ಧಾರವಾಡ: ಖಾಲಿ ಇರುವಂತಹ ಸರ್ಕಾರಿ ಹುದ್ದೆಗಳ ಬರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯುತ್ತಿದೆ.
ವಿದ್ಯಾರ್ಥಿಗಳ ಈ ಪ್ರತಿಭಟನೆಯು ರಾಜ್ಯದ್ಯಂತ ಎಲ್ಲಾ ಕಡೆ ಸದ್ದು ಮಾಡುತ್ತಿದೆ.
ಕಾಂಗ್ರೆಸ್ ನಾಯಕರ ಫೋಟೋ ಹಿಡಿದು ಈ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಎಲ್ಲೆಡೆ ಘೋಷಣೆಗೆ ಕೂಗಲಾಗುತ್ತಿದೆ.
ಧಾರವಾಡ ವಿದ್ಯಾರ್ಥಿಗಳನ್ನು ನಿಲ್ಲಿಸಲು ಪೊಲೀಸರ ಅರಸಹಸ!
ಧಾರವಾಡದಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಘೋಷಣೆ ಕೂಡ ಎಲ್ಲಾ ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ.
ಹಾಗೂ ಪ್ರತಿಭಟನೆ ಮಾಡುತ್ತಿರುವವರನ್ನು ನಿಯಂತ್ರಿಸಲು ಪೊಲೀಸರು ಅರಸಹಸ ಪಡುತ್ತಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಯಾವುದೇ ಪಕ್ಷವಿದ್ದರೂ ಅದು ಕಾಂಗ್ರೆಸ್ ಆಗಿರಲಿ ಅಥವಾ ಬಿಜೆಪಿ ಆಗಿರಲಿ ಖಾಲಿ ಸರ್ಕಾರಿ ಹುದ್ದೆಗಳನ್ನು ಸರಿಯಾಗಿ ಭರ್ತಿ ಮಾಡುತ್ತಿಲ್ಲ.
ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಪರೀಕ್ಷೆಗೆ ಆಹ್ವಾನಿಸುತ್ತಾರೆ ಹಾಗೂ ಪರೀಕ್ಷೆ ನಡೆಸುತ್ತಾರೆ ಆದರೆ ಆನಂತರ ಪೇಪರ್ ಲೀಕ್ ಅಥವಾ ಇನ್ನಿತರ ಕಾರಣಗಳನ್ನು ನೀಡಿ ಮತ್ತೊಮ್ಮೆ ನೋಟಿಫಿಕೇಶನ್ ಬಿಡುಗಡೆ ಮಾಡುತ್ತಾರೆ.
ಇದನ್ನು ನೋಡಿ ನೋಡಿ ಬೇಸತ್ತಿರುವಂತಹ ರಾಜ್ಯದ ಯುವ ಸಮೂಹ ಇಟ್ಟಿಗೆದ್ದಿದ್ದಾರೆ. ಇದೇನು ಮೊದಲನೇ ಬಾರಿಯಲ್ಲ, ಈ ಹಿಂದೆ ಕೂಡ ವಿಜಯಪುರ ಮತ್ತು ಧಾರವಾಡದಲ್ಲಿ ಪ್ರತಿಭಟನೆಗಳ ನಡೆಯಲಿ ಹಾಗೂ ಈ ಬಾರಿ ಮತ್ತೆ ಧಾರವಾಡದಲ್ಲಿ ಪ್ರತಿಭಟನೆ ನಡೆಯುತ್ತದೆ.
ವಿರೋಧ ಪಕ್ಷವಾಗಿರುವ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ
ಕರ್ನಾಟಕದ ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷವಾಗಿರುವ ಬಿಜೆಪಿ ಕೂಡ ಧಾರವಾಡದಲ್ಲಿ ಈ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಆದರೆ ಬಿಜೆಪಿ ಪ್ರತಿಭಟನೆಗೂ ಹಿನ್ನೆಲೆ ಧಾರವಾಡದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿರುತ್ತದೆ. ಇದು ನಿಜವಾದ ಕಾಳಜಿ ಹೊಂದಿರುವಂತ ಪ್ರತಿಭಟನೆ ಆಗಿದೆ ಹಾಗೂ ಕೇವಲ ರಾಜಕೀಯ ಅಥವಾ ಇನ್ನಿತರ ಕಾರಣಕ್ಕೆ ಮಾಡುತ್ತಿರುವ ಪ್ರತಿಭಟನೆ ಅಲ್ಲ.
ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ನಾವು ವಯೋಮಿತಿ ಹೆಚ್ಚು ಮಾಡಿದ್ದೇವೆ ಎಂದು ಕಾರಣ ನೀಡುತ್ತಿದ್ದಾರೆ. ಪರೀಕ್ಷೆಗೆ ಕರೆದಿಲ್ಲ ಎಂದರೆ ವಯೋಮಿತಿ ಹೆಚ್ಚು ಮಾಡಿ ಏನು ಪ್ರಯೋಜನ ಎಂದು ಎಲ್ಲಾ ಕಡೆ ಪ್ರಶ್ನಿಸುತ್ತಿದ್ದಾರೆ.
Read More:
E-Swathu New Update 2026: ಗ್ರಾಮ ಪಂಚಾಯತಿ ಆಸ್ತಿ ಹೊಂದಿರುವವರಿಗೆ ಬಿಗ್ ಅಪ್ಡೇಟ್! ಸಂಪೂರ್ಣ ಮಾಹಿತಿ ಇಲ್ಲಿದೆ.
Facebook ನಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸಿ: Profile ಮಾನಿಟೈಸೇಶನ್ ಮಾಡುವ ಸುಲಭ ಹಂತಗಳು ಇಲ್ಲಿವೆ!





