KPTCL Exam Update: KPTCL ಪರೀಕ್ಷೆ ನಡೆಸುತ್ತಾರ ಅಥವಾ ಇಲ್ಲವಾ?

December 2, 2024 6:38 AM
KPTCL Exam Update: KPTCL ಪರೀಕ್ಷೆ ನಡೆಸುತ್ತಾರ ಅಥವಾ ಇಲ್ಲವಾ?

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಸಾಕಷ್ಟು KPTCL ಅಭ್ಯರ್ಥಿಗಳಿಗೆ ಇದ್ದಿದ್ದ ಮುಖ್ಯವಾದ ಗೊತ್ತಿಲ್ಲವೇನೆಂದರೆ KPTCL ಪರೀಕ್ಷೆ ನಡೆಸುತ್ತಾರ ಅಥವಾ ಹಾಗೆ ಸೆಲೆಕ್ಷನ್ ನಡೆಯುತ್ತದ ಎಂದು. 

KPTCL ಪರೀಕ್ಷೆ ವಿಷಯವಾಗಿ ಇವತ್ತಿನ ಒಂದು ಪತ್ರಿಕೆಯಲ್ಲಿ ಇಲಾಖೆಯು ಒಂದು ಮುಖ್ಯವಾದ ಅಪ್ಡೇಟ್ ಅನ್ನು ನೀಡಿದೆ. ಹಾಗಾದರೆ ಇಲಾಖೆಯ ನೀಡಿರುವ ಹೊಸ ಅಪ್ಡೇಟ್ ಏನು ಹಾಗೂ KPTCL ಪರೀಕ್ಷೆ ನಡೆಸುತ್ತಾರ ಅಥವಾ ಇಲ್ಲವಾ, ಈ ಎಲ್ಲಾ ವಿಚಾರಗಳ ಬಗ್ಗೆ ವಿವರವಾಗಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ಪತ್ರಿಕೆ ಮೂಲಕ KPTCL ಪರೀಕ್ಷೆ ವಿಚಾರವಾಗಿ ಅಪ್ಡೇಟ್:

ಈ ಹಿಂದೆ KPTCL ನೇಮಕಾತಿ ವಿಷಯವಾಗಿ ಹತ್ತನೇ ತರಗತಿ ಮುಗಿಸಿರುವ ಅಭ್ಯರ್ಥಿಗಳ ಮೆರಿಟಾಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿತ್ತು. ಈ ವಿಷಯವಾಗಿ ಸಾಕಷ್ಟು ಕಡೆ ಚರ್ಚೆಗಳು ಉಂಟಾದವು ಹಾಗೂ ಹೋರಾಟಗಳು ಕೂಡ ನಡೆದಿತ್ತು ನಂತರ ಈ ವಿಷಯವು ಕೋರ್ಟ್ ವರೆಗೂ ಕೂಡ ಹೋಗಿತ್ತು.  

KPTCL ನೇಮಕಾತಿಯನ್ನು ಪರೀಕ್ಷೆ ನಡೆಸಿ ಮಾಡಬೇಕು ಎಂದು ಎಲ್ಲಾ ಕಡೆ ಒತ್ತಡಗಳು ಕೂಡ ಬಂದಿದ್ದವು. ಇದೀಗ KPTCL ಪರೀಕ್ಷೆ ವಿಚಾರವಾಗಿ ಒಂದು ಹೊಸ ಅಪ್ಡೇಟ್ ಅನ್ನು ಇಲಾಖೆಯ ಪತ್ರಿಕೆ ಮೂಲಕ ನೀಡಿದೆ.

ಡಿ ದರ್ಜೆ ನೌಕರರಿಗೆ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲ: KPTCL ಸ್ಪಷ್ಟನೆ

KPTCL ಸ್ಟೇಷನ್ ಪರಿಚರಕ ಮತ್ತು ಪವರ್ ಮ್ಯಾನ್ ಡಿ ದರ್ಜೆಯ ಹುದ್ದೆಗಳಿಗೆ ಕಡಿಮೆ ವ್ಯಾಸಂಗ ಮಾಡಿದವರಿಗೆ ಅವಕಾಶ ಕಲ್ಪಿಸುವ ದೇಶದಿಂದ ಹತ್ತನೇ ತರಗತಿ ಅಂಕ ಜೇಷ್ಠತೆ ಮತ್ತು ಕಠಿಣ ಕೆಲಸ ಮಾಡಬಲ್ಲ ತೃಪ್ತಕರ  ದೇಹದಾರ್ಯತೆಯ ಅರ್ಹತೆಯನ್ನು ಅನೇಕ ವರ್ಷಗಳ ಹಿಂದೆ ನಿಗದಿಪಡಿಸಲಾಗಿದೆ. ಈಗಲೂ ಅದನ್ನೇ ತೋರಿಸಲಾಗುತ್ತದೆ ಎಂದು KPTCL  ಮೂಲಗಳು ತಿಳಿಸುವೆ. 

KPTCL ಮತ್ತು ವಿವಿಧ ಏಸ್ಕಾಂಗಳಲ್ಲಿ ಖಾಲಿ ಇರುವ 2000ಕ್ಕೂ ಹೆಚ್ಚು ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಸರ್ಕಾರಿ ನೌಕರಿ ಆಕಾಂಕ್ಷಿಗಳು ರಾಜ್ಯದ ವಿವಿಧಡೆ ಪ್ರತಿಭಟನೆಯನ್ನು ಮಾಡಿದ್ದಾರೆ. ಇಂಧನ ಸಚಿವರು  ಸಿಎಂ ಗೆ ಮನವಿ ಪತ್ರವನ್ನು ಬರೆದಿದ್ದಾರೆ.

ಕಾನೂನು ಹೋರಾಟಕ್ಕೂ ಚಿಂತನೆ ನಡೆದಿದೆ. ಆದರೆ KPTCL ಮಾತ್ರ ಈ ವಿಷಯವಾಗಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ವಾಗಲೇ ಹೊರಡಿಸಿರುವ ನೋಟಿಫಿಕೇಶನ್ ಅನುಸಾರ ಮುಂದುವರೆಯಲು ತೀರ್ಮಾನಿಸಿದೆ. 

KPTCL ಸ್ಟೇಷನ್ ಪರಿಚರಕ ಹಾಗೂ ಪವರ್ ಮ್ಯಾನ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿದರೆ ಹತ್ತನೇ ತರಗತಿ ಮಾತ್ರವಲ್ಲದೆ ಪದವಿ ಉನ್ನತ ವ್ಯಾಸಂಗ ಮಾಡಿದವರು ಕೂಡ ಅರ್ಜಿ ಸಲ್ಲಿಸುವ ಸಾಧ್ಯತೆ ಇರುತ್ತದೆ.

ಇದರಿಂದ ಕಠಿಣ ಕೆಲಸ ಮಾಡುವ ಶ್ರಮಜೀವಿಗಳಿಗೆ ಸರ್ಕಾರಿ ಕೆಲಸದ ಅವಕಾಶಗಳು ಕ್ಷೀಣವಾಗಬಹುದು ಎಂದು  ಮೂಲಗಳು ತಿಳಿಸಿವೆ. 

ಇದನ್ನೂ ಓದಿ: JOB: ಭೂಮಾಪಕರ ನೇಮಕಾತಿ 2024.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment