ಎಲ್ಲರಿಗೂ ನಮಸ್ಕಾರ, ಲೋ ಬಿಪಿ ಅಥವಾ ಕಡಿಮೆ ರಕ್ತದ ಒತ್ತಡದ ಲಕ್ಷಣಗಳು ಹೇಗಿರುತ್ತವೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ ಇಲ್ಲಿದೆ ಉಪಯುಕ್ತ ಮಾಹಿತಿ ಲೋ ಬಿಪಿಯ ಲಕ್ಷಣಗಳಿವು ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಸಮಸ್ಯೆಗಳು ಇಂದು ಬಹಳ ಸಾಮಾನ್ಯವಾಗಿ ಬಿಟ್ಟಿದೆ ಅದರಲ್ಲಿ ಲೋ ಬಿಪಿ ಕೂಡ ಒಂದು ಇದಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಬಹಳ ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡಬಹುದು.
ಇನ್ನು ಲೋ ಬಿಪಿಯ ಮುಖ್ಯ ಲಕ್ಷಣಗಳ ಬಗ್ಗೆ ಹೇಳುವುದಾದರೆ ತಲೆ ತಿರುಗುವಿಕೆ ತ್ವರಿತ ಹೃದಯ ಬಡಿತ ಅತಿಯಾದ ನಿದ್ರಾಹೀನತೆ ಆಲಸ್ಯ ಆಯಾಸ ವಾಕರಿಕೆ ವಾಂತಿ ಅತಿಯಾದ ಬೆವರುವಿಕೆ ಶೀತ ಚರ್ಮ ಹಾಗೆಯೇ ಉಸಿರಾಟದ ತೊಂದರೆ ಆದ್ದರಿಂದ ಕಡಿಮೆ ರಕ್ತದ ಒತ್ತಡವನ್ನು ತಪ್ಪಿಸಲು ಸಾಕಷ್ಟು ನೀರು ಕುಡಿಯಿರಿ, ದಿನಕ್ಕೆ ಕನಿಷ್ಠ 10 ಗ್ಲಾಸ್ ನೀರು ಕುಡಿಯಿರಿ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ ಸೋಡಿಯಂನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ ಇನ್ನು ಯೋಗ ಮತ್ತು ವ್ಯಾಯಾಮದ ನಿಯಮಿತ ಅಭ್ಯಾಸವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿ ಪ್ರತಿದಿನ ದಿನ ವ್ಯಾಯಾಮ ಮಾಡೋದು ತುಂಬಾ ಒಳ್ಳೆಯದು ಒಂದೇ ಬಾರಿಗೆ ಹೆಚ್ಚು ತಿನ್ನಬೇಡಿ.
ಆದರೆ ಸಣ್ಣ ಪ್ರಮಾಣದ ಆಹಾರವನ್ನು ನಿರಂತರವಾಗಿ ಸೇವಿಸಿ ಅಲ್ಲದೆ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ತಮ್ಮ ಆಹಾರದಲ್ಲಿ ಒಣಹಣ್ಣುಗಳನ್ನು ಸೇವಿಸಬಹುದು ಇನ್ನು ದೈನಂದಿನ ಆಹಾರದಲ್ಲಿ ಮೊಟ್ಟೆ ಹಾಲು ಮೀನು ದ್ರಾಕ್ಷಿ ಬಾಳೆಹಣ್ಣು ಕಿವಿ ಫ್ರೂಟ್ ಸೂಪ್ ಧಾನ್ಯಗಳು ಸೋಡಿಯಂ ಭರಿತ ಆಹಾರಗಳನ್ನ ಸೇವಿಸಬಹುದು ಹಾಗೆ ರಕ್ತದ ಒತ್ತಡವನ್ನ ಆಗಾಗ ಪರೀಕ್ಷಿಸಿಕೊಳ್ಳುತ್ತಿರಬೇಕು.
ಇದನ್ನೂ ಓದಿ: e-Pan Card 2.0 Download ಡೌನ್ಲೋಡ್ ಮಾಡುವ ಸುಲಭವಾದ ವಿಧಾನ





