Faceless Youtube Kannada: ನಮಸ್ತೆ ಗೆಳೆಯರೇ, ಬೆಳಗಾವಿ ವಾಯ್ಸ್‌ಗೆ ನಿಮಗೆ ಸ್ವಾಗತ! ಇವಾಗ YouTube ನಲ್ಲಿ ತುಂಬಾ ಪಾಲಿಸಿ ಚೇಂಜಸ್ ಆಗ್ತಿದೆ, ತುಂಬಾ ಚಾನೆಲ್ಸ್ ಡಿಲೀಟ್ ಆಗ್ತಿವೆ, ವಿಡಿಯೋಸ್ ಡಿಲೀಟ್ ಆಗ್ತಿವೆ.
ಹೀಗಾಗಿ, ಕ್ಯಾಮೆರಾ ಮುಂದೆ ಬರೋಕೆ ಇಷ್ಟ ಇಲ್ಲದವರಿಗೆ, ಅಥವಾ ಗೌರ್ನಮೆಂಟ್ ಜಾಬ್ ಅಲ್ಲಿ ಇದ್ದವರಿಗೆ ತಮ್ಮ ಐಡೆಂಟಿಟಿ ರಿವೀಲ್ ಮಾಡೋಕೆ ಆಗದವರಿಗೆ, Faceless YouTube Kannada ಚಾನೆಲ್ಸ್ ಹೇಗೆ ಬೆಸ್ಟ್ ಅಂತ ಇವತ್ತು ಹೇಳ್ತೀವಿ. ಇದರಿಂದ ನೀವು ಸುಲಭವಾಗಿ ದುಡಿಯಬಹುದು.
Faceless YouTube Kannada 8 ಬೆಸ್ಟ್ ಚಾನೆಲ್ ಐಡಿಯಾಗಳು!
1. ಈವೆಂಟ್ ಫೇಲ್ಸ್ & ಹೈಲೈಟ್ಸ್
ಜನರಿಗೆ ಈವೆಂಟ್ಸ್‌ನಲ್ಲಿ ಆಗೋ ಫೇಲ್ಸ್, ತಪ್ಪುಗಳು, ಅಥವಾ ಅನಿರೀಕ್ಷಿತ ಕ್ಷಣಗಳು ಅಂದ್ರೆ ತುಂಬಾ ಇಷ್ಟ. ಒಂದೇ ವಿಡಿಯೋವನ್ನು ಹಲವು ಬಾರಿ ನೋಡ್ತಾರೆ.
ನೀವು ಈ ತರಹದ ಕ್ಲಿಪ್ಸ್‌ಗಳನ್ನು ಹುಡುಕಿ, ಅದಕ್ಕೆ ನಿಮ್ಮ ವಾಯ್ಸ್ ಓವರ್ ಅಥವಾ AI ವಾಯ್ಸ್ ಹಾಕಿ ವಿಡಿಯೋ ಮಾಡಬಹುದು.
ಇಂಡಿಯಾದ ಈವೆಂಟ್‌ಗಳಿಗಿಂತ, US ಅಥವಾ ಫಾರಿನ್ ಈವೆಂಟ್‌ಗಳನ್ನು ಟಾರ್ಗೆಟ್ ಮಾಡಿದ್ರೆ RPM ಜಾಸ್ತಿ ಸಿಗುತ್ತೆ. ಪೂರ್ತಿ ವಿಡಿಯೋ ಹಾಕೋ ಬದಲು, ಫೋಟೋಸ್ ಅಥವಾ ತುಂಬಾ ಕಡಿಮೆ ಸೆಕೆಂಡ್ಸ್‌ನ ವಿಡಿಯೋ ಕ್ಲಿಪ್ಸ್ ಬಳಸಿ, ನಿಮ್ಮ ಕಾಮೆಂಟರಿ ಇರೋದು ಮುಖ್ಯ.
ಇದರಿಂದ ಕಾಪಿರೈಟ್ ಸಮಸ್ಯೆ ಬರಲ್ಲ ಅಂತ YouTube ಇಂಡಿಯಾ ಕೂಡ ಹೇಳಿದೆ.
2. ಫಾರಿನ್ ಮಿಸ್ಟೀರಿಯಸ್ ಫ್ಯಾಕ್ಟ್ಸ್
ಜಗತ್ತಿನಲ್ಲಿ ನಡೆಯುವ ಮಿಸ್ಟೀರಿಯಸ್ ಘಟನೆಗಳು, ಫ್ಯಾಕ್ಟ್ಸ್ ಬಗ್ಗೆ ಜನರಿಗೆ ಯಾವಾಗಲೂ ಕ್ಯೂರಿಯಾಸಿಟಿ ಇರುತ್ತೆ. ಇತ್ತೀಚೆಗೆ ‘American Files’ ಅಂತ ವೈರಲ್ ಆಗ್ತಿರೋ ವಿಷಯ ಇದರ ಬೆಸ್ಟ್ ಉದಾಹರಣೆ.
ನೀವು ಇಂಡಿಯಾದ ಬದಲು ಫಾರಿನ್ ಕಂಟ್ರೀಸ್‌ನ ಮಿಸ್ಟೀರಿಯಸ್ ಫ್ಯಾಕ್ಟ್ಸ್, ಘಟನೆಗಳ ಬಗ್ಗೆ ಸಂಶೋಧನೆ ಮಾಡಿ ವಿಡಿಯೋಗಳನ್ನು ಮಾಡಬಹುದು. ಇಂಟರ್ನ್ಯಾಷನಲ್ ಆಡಿಯನ್ಸ್ ಸಿಕ್ಕರೆ, CPM ಕೂಡ ಜಾಸ್ತಿ ಇರುತ್ತೆ. ಇಂಟರ್‌ನೆಟ್‌ನಲ್ಲಿ ಸಾಕಷ್ಟು ಫೋಟೋಗಳು ಮತ್ತು ಸಣ್ಣ ವಿಡಿಯೋ ಕ್ಲಿಪ್‌ಗಳು ಸಿಗುತ್ತವೆ. ಒಂದು ಒಳ್ಳೆ ಸ್ಕ್ರಿಪ್ಟ್ ಬರೆದು, ವಾಯ್ಸ್ ಓವರ್ ನೀಡಿದ್ರೆ, ಇದು ತುಂಬಾ ಎಂಗೇಜಿಂಗ್ ಆಗಿರುತ್ತೆ.
3. ಲೈವ್ ಪ್ರೇಯರ್ಸ್ & ಮೆಡಿಟೇಶನ್ಸ್
ಈ ಐಡಿಯಾ ಹಿಂದೆ ಕೂಡ ವರ್ಕ್ ಆಗಿದೆ. ಇದರ ಒಂದು ಟ್ರಿಕ್ ಅಂದ್ರೆ, 24/7 ಲೈವ್ ಸ್ಟ್ರೀಮ್ ರನ್ ಮಾಡೋದು. YouTube ಲೈವ್ ವಿಡಿಯೋಗಳಿಗೆ ಹೆಚ್ಚು ಪುಶ್ ಕೊಡುತ್ತೆ.
ಇಂಡಿಯನ್ ಪ್ರೇಯರ್‌ಗಳಿಗಿಂತ, ಕ್ರಿಶ್ಚಿಯನ್ ಪ್ರೇಯರ್ಸ್ ಅಥವಾ ಬೇರೆ ಧರ್ಮಗಳ ಪ್ರೇಯರ್‌ಗಳನ್ನು ಟಾರ್ಗೆಟ್ ಮಾಡಿದ್ರೆ ಹೆಚ್ಚು ವ್ಯೂಸ್ ಸಿಗುತ್ತವೆ.
AI ವಾಯ್ಸ್, ಒಂದು ಸಿಂಪಲ್ ಇಮೇಜ್ ಮತ್ತು ಪ್ರೇಯರ್ ಟೆಕ್ಸ್ಟ್ ಸ್ಕ್ರೀನ್ ಮೇಲೆ ತೋರಿಸಿ ವಿಡಿಯೋ ಮಾಡಬಹುದು. ChatGPT ಯಿಂದ ಪ್ರೇಯರ್‌ಗಳನ್ನು ಪಡೆಯಬಹುದು.
ನಿರಂತರವಾಗಿ ಕಂಟೆಂಟ್ ಹಾಕಿದರೆ 3-4 ತಿಂಗಳಲ್ಲಿ ಚಾನೆಲ್ ಚೆನ್ನಾಗಿ ಗ್ರೋ ಆಗುತ್ತೆ.
4. ಕಾರ್ ಎವಲ್ಯೂಷನ್ ಜರ್ನಿ
ಗಾಡಿ ಪ್ರಿಯರಿಗೆ ತಮ್ಮ ನೆಚ್ಚಿನ ಕಾರ್ ವರ್ಷಗಳಲ್ಲಿ ಹೇಗೆ ಬದಲಾಗಿದೆ ಅಂತ ನೋಡೋಕೆ ತುಂಬಾ ಇಷ್ಟ.
AI ಟೂಲ್ಸ್ ಬಳಸಿ, ಒಂದು ಕಾರ್‌ನ ಮೊದಲ ಮಾಡೆಲ್‌ನಿಂದ ಹಿಡಿದು ಇವತ್ತಿನ ಮಾಡೆಲ್‌ವರೆಗೂ ಅದರ ಡಿಸೈನ್ ಹೇಗೆ ಬದಲಾಗಿದೆ ಅಂತ ಒಂದು ಟ್ರಾನ್ಸಿಶನಲ್ ವಿಡಿಯೋ ಮಾಡಬಹುದು
(ಉದಾಹರಣೆಗೆ, Range Rover, Lamborghini).
ಯಾವ ದೇಶವನ್ನು ಟಾರ್ಗೆಟ್ ಮಾಡ್ತೀರೋ, ಅಲ್ಲಿ ಪಾಪ್ಯುಲರ್ ಇರುವ ಕಾರ್‌ಗಳನ್ನೇ ಆಯ್ಕೆ ಮಾಡಿ. ಇದು ಜನರಿಗೆ ಒಂದು ನಾಸ್ಟಾಲ್ಜಿಕ್ ಫೀಲಿಂಗ್ ಕೊಡುತ್ತೆ. ಕಂಪನಿಗಳ ಆಫಿಶಿಯಲ್ ವೆಬ್‌ಸೈಟ್‌ಗಳಿಂದ ಫೋಟೋಗಳು ಸಿಗುತ್ತವೆ. ವಾಯ್ಸ್ ಓವರ್ ಹಾಕಿದ್ರೆ ಇನ್ನಷ್ಟು ಇಂಟರೆಸ್ಟಿಂಗ್ ಆಗುತ್ತೆ.
5. ಪ್ರೊಡಕ್ಟ್ ರಿವ್ಯೂಸ್ & ಬೆಸ್ಟ್ ಫೈಂಡ್ಸ್
Amazon, Meesho, Flipkart
ನಿಂದ ಇಂಟರೆಸ್ಟಿಂಗ್ ಪ್ರಾಡಕ್ಟ್ಸ್ ತಂದು, ಅವುಗಳನ್ನು ಅನ್‌ಬಾಕ್ಸ್ ಮಾಡಿ, ರಿವ್ಯೂ ಮಾಡುವ ಚಾನೆಲ್ಸ್ ತುಂಬಾ ಪಾಪ್ಯುಲರ್ ಆಗಿವೆ, ಅದೂ ಫೇಸ್ ತೋರಿಸದೆ. ಈ ಪ್ರಾಡಕ್ಟ್‌ಗಳನ್ನು ಜನರು ಖರೀದಿ ಮಾಡಿದರೆ ನಿಮಗೆ ಕಮಿಷನ್ ಸಿಗುತ್ತೆ, ಅಂದರೆ Affiliate Marketing.
YouTube ಕೂಡ ತನ್ನ Shopping Affiliate ಪ್ರೋಗ್ರಾಂನಿಂದ ಈ ತರಹದ ಕಂಟೆಂಟ್‌ಗೆ ತುಂಬಾ ಪುಶ್ ಕೊಡುತ್ತಿದೆ. ಇದು ಎಲ್ಲರಿಗೂ ವಿನ್‌ವಿನ್ ಸಿಚುಯೇಷನ್.
ಶಾರ್ಟ್ಸ್ ಮತ್ತು ಲಾಂಗ್ ವಿಡಿಯೋಗಳೆರಡೂ ಇಲ್ಲಿ ಕೆಲಸ ಮಾಡುತ್ತವೆ.
6. AI ಟೂಲ್ ಎಕ್ಸ್‌ಪ್ಲನೇಷನ್ಸ್
AI ಈಗಷ್ಟೇ ಬೆಳೆಯುತ್ತಿದೆ, ಆದರೆ ಮುಂದಿನ ದಿನಗಳಲ್ಲಿ ಇದರ ಉಪಯೋಗಗಳು ಅಳೆಯಲಸಾಧ್ಯ. ಯಾವ AI ಟೂಲ್ ಯಾವ ಕೆಲಸಕ್ಕೆ ಬರುತ್ತೆ, ಅದನ್ನು ಹೇಗೆ ಉಪಯೋಗಿಸಬೇಕು ಅಂತ ಜನರಿಗೆ ತಿಳಿಸಿಕೊಡುವ ವಿಡಿಯೋಗಳನ್ನು ನೀವು ಮಾಡಬಹುದು.
ಹಲವಾರು ಉಪಯುಕ್ತ AI ಟೂಲ್ಸ್ ಪೇಯ್ಡ್ ಇರುತ್ತವೆ, ಅವುಗಳಿಗೆ Affiliate ಪ್ರೋಗ್ರಾಂ ಸಹ ಇರುತ್ತೆ. ಹೀಗಾಗಿ, AdSense ಜೊತೆಗೆ Affiliate ಕಮಿಷನ್ ಸಹ ಸಿಗುತ್ತೆ. ಈ ಮೈಕ್ರೋ ನಿಶ್‌ನಲ್ಲಿ ಬರುವ ಆಡಿಯನ್ಸ್ ಕಲಿಯಲು ಬಂದಿರುತ್ತಾರೆ, ಅವರಿಗೆ ನೀವು ಸರಿಯಾದ ಮಾಹಿತಿ ಕೊಟ್ಟರೆ ಅವರು ಪ್ರಾಡಕ್ಟ್‌ಗಳನ್ನು ಖಂಡಿತ ಕೊಳ್ಳುತ್ತಾರೆ.
7. ಲಕ್ಸುರಿ ಲೈಫ್‌ಸ್ಟೈಲ್ ಅನಾವರಣ
ಜನರಿಗೆ ಯಾವಾಗಲೂ ಲಕ್ಸುರಿ ಲೈಫ್‌ಸ್ಟೈಲ್ ಬಗ್ಗೆ ಕ್ಯೂರಿಯಾಸಿಟಿ ಇರುತ್ತೆ. ಅವರು ಬೆಳೆಯುತ್ತಿದ್ದಂತೆ, ಅವರ ಆಸೆಗಳು ಕೂಡ ಹೆಚ್ಚಾಗುತ್ತವೆ. ದುಬಾರಿ ವಾಚ್‌ಗಳು, ಐಷಾರಾಮಿ ಮನೆಗಳು, ಸ್ಪೋರ್ಟ್ಸ್ ಕಾರ್‌ಗಳು, ಪ್ರೈವೇಟ್ ಜೆಟ್‌ಗಳ ಬಗ್ಗೆ ನೀವು ವಿಡಿಯೋ ಮಾಡಬಹುದು.
ಈ ನಿಶ್‌ನಲ್ಲಿ ಪ್ರೀಮಿಯಂ ಆಡಿಯನ್ಸ್ ಇರುವುದರಿಂದ AdSense CPM ಕೂಡ ತುಂಬಾ ಹೈ ಇರುತ್ತೆ. RX, Lamborghini ನಂತಹ ಬ್ರ್ಯಾಂಡ್‌ಗಳ ಆಫಿಶಿಯಲ್ ವೆಬ್‌ಸೈಟ್‌ಗಳಿಂದ ನೀವು ಪಿಕ್ಚರ್ಸ್, ವಿಡಿಯೋಸ್ ತೆಗೆದು ಅದಕ್ಕೆ ಕಾಮೆಂಟರಿ ಮಾಡಬಹುದು. ಇದು ತುಂಬಾ ಇಂಟರೆಸ್ಟಿಂಗ್ ನಿಶ್ ಆಗಿದೆ.
8. ಕಾರ್ ಕಂಪ್ಯಾರಿಸನ್ ರಿವ್ಯೂಸ್
ಭಾರತದಲ್ಲಿ ಕಾರ್ ಮಾರುಕಟ್ಟೆ ತುಂಬಾ ವೇಗವಾಗಿ ಬೆಳೆಯುತ್ತಿದೆ, ಅದರಲ್ಲೂ EV ಸೆಗ್ಮೆಂಟ್. ಜನರು ಸ್ವಲ್ಪ ದುಡ್ಡು ಬಂದ್ರೆ ಮನೆ ಕಟ್ಟೋ ಬದಲು ಮೊದಲು ಕಾರ್ ಖರೀದಿ ಮಾಡ್ತಾರೆ.
ಸೇಫ್ಟಿ ವಿಚಾರದಿಂದಲೂ ಕಾರ್‌ಗೆ ಹೆಚ್ಚು ಆದ್ಯತೆ ಕೊಡ್ತಾರೆ. ಹೀಗಾಗಿ, ಯಾವ ಕಾರ್ ಉತ್ತಮ ಅಂತ ಕಂಪ್ಯಾರಿಸನ್ ವಿಡಿಯೋಗಳಿಗೆ ತುಂಬಾ ಡಿಮ್ಯಾಂಡ್ ಇದೆ.
10 ಲಕ್ಷಕ್ಕೆ ಯಾವ ಕಾರ್ ಬೆಸ್ಟ್, 50 ಲಕ್ಷಕ್ಕೆ ಯಾವ ಕಾರ್:
- ಬೆಸ್ಟ್
- ಫೀಚರ್ಸ್
- ಮೈಲೇಜ್
- ಲುಕ್
ಎಲ್ಲವನ್ನೂ ಕಂಪೇರ್ ಮಾಡಿ ವಿಡಿಯೋ ಮಾಡಬಹುದು. ಇದು ವೀಕ್ಷಕರಿಗೆ ಖರೀದಿ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಈ ನಿಶ್‌ಗೂ ಉತ್ತಮ ಭವಿಷ್ಯ ಇದೆ.
ಮುಂದಿನ ದಿನಗಳಿಗಾಗಿ ಚಾನೆಲ್ ಆಯ್ಕೆ ಮಾಡಿ
ನೀವು YouTube ಚಾನೆಲ್ ಅನ್ನು ಇವತ್ತಿಗಾಗಿ ಮಾತ್ರವಲ್ಲದೆ, ಮುಂದಿನ 4-5 ವರ್ಷಗಳಿಗಾಗಿ ಪ್ಲಾನ್ ಮಾಡಿ ಮಾಡಬೇಕು. AI ಇನ್ನೂ ಆರಂಭಿಕ ಹಂತದಲ್ಲಿದೆ, ಆದರೆ ಮುಂದಿನ ದಿನಗಳಲ್ಲಿ ಅದರ ಉಪಯೋಗಗಳು ವ್ಯಾಪಕವಾಗಲಿವೆ. ಅಂತಹ ಫ್ಯೂಚರ್ ಇರುವ ನಿಶ್‌ಗಳನ್ನು ಆಯ್ಕೆ ಮಾಡಿಕೊಳ್ಳಿ.
ಮೇಲೆ ಹೇಳಿದ ಎಲ್ಲಾ ಐಡಿಯಾಗಳು ಫೇಸ್‌ಲೆಸ್ ಆಗಿದ್ದು, ಕ್ಯಾಮೆರಾ ಮುಂದೆ ಬರೋ ಅಗತ್ಯವಿಲ್ಲ. ಇವುಗಳೆಲ್ಲಾ YouTube ಪಾಲಿಸಿ ಪ್ರಕಾರ ಮೋನೆಟೈಸ್ ಆಗುತ್ತವೆ.
ನಿಮಗೆ ಯಾವ ನಿಶ್ ಇಷ್ಟವಾಗುತ್ತೋ, ಅದನ್ನೇ ಆಯ್ಕೆ ಮಾಡಿ.
Conclusion: ಇವತ್ತಿನ ಈ ಲೇಖನ ನಿಮಗೆ ಇಷ್ಟವಾಯಿತು ಅಂದುಕೊಳ್ಳುತ್ತೇವೆ. ಈ ಫೇಸ್‌ಲೆಸ್ YouTube ಚಾನೆಲ್ ಐಡಿಯಾಗಳು ನಿಮಗೆ ಖಂಡಿತ ಸಹಾಯ ಮಾಡುತ್ತವೆ. ಇವು ಸುರಕ್ಷಿತವಾಗಿ, ದೀರ್ಘಾವಧಿಯಲ್ಲಿ ದುಡಿಯಲು ಇರುವ ಉತ್ತಮ ಮಾರ್ಗಗಳು. ಬೆಳಗಾವಿ ವಾಯ್ಸ್ ತಂಡದಿಂದ ನಾವು ನಿಮಗೆ ಮಾರ್ಚ್‌ನಿಂದ ಮತ್ತಷ್ಟು ಹೊಸ ಮತ್ತು ಉಪಯುಕ್ತ ಕಂಟೆಂಟ್‌ಗಳನ್ನು ತರುತ್ತೇವೆ.
ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಂದು ಲೈಕ್ ಕೊಡಿ, ಮತ್ತು ನಮ್ಮ ವೆಬ್‌ಸೈಟ್‌ಗೆ ಹೊಸಬರಾಗಿದ್ದರೆ, ಮತ್ತಷ್ಟು ಅಪ್ಡೇಟ್ಸ್‌ಗಳಿಗಾಗಿ Whatsapp Channel follow ಮಾಡೋದನ್ನ ಮರೀಬೇಡಿ.
Read More:
ಸರಿಗಮಪ ಲಿಟಲ್ ಚಾಂಪ್ಸ್ ಆಡಿಷನ್ 2026: ಜಿಲ್ಲಾವಾರು ಆಡಿಷನ್ ದಿನಾಂಕಗಳ ಪೂರ್ಣ ವಿವರ ಇಲ್ಲಿದೆ!
Ration Card Status 2026: ಹೊಸ ರೇಷನ್ ಕಾರ್ಡ್ Status ಚೆಕ್ ಮಾಡುವುದು ಹೇಗೆ? 2026ರ ಅಪ್‌ಡೇಟ್ ಇಲ್ಲಿದೆ






