ಎಲ್ಲರಿಗೂ ನಮಸ್ಕಾರ, 2024 25ನೇ ಶೈಕ್ಷಣಿಕ ಸಾಲಿಗೆ B Ed, MA, M Com, MSc, MBA, MCA ಇತ್ಯಾದಿ ಸ್ನಾತಕೋತ್ತರ ಕೋರ್ಸ್ಗಳು ಮತ್ತೆ ಪ್ರೊಫೆಷನಲ್ ಡಿಗ್ರಿಗಳಿಗೆ BCM ಹೌಸ್ ಗೆ ಯಾವಾಗ ಅರ್ಜಿಗಳನ್ನ ಆಹ್ವಾನಿಸಲಾಗುತ್ತೆ ಅನ್ನುವಂತಹ ಪ್ರಶ್ನೆಗೆ ಫುಲ್ ಸ್ಟಾಪ್ ಇಡುವಂತಹ ಟೈಮ್ ಬಂದಿದೆ.
2024 25 ನೇ ಶೈಕ್ಷಣಿಕ ಸಾಲಿನ B Ed ಪಿಜಿ ಕೋರ್ಸ್ಗಳು ಹಾಗೆ ಪ್ರೊಫೆಷನಲ್ ಡಿಗ್ರಿಗಳ ಹಾಸ್ಟೆಲ್ ಪ್ರವೇಶಾತಿಗೆ ಇದೀಗ ನೋಟಿಫಿಕೇಶನ್ ಅನ್ನು ಡಿಪಾರ್ಟ್ಮೆಂಟ್ ಆಫ್ ಬ್ಯಾಕ್ವರ್ಡ್ ಕ್ಲಾಸಸ್ ವೆಲ್ಫೇರ್ ನಿಂದ ಬಿಡುಗಡೆಗೊಳಿಸಲಾಗಿದೆ 2024/25 ನೇ ಶೈಕ್ಷಣಿಕ ಸಾಲಿಗೆ ಹಾಸ್ಟೆಲ್ ಗೆ ಅಡ್ಮಿಷನ್ ತಗೊಳ್ಬೇಕು ಅನ್ನುವಂತಹ ಏನು ಬಿಎಡ್ ವಿದ್ಯಾರ್ಥಿಗಳಿದ್ದಾರೆ ಅಥವಾ ಮಾಸ್ಟರ್ ಡಿಗ್ರಿ ಮಾಡ್ತಾ ಇರುವಂತವರು ಎಂಎ, ಎಂ ಕಾಂ, MSc, MBA, ಯಾವುದೇ ಒಂದು ಪಿಜಿ ಕೋರ್ಸನ್ನ ಮಾಡ್ತಾ ಇರಬಹುದು ಅಥವಾ ಯಾವುದೇ ಪ್ರೊಫೆಷನಲ್ ಡಿಗ್ರಿ ಇರಬಹುದು ಬಿಎಡ್ ಇರಬಹುದು ಇಂಜಿನಿಯರಿಂಗ್ ಇರಬಹುದು ಅಥವಾ LLB ಇರಬಹುದು ಯಾವುದೇ ಪ್ರೊಫೆಷನಲ್ ಡಿಗ್ರಿ ಇರಬಹುದು ನಿಮ್ಮೆಲ್ಲರಿಗೂ ಕೂಡ ಡಿಪಾರ್ಟ್ಮೆಂಟ್ ಆಫ್ ಬ್ಯಾಕ್ವರ್ಡ್ ಕ್ಲಾಸಸ್ ಕಡೆಯಿಂದ ಹಾಸ್ಟೆಲ್ ಗೆ ಅರ್ಜಿ ಸಲ್ಲಿಸೋದಕ್ಕೆ ಅವಕಾಶ ಸಿಗ್ತಾ ಇದೆ.
ಯಾವಾಗ ಅರ್ಜಿ ಸಲ್ಲಿಕೆ ಆರಂಭ ಆಗುತ್ತೆ? ಯಾವಾಗ ಕೊನೆಯ ದಿನಾಂಕ ಇದೆ ಯಾವಾಗ ಕೌನ್ಸಿಲಿಂಗ್ ಇರುತ್ತೆ ಯಾವಾಗ ಸೀಟ್ ಅಲೋಟ್ಮೆಂಟ್ ಮಾಡ್ತಾರೆ ಇತ್ಯಾದಿ ಎಲ್ಲಾ ಪ್ರಮುಖ ದಿನಾಂಕಗಳ ಕುರಿತಾಗಿ ತಿಳಿಸಿಕೊಡುವ ಪ್ರಯತ್ನವನ್ನ ಮಾಡ್ತೀನಿ.
BCM 2024 ಹಾಸ್ಟೆಲ್ ಅರ್ಜಿ ಸಲ್ಲಿಸುವ ದಿನಾಂಕಗಳು
2024 25 ನೇ ಸಾಲಿನ ಮೆಟ್ರಿಕ್ ನಂತರದ ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಕಲ್ಪಿಸಲು ನಿಗದಿ ಪಡಿಸಿರುವ ಕಾಲಾನುಕ್ರಮಣಿಕೆ ಅನ್ನುವಂತಹ ಒಂದು ಶೀರ್ಷಿಕೆ ಅಡಿಯಲ್ಲಿ ಡಿಪಾರ್ಟ್ಮೆಂಟ್ ಆಫ್ ಬ್ಯಾಕ್ವರ್ಡ್ ಕ್ಲಾಸಸ್ ವೆಲ್ಫೇರ್ ಕಡೆಯಿಂದ ಒಂದು ಅಧಿಕೃತವಾದಂತಹ ಮಾಹಿತಿ ಬರ್ತಾ ಇದೆ.
ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸೋದಕ್ಕೆ ಪ್ರಾರಂಭ ಆಗುವ ದಿನಾಂಕ ಅಕ್ಟೋಬರ್ ಎರಡನೇ ತಾರೀಕು
ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/10 2024 ಈ ತಿಂಗಳ ಅಷ್ಟೊತ್ತಿಗೆ ಬಿಎಡ್ ಪ್ರವೇಶಾತಿ ಕೂಡ ಆರಂಭ ಆಗುವುದರಿಂದ ಅಂದ್ರೆ ಹೊಸ ಬಿಎಡ್ ಪ್ರವೇಶಾತಿ ಆರಂಭ ಆಗೋದ್ರಿಂದ ಇನ್ನು ಕೆಲವು ವಿಶ್ವವಿದ್ಯಾಲಯಗಳಲ್ಲಿ PG ಅಡ್ಮಿಷನ್ ನಡೆದಿರೋದ್ರಿಂದ 30ನೇ ತಾರೀಕಿನವರೆಗೂ ಕೂಡ ಅವಕಾಶ ಕೊಟ್ಟಿದ್ದಾರೆ.
ಹೊಸ ಅರ್ಜಿಗಳನ್ನ ತಾಲೂಕ ಕಲ್ಯಾಣ ಅಧಿಕಾರಿಗಳು ಪರಿಶೀಲನೆ ಮಾಡೋದಕ್ಕೆ ಅಂತಿಮ ದಿನಾಂಕವನ್ನ ನವೆಂಬರ್ 5 ನೇ ತಾರೀಕು ಫಿಕ್ಸ್ ಮಾಡಿದ್ದಾರೆ ತಾಲೂಕು ಸಮಿತಿಯ ಮೂಲಕ ಆಯ್ಕೆಯಾದ ಹೊಸ ವಿದ್ಯಾರ್ಥಿಗಳ ಮೆರಿಟ್ ಲಿಸ್ಟ್ ಅನ್ನ ಅಥವಾ ಸೆಲೆಕ್ಷನ್ ಲಿಸ್ಟ್ ಅನ್ನ ಬಿಡೋದಕ್ಕೆ ನಿಗದಿ ಪಡಿಸಿದ ದಿನಾಂಕ ನವೆಂಬರ್ 8ನೇ ತಾರೀಕು ಆಯ್ಕೆಯಾದ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಅಡ್ಮಿಷನ್ ತಗೊಳ್ಳೋದಕ್ಕೆ ಕೊನೆಯ ದಿನಾಂಕ ನವೆಂಬರ್ 11ನೇ ತಾರೀಕು
ಎರಡನೇ ತಾರೀಕಿನಿಂದ ಹಾಸ್ಟೆಲ್ ಅಪ್ಲಿಕೇಶನ್ ಓಪನ್ ಆಗುತ್ತೆ 30ನೇ ತಾರೀಕಿನ ತನಕ ಕೂಡ ಹಾಸ್ಟೆಲ್ ಅಪ್ಲಿಕೇಶನ್ ಓಪನ್ ಇರುತ್ತೆ ಐದನೇ ತಾರೀಕಿಗೆ ವೆರಿಫಿಕೇಶನ್ ಮಾಡ್ತಾರೆ ಎಂಟನೇ ತಾರೀಕಿಗೆ ಸೆಲೆಕ್ಷನ್ ಲಿಸ್ಟ್ ಬಿಡ್ತಾರೆ 11ನೇ ತಾರೀಕಿಗೆ ನೀವು ಸೆಲೆಕ್ಟ್ ಆಗಿದ್ರೆ ಹಾಸ್ಟೆಲ್ ಗೆ ಅಡ್ಮಿಷನ್ ಅನ್ನ ತಗೊಳ್ಬೇಕಾಗುತ್ತೆ.
ಈಗಾಗಲೇ ಡಿಪಾರ್ಟ್ಮೆಂಟ್ ಆಫ್ ಬ್ಯಾಕ್ವರ್ಡ್ ಕ್ಲಾಸಸ್ ಕಡೆಯಿಂದ ನಿಗದಿ ಪಡಿಸಿದ್ದಾರೆ
ಬಿಸಿಎಂ ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಬೇಕು ಅಂತ ಯಾರೆಲ್ಲ ಬಿಎಡ್ ವಿದ್ಯಾರ್ಥಿಗಳು ಪಿಜಿ ವಿದ್ಯಾರ್ಥಿಗಳು ವೇಟ್ ಮಾಡ್ತಾ ಇದ್ದೀರಿ ಇದು ನಿಮ್ಮೆಲ್ಲರಿಗೂ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಹಾಸ್ಟೆಲ್ ಗೆ ಅರ್ಜಿನ ಸಲ್ಲಿಸಿ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಓದಬೇಕು ಅನ್ನುವಂತಹ ನಿಮ್ಮ ಕನ್ಸರ್ನ್ ಅನ್ಸಾಗಲಿ.
ಇದನ್ನೂ ಓದಿ: NABARD ಆಫೀಸ್ ಅಟೆಂಡೆಂಟ್ Recruitment ೨೦೨೪!!










