ಎಲ್ಲರಿಗೂ ನಮಸ್ಕಾರ, YouTubers ಅಥವಾ Content Creator ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಇದೆ ನಾನೊಬ್ಬ ಯೂಟ್ಯೂಬರ್ ಅಂತ ಗುರುತಿಸಿಕೊಳ್ಳುವುದು ಈಗ ಹೆಮ್ಮೆ ಸಂಗತಿಯಾಗಿದೆ ಪ್ರತಿಯೊಂದು ಗಲ್ಲಿನಲ್ಲೂ ಹುಡುಕಿದ್ರೆ ಒಬ್ಬ ಯೂಟ್ಯೂಬರ್ ಸಿಗಬಹುದು ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ ಹಾಗಂತ ಇವರೆಲ್ಲರಿಗೂ ಒಂದೇ ರೀತಿಯ ಸಂಪಾದನೆ ಇದೆ ಅಂತ ಹೇಳೋಕೆ ಆಗಲ್ಲ ಆದರೆ ಪ್ರತಿ ತಿಂಗಳು ಲಕ್ಷ ರೂಪಾಯಿಗೂ ಹೆಚ್ಚು ಹಣ ಗಳಿಸುವ ಯೂಟ್ಯೂಬರ್ ಗಳು ಇದ್ದಾರೆ. ಒಂದು ಕಡೆ ಹೆಸರು ಕೀರ್ತಿ ಗಳಿಸಿದರೆ ಮತ್ತೊಂದು ಕಡೆ ದುಡ್ಡನ್ನು ಸಂಪಾದಿಸುವ ಕಂಟೆಂಟ್ ಕ್ರಿಯೇಟರ್ಸ್ ಗಮನ ಸೆಳಿತಾ ಇದ್ದಾರೆ.
ಭಾರತದಲ್ಲಿ ಎಷ್ಟು ಕಂಟೆಂಟ್ ಕ್ರಿಯೇಟರ್ಸ್, ಯೂಟ್ಯೂಬರ್ ಗಳು ಇದ್ದಾರೆ
ಈ ವೈ ಕಂಪನಿಯ ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ 9,30,000 ಮಂದಿ ಇದ್ದಾರೆ ಇವರಲ್ಲಿ ಎಲ್ಲರೂ ಲಕ್ಷ ಲಕ್ಷ ಸಂಬಂಧ ಇಲ್ಲ ಆದರೆ ಸುಮಾರು 77% ಮಂದಿಗೆ ಕಳೆದ ಎರಡು ವರ್ಷಗಳಿಂದ ಸ್ಥಿರವಾದ ಆದಾಯ ಅಂತಾನೂ ಇಲ್ಲ ಆದರೆ ಗಮನವಿಟ್ಟು ಕೇಳಿಸಿಕೊಳ್ಳಿ ಒಟ್ಟು ಕಂಟೆಂಟ್ ಕ್ರಿಯೇಟರ್ಸ್ ಗಳ ಪೈಕಿ 12% ಮಂದಿಗೆ ಅಂದ್ರೆ 1,12,000 ಮಂದಿಗೆ ಪ್ರತಿ ತಿಂಗಳ ಆದಾಯ ಒಂದು ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿ ತನಕ ಇದೆ.
ಮುಂದಿನ ಎರಡು ವರ್ಷಗಳಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಆದಾಯ ಸುಮಾರು 10% ಏರಿಕೆ ಆಗಬಹುದು ಅಂತಾನೂ ಅಂದಾಜು ಮಾಡಲಾಗಿದೆ. ಇದು ಆಶಾದಾಯಕವಾದಂತಹ ಬೆಳವಣಿಗೆಯಾಗಿದೆ ಯಾಕಂದ್ರೆ ಎಲ್ಲಾ ಯೂಟ್ಯೂಬರ್ ಗಳಿಗೂ ಪ್ರತಿ ಲಕ್ಷ ರೂಪಾಯಿ ಸಂಪಾದನೆ ಬರಲಿ ಎಂಬ ನಿರೀಕ್ಷೆ ಕೂಡ ಇರಲ್ಲ ಅದು ಸಾಧ್ಯ ಆಗದೇನು ಇರಬಹುದು ಆದರೆ ಎಷ್ಟೋ ಮಂದಿಗೆ ಕನಿಷ್ಠ 10, 20,000 ದಿಂದ 50,000 ಸಂಪಾದನೆ ಮಾಡಿದ್ರು ಕೂಡ ಮತ್ತೊಂದು ಆದಾಯದ ಮೂಲವಾಗಿ ಸಾಕಷ್ಟು ಪ್ರಯೋಜನಕ್ಕೆ ಬರುತ್ತೆ ಹಾಗಾಗಿ ಅದರ ಬಗ್ಗೆ ಸಾಕಷ್ಟು ಆಕರ್ಷಣೆ ಕ್ರಿಯೇಟ್ ಆಗಿದೆ ಕಂಟೆಂಟ್ ಕ್ರಿಯೇಟರ್ಸ್ ಗಳು ಅಂದರೆ ಸಮಾಜದ ಮೇಲೆ ಪ್ರಭಾವ ಬೀರುವವರು ಆಗಿದ್ದಾರೆ ಭಾರತದಲ್ಲಿ ಈ ಪ್ರಭಾವಿಗಳ ಅಥವಾ ಇನ್ಫ್ಲುಯೆನ್ಸರ್ ಗಳ ಮಾರುಕಟ್ಟೆ ಗಾತ್ರ 2023 ರಲ್ಲಿ 1875 ಕೋಟಿ ರೂಪಾಯಿ ಇತ್ತು.
2024 ರಲ್ಲಿ ಅಂದ್ರೆ ಈ ವರ್ಷ 2344 ಕೋಟಿ ರೂಪಾಯಿಗೆ ಬೆಳೆಯುವಂತ ನಿರೀಕ್ಷೆ ಕೂಡ ಇದೆ ಅಂದ್ರೆ ಸುಮಾರು 25% ಬೆಳವಣಿಗೆ ಆಗುವಂತದ್ದು ಮಾತ್ರವಲ್ಲದೆ 2026 ರ ವೇಳೆಗೆ 3375 ಕೋಟಿ ರೂಪಾಯಿಗೆ ಬೆಳೆಯುವಂತಹ ಒಂದು ಸಾಧ್ಯತೆ ಕೂಡ ಇದೆ.
Influencer ಮಾರುಕಟ್ಟೆಗೆ ಯಾವ ಕ್ಷೇತ್ರದ ಬ್ರಾಂಡ್ ಗಳು ಮತ್ತು ಕಂಪನಿಗಳು ಖರ್ಚು ಮಾಡುತ್ತೆ
ಎಫ್ ಎಂ ಸಿಜಿ ಅಂದ್ರೆ ದಿನನಿತ್ಯ ಬಳಕೆಯಾಗುವಂತಹ ಪದಾರ್ಥಗಳು ಅವುಗಳನ್ನ ಮಾರಾಟ ಮಾಡುವ ಕಂಪನಿಗಳು
ಈ ಕಾಮರ್ಸ್ ಆಟೋಮೊಬೈಲ್ ಕಂಪನಿಗಳು ಹೆಚ್ಚಾಗಿ ಖರ್ಚು ಮಾಡುತ್ತವೆ ಹೀಗಾಗಿ ಕಂಟೆಂಟ್ ಕ್ರಿಯೇಟರ್ಸ್ ಗಳಿಗೆ ಸಾಕಷ್ಟು ಬೇಡಿಕೆ ಈಗ ಉಂಟಾಗಿದೆ ಒಂದು ವರದಿಯ ಪ್ರಕಾರ 47% ಬ್ರಾಂಡ್ ಗಳು 100 ರಿಂದ ಒಂದು ಲಕ್ಷ ಫಾಲೋವರ್ಸ್ ಇರುವ ಸಣ್ಣ ಮಟ್ಟಿನ ಇನ್ಫ್ಲುಯೆನ್ಸರ್ ಗಳಿಗೆ ಆದ್ಯತೆ ನೀಡುತ್ತವೆ.
ಪ್ರತಿ ಗ್ರಾಹಕರನ್ನು ತಲುಪಲು ತಗಲುವ ಖರ್ಚು ಕಡಿಮೆಯಾಗುವುದು ಇದಕ್ಕೆ ಕಾರಣ ಅಂದಹಾಗೆ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇರುವ ಮೆಗಾ ಇನ್ಫ್ಲುಯೆನ್ಸರ್ ಗಳನ್ನ ದೊಡ್ಡ ದೊಡ್ಡ ಕಾರ್ಪೊರೇಟ್ ಬ್ರಾಂಡ್ ಗಳು ಬಯಸುತ್ತವೆ.
ಭಾರತದಲ್ಲಿ ಸುಮಾರು 7000 ಅವರ ಕಂಟೆಂಟ್ ಕ್ರಿಯೇಟರ್ಸ್ ಗೆ 10 ಲಕ್ಷಕ್ಕೂ ಹೆಚ್ಚು ಮಂದಿ ಫಾಲೋವರ್ಸ್ ಇದ್ದಾರೆ ಕಂಟೆಂಟ್ ಕ್ರಿಯೇಟರ್ ಗಳಲ್ಲಿ 73% ಮಂದಿ ವಾರಕ್ಕೆ 10 ಗಂಟೆಗಿಂತ ಕಡಿಮೆ ಅವಧಿಯನ್ನ ಈ ಕೆಲಸಕ್ಕೆ ಬಳಸುತ್ತಾರೆ ಅಂದ್ರೆ ಪಾರ್ಟ್ ಟೈಮ್ ಆಗಿ ಇದನ್ನ ತೆಗೆದುಕೊಂಡಿದ್ದಾರೆ.
ಕೇವಲ 30% ಮಂದಿ ಮಾತ್ರ ಸೀರಿಯಸ್ ಆಗಿ ಇದನ್ನ ಫುಲ್ ಟೈಮ್ ಜಾಬ್ ಆಗಿ ಪರಿಗಣಿಸಿದ್ದಾರೆ.
ಲೈಫ್ ಸ್ಟೈಲ್ ಫ್ಯಾಶನ್ ಸೌಂದರ್ಯಕ್ಕೆ ಸಂಬಂಧಿಸಿದಂತಹ ಕೆಟಗರಿಗಳಲ್ಲಿ ಹೆಚ್ಚಿನ ಕಂಟೆಂಟ್ ಗಳು ಇವಾಗ ಕ್ರಿಯೇಟ್ ಆಗ್ತಾ ಇದೆ ಅದು ಅವರಿಗೆ ಆದಾಯವನ್ನು ಕೂಡ ಕೊಡ್ತಾ ಇದೆ.
ಟೆಕ್ನಾಲಜಿ ಮತ್ತು ಫೈನಾನ್ಸ್ ಕೆಟಗರಿಯ ಕಂಟೆಂಟ್ ಗಳು ಕೂಡ ಇತ್ತೀಚೆಗೆ ಸಾಕಷ್ಟು ಜನಪ್ರಿಯವಾಗ್ತಾ ಇದೆ.
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗಳು ಭಾರತದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಅವಿಭಾಜ್ಯ ಅಂಶ ಆಗ್ತಾ ಇದ್ದಾರೆ ಅವರು ತಮ್ಮ ಫಾಲೋವರ್ಸ್ ಗಳ ನಿರ್ಧಾರಗಳ ಮೇಲೆ ಪ್ರಭಾವ ಬೀರುವಂತಹ ಸಾಮರ್ಥ್ಯವನ್ನ ಹೊಂದಿರುತ್ತಾರೆ ಆದ್ದರಿಂದ ನಾನಾ ಬ್ರಾಂಡ್ ಗಳು ಅವರಿಗೆ ಹಣ ಕೊಡ್ತಾರೆ.
ಕಂಟೆಂಟ್ ಕ್ರಿಯೇಟ್, ಯೂಟ್ಯೂಬರ್ ಆಗ್ಬೇಕು ಅನ್ನೋವರಿಗೆ ಕೆಲವು ಟಿಪ್ಸ್
ಮೊದಲನೆಯದಾಗಿ ಫುಲ್ ಟೈಮ್ ಕಂಟೆಂಟ್ ಕ್ರಿಯೇಟರ್ ಆಗಲು ಕನ್ಸಿಸ್ಟೆನ್ಸಿ ಅಥವಾ ಸ್ಥಿರತೆ ಮುಖ್ಯ ನಿರಂತರವಾಗಿ ವಿಡಿಯೋಗಳನ್ನ ಕ್ರಿಯೇಟ್ ಮಾಡ್ತಾ ಇರಬೇಕು ನೀವು ನಿಮ್ಮನ್ನು ಹೇಗೆ ಮಾರ್ಕೆಟಿಂಗ್ ಮಾಡ್ತೀರಿ ಎನ್ನುವುದು ಇಲ್ಲಿ ಮುಖ್ಯವಾಗುತ್ತೆ ಕಂಟೆಂಟ್ ಕ್ರಿಯೇಷನ್ ಅಲ್ಲಿ ಹೇಗೆ ಹಣ ಮಾಡಬಹುದು ಇದರಲ್ಲಿ ಎರಡು ವಿಧಗಳಿವೆ ನೀವು ಬ್ರಾಂಡ್ ಗಳನ್ನು ಸಂಪರ್ಕಿಸುವುದು ಒಂದು ವಿಧವಾದರೆ ಬ್ರಾಂಡ್ ಗಳೇ ನಿಮ್ಮನ್ನು ಸಂಪರ್ಕಿಸುವ ಮಟ್ಟಕ್ಕೆ ಬೆಳೆಯುವಂತದ್ದು ಮತ್ತೊಂದು ವಿಧ.
ಎರಡನೆಯದಾಗಿ ಬೆಳಗ್ಗೆ ಒಂಬತ್ತರಿಂದ ಸಂಜೆ ಐದರ ತನಕ ಕಚೇರಿ ಕೆಲಸಗಳಲ್ಲಿ ಬಿಜಿಯಾಗಿ ಇರುವವರು ರಾತ್ರಿ ಒಂದಷ್ಟು ಕಾಲ ಕಂಟೆಂಟ್ ಗಳನ್ನು ನೋಡಬಹುದು ಆದ್ದರಿಂದ ಆರ್ಟಿಸ್ಟಿಕ್ ಅಥವಾ ಸುದೀರ್ಘವಾದ ಕಂಟೆಂಟ್ ಗಳನ್ನ ಅವರು ನೋಡೋ ಚಾನ್ಸಸ್ ಕಡಿಮೆ ಶಾರ್ಟ್ ಫಾರ್ಮ್ ಗಳಲ್ಲಿ ವಿಡಿಯೋಗಳನ್ನು ತಯಾರಿಸಬಹುದು ಉತ್ತಮ ಶಾರ್ಟ್ಸ್ ಅಥವಾ ರೀಲ್ಸ್ ಗಳಿಗೆ ಹೆಚ್ಚು ವ್ಯೂವ್ಸ್ ಬರುವಂತದ್ದು ಇದೇ ಕಾರಣಕ್ಕೆ.
ನಿಮ್ಮ ಟಾರ್ಗೆಟ್ ಆಡಿಯನ್ಸ್ ಯಾರು ಎಂಬುದನ್ನು ಸ್ಪಷ್ಟವಾಗಿ ಆಯ್ಕೆ ಮಾಡಿಕೊಳ್ಳಿ ಬಳಿಕ ಸೂಕ್ತವಾದ ಕಂಟೆಂಟ್ ಅನ್ನು ಅಭಿವೃದ್ಧಿ ಪಡಿಸಬೇಕು ಅಗತ್ಯವಿರುವ ಗ್ರಾಫ್ ಗಳನ್ನು ಕೂಡ ಬಳಸಿಕೊಳ್ಳಿ ನಿಮ್ಮದೇ ಸಂಶೋಧನೆ ಕೂಡ ಸಾಕಷ್ಟು ಮಾಡಿಕೊಳ್ಳಿ ಅತಿಯಾಗಿ ಅಂಶ ಅಂಕಿ ಅಂಶಗಳನ್ನ ಸೇರಿಸಿಕೊಳ್ಳುವಂತದ್ದು ಅಷ್ಟು ಚೆನ್ನಾಗಿರಲ್ಲ ಮುಖ್ಯಾಂಶಗಳನ್ನ ಹೈಲೈಟ್ ಮಾಡುವಂತದ್ದು ಕೂಡ ಯೂಸ್ ಆಗುತ್ತೆ.
ಪ್ರತಿ ವಿಡಿಯೋ ತಯಾರಿಸುವ ಮುನ್ನ ನೋಟ್ಸ್ ಗಳನ್ನ ಸಿದ್ಧಪಡಿಸಿ ಇಟ್ಟುಕೊಳ್ಳಿ ಕಂಟೆಂಟ್ ಗಳು ಅಂದ್ರೆ ಕೇವಲ ತಮಾಷೆ ಜೋಕ್ಸ್ ಗಿಮಿಕ್ಸ್ ಅಥವಾ ಮನೋರಂಜನೆಗೆ ಸಂಬಂಧಿಸಿದ್ದಲ್ಲ ಇವುಗಳ ಮೂಲಕ ಉಪಯುಕ್ತವಾದಂತಹ ಮಾಹಿತಿ ತಿಳುವಳಿಕೆಯನ್ನು ಕೂಡ ಕೊಡಬಹುದು.
ನ್ಯಾಷನಲ್ ಕ್ರಿಯೇಟರ್ಸ್ ಪ್ರಶಸ್ತಿ
ಇತ್ತೀಚೆಗೆ ಕಂಟೆಂಟ್ ಕ್ರಿಯೇಟರ್ಸ್ ಗೆ ನ್ಯಾಷನಲ್ ಕ್ರಿಯೇಟರ್ಸ್ ಪ್ರಶಸ್ತಿಯನ್ನು ಪ್ರಧಾನ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸಂಸ್ಕೃತಿ ಕಲೆ ಜನಪದ ಸಂಶೋಧನೆ ಬೆಳವಣಿಗೆಗಳನ್ನ ಜಗತ್ತಿಗೆ ಪರಿಚಯಿಸಲು ಕಂಟೆಂಟ್ ಕ್ರಿಯೇಟರ್ಸ್ ತೊಡಗಿಸಿಕೊಳ್ಳಬೇಕು ಅಂತ ಹೇಳಿದ್ರು ಅಲ್ಲದೆ ಜರ್ಮನ್, ಫ್ರೆಂಚ್, ಸ್ಪಾನಿಷ್ ಇತ್ಯಾದಿ ವಿದೇಶಿ ಭಾಷೆಗಳಲ್ಲಿ ಕೂಡ ಕಂಟೆಂಟ್ ಗಳನ್ನ ತಯಾರಿಸಿ ಜಗತ್ತಿನ ಗಮನ ಸೆಳೆಯಬೇಕು ಅಂತ ಅವರು ಹೇಳಿದರು.
ಭಾರತದಲ್ಲಿ ನಡೆದಿರುವ ಡೇಟಾ ರೆವಲ್ಯೂಷನ್ ಮತ್ತು ಅಗ್ಗದ ಸ್ಮಾರ್ಟ್ ಫೋನ್ ಗಳಿಂದ ಕಂಟೆಂಟ್ ಕ್ರಿಯೇಟರ್ಸ್ ಗೆ ವೇದಿಕೆ ಸೃಷ್ಟಿಯಾಗಿದೆ ಇದನ್ನ ರಚನಾತ್ಮಕವಾಗಿ ಬಳಸಿಕೊಳ್ಳಬೇಕು ಅಂತ ಪ್ರಧಾನಿ ನರೇಂದ್ರ ಮೋದಿಯವರು ಸಲಹೆ ನೀಡಿದ್ದನ್ನ ನಾವು ಗಮನಿಸಬಹುದು.
ಇದನ್ನೂ ಓದಿ: Ragi Malt Business 2024!! ಮನೆಯಲ್ಲಿ ಕುಳಿತುಕೊಂಡು ಈ ಹೊಸ Business





