಿಗೆ ಇನ್ನು ಮುಂದೆ ICICI ಕಾರ್ಡ್ ಗಳಿಗೆ ರಿವಾರ್ಡ್ ಪಾಯಿಂಟ್ ಸಿಗಲ್ಲ ಇನ್ನು ಥರ್ಡ್ ಪಾರ್ಟಿ ಎಜುಕೇಷನಲ್ ಪೇಮೆಂಟ್ ಗಳು ಹಾಗೂ 50,000 ಗಿಂತ ಹೆಚ್ಚು ಮೊತ್ತದ ಯುಟಿಲಿಟಿ ಬಿಲ್ ಪೇಮೆಂಟ್ ಗಳ ಮೇಲೆ 1% ಚಾರ್ಜ್ ಐಸಿಐ ಕ್ರೆಡಿಟ್ ಕಾರ್ಡ್ ಗೂ ಬೀಳುತ್ತೆ.
ಇವೆಲ್ಲ ಕ್ರೆಡಿಟ್ ಕಾರ್ಡ್ ಗಳಿಗೆ ಸಂಬಂಧಪಟ್ಟಂತ ಮಾಹಿತಿ ನಿಮ್ಮ ಗಮನಕ್ಕೆ ಇರಲಿ ಟೈಮಿಗೆ ಕರೆಕ್ಟಾಗಿ ಬಿಲ್ ಕಟ್ಟಿದರೆ ಯಾವ ಚಾರ್ಜಸ್ ಅಪ್ಲೈ ಆಗೋದಿಲ್ಲ ಕ್ರೆಡಿಟ್ ಕಾರ್ಡ್ ನಿಂದ ಲಾಭನೆ ಇದೆ. ಹಾಗಾಗಿ ಜಾಣ್ಮೆಯಿಂದ ಬಳಸೋದನ್ನ ಕಲಿಬೇಕು. ಆಗಲೇ ಹೇಳಿದ ಹಾಗೆ ಆಕ್ಸಿಸ್ ನಿಯೋ ಕ್ರೆಡಿಟ್ ಕಾರ್ಡ್ ಅನ್ನ ಲೈಫ್ ಟೈಮ್ ಫ್ರೀಯಾಗಿ ಅಪ್ಲೈ ಮಾಡಬೇಕು ಅಂತ ಹೇಳಿದ್ರೆ web.axisbank.co.in/Digital-Channel/Web-Form/ ಲಿಂಕ್ ಇದೆ.
Aadhaar Card ಡೆಡ್ ಲೈನ್:
ಡಿಸೆಂಬರ್ 14 ರವರೆಗೆ ಮಾತ್ರ ಉಚಿತವಾಗಿ ಆಧಾರ್ ಕಾರ್ಡ್ ಅನ್ನ ಅಪ್ಡೇಟ್ ಮಾಡ್ಕೋಬಹುದು ಫ್ರೀ ಆಫ್ ಕಾಸ್ಟ್ ಆಮೇಲೆ ಚಾರ್ಜಸ್ ಇರುತ್ತೆ ನೀವು ಹೆಸರು, ಅಡ್ರೆಸ್, ಡೇಟ್ ಆಫ್ ಬರ್ತ್ ಏನಾದ್ರು ಅಪ್ಡೇಟ್ ಮಾಡಬೇಕು ಅಂದ್ರೆ ಆನ್ಲೈನ್ ಪೋರ್ಟಲ್ ಮೂಲಕ ಫ್ರೀಯಾಗಿ ಮಾಡ್ಕೋಬಹುದು.
ಇದರ ಜೊತೆಗೆ ಜುಲೈನಲ್ಲಿ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡೋ ಡೆಡ್ ಲೈನ್ ಮಿಸ್ ಮಾಡ್ಕೊಂಡಿರೋವರಿಗೆ ಈಗ ಕೊನೆಯ ಚಾನ್ಸ್ ಕೊಟ್ಟಿದೆ ಡಿಪಾರ್ಟ್ಮೆಂಟ್, ಡಿಸೆಂಬರ್ 31 ಒಂದರ ಒಳಗೆ ಪೆನಾಲ್ಟಿಯೊಂದಿಗೆ ಐಟಿ ಆರ್ ಫೈಲ್ ಮಾಡಬಹುದು. ಫ್ರೆಂಡ್ಸ್ ಇದಾಗಿತ್ತು ನಿಮಗೆ ಡಿಸೆಂಬರ್ ನ ಪ್ರಮುಖ ಡೆಡ್ ಲೈನ್ ಗಳು ಹಾಗೂ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಆಗಿರುವ ಬದಲಾವಣೆ ಚಾರ್ಜಸ್ ನಲ್ಲಿ ಆಗಿರುವ ಬದಲಾವಣೆಯನ್ನು ತಿಳಿಸಿಕೊಡುವ ಪ್ರಯತ್ನ.
ಇದನ್ನೂ ಓದಿ: ಪಾನ್ ಕಾರ್ಡ್ 2.0 ಅಂದರೆ ಏನು?





