ನಮಸ್ಕಾರ, ಕೆಮ್ಮಿನ ಸಮಸ್ಯೆ ಇದ್ದಾಗ ರಾತ್ರಿ ವೇಳೆಯೇ ಕೆಮ್ಮು ವಿಪರೀತ ಕಾಡತೊಡಗುತ್ತೆ ಇದರಿಂದ ನಿದ್ರೆಗೂ ತೊಂದರೆ ನಿಮಗೂ ರಾತ್ರಿ ಹೊತ್ತಿನಲ್ಲೇ ಕೆಮ್ಮು ಜಾಸ್ತಿ ಆಗುತ್ತಾ ಹಾಗಿದ್ರೆ ಮನೆಮದ್ದು ಇಲ್ಲಿವೆ ನೋಡಿ ರಾತ್ರಿ ಹೊತ್ತಿನಲ್ಲೇ ಕೆಮ್ಮು ಜಾಸ್ತಿ ಆಗುತ್ತಾ ರಾತ್ರಿಯೇ ಕೆಮ್ಮಿನ ಕಾಟ ಮನೆಮದ್ದು ಇಲ್ಲಿದೆ ಋತುಮಾನ ಬದಲಾದ ಕೂಡಲೇ ಒಂದಿಲ್ಲೊಂದು ಸಮಸ್ಯೆಗಳು ಕಾಡುವುದು ಸಹಜ ಅದರಲ್ಲೂ ಬದಲಾದ ವಾತಾವರಣವು ಕೆಮ್ಮು ಕಫ ಜ್ವರದಂತಹ ಸಮಸ್ಯೆ ಉಂಟುಮಾಡಬಹುದು ಇದರಿಂದ ರಾತ್ರಿ ಹೊತ್ತಿನಲ್ಲಿ ತೊಂದರೆ ಹೆಚ್ಚು ಯಾಕಂದ್ರೆ ನಿರಂತರ ಕೆಮ್ಮು ರಾತ್ರಿ ಸಮಯದಲ್ಲಿ ಹೆಚ್ಚಾಗುತ್ತೆ ಏನೇ ಪ್ರಯತ್ನ ಪಟ್ಟರು ಕೆಮ್ಮು ನಿಲ್ಲಿಸಲು ಸಾಧ್ಯವಾಗುವುದಿಲ್ಲ.
ಕೆಲವೊಮ್ಮೆ ಉಸಿರೇ ನಿಂತು ಹೋಗುವಷ್ಟು ಕೆಮ್ಮು ಬರುತ್ತೆ ಹಾಗಾದ್ರೆ ಈ ಸಮಸ್ಯೆ ಎಲ್ಲರಿಗೂ ಇರುತ್ತಾ ಇದಕ್ಕೆ ಕಾರಣ ಏನು ರಾತ್ರಿ ಹೊತ್ತೆ ಕೆಮ್ಮು ಜಾಸ್ತಿ ಆಗೋದು ಯಾಕೆ ನೋಡೋಣ ಕೆಮ್ಮು ನೆಗಡಿ ಮೇಲಿನ ಅಧ್ಯಯನಗಳು ಇದರ ಬಗೆಗಿನ ವಿವಿಧ ಅಂಶಗಳನ್ನು ಬಹಿರಂಗಪಡಿಸಿವೆ ದಿನದ ಸಮಯಕ್ಕೆ ಅನುಗುಣವಾಗಿ ಅವು ಹೇಗೆ ಪರಿಣಾಮ ಬೀರುತ್ತವೆ ಅನ್ನೋದನ್ನ ತಿಳಿಸಿದೆ ದೇಹದ ಸಿರ್ಕಾರ್ಡಿಯನ್ ರಿದಮ್ ಅನ್ನೋದು 24 ಗಂಟೆಗಳ ಕಾಲ ಕೆಲಸ ಮಾಡುವ ಒಂದು ರೀತಿಯ ಆಂತರಿಕ ಪ್ರಕ್ರಿಯೆ ಇದು ರೋಗನಿರೋಧಕ ಕೋಶಗಳ ಚಿಕಿತ್ಸೆ ಮತ್ತು ಉರಿಯೂತದಲ್ಲಿ ತೊಡಗಿಕೊಂಡಿದೆ ಇದು ಸಂಜೆ ಮತ್ತು ರಾತ್ರಿ ಹೊತ್ತಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತೆ.
ರಾತ್ರಿ ವೇಳೆ ಕೆಮ್ಮು ನಿಯಂತ್ರಿಸುವುದು ಹೇಗೆ
ವೈದ್ಯರ ಪ್ರಕಾರ ಈ ಜೀವಕೋಶದ ದಾಳಿಯು ನೆಗಡಿಯ ಅನೇಕ ರೋಗ ಲಕ್ಷಣಗಳನ್ನು ಉಂಟುಮಾಡುತ್ತೆ ಹಾಗೆಯೇ ಕೆಮ್ಮನ್ನು ಉಂಟುಮಾಡುತ್ತೆ ಅಲ್ಲದೆ ಒತ್ತಡ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಬೆಳಗಿನ ಹೊತ್ತು ಹೆಚ್ಚು ಕ್ರಿಯಾಶೀಲವಾಗಿದ್ದು ರಾತ್ರಿ ಸಮಯದಲ್ಲಿ ನಿಧಾನವಾಗುತ್ತೆ ಇದು ಕಾರ್ಟಿಸೋಲ್ ಮತ್ತು ಉರಿಯುತದ ನಡುವಿನ ಸಂಬಂಧವನ್ನ ಸಂಕೀರ್ಣಗೊಳಿಸುತ್ತೆ ಸಿರ್ಕಾರ್ಡಿಯನ್ ರಿದಮ್ ಕ್ರಿಯಾಶೀಲವಾಗಿರೋದು ಹಾಗೂ ಕಾರ್ಟಿಸೋಲ್ ಲೋ ಡೌನ್ ಆಗೋದು ರಾತ್ರಿ ಹೊತ್ತಿನಲ್ಲಿ ವಿವಿಧ ರೀತಿಯ ರೋಗ ಲಕ್ಷಣಗಳು ಇನ್ನಷ್ಟು ಹೆಚ್ಚಲು ಕಾರಣವಾಗುತ್ತೆ ರಾತ್ರಿ ಮಲಗಿದ್ದಾಗ ಮೂಗಿನ ಲೋಳೆಯು ಬರಿದಾಗಲು ಕಷ್ಟವಾಗುತ್ತೆ.
ಇದರಿಂದ ಉಸಿರು ಕಟ್ಟಿಕೊಳ್ಳುವುದು ಉಸಿರಾಡಲು ಕಷ್ಟವಾಗುವುದು ಆಗುತ್ತೆ ಇದು ಕೆಮ್ಮು ಹೆಚ್ಚಾಗಲು ಕಾರಣವಾಗುತ್ತೆ ಈ ಸಮಸ್ಯೆಗಳ ಜೊತೆಗೆ ಶ್ವಾಸಕೋಶಗಳು ಸಿರ್ಕಾಡಿಯನ್ ರಿದಮ್ ನಿಂದ ಪ್ರಭಾವಿತವಾಗುತ್ತವೆ ಇದು ರಾತ್ರಿಯಲ್ಲಿ ವಾಯುಮಾರ್ಗಗಳನ್ನ ಕಿರಿದಾಗುವಂತೆ ಮಾಡುತ್ತೆ ಇದು ಕೆಮ್ಮಿನ ಲಕ್ಷಣಗಳು ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತೆ ರಾತ್ರಿಯ ಕೆಮ್ಮನ್ನು ನಿರ್ವಹಿಸುವ ಕೆಮ್ಮು ಕಡಿಮೆ ಮಾಡುವ ವಿಧಾನಗಳ ಬಗ್ಗೆ ಹೇಳುವುದಾದರೆ ಒಂದು ವೇಳೆ ನಿಮಗೂ ಕೂಡ ರಾತ್ರಿ ಹೊತ್ತು ಕೆಮ್ಮು ಜೋರಾಗ್ತಾ ಇರುತ್ತಾ ಕೆಮ್ಮಿನ ಕಾರಣದಿಂದ ಸರಿಯಾಗಿ ನಿದ್ದೆ ಮಾಡಲು ಆಗ್ತಾ ಇಲ್ವಾ ಹಾಗಾದ್ರೆ ಒಂದಿಷ್ಟು ಸಲಹೆಗಳನ್ನು ಅನುಸರಿಸಬಹುದು.
ಯಾವುದೋ ಸಲಹೆಗಳು ಆದಷ್ಟು ಬೇಗ ಗುಣ ಪರಿಹಾರ ಕಂಡುಕೊಳ್ಳುವಂತವು ನೋಡ್ತಾ ಹೋಗಿ ಹಬೆ ತೆಗೆದುಕೊಳ್ಳುವುದು ಮೂಗು ಮತ್ತು ಗಂಟಲನ್ನು ಶಮನಗೊಳಿಸಲು ಹಬೆ ಉಸಿರಾಡುವುದು ಮುಖ್ಯ ಇದರಿಂದ ದೇಹದಾದ್ಯಂತ ಬೆಚ್ಚಗಾಗಿ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತೆ ಇದರಿಂದ ಕೆಮ್ಮು ಕಡಿಮೆಯಾಗಿ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತೆ ಇನ್ನು ಜೇನುತುಪ್ಪವನ್ನು ಸೇವಿಸಿ ಮಲಗುವ ಸಮಯಕ್ಕೆ ಕನಿಷ್ಠ ಅರ್ಧ ಗಂಟೆ ಮೊದಲು ಒಂದು ಚಮಚ ಜೇನುತುಪ್ಪ ತಿನ್ನುವ ಅಭ್ಯಾಸ ರೂಡಿಸಿಕೊಳ್ಳಿ ಇದರಿಂದ ರಾತ್ರಿ ವೇಳೆಯಲ್ಲಿ ಕಾಣಿಸುವ ಕೆಮ್ಮು ನಿವಾರಣೆಯಾಗಬಹುದು ಹಾಗೆಯೇ ವಿಶೇಷವಾಗಿ ಮಕ್ಕಳಲ್ಲಿ ನಿದ್ರೆಯ ಗುಣಮಟ್ಟವನ್ನು ಕೂಡ ಕೂಡ ಇದು ಸುಧಾರಿಸುತ್ತೆ ಇನ್ನು ನಿಮ್ಮ ಮೂಗು ತೊಳೆಯಲು ನೀವು ಉಪ್ಪು ನೀರನ್ನು ಎಚ್ಚರಿಕೆಯಿಂದ ಬಳಸಬಹುದು ಇದು ಕೆಮ್ಮಿನ ಲಕ್ಷಣಗಳನ್ನು ಕಡಿಮೆ ಮಾಡಲು ಕೆಲವು ಪ್ರಯೋಜನಗಳನ್ನು ಹೊಂದಿದೆ.
ಆದರೆ ಮೂಗಿನಿಂದ ಉಪ್ಪು ನೀರು ಗಂಟಲಿಗೆ ಹೋಗದಂತೆ ನೋಡಿಕೊಳ್ಳಿ ಇನ್ನು ದಿಂಬುಗಳನ್ನು ಬಳಸಿ ಮೂಗು ಕಟ್ಟಿರುವುದು ಹಾಗೆಯೇ ಸೈನಸ್ ಗಳಿಂದ ಮೂಗಿನ ನಾಳೆಗಳನ್ನು ಸುಧಾರಿಸಲು ಸಹಾಯ ಮಾಡಲು ತಲೆಯ ಹಿಂದೆ ಹೆಚ್ಚುವರಿ ದಿಂಬುಗಳನ್ನು ಇರಿಸಿ ನೇರವಾಗಿ ಮಲಗುವ ಅಭ್ಯಾಸ ಮಾಡಿ ನೇರವಾಗಿ ಆರಾಮದಾಯಕವಾಗಿ ಮಲಗುವುದು ಕೆಮ್ಮು ನಿವಾರಣೆ ಗೆ ಸಹಾಯ ಮಾಡುತ್ತೆ.
ಇದನ್ನೂ ಓದಿ: ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ ಆರೋಗ್ಯಕ್ಕೆ ಯಾವುದು ಉತ್ತಮ.!





