ಎಲ್ಲರಿಗೂ ನಮಸ್ಕಾರ, Traffic ಕಿರಿಕಿರಿಗೆ ಈಗ ಬ್ರೇಕ್ ಬೀಳುವಂತಹ ಎಲ್ಲಾ ಸಾಧ್ಯತೆ ಕಂಡುಬರ್ತಾ ಇದೆ ಗ್ರೀನ್ ಟ್ಯಾಕ್ಸ್ ಗೆ ಈಗ ಫಾಸ್ಟ್ ಟ್ಯಾಗ್ ಬರುವಂತಹ ಸಾಧ್ಯತೆ ಇದೆ. ಹಂಗಾಗಿ ಎಲ್ಲಾ ವಾಹನ ಸವಾರರಿಗೆ ಇದು ಗುಡ್ ನ್ಯೂಸ್ ಇದು ಬಂಡಿಪುರ ಸಂಚಾರಕ್ಕೆ ಶೀಘ್ರವೇ ಹಸಿರು ಸುಂಕಕ್ಕೆ ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡಲಾಗುತ್ತೆ ರಾಷ್ಟ್ರೀಯ ಹೆದ್ದಾರಿ 67 ಮತ್ತು 766 ರಲ್ಲಿ ಮೂರು ಫಾಸ್ಟ್ ಟ್ಯಾಗ್ ಕೇಂದ್ರಗಳನ್ನ ಸ್ಥಾಪನೆ ಮಾಡಲಾಗಿದೆ.
Green ಫಾಸ್ಟ್ ಟ್ಯಾಗ್ 2025
ಶೀಘ್ರದಲ್ಲೇ ಅರಣ್ಯ ಸಚಿವರಾಗಿರುವಂತಹ ಈಶ್ವರ ಕಂಡ್ರೆ ಉದ್ಘಾಟನೆ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ ವೀಕೆಂಡ್ ಪ್ರವಾಸಕ್ಕೆ ಹೊರಡುವವರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಸಿಗಬಹುದು. ಹಂಗಾಗಿ ವಾಹನ ಸವಾರರಿಗೆ ಆದಷ್ಟು ಬೇಗನೆ ಬರಬೇಕು ಇದು ಯಾಕಂದ್ರೆ ವೀಕೆಂಡ್ ಅಂತ ಬಂದಾಗ ಸಹಜವಾಗಿ ವಾಹನ ಸಂಖ್ಯೆ ಜಾಸ್ತಿ ಇರುತ್ತೆ ಸೋ ಅದರಿಂದ ಮುಕ್ತಿ ಪಡೆಯುವುದಕ್ಕೆ ಒಂದು ಒಳ್ಳೆಯ ಅವಕಾಶ ಬಂಡಿಪುರ ಸಂಚಾರಕ್ಕೆ ಶೀಘ್ರವೇ ಈಗ ಹಸಿರು ಸುಂಕಕ್ಕೆ ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡಲಾಗುತ್ತೆ ಈಶ್ವರ್ ಕಂಡ್ರೆ ಅವರೇ ಇದನ್ನ ಉದ್ಘಾಟನೆ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ ಆದಷ್ಟು ಬೇಗನೆ ಮೇಲು ಕಾಮನಹಳ್ಳಿ ಮತ್ತೆ ಕೆಕ್ಕಕ್ಕೆನಹಳ್ಳ ಮತ್ತು ಮದ್ದೂರಿನ ಚೆಕ್ ಪೋಸ್ಟ್ ಬಳಿ ಏನಿದೆಯಲ್ಲ ಅಲ್ಲಿ ಪ್ರಾಯೋಗಿಕವಾಗಿ ಫಾಸ್ಟ್ ಟ್ಯಾಗ್ ಅನ್ನ ಆರಂಭ ಮಾಡಲಾಗಿದೆ.
ಅದು ಹೇಗೆ ವರ್ಕ್ ಆಗುತ್ತೆ ಅನ್ನೋದರ ಬಗ್ಗೆ ಸೋ ಎಲ್ಲಾ ವಾಹನಗಳಿಗೆ 30 ರೂಪಾಯಿ ಅಂತೆ ಸುಂಕ ವಸೂಲಿಯನ್ನ ಈಗ ಗ್ರೀನ್ ಟ್ಯಾಕ್ಸ್ ಮಾಡ್ತಾ ಇದೆ ಚೆಕ್ ಪೋಸ್ಟ್ ನಲ್ಲಿ ಈ ಟಿಕೆಟ್ ಪಡೆದು ಹೊರಡುವಷ್ಟರಲ್ಲಿ ನಿಮಗೆ ಏನಾಗುತ್ತೆ ಗಂಟೆಗೂ ಹೆಚ್ಚು ಕಾಲ ಸಮಯ ಬೇಕಾಗುತ್ತೆ ಬಟ್ ಹಿಂಗೆ ಇರೋದಿಲ್ಲ ಎಲ್ಲಾ ಆನ್ಲೈನ್ ಈ ಬಗ್ಗೆ ಮತ್ತಷ್ಟು ಮಾಹಿತಿ ಮಾಹಿತಿ ನೀಡುತ್ತಾರೆ ನಮ್ಮ ಪ್ರತಿನಿಧಿ ಸುರೇಂದ್ರ ಫೋನ್ ಸಂಪರ್ಕದಲ್ಲಿದ್ದಾರೆ ಸುರೇಂದ್ರ ಈಗ ಯಾವಾಗ ಅಂದ್ರೆ ಸಚಿವ ಈಶ್ವರ ಕಂಡ್ರೆ ಅವರಿಂದ ಉದ್ಘಾಟನೆ ಆಗುತ್ತೆ ಅಂತ ಹೇಳಲಾಗುತ್ತಿದೆ.
ಯಾವಾಗ ವಾಹನ ಸವಾರರು ಇದರಿಂದ ಮುಕ್ತಿ ಪಡೆಯಬಹುದು ಅಂತ ಹೇಳಿ ಹೇಗೆ ಈ ಪ್ರಕ್ರಿಯೆ ಹೇಗಿರುತ್ತೆ ಹೌದು ಹೇ ಕುಮಾರ್ ಕರ್ನಾಟಕದ ಬಂಡಿಪುರ ಸೇರಿದಂತೆ ಒಟ್ಟು ಐದು ಕಡೆಯಲ್ಲಿ ಗ್ರೀನ್ ಟ್ಯಾಕ್ಸ್ ಎಂಬಂತಹ ಒಂದು ಸುಂಕವನ್ನ ಹಸಿರು ಸುಂಕವನ್ನ ಅರಣ್ಯ ಇಲಾಖೆ ಒಂದು ವಸೂಲಿ ಮಾಡ್ತಾ ಇದೆ ಈ ವಸೂಲಿ ಪ್ರಕ್ರಿಯೆ ಕೇವಲ ಹಣವನ್ನು ನೇರವಾಗಿ ನಗದು ರೂಪದಲ್ಲಿ ಪಡೆದುಕೊಳ್ಳಲಾಗುತ್ತಿತ್ತು.
ಈ ನೇರವಾಗಿ ನಗದನ್ನ ಪಡೆದುಕೊಳ್ಳುವುದರಿಂದ ಚೆಕ್ ಪೋಸ್ಟ್ ಗಳಲ್ಲಿ ಗಂಟೆಗಟ್ಟಲೆ ವಾಹನ ಸವಾರರು ಕಾಯಬೇಕಾದಂತಹ ಪರಿಸ್ಥಿತಿ ಎದುರಾಗಿತ್ತು ಮೊಟ್ಟಮೊದಲನೆಯದಾಗಿ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ಏನಿದೆ ಅದು ಕೇರಳದ ವೈನಾಡು ಮತ್ತೆ ತಮಿಳುನಾಡಿನ ಊಟಿ ಎರಡು ಗಡಿಯನ್ನು ಹಂಚಿಕೊಂಡಿರುವುದರಿಂದ ವಾರಾಂತ್ಯದಲ್ಲಿ 3000 ದಿಂದ 4000ಕ್ಕೂ ಅಧಿಕ ವಾಹನಗಳು ಸಂಚಾರ ಮಾಡ್ತಾ ಇರುತ್ತವೆ ಇದರಲ್ಲಿ ನೇರವಾಗಿ ನಗದನ್ನ ನೇರವಾಗಿ ನಗದನ್ನೇ ಪಡೆಯುವ ಮೂಲಕ ಒಂದು ತಾಸಿಗೂ ಕೂಡ ಅಧಿಕ ಕಾಲವನ್ನ ಟ್ರಾಫಿಕ್ ನಲ್ಲಿ ಕಳಿಬೇಕಾದಂತಹ ಪರಿಸ್ಥಿತಿ ಎದುರಾಗಿತ್ತು. ಈಗ ಗ್ರೀನ್ ಟ್ಯಾಕ್ಸ್ ಗೆ ಫಾಸ್ಟ್ ಟ್ಯಾಗ್ ಅನ್ನ ಕೇಂದ್ರವನ್ನ ಪ್ರಾಯೋಗಿಕವಾಗಿ ಬಂಡಿಪುರದ ಮೂರು ಕಡೆ ತೆರೆಯಲಾಗಿತ್ತು ಇನ್ನು ಕೆಲವೇ ದಿನಗಳಲ್ಲಿ ಅಂದ್ರೆ 10 ರಿಂದ 15 ದಿನಗಳಲ್ಲಿ ಅಧಿಕೃತವಾಗಿ ಅರಣ್ಯ ಸಚಿವ ಈಶ್ವರ್ ಕಂಡ್ರೆ ಅವರು ಉದ್ಘಾಟನೆ ಮಾಡಲಿದ್ದಾರೆ.
ಈ ಉದ್ಘಾಟನೆ ಆದ ನಂತರ ಕೇವಲ ಒಂದರಿಂದ ಎರಡು ನಿಮಿಷದಲ್ಲಿ ಅವರು ಹಸಿರು ಸುಂಕವನ್ನ ಪಾವತಿ ಮಾಡಿ ತಮ್ಮ ಮುಂದೆ ಪ್ರಯಾಣವನ್ನು ಬೆಳೆಸಬಹುದಾಗಿರುತ್ತದೆ ಒಂದು ಗಂಟೆಯಿಂದ ಒಂದೂವರೆ ತಾಸು ಕಾಯಬೇಕಾದಂತಹ ಪರಿಸ್ಥಿತಿ ದೂರವಾಗಲಿದ್ದು ಪ್ರವಾಸಿಗರಿಗೆ ಒಂದು ಶುಭ ಸುದ್ದಿ ಆಗಿದೆ.
ಇದನ್ನೂ ಓದಿ: ರಾಜಸ್ಥಾನ Tour Packages ಈಗ ಕಡಿಮೆ ಬಜೆಟ್ ಮೂಲಕ ರೈಲ್ವೆ ಅಲ್ಲಿ ಟೂರ್.!





