Sweet Potato ತಿನ್ನುವುದರಿಂದ ಆಗುವ ಪ್ರಯೋಜನಗಳು.!

December 20, 2024 1:46 AM
Sweet Potato ತಿನ್ನುವುದರಿಂದ ಆಗುವ ಪ್ರಯೋಜನಗಳು.!

ಎಲ್ಲರಿಗೂ ನಮಸ್ಕಾರ, Sweet Potato ಚಳಿಗಾಲಕ್ಕೆ ಹೇಳಿ ಮಾಡಿಸಿದ ಆಹಾರ ಯಾಕಂತೀರಾ ಇದರಲ್ಲಿ ಅಷ್ಟರ ಮಟ್ಟಿಗೆ ಪ್ರಯೋಜನಕಾರಿ ಪೋಷಕಾಂಶಗಳ ಭಂಡಾರವೇ ಅಡಗಿದೆ ಆ ನಿಟ್ಟಿನಲ್ಲಿ ಸಿಹಿ ಗೆಣಸು ಸೇವನೆಯ ಭರಪೂರ ಪ್ರಯೋಜನಗಳ ವಿವರ ಇಲ್ಲಿದೆ ನೋಡಿ ಚಳಿಗಾಲಕ್ಕೆ ಹೇಳಿ ಮಾಡಿಸಿದ ಆಹಾರ ಗೆಣಸು ಸಿಹಿಗೆಣಸಿನ ಚಮತ್ಕಾರಿ ಪ್ರಯೋಜನಗಳಿವು ಸಿಹಿಗೆಣಸು ಒಂದು ಜಾತಿಯ ಗೆಡ್ಡೆ ಇದು.

ಗೆಡ್ಡೆ ಜಾತಿಯ ತರಕಾರಿಗಳಲ್ಲಿ ಪ್ರಮುಖ ವಾದದ್ದು ಇದರಿಂದ ತುಂಬಾನೇ ಆರೋಗ್ಯ ಪ್ರಯೋಜನಗಳು ಇವೆ ಇದರಲ್ಲಿ ಯಥೇಚ್ಛವಾದ ಪೋಷಕಾಂಶಗಳು ತುಂಬಿದೆ ಚಳಿಗಾಲಕ್ಕೆ ಗೆಣಸು ಹೇಳಿ ಮಾಡಿಸಿದ ಆಹಾರ ಅಂದ್ರೆ ತಪ್ಪಾಗುವುದಿಲ್ಲ ಯಾಕಂದ್ರೆ ಇದರಲ್ಲಿನ ಪೌಷ್ಟಿಕ ಸತ್ವವು ದೇಹ ಹಾಗೂ ಚರ್ಮಕ್ಕೆ ಬೇಕಾದ ತೇವಾಂಶವನ್ನ ನೀಡುತ್ತೆ ಹೆಸರೇ ಸೂಚಿಸುವಂತೆ ಸಿಹಿ ಗೆಣಸು ಸ್ವಾಭಾವಿಕವಾಗಿ ಸಿಹಿ ರುಚಿಯನ್ನ ಹೊಂದಿರುತ್ತೆ ಗೆಣಸು ವಿಟಮಿನ್ ಬಿ1 ಬಿ2 ಬಿ3 ಬಿ6 ಬಿ9 ಕ್ಯಾಲ್ಸಿಯಂ ಸೋಡಿಯಂ ಜಿಂಕ್ ಮೆಗ್ನಿಷಿಯಂ ಇನ್ನು ಅನೇಕ ಪೋಷಕಾಂಶಗಳನ್ನ ತನ್ನಲ್ಲಿ ಅಡಗಿಸಿಕೊಂಡಿದೆ.

ತಿಳಿ ಗುಲಾಬಿ ಕಂದು ತಿಳಿ ಹಳದಿ ನೀರಳೆ ಮುಂತಾಗಿ ಒಂದಕ್ಕಿಂತ ಹೆಚ್ಚು ಬಣ್ಣಗಳಲ್ಲಿರುವ ಈ ಗೆಣಸಿನ ಎಲ್ಲ ಬಣ್ಣಗಳು ಆರೋಗ್ಯಕ್ಕೆ ಒಳ್ಳೆಯವೆ ಇದರ ಬಣ್ಣ ಗಾಡವಾದಷ್ಟು ಇದರಲ್ಲಿರುವ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚು ಅಂತ ತಿಳಿಯಬಹುದು ಗೆಣಸು ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದ್ದು ಇದನ್ನ ಬೇಯಿಸಿ ಇಲ್ಲವೇ ಸುಟ್ಟು ತಿನ್ನುವುದಲ್ಲದೆ ಇದರಿಂದ ರೊಟ್ಟಿಗಳನ್ನು ಕೆಲವರು ತಯಾರಿಸುತ್ತಾರೆ.

Sweet Potato ತಿನ್ನುವುದರಿಂದ ಉಪಯೋಗಗಳು

ಸುಮ್ಮನೆ ಬೇಯಿಸಿ ತಿನ್ನುವುದರಿಂದ ಹಿಡಿದು ಪಲ್ಯ ಬಾಜಿಗಳ ರೀತಿಯಲ್ಲಿ ಅಡುಗೆಗೆ ಬಳಸಲಾಗುತ್ತೆ ಸಲಾಡ್ ಗೆ ಚಾಟ್ ಗಳಿಗೆ ಹಾಕಿ ರುಚಿ ಹೆಚ್ಚಿಸಲಾಗುತ್ತೆ ಬಜ್ಜಿಗಳ ರೀತಿಯಲ್ಲಿಯೂ ಕೆಲವರು ಸವಿಯುತ್ತಾರೆ ಹಾಗಿದ್ರೆ ಗೆಣಸು ಗೆಡ್ಡೆಯನ್ನು ತಿನ್ನುವುದರಿಂದ ಆಗುವ ಲಾಭಗಳೇನು ಅಂದ್ರೆ ಸಿಹಿ ಗೆಣಸಿನಲ್ಲಿ ಪೋಷಕಾಂಶಗಳಿಗೆ ಕೊರತೆ ಇಲ್ಲ ಇದನ್ನ ತಿಂದರೆ ದೇಹಕ್ಕೆ ವಿಟಮಿನ್ ಎ ವಿಟಮಿನ್ ಸಿ ಪೊಟ್ಯಾಶಿಯಂ ಮತ್ತು ಫೈಬರ್ ನಂತಹ ಪೋಷಕಾಂಶಗಳು ಹೇರಳವಾಗಿ ಸಿಗುತ್ತವೆ ಹಸಿಯಾಗಿ ಸೇವಿಸುವುದಕ್ಕಿಂತಲೂ ಬೇಯಿಸಿ ಸೇವಿಸುವುದು ಬಹಳ ಉಪಯುಕ್ತ ದೇಹವನ್ನ ಆರೋಗ್ಯಕರವಾಗಿ ಇಡುವ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು.

ಬಹಳ ಮುಖ್ಯ ಇಲ್ಲದಿದ್ದರೆ ನಾವು ಅನೇಕ ರೋಗಗಳಿಗೆ ಒಳಗಾಗಬೇಕಾಗುತ್ತೆ ನಿಯಮಿತವಾಗಿ ಸಿಹಿ ಗೆಣಸನ್ನ ಸೇವಿಸಿದರೆ ಶೀತ ಕೆಮ್ಮು ಜ್ವರ ಹಾಗೆಯೇ ಇತರ ವೈರಲ್ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತೆ ಯಾಕಂದ್ರೆ ವಿಟಮಿನ್ ಎ ಮತ್ತು ವಿಟಮಿನ್ ಸಿ ಈ ಆಹಾರದಲ್ಲಿ ಅಧಿಕವಾಗಿರುತ್ತೆ ಇನ್ನು ಗೆಣಸಿನಲ್ಲಿ ನಾರಿನ ಅಂಶ ವಿಫಲವಾಗಿದೆ ಹೆಚ್ಚು ನಾರು ಇರುವಂತಹ ಆಹಾರಗಳು ನಮಗೆ ಹಲವು ರೀತಿಯಲ್ಲಿ ಉಪಕಾರವನ್ನ ಮಾಡಬಲ್ಲವು ಅದರಲ್ಲೂ ಕಳ್ಳ ಹಸಿವನ್ನು ಮಟ್ಟ ಹಾಕುವಲ್ಲಿ ಇದರ ನೆರವು ಅಗತ್ಯವಾಗಿ ಬೇಕಾಗುತ್ತೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವವನ್ನು ನೀಡುವ ಇವು ತಿಂದ ತೃಪ್ತಿಯನ್ನು ಹೆಚ್ಚಿಸುತ್ತವೆ ಕರಗಬಲ್ಲ ನಾರುಗಳು ದೇಹದಲ್ಲಿ ಅಡಗಿರುವ ಕೊಬ್ಬಿನ ಅಂಶವನ್ನು ಕರಗಿಸಿದರೆ ಕರಗದಿರುವ ನಾರು ಮಲಬದ್ಧತೆಯನ್ನ ನಿವಾರಿಸುತ್ತೆ.

ಗ್ಯಾಸ್ ನಂತಹ ಯಾವುದೇ ಸಮಸ್ಯೆಗಳಿದ್ದರೂ ಕೂಡ ಇದರಿಂದ ಮುಕ್ತಿ ಸಿಗಲಿದೆ ಇದರಲ್ಲಿರುವ ಪೊಟ್ಯಾಶಿಯಂ ಅಂಶವು ಡೈಯೂರೇಟಿಕ್ ನಂತೆ ಕೆಲಸ ಮಾಡುತ್ತೆ ಅಂದರೆ ಹೆಚ್ಚುವರಿ ನೀರಿನಂಶ ದೇಹದಲ್ಲಿ ಉಳಿಯದಂತೆ ಹೊಟ್ಟೆ ಉಬ್ಬರಿಸಿ ದಂತೆಯೂ ಪರಿಣಾಮ ಬೀರುತ್ತೆ ತೂಕ ಇಳಿಸುವವರಿಗೂ ಇದು ಉಪಯುಕ್ತ ಅಂದರೆ ನಾರಿನಂಶ ಹೆಚ್ಚಿರುವುದರಿಂದ ಬೇಗ ಹಸಿವಾಗುವುದಿಲ್ಲ ಆಗಾಗ ತಿನ್ನುವ ಬೇಡಿಕೆಯನ್ನ ಮಟ್ಟ ಹಾಕಬಹುದು ಜೊತೆಗೆ ದೇಹದಲ್ಲಿನ ಹೆಚ್ಚುವರಿ ನೀರನ್ನು ತೆಗೆದು ಹೊಟ್ಟೆಯೆಲ್ಲ ಹಗುರವಾಗಿರುವಂತೆ ಮಾಡುತ್ತೆ ಸಿಹಿ ಗೆಣಸಿನಲ್ಲಿ ಕೆರೋಟಿನಾಯಿಡ್ ಗಳು ಅಧಿಕವಾಗಿದೆ ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತೆ.

ಸಿಹಿ ಗೆಣಸಿನಲ್ಲಿರುವ ಆಂತೋಸಯಾನಿನ್ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತೆ ಕ್ಯಾನ್ಸರ್ ನಿಂದ ದೂರವಿರಲು ನಿಮ್ಮ ಆಹಾರದಲ್ಲಿ ಸಿಹಿ ಗೆಣಸನ್ನ ನಿಯಮಿತವಾಗಿ ಬಳಸಬೇಕು ಅಂತಾರೆ ತಜ್ಞರು ಚಳಿಗಾಲದಲ್ಲಿ ಚರ್ಮ ಒಣಗುತ್ತೆ ಈ ಅವಧಿಯಲ್ಲಿ ಸಿಹಿಗೆಣಸು ತಿಂದರೆ ತ್ವಚೆ ತೇವಾಂಶದಿಂದ ಕೂಡಿರುತ್ತೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುತ್ತೆ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತೆ ದೇಹದಲ್ಲಿನ ಸ್ವತಂತ್ರ ರಾಡಿಕಲ್ ಗಳನ್ನ ಕಡಿಮೆ ಮಾಡುತ್ತೆ ಹಾಗೆಯೇ ಚರ್ಮಕ್ಕೆ ವಯಸ್ಸಾಗುವುದನ್ನು ತಪ್ಪಿಸುತ್ತದೆ ಸಿಹಿ ಗೆಣಸಿನ ಸೇವನೆಯಿಂದ ರಕ್ತದೊತ್ತಡದ ಮಟ್ಟ ಸುಧಾರಿಸುತ್ತೆ.

ಪೊಟ್ಯಾಶಿಯಂ ಕೂಡ ಹೆಚ್ಚಾಗಿ ಇರುವುದರಿಂದ ಹೃದಯದ ಆರೋಗ್ಯಕ್ಕೆ ಬಹಳ ಅವಶ್ಯಕ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಗೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ತುಂಬಾ ಪ್ರಯೋಜನಕಾರಿ ಇದು ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಹಾಗೆಯೇ ಶಾಂತತೆಯ ಭಾವನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತೆ ಇದು ಒತ್ತಡದ ಸಮಯದಲ್ಲಿ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳ ಮೇಲೆ ಪ್ರಭಾವ ಬೀರುವ ಅಂಶ ಇಟ್ಟುಕೊಂಡಿದೆ ಸಿಹಿ ಗೆಣಸುಗಳಲ್ಲಿ ಕಂಡುಬರುವ ಕೋಲಿನ್ ಎಂಬ ಪೋಷಕಾಂಶವು ಮೆದುಳಿನ ಬೆಳವಣಿಗೆ ಹಾಗೆಯೇ ಅರಿವಿನ ಕಾರ್ಯಕ್ಕೆ ಅತ್ಯಗತ್ಯವಾಗಿದೆ ಇದರಿಂದ ಮೆದುಳಿನ ಕಾರ್ಯ ಚುರುಕಾಗಿಸುತ್ತೆ.

ಸಿಹಿ ಗೆಣಸಿನಲ್ಲಿ ಸಿಹಿ ಸುಚ್ಚಂಕ ಕಡಿಮೆ ಇದ್ದು ರಕ್ತದಲ್ಲಿ ನಿಧಾನವಾಗಿ ಗ್ಲುಕೋಸ್ ಬಿಡುಗಡೆಯಾಗುವಂತೆ ನೋಡಿಕೊಳ್ಳುತ್ತೆ ಇದು ರಕ್ತದ ಹರಿವಿನಲ್ಲಿ ಹೆಚ್ಚಾಗದಂತೆ ರಕ್ಷಣೆ ಮಾಡಿ ಬ್ಲಡ್ ಶುಗರ್ ಲೆವೆಲ್ ಏರಿಕೆಯಾಗದಂತೆ ತಪ್ಪಿಸುತ್ತೆ ಹೀಗಾಗಿ ಮಧುಮೇಹ ಹೊಂದಿರುವರು ಆಗಾಗ ಸಿಹಿಗೆಣಸು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬಹುದು ಸಿಹಿಗೆಣಸಿನಲ್ಲಿರುವ ಬೀಟಾ ಕೆರೋಟಿನ್ ಮತ್ತು ವಿಟಮಿನ್ ಎ ದೃಷ್ಟಿಯ ತೊಂದರೆಗಳನ್ನು ಕಡಿಮೆ ಮಾಡುತ್ತೆ ಇದು ಕಣ್ಣಿನ ಪೊರೆ ದೃಷ್ಟಿ ದೋಷ ಕಣ್ಣುಗಳಲ್ಲಿ ಉರಿ ಇನ್ನು ಅನೇಕ ಸಮಸ್ಯೆಗಳಿಂದ ಪಾರು ಮಾಡಬಲ್ಲದು ಅಲ್ಲದೆ ಇದರಲ್ಲಿನ ವಿಟಮಿನ್ C ಹಾಗೆ ಐರನ್ ಬಿಳಿ ಹಾಗೂ ಕೆಂಪು ರಕ್ತ ಕಣವನ್ನು ವೃದ್ಧಿಸುತ್ತೆ ಯಾವುದೇ ರೋಗವು ಹತ್ತಿರ ಸುಳಿಯದಂತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ.

ಇದನ್ನೂ ಓದಿ: ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ ಆರೋಗ್ಯಕ್ಕೆ ಯಾವುದು ಉತ್ತಮ.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment