ಎಲ್ಲರಿಗೂ ನಮಸ್ಕಾರ,
ಚಾಮರಾಜನಗರದಲ್ಲೂ ಕೂಡ ಮಳೆಯ ಆರ್ಭಟ ಮುಂದುವರೆದಿದ್ದು ಇಲ್ಲಿಯೂ ಕೂಡ ಶಾಲಾ ಕಾಲೇಜುಗಳಿಗೆ ರಜೆಯನ್ನ ಘೋಷಿಸಲಾಗಿದೆ. ಫೆಂಗಲ್ ಸೈಕ್ಲೋನ್ ಹಿನ್ನಲೆ ಜಿಲ್ಲೆಯಾದ್ಯಂತ ರಜೆಯನ್ನ ಘೋಷಿಸಲಾಗಿದೆ. ಇನ್ನು ಪರೀಕ್ಷೆ ನಡೀತಾ ಇರುವ ಪದವಿ ಕಾಲೇಜುಗಳಿಗೆ ಹೊರತುಪಡಿಸಿ ಉಳಿದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆಯನ್ನ ಘೋಷಿಸಲಾಗಿದೆ ಒಂದಷ್ಟು ಪದವಿ ಕಾಲೇಜುಗಳಲ್ಲಿ ಈಗ ಎಕ್ಸಾಮ್ ನಡೀತಾ ಇದೆ.
ಹೀಗಾಗಿ ಎಲ್ಲೆಲ್ಲಿ ಎಕ್ಸಾಮ್ ನಡೀತಾ ಇದೆಯೋ ಆ ಪದವಿ ಕಾಲೇಜುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಶಾಲಾ ಕಾಲೇಜುಗಳಿಗೆ ಇವತ್ತು ರಜೆ ಇರಲಿದೆ. ಈ ಕುರಿತು ಜಿಲ್ಲಾಧಿಕಾರಿ ಶಿಲ್ಪ ನಾಗ್ ಆದೇಶವನ್ನು ಹೊರಡಿಸಿದ್ದಾರೆ.
ಇನ್ನು ಇಂದಿನ ರಜೆಯನ್ನ ಭಾನುವಾರ ತರಗತಿ ನಡೆಸಿ ಸರಿದೂಗಿಸುವುದಕ್ಕೆ ಪ್ಲಾನ್ಗಳು ಕೂಡ ನಡೆದಿರುವಂತದ್ದು ಇವತ್ತೇನು ರಜೆ ಕೊಟ್ಟಿದ್ದಾರಲ್ಲ ನೆಕ್ಸ್ಟ್ ಭಾನುವಾರ ರಜೆ ಕೊಡದೆ.
ಇಂದಿನ ಪಾಠಗಳನ್ನ ಆಗ ಸರಿದೂಗಿಸುವುದಕ್ಕೆ ಇಲ್ಲಿ ಡಿಸಿ ಚಿಂತನೆ ಕೂಡ ನಡೆಸಿದ್ದಾರೆ. ಹೀಗಾಗಿ ಇವತ್ತು ಚಾಮರಾಜನಗರ ಜಿಲ್ಲೆಯಲ್ಲೂ ಕೂಡ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ ಒಂದು ಕಡೆ ಮಳೆಯ ಆರ್ಭಟ ಮತ್ತೊಂದು ಕಡೆ ಚಳಿ ಕೂಡ ಅಷ್ಟೇ ಪ್ರಮಾಣದಲ್ಲಿದೆ ಸೋ ಹೀಗಾಗಿ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡು ಈ ಒಂದು ನಿರ್ಧಾರವನ್ನು ಘೋಷಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಮುಂದಿನ ಐದು ದಿನಗಳವರೆಗೆ ಭಾರಿ ಮಳೆ.!





