ಕರ್ನಾಟಕ ನಂ. 1 ಹೀರೋ? Top ನಟರ ಸಂಪೂರ್ಣ ಪಟ್ಟಿ ಮತ್ತು ವಿಶ್ಲೇಷಣೆ!

ಸ್ಯಾಂಡಲ್‌ವುಡ್‌ನಲ್ಲಿ ಕರ್ನಾಟಕದ ನಂಬರ್ 1 ಹೀರೊ ಯಾರು? ಪುನೀತ್, ಕಿಚ್ಚ ಸುದೀಪ್, ದರ್ಶನ್ ಮತ್ತು ಯಶ್ ಅವರ ಜನಪ್ರಿಯತೆ ಬಗ್ಗೆ ಸಂಪೂರ್ಣ ಮಾಹಿತಿ.

Belagavi Voice Author
March 9, 2026 1:25 PM
ಕರ್ನಾಟಕ ನಂ. 1 ಹೀರೋ? Top ನಟರ ಸಂಪೂರ್ಣ ಪಟ್ಟಿ ಮತ್ತು ವಿಶ್ಲೇಷಣೆ!

ಕನ್ನಡಿಗರಿಗೆ ಸಿನಿಮಾ ಅಂದ್ರೆ ಬರೀ ಮನರಂಜನೆ ಅಷ್ಟೇ ಅಲ್ಲ, ಅದು ಒಂದು Emotion! ಅದರಲ್ಲೂ ನಮ್ಮ ಸ್ಯಾಂಡಲ್‌ವುಡ್ ನಟರ ಸ್ಟೈಲ್, ಆಕ್ಟಿಂಗ್, ಅಂಡ್ ಅವರ ಪರ್ಸನಾಲಿಟಿಗೆ ಯಾರೇ ಆದ್ರೂ ಫಿದಾ ಆಗ್ತಾರೆ.

ಕೆಲವ್ರು ತಮ್ಮ Handsome ಲುಕ್‌ನಿಂದಲೇ ಫ್ಯಾನ್ಸ್ ಹೃದಯ ಗೆದ್ರೆ, ಇನ್ನೂ ಕೆಲವ್ರು ತಮ್ಮ ಪ್ರತಿಭೆ, ಡೈಲಾಗ್ ಡೆಲಿವರಿ, ಮತ್ತು ಚಾರ್ಮ್‌ನಿಂದ ಕನ್ನಡಿಗರ ಮೆಚ್ಚುಗೆ ಗಳಿಸಿದ್ದಾರೆ.

ಇವತ್ತು ನಾವ್ ಸೌತ್ ಇಂಡಿಯಾದಲ್ಲಿ, ಅದರಲ್ಲೂ ಮುಖ್ಯವಾಗಿ ನಮ್ಮ ಕರ್ನಾಟಕದಲ್ಲಿ, ನಂ. 1 ಹೀರೋ, ಲುಕ್ಸ್ ಮತ್ತು ಪರ್ಸನಾಲಿಟಿಯಿಂದ ಎಲ್ಲರ ಅಟೆನ್ಷನ್ ಸೆಳೆದಿರೋ ಕೆಲ ಸೂಪರ್ ಸ್ಟಾರ್‌ಗಳ ಬಗ್ಗೆ ಮಾತಾಡೋಣ. ಈ ಲಿಸ್ಟ್‌ನಲ್ಲಿ ಯಾರ್ಯಾರಿದ್ದಾರೆ ಅಂತ ನೋಡೋಣ ಬನ್ನಿ!

ಕರ್ನಾಟಕ ನಂಬರ್ 1 ಹೀರೊಗಳ ಪಟ್ಟಿ ಮತ್ತು ವಿಶ್ಲೇಷಣೆ

Karnataka No 1 Hero 2026

ಕರ್ನಾಟಕ Top ಹೀರೊಗಳ ಪಟ್ಟಿ

1

ಪುನೀತ್ ರಾಜ್‌ಕುಮಾರ್

ಸದಾ ಜೀವಂತ ಪವರ್ ಸ್ಟಾರ್

2

ಶಿವರಾಜ್‌ಕುಮಾರ್

ಹ್ಯಾಟ್ರಿಕ್ ಹೀರೋ

3

ದರ್ಶನ್

ಚಾಲೆಂಜಿಂಗ್ ಸ್ಟಾರ್ – ಮಾಸ್ ಮೈತ್ರಿ

4

ಯಶ್

ರಾಕಿಂಗ್ ಸ್ಟಾರ್ – Global Stardom

5

ಕಿಚ್ಚ ಸುದೀಪ್

ಬಹುಭಾಷಾ ನಟನೆಯ Badshah

6

ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ & Raj B Shetty

New Wave ಸೃಷ್ಟಿಕರ್ತರು

7

ದುನಿಯಾ ವಿಜಯ್

Duniya Star

8

ಧ್ರುವ ಸರ್ಜಾ

ಆಕ್ಷನ್ ಪ್ರಿನ್ಸ್

9

ಶ್ರೀನಗರ ಕಿಟ್ಟಿ & ಧನಂಜಯ

ವರ್ಸಟೈಲ್ ನಟರು

10

ಪ್ರೇಮ್ & ಗಣೇಶ್

Lovely Star & Golden Star

11

ಅಜಯ್ ರಾವ್, ಪೃಥ್ವಿ ಅಂಬರ್ & ವಿಕ್ರಮ್ Ravichandran

Rising Stars

1. ಪುನೀತ್ ರಾಜ್‌ಕುಮಾರ್: ಸದಾ ಜೀವಂತ ಪವರ್ ಸ್ಟಾರ್

ನಮ್ಮ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹೆಸ್ರು ಕೇಳಿದ್ರೆ ಸಾಕು, ಕನ್ನಡಿಗರ ಮನಸ್ಸು ಭಾವುಕವಾಗುತ್ತೆ.

ಅವರು ಬರೀ ಒಬ್ಬ ಸೂಪರ್‌ಸ್ಟಾರ್ ನಟ ಅಷ್ಟೇ ಆಗಿರ್ಲಿಲ್ಲ, ಅದಕ್ಕಿಂತ ಹೆಚ್ಚಾಗಿ ಒಬ್ಬ ಸರಳ, ಸಜ್ಜನ ವ್ಯಕ್ತಿ.

ಅವರ ಚಾರ್ಮಿಂಗ್ ಲುಕ್, ಪವರ್‌ಫುಲ್ ಡಾನ್ಸಿಂಗ್ ಸ್ಕಿಲ್ಸ್, ಮತ್ತು ಎಮೋಷನಲ್ ಆಕ್ಟಿಂಗ್‌ನಿಂದ ಇಡೀ ಕರ್ನಾಟಕದ ಫ್ಯಾನ್ಸ್ ಹೃದಯ ಗೆದ್ದಿದ್ರು.

2021ರಲ್ಲಿ ನಮ್ಮನ್ನೆಲ್ಲ ಅಗಲಿದ್ರೂ, ಅವರ ಕೆಲಸಗಳು ಮತ್ತು ವ್ಯಕ್ತಿತ್ವ ಇವತ್ತಿಗೂ ಲಕ್ಷಾಂತರ ಜನರಿಗೆ ಸ್ಪೂರ್ತಿ. ಅವರು ನಮ್ಮೆಲ್ಲರ ಮನಸ್ಸಲ್ಲಿ ಸದಾ ಜೀವಂತ.

2. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್

ಕನ್ನಡ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಮಾಸ್ ಸಿನಿಮಾಗಳಿಗೆ ಇರೋ ಕ್ರೇಜ್ ನಿಜಕ್ಕೂ ಬೇರೆ ಲೆವೆಲ್.

ಅವರ ಪ್ರತಿ ಸಿನಿಮಾದಲ್ಲೂ ಸಿಗುವ ಎನರ್ಜಿ, ಡೈಲಾಗ್ ಡೆಲಿವರಿ, ಮತ್ತು ಆಕ್ಷನ್ ಸೀನ್‌ಗಳು ಫ್ಯಾನ್ಸ್‌ಗೆ ಒಂದು ಹಬ್ಬದ ಫೀಲ್ ಕೊಡುತ್ತೆ.

ಶಿವಣ್ಣನ ಸಿನಿಮಾಗಳು ಬರೀ ಕಥೆ ಹೇಳೋದಲ್ಲ, ಅವು ಒಂದು ಇಮೋಶನ್, ಒಂದು ಎಕ್ಸ್ಪೀರಿಯನ್ಸ್.

ಇಲ್ಲಿ ನಾವು ಅವರ ಕೆಲವು ಟಾಪ್ ಮಾಸ್ ಸಿನಿಮಾಗಳ ಬಗ್ಗೆ, ಅದರಲ್ಲೂ ಅವರ ಗ್ಯಾಂಗ್‌ಸ್ಟರ್ ಪಾತ್ರಗಳ ಬಗ್ಗೆ ಡೀಟೇಲ್ ಆಗಿ ನೋಡೋಣ, ಓಂ ನಿಂದ ಶುರುವಾಗಿ ಘೋಸ್ಟ್ ವರೆಗೆ ಅವರ ಮಾಸ್ ಜರ್ನಿ ಹೇಗಿತ್ತು ಅಂತ.

ಓಂ: ಕನ್ನಡ ಸಿನಿಮಾದ ಹೊಸ ಅಧ್ಯಾಯ:

ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಬಗ್ಗೆ ಮಾತಾಡೋವಾಗ, ಅವರ ಮಾಸ್ ಪರ್ಫಾರ್ಮೆನ್ಸ್ ಬಗ್ಗೆ ಹೇಳ್ದೆ ಇದ್ರೆ ಹೆಂಗ್ರಿ? ಅದರಲ್ಲೂ ‘ಓಂ’ ಸಿನಿಮಾ ಬಗ್ಗೆ ಹೇಳ್ಲೇಬೇಕು.

ನಿಮಗೆ ಗೊತ್ತಾ, ‘ಓಂ’ 550ಕ್ಕೂ ಹೆಚ್ಚು ಬಾರಿ ರಿಲೀಸ್ ಆಗಿ ಪ್ರತಿ ಬಾರಿಯೂ ಥಿಯೇಟರ್ ತುಂಬಿತ್ತು.

3. ಚಾಲೆಂಜಿಂಗ್ ಸ್ಟಾರ್ ದರ್ಶನ್: ಮಾಸ್ ಮೈತ್ರಿ

ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಅದು ಬರೀ ಒಬ್ಬ ನಟನ ಹೆಸ್ರಲ್ಲ, ಅದೊಂದು ಶಕ್ತಿ! ಅವರ ಮಾಸ್ ಅಪೀಲ್, ಡೈಲಾಗ್ ಡೆಲಿವರಿ, ಅಂಡ್ ಸ್ಕ್ರೀನ್ ಪ್ರೆಸೆನ್ಸ್ ಗೆ ಇಡೀ ಕರ್ನಾಟಕವೇ ಜೈ ಎನ್ನುತ್ತೆ.

ದರ್ಶನ್ ಅವರ ಹ್ಯಾಂಡ್ಸಮ್ ಲುಕ್ ಜೊತೆಗಿನ ರಫ್ ಅಂಡ್ ಟಫ್ ಪರ್ಸನಾಲಿಟಿ ಯೂತ್ಸ್‌ಗೆ ತುಂಬಾ ಕನೆಕ್ಟ್ ಆಗುತ್ತೆ.

ಪ್ರತಿಯೊಂದು ಸಿನಿಮಾದಲ್ಲೂ ವಿಭಿನ್ನ ಪಾತ್ರಗಳ ಮೂಲಕ ತಮ್ಮ ಫ್ಯಾನ್ಸ್‌ನ ಖುಷಿಪಡಿಸ್ತಾರೆ.

ಅವರ ‘D Boss‘ ಫ್ಯಾನ್ ಫಾಲೋಯಿಂಗ್ ನೋಡಿದ್ರೆ, ಅವರ ಕ್ರೇಜ್ ಎಷ್ಟಿದೆ ಅಂತ ಗೊತ್ತಾಗುತ್ತೆ.

4. ರಾಕಿಂಗ್ ಸ್ಟಾರ್ ಯಶ್: Global ಸ್ಟಾರ್‌ಡಮ್

ರಾಕಿಂಗ್ ಸ್ಟಾರ್ ಯಶ್, ಸ್ಯಾಂಡಲ್‌ವುಡ್‌ನಿಂದ ಜಾಗತಿಕ ಮಟ್ಟಕ್ಕೆ ಕನ್ನಡ ಸಿನಿಮಾವನ್ನ ಕೊಂಡೊಯ್ದ ಹೆಮ್ಮೆಯ ನಟ.

KGF ಚಾಪ್ಟರ್ 1 ಅಂಡ್ 2 ಎರಡು ಸಿನಿಮಾದಿಂದ ನಿಂದ ಅವರು ಇಡೀ ವಿಶ್ವಕ್ಕೆ ಪರಿಚಯವಾದ್ರು.

ಇದಕ್ಕಿಂತ ಮುಂಚೆಯೂ ಇವರ ಸಿನಿಮಾಗಳು ಕನ್ನಡದಲ್ಲಿ ಅತಿ ಹೆಚ್ಚು ಗಳಿಕೆ ಮಾಡುತ್ತಿದ್ದವು ಹಾಗೂ ಕನ್ನಡಿಗರು ಇವರನ್ನು ಬಹಳ ಪ್ರೀತಿಸುತ್ತಿದ್ದರು.

ಅವರ ಸ್ಟೈಲ್, ಆಟಿಟ್ಯೂಡ್, ಅಂಡ್ ಸ್ಕ್ರೀನ್ ಪ್ರೆಸೆನ್ಸ್ ಇಂಟರ್‌ನ್ಯಾಷನಲ್ ಲೆವೆಲ್‌ಗೆ ಹೋಗಿದೆ.

ಒಂದು ಕಾಲದಲ್ಲಿ ಟಿವಿ ಸೀರಿಯಲ್ಸ್‌ನಲ್ಲಿ ನಟಿಸ್ತಿದ್ದ ಯಶ್, ಇವತ್ತು ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ ಅಂದ್ರೆ ಅದಕ್ಕೆ ಅವರ ಕಠಿಣ ಪರಿಶ್ರಮ ಮತ್ತು ಆಕರ್ಷಕ ವ್ಯಕ್ತಿತ್ವವೇ ಕಾರಣ.

ಅವರ ರಗಡ್ ಲುಕ್ ಯುವಕರಿಗೆ ಇಷ್ಟವಾಗುತ್ತೆ.

5. ಕಿಚ್ಚ ಸುದೀಪ್: ಬಹುಭಾಷಾ ನಟನೆಯ Badshah

ನಮ್ಮ ಕಿಚ್ಚ ಸುದೀಪ್ ಅವರ ಬಹುಮುಖ ಪ್ರತಿಭೆ ಬಗ್ಗೆ ಹೇಳೋಕೆ ಪದಗಳೇ ಸಾಲಲ್ಲ.

ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳು, ಮತ್ತು ಹಿಂದಿ ಸಿನಿಮಾಗಳಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದಾರೆ.

ಅವರ ವಿಶಿಷ್ಟ ಕಂಠ, ಸ್ಟೈಲಿಶ್ ಮ್ಯಾನರಿಸಂ, ಮತ್ತು ಎಂಥಾ ಪಾತ್ರದಲ್ಲೂ ಜೀವ ತುಂಬೋ ಅವರ ನಟನೆಗೆ ದೊಡ್ಡ ಅಭಿಮಾನಿ ಬಳಗ ಇದೆ.

Badshah ಸುದೀಪ್ ಅವರ ಸ್ಮಾರ್ಟ್ ಲುಕ್ ಮತ್ತು ಡ್ಯಾಶಿಂಗ್ ಪರ್ಸನಾಲಿಟಿ ಎಲ್ಲರನ್ನೂ ಸೆಳೆಯುತ್ತೆ.

Badshah‘ ಎಂದೇ ಖ್ಯಾತಿ ಪಡೆದಿರುವ ಇವರು, ಕನ್ನಡದ ಹಿರಿಮೆಯನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ.

6. New ವೇವ್ ಸೃಷ್ಟಿಕರ್ತರು: ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು Raj B Shetty

ಕನ್ನಡ ಚಿತ್ರರಂಗಕ್ಕೆ ಹೊಸ ಅಲೆಯನ್ನು ತಂದ ನಟ-ನಿರ್ದೇಶಕರಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, Raj B Shetty ಅಗ್ರಗಣ್ಯರು.

ರಕ್ಷಿತ್ ತಮ್ಮ ಕ್ರಿಯೇಟಿವ್ ಸ್ಟೋರಿಟೆಲ್ಲಿಂಗ್, ವಿಭಿನ್ನ ಪಾತ್ರಗಳು ಮತ್ತು ಚಾರ್ಮಿಂಗ್ ಲುಕ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಕಿರಿಕ್ ಪಾರ್ಟಿ‘ ಮತ್ತು ‘777 ಚಾರ್ಲಿ‘ ಸಿನಿಮಾಗಳು ಇದಕ್ಕೆ ಬೆಸ್ಟ್ ಉದಾಹರಣೆ.

ಇನ್ನು ರಿಷಬ್ ಶೆಟ್ಟಿ ‘ಕಾಂತಾರ‘ದ ಮೂಲಕ ಇಡೀ ವಿಶ್ವದ ಅಟೆನ್ಷನ್ ಪಡೆದರು.

Raj B Shetty ‘ಒಂದು ಮೊಟ್ಟೆಯ ಕಥೆ’ಯಿಂದ ಪ್ಯಾನ್ ಇಂಡಿಯಾ ಸ್ಟಾರ್‌ವರೆಗೆ! ರಾಜ್ ಬಿ ಶೆಟ್ಟಿ ಅವರ Su from So ಸಿನಿಮಾ ಮೂಲಕ ದೇಶದಾಂತ್ಯ ಹೆಸರು ಮಾಡಿದ್ದಾರೆ.

ಅವರ ಪರ್ಫಾಮೆನ್ಸ್, ನಿರ್ದೇಶನ, ಮತ್ತು ಕರ್ನಾಟಕದ ಸಂಸ್ಕೃತಿಗೆ ಕನೆಕ್ಟ್ ಆಗುವ ಅವರ ಲುಕ್ ಇವತ್ತು ಮನೆಮಾತಾಗಿದೆ. ಇಬ್ಬರೂ ನಿಜಕ್ಕೂ ಟ್ಯಾಲೆಂಟೆಡ್.

7. ದುನಿಯಾ ವಿಜಯ್: Black Tiger

ಕನ್ನಡ ಚಿತ್ರರಂಗದ ‘ದುನಿಯಾ’ ವಿಜಯ್ ಎಂದೇ ಖ್ಯಾತಿ ಪಡೆದಿರುವ ನಟ ವಿಜಯ್ ಕುಮಾರ್ ಅವರ ಸಿನಿ ಪಯಣವು ಸಾಕಷ್ಟು ಏಳುಬೀಳುಗಳಿಂದ ಕೂಡಿದೆ.

ಬಾಡಿಬಿಲ್ಡರ್ ಆಗಬೇಕಿದ್ದವರು ಆಕಸ್ಮಿಕವಾಗಿ ಚಿತ್ರರಂಗಕ್ಕೆ ಕಾಲಿಟ್ಟು, ವಿಲನ್ ಪಾತ್ರಗಳಿಂದ ನಾಯಕನಾಗಿ ಮಿಂಚಿದರು.

ಸಲಗ’ದ ಮೂಲಕ ಫೀನಿಕ್ಸ್ ಪಕ್ಷಿಯಂತೆ ಪುಟಿದೆದ್ದು ಯಶಸ್ವಿ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಪ್ರಾರಂಭದಲ್ಲಿ ಸೈಡ್ ಆಕ್ಟರ್ ಮತ್ತು ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಕುಮಾರ್, 2007ರಲ್ಲಿ ತೆರೆಕಂಡ ‘ದುನಿಯಾ‘ ಸಿನಿಮಾದ ಮೂಲಕ ನಾಯಕನಾಗಿ ಹೊರಹೊಮ್ಮಿದರು.

ಸೂಪರ್‌ಸ್ಟಾರ್ ರಜನಿಕಾಂತ್‌ರನ್ನು ತಮ್ಮ ಇನ್ಸ್‌ಪಿರೇಷನ್ ಆಗಿ ಸ್ವೀಕರಿಸಿ, ಬಣ್ಣಕ್ಕಿಂತ ಪ್ರತಿಭೆ ಮುಖ್ಯ ಎಂದು ಕನ್ನಡ ಪ್ರೇಕ್ಷಕರಿಗೆ ಪ್ರೂವ್ ಮಾಡಿ ತೋರಿಸಿದರು.

8. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಕನ್ನಡ ಚಿತ್ರರಂಗದ ‘ಆಕ್ಷನ್ ಪ್ರಿನ್ಸ್‘ ಧ್ರುವ ಸರ್ಜಾ ಅವರು ಕೇವಲ ಆರು ಸಿನಿಮಾಗಳ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ತಮ್ಮ ವಿಭಿನ್ನ ನಟನೆ ಮತ್ತು ಕಥಾ ಆಯ್ಕೆಯ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಇವರು ಸಿನಿರಂಗದಲ್ಲಿ ಹೆಚ್ಚು ಶ್ರಮಜೀವಿಯಾಗಿ ಗುರುತಿಸಿಕೊಂಡಿದ್ದಾರೆ.

ಚಲನಚಿತ್ರಗಳ ಹಿನ್ನೆಲೆ ಇರುವ ಕುಟುಂಬದಿಂದ ಬಂದಿರುವ ಧ್ರುವ ಅವರ ಸಹೋದರ ಚಿರಂಜೀವಿ ಸರ್ಜಾ ಸಹ ಕನ್ನಡ ಚಿತ್ರರಂಗದ ನಾಯಕ ನಟರಾಗಿದ್ದರು.

ಇವರ ಸೋದರ ಮಾವ ಅರ್ಜುನ್ ಸರ್ಜಾ ದಕ್ಷಿಣ ಭಾರತದ ಖ್ಯಾತ ನಟರಾದರೆ, ಅಜ್ಜ ಶಕ್ತಿ ಪ್ರಸಾದ್ ಕನ್ನಡ ಚಿತ್ರಗಳಲ್ಲಿ ಹಿರಿಯ ನಟರಾಗಿದ್ದರು.

ನಟನೆಯ ವಂಶಪಾರಂಪರೆಯನ್ನೇ ಧ್ರುವ ಸರ್ಜಾ ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

9. ವರ್ಸಟೈಲ್ ನಟರು: ಶ್ರೀನಗರ ಕಿಟ್ಟಿ, ಧನಂಜಯ

ವಿಭಿನ್ನ ಪಾತ್ರಗಳನ್ನು ನಿರ್ವಹಿಸುವಲ್ಲಿ ಇವರು ಎತ್ತಿದ ಕೈ.

ಶ್ರೀನಗರ ಕಿಟ್ಟಿ ತಮ್ಮ ‘ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ’ಯಂತಹ ಸಿನಿಮಾಗಳ ಮೂಲಕ ಕ್ಯೂಟ್ ಅಂಡ್ ಚಾರ್ಮಿಂಗ್ ಲುಕ್‌ನಿಂದ ಜನರನ್ನ ಸೆಳೆದಿದ್ದಾರೆ.

ಅವರ ನೈಸರ್ಗಿಕ ನಟನೆಗೆ ಫ್ಯಾನ್ಸ್ ಇದ್ದಾರೆ.

ಇನ್ನು ಧನಂಜಯ, ‘ಡಾಲಿ‘ ಎಂದೇ ಫೇಮಸ್ ಆಗಿ, ವಿಲನ್ ಆಗಿ, ಹೀರೋ ಆಗಿ, ಎಲ್ಲಾ ಪಾತ್ರಗಳಲ್ಲೂ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಅವರ ರಗಡ್ ಲುಕ್ ಮತ್ತು ಇಂಟೆನ್ಸ್ ಪರ್ಫಾಮೆನ್ಸ್ ಸೂಪರ್.

10. Lovely ಸ್ಟಾರ್ ಪ್ರೇಮ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್

ಸ್ಯಾಂಡಲ್‌ವುಡ್‌ನಲ್ಲಿ ಲವ್ ಅಂಡ್ ರೊಮ್ಯಾನ್ಸ್ ಅಂದ್ರೆ ತಕ್ಷಣ ನೆನಪಾಗೋ ಈ ಇಬ್ಬರು ನಟರು.

ಲವ್ಲಿ ಸ್ಟಾರ್ ಪ್ರೇಮ್, ತಮ್ಮ ರೊಮ್ಯಾಂಟಿಕ್ ಹೀರೋ ಇಮೇಜ್‌ನಿಂದ ಅನೇಕ ಹುಡುಗಿಯರ ಕನಸಿನ ರಾಜ. ಅವರ ಮುಗ್ಧ ನಟನೆ ಮತ್ತು ಆಕರ್ಷಕ ಲುಕ್ ಇಂದಿಗೂ ಅವರ ಫ್ಯಾನ್ಸ್ ಹೃದಯದಲ್ಲಿ ಇದೆ.

ಇನ್ನು ನಮ್ಮ ಗೋಲ್ಡನ್ ಸ್ಟಾರ್ ಗಣೇಶ್, ‘ಮುಂಗಾರು ಮಳೆ‘ಯಂತಹ ಸೂಪರ್‌ಹಿಟ್ ಸಿನಿಮಾಗಳ ಮೂಲಕ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಅವರ ಫ್ರೆಂಡ್ಲಿ ಲುಕ್, ಕಾಮಿಡಿ ಟೈಮಿಂಗ್, ಮತ್ತು ರೊಮ್ಯಾಂಟಿಕ್ ಪಾತ್ರಗಳು ಯಾವಾಗಲೂ ಜನರನ್ನ ಎಂಟರ್‌ಟೇನ್ ಮಾಡುತ್ತೆ.

ಇಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಮಿಂಚಿದ್ದಾರೆ.

11. ಅಜಯ್ ರಾವ್, ಪೃಥ್ವಿ ಅಂಬರ್, ವಿಕ್ರಮ್ Ravichandran

ಕನ್ನಡ ಚಿತ್ರರಂಗದಲ್ಲಿ ಹೊಸ ತಲೆಮಾರು ಕೂಡ ತಮ್ಮ ಛಾಪು ಮೂಡಿಸುತ್ತಿದೆ.

ಅಜಯ್ ರಾವ್, ತಮ್ಮ ಯೂತ್‌ಫುಲ್ ಲುಕ್ ಮತ್ತು ರೋಮ್ಯಾಂಟಿಕ್ ಸಿನಿಮಾಗಳ ಮೂಲಕ ಫ್ಯಾನ್ಸ್ ಗಳಿಸಿದ್ದಾರೆ.

ದಿಯಾ‘ ಚಿತ್ರದ ಮೂಲಕ ಎಲ್ಲರ ಮನೆಮಾತಾದ ಪೃಥ್ವಿ ಅಂಬರ್, ತಮ್ಮ ಎಮೋಷನಲ್ ಆಕ್ಟಿಂಗ್ ಮತ್ತು ಸಿಂಪಲ್ ಲುಕ್‌ನಿಂದ ಮೆಚ್ಚುಗೆ ಪಡೆದಿದ್ದಾರೆ.

ಇನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಗ ವಿಕ್ರಮ್ Ravichandran, ತಮ್ಮ ಹೊಸ ಪ್ರಾಜೆಕ್ಟ್‌ಗಳೊಂದಿಗೆ ಭವಿಷ್ಯದಲ್ಲಿ ದೊಡ್ಡ ಸ್ಟಾರ್ ಆಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದ್ದಾರೆ.

ಇವರ ನಟನೆ ಮತ್ತು ಆಕರ್ಷಕ ವ್ಯಕ್ತಿತ್ವ ಅಭಿಮಾನಿಗಳನ್ನು ಸೆಳೆಯುತ್ತಿದೆ.

ಸ್ಯಾಂಡಲ್‌ವುಡ್‌ನ ಬಹುಮುಖ ಪ್ರತಿಭೆಗಳ ವಿಭಿನ್ನ ಕೆಲಸಗಳು

ಕಲಾವಿದರುನಿರ್ವಹಿಸುತ್ತಿರುವ ಪಾತ್ರಗಳು ಪ್ರಮುಖ ಕೊಡುಗೆಗಳು
ಕಿಚ್ಚ ಸುದೀಪ್ನಟ, ನಿರ್ದೇಶಕ, ನಿರ್ಮಾಪಕ, ಹೋಸ್ಟ್, ಕ್ರಿಕೆಟರ್ಮೈ ಆಟೋಗ್ರಾಫ್, ಮಾಣಿಕ್ಯ, ಬಿಗ್ ಬಾಸ್ ಸಾರಥಿ
ರಿಯಲ್ ಸ್ಟಾರ್ ಉಪೇಂದ್ರನಟ, ನಿರ್ದೇಶಕ, ಬರಹಗಾರ, ಗಾಯಕಉಪ್ಪಿಟ್ಟು, ಜರಾಸಂಧ; ದೀಪಿಕಾ ಪಡುಕೋಣೆ ಲಾಂಚ್
ಸಾಧು ಕೋಕಿಲಸಂಗೀತ ನಿರ್ದೇಶಕ, ನಟ, ನಿರ್ದೇಶಕ, ಗಾಯಕರಕ್ತ ಕಣ್ಣೀರು, ಸುಂಟರಗಾಳಿ, ಹಾಸ್ಯ ನಟನೆ
ಡಾಲಿ ಧನಂಜಯನಟ, ನಿರ್ಮಾಪಕ, ಸಾಹಿತ್ಯಕಾರಬಡವ ರಾಸ್ಕಲ್, ಹೆಡ್ ಬುಷ್ (ಸಾಹಿತ್ಯ), ಟಗರು ಪಲ್ಯ
ಡಾರ್ಲಿಂಗ್ ಕೃಷ್ಣನಟ, ನಿರ್ದೇಶಕ, ಬರಹಗಾರ, ನಿರ್ಮಾಪಕಲವ್ ಮಾಕ್ಟೇಲ್ ಸರಣಿ, ಕರ್ನಾಟಕ ಬುಲ್ಡೋಜರ್ಸ್ ಬ್ಯಾಟ್ಸ್‌ಮನ್
ದುನಿಯಾ ವಿಜಯ್ನಟ, ನಿರ್ದೇಶಕ, ಬರಹಗಾರ, ಗಾಯಕಸಲಗ, ಸಿಟಿಲೈಟ್, ಜಯಮ್ಮನ ಮಗ (ನಿರ್ಮಾಣ)
ಶೆಟ್ಟಿ ತ್ರಯರುನಟನೆ, ನಿರ್ದೇಶನ, ನಿರ್ಮಾಣ, ಬರವಣಿಗೆಕಿರಿಕ್ ಪಾರ್ಟಿ, ಕಾಂತಾರ, ರಿಚರ್ಡ್ ಆಂಟೋನಿ
ಪ್ರೇಮ್ನಿರ್ದೇಶಕ, ನಟ, ನಿರ್ಮಾಪಕ, ಗಾಯಕಹಿಟ್ ಹಾಡುಗಳು ಮತ್ತು ವಿಭಿನ್ನ ಮಾರ್ಕೆಟಿಂಗ್ ಶೈಲಿ

ಕೊನೆಯ ಮಾತು

ಒಟ್ಟಿನಲ್ಲಿ, ಕನ್ನಡಿಗರಿಗೆ ಕರ್ನಾಟಕದ ನಂಬರ್ ಒನ್ ಹೀರೋಗಳ ಪಟ್ಟಿ ಮತ್ತು ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಪ್ರತಿಭೆ, ಸೌಂದರ್ಯ ಎರಡನ್ನೂ ಹೊಂದಿರುವ ನಟರಿಗೆ ಕೊರತೆಯಿಲ್ಲ.

ಇವರೆಲ್ಲರೂ ತಮ್ಮ ವಿಶಿಷ್ಟ ಶೈಲಿ, ನಟನೆ ಮತ್ತು ವ್ಯಕ್ತಿತ್ವದಿಂದ ಕನ್ನಡಿಗರ ಹೃದಯದಲ್ಲಿ ಮನೆ ಮಾಡಿದ್ದಾರೆ.

ಈ ಸ್ಟಾರ್‌ಗಳು ಬರೀ ಕಣ್ಣಿಗೆ ಸುಂದರವಾಗಿ ಕಾಣೋದು ಅಷ್ಟೇ ಅಲ್ಲ, ಅವರ ಕಠಿಣ ಪರಿಶ್ರಮ ಮತ್ತು ಸಿನಿಮಾ ಮೇಲಿನ ಪ್ರೀತಿಯು ಕೂಡ ಅವರನ್ನು ಹ್ಯಾಂಡ್ಸಮ್ ಆಗಿ ಕಾಣುವಂತೆ ಮಾಡುತ್ತೆ.

ಸ್ಯಾಂಡಲ್‌ವುಡ್‌ನ ಬೆಳವಣಿಗೆಗೆ ಇವರ ಕೊಡುಗೆ ಅಪಾರ.

Read More:

ಕನ್ನಡದ ನಂ. 1 TRP ಚಾನೆಲ್ ಯಾವುದು? 2026ರ ಟಾಪ್ 5 ಸಂಪೂರ್ಣ ಪಟ್ಟಿ ಮತ್ತು ವಿಶ್ಲೇಷಣೆ.

Social Media Ban for Under 16: 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಂದ್! ಇಲ್ಲಿದೆ ಮಾಹಿತಿ

belagavivoice - writeups

Pavan CS

Pavan CS is a final year Robotics Engineering student with a passion for writing. He contributes to the blog with a focus on Education and Government Schemes, helping Karnataka people stay informed about opportunities that matter to them

Leave a Comment