ಮೊಬೈಲ್, Laptop ಕೊಳ್ಳುವ ಯೋಚನೆಯಲ್ಲಿದ್ದೀರಾ? 2026ಕ್ಕೆ ಬೆಲೆ ಏರಿಕೆ ಬೆಂಕಿ! ಮಾಹಿತಿ ನೋಡಿ

December 28, 2025 6:48 AM

ಹೊಸ ವರ್ಷಕ್ಕೆ ಹೊಸ ಫೋನ್ ಅಥವಾ ಲ್ಯಾಪ್ಟಾಪ್ ತಗೋಬೇಕು ಅಂತ ಪ್ಲಾನ್ ಮಾಡಿದ್ದೀರಾ? ಹಾಗಿದ್ರೆ ಒಂದು ಕ್ಷಣ ತಡೆಯಿರಿ, ಆ ‘ಬೈ ನೌ’ ಬಟನ್ ಒತ್ತೋದಕ್ಕೂ ಮುಂಚೆ ಈ ಮಾಹಿತಿ ತಿಳಿದುಕೊಳ್ಳುವುದು ತುಂಬಾನೇ ಮುಖ್ಯ. ಯಾಕಂದ್ರೆ, ಮುಂದಿನ 2026ಕ್ಕೆ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಬೆಲೆಗಳು ಆಕಾಶಕ್ಕೆ ಏರೋ ಎಲ್ಲಾ ಲಕ್ಷಣಗಳು ಕಾಣಿಸ್ತಾ ಇವೆ. ಈಗ 30 ಸಾವಿರಕ್ಕೆ ಸಿಗುವ ಲ್ಯಾಪ್ಟಾಪ್ 45 ಸಾವಿರಕ್ಕೆ, 20 ಸಾವಿರದ ಫೋನ್ 30 ಸಾವಿರಕ್ಕೆ ಹೋಗುವ ಸಾಧ್ಯತೆ ಇದೆ ಅಂತ ತಜ್ಞರು ಹೇಳ್ತಿದ್ದಾರೆ.

ನಿಮ್ಮ ಜೇಬಿಗೆ ಕತ್ತರಿ ಬೀಳೋಕೆ ಕಾರಣ ನಿಮ್ಮ ಮೊಬೈಲ್ ಒಳಗೆ ಬಂದು ಕೂತಿರುವ AI.

AI: ಎಲೆಕ್ಟ್ರಾನಿಕ್ಸ್ ಬೆಲೆ ಏರಿಕೆಯ ಅಸಲಿ ಕಾರಣ

ನಮ್ಮ ದೈನಂದಿನ ಜೀವನದಲ್ಲಿ AI ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸದ್ದು ಮಾಡ್ತಿದೆ. Chat GPT, Gemini ನಂತಹ AI ಟೂಲ್ಸ್‌ಗಳು ನಮ್ಮ ಕೆಲಸವನ್ನು ಸುಲಭ ಮಾಡುತ್ತಿದ್ದರೂ, ಟೆಕ್ ಕಂಪನಿಗಳ ಪಾಲಿಗೆ ಇವು ರಕ್ತ ಪಿಪಾಸುಗಳಾಗಿವೆ. ಇವತ್ತು ಮೊಬೈಲ್, ಲ್ಯಾಪ್ಟಾಪ್ ಬೆಲೆಗಳು ದಿಢೀರ್ ಅಂತ ಏರಿಕೆ ಆಗೋಕೆ ಶುರು ಆಗಿರುವುದಕ್ಕೆ ಇದೇ AI ಮೂಲ ಕಾರಣ. ಎಐ ಹಸಿವು ಹೆಚ್ಚಾದಂತೆ, ಅದಕ್ಕೆ ಬೇಕಾದ ಹಾರ್ಡ್‌ವೇರ್‌ಗಳ ಬೇಡಿಕೆಯೂ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟಕ್ಕೆ ತಲುಪುವ ಸಾಧ್ಯತೆಯಿದೆ.

RAM ಬೆಲೆಗಳ ಫ್ಲಾಶ್‌ಬ್ಯಾಕ್: ಆಘಾತಕಾರಿ ಸತ್ಯ

ಒಂದು ಸಣ್ಣ ಫ್ಲಾಶ್‌ಬ್ಯಾಕ್‌ಗೆ ಹೋಗೋಣ. 2023ರಲ್ಲಿ ನೀವು 16GB RAM ಸ್ಟಿಕ್‌ಗೆ Amazon ಅಥವಾ Flipkart ನಲ್ಲಿ ಸುಮಾರು 3,500-4,000 ರೂಪಾಯಿ ಆಸುಪಾಸು ಹಣ ತೆರಬೇಕಿತ್ತು. ಅಂದ್ರೆ ಒಬ್ಬ ಸಾಮಾನ್ಯ ಉದ್ಯೋಗಿ ಅಥವಾ ವಿದ್ಯಾರ್ಥಿ ಸುಲಭವಾಗಿ ಅಪ್‌ಗ್ರೇಡ್ ಮಾಡಬಹುದಿತ್ತು. ಆದರೆ ಇವತ್ತು ಪರಿಸ್ಥಿತಿ ತಲೆಕೆಳಗಾಗಿದೆ. ಡಿಸೆಂಬರ್ 2023ರ ಹೊತ್ತಿಗೆ, ಅದೇ RAM ಸ್ಟಿಕ್ ಬೆಲೆ 8,000-9,000 ರೂಪಾಯಿಗೆ ತಲುಪಿ ಆಲ್ಮೋಸ್ಟ್ ಡಬಲ್ ಆಗಿದೆ. ಜಗತ್ತಿನ ಟೆಕ್ ಅನಾಲಿಸಿಸ್ ಸಂಸ್ಥೆಗಳು ಈ ಏರಿಕೆಯ ಬಗ್ಗೆ ಗಂಭೀರ ವರದಿ ನೀಡಿವೆ.

2026ರಲ್ಲಿ ಇನ್ನೂ ದೊಡ್ಡ ಬೆಲೆ ಏರಿಕೆ ನಿಶ್ಚಿತ

ಟ್ರೆಂಡ್‌ಫೋರ್ಸ್‌ನಂತಹ ಖ್ಯಾತ ಟೆಕ್ ಅನಾಲಿಸಿಸ್ ಸಂಸ್ಥೆಗಳ ವರದಿಯ ಪ್ರಕಾರ, 2026ರ ಮೊದಲ ಮೂರು ತಿಂಗಳಲ್ಲೇ ಮೆಮೊರಿ ಬೆಲೆ ಇನ್ನೊಂದು 20% ಜಂಪ್ ಆಗಬಹುದು. ಇದು ಹೋಲ್‌ಸೇಲ್ ಲೆಕ್ಕ. ನಮ್ಮಂತಹ ಸಾಮಾನ್ಯ ಗ್ರಾಹಕರ ಕೈಗೆ ಬರುವಷ್ಟರಲ್ಲಿ ಟ್ಯಾಕ್ಸ್, GST ಎಲ್ಲ ಸೇರಿ ಸುಮಾರು 40-50% ಹೊರೆ ಬೀಳೋದು ಗ್ಯಾರಂಟಿ. ಕೇವಲ ಕಂಪ್ಯೂಟರ್ ಕಾಂಪೊನೆಂಟ್ಸ್ ಅಷ್ಟೇ ಅಲ್ಲ, ಸ್ಮಾರ್ಟ್‌ಫೋನ್ ತಯಾರಿಕಾ ವೆಚ್ಚವೂ ಹೆಚ್ಚಾಗಿದೆ. ನಾಳೆ ಹೊಸ ಫೋನ್ ಲಾಂಚ್ ಆದಾಗ ಬೆಲೆ ಹೆಚ್ಚಾಗಿದ್ರೆ ಅಚ್ಚರಿಪಡಬೇಡಿ, ಅದಕ್ಕೆ ಕಾರಣವಿರುತ್ತೆ.

ರಿಯಲ್ ವಿಲನ್ ಯಾರು? HPM ಎಂಬ ಟೆಕ್ನಾಲಜಿ

ಅಯ್ಯೋ ದಿಢೀರಂತ ರೇಟ್ ಯಾಕೆ ಜಾಸ್ತಿ ಆಯ್ತು? ಫ್ಯಾಕ್ಟರಿಗಳು ಮುಚ್ಚಿಹೋದ್ವಾ? ಅಂತ ಯೋಚ್ನೆ ಮಾಡ್ತಿದ್ದೀರಾ? ಇಲ್ಲ. ಇಲ್ಲಿ ರಿಯಲ್ ವಿಲನ್ ಇರೋದು ಒಂದು ಹೊಸ ಟೆಕ್ನಾಲಜಿ. ಅದರಲ್ಲೂ ನಿರ್ದಿಷ್ಟವಾಗಿ ಹೇಳಬೇಕಂದ್ರೆ HPM (High Bandwidth Memory). ನಮ್ಮ ಕಂಪ್ಯೂಟರ್, ಮೊಬೈಲ್‌ಗಳು ಓಡೋಕೆ DDR RAM ಬೇಕು, ಅದು ನಮ್ಮ ಬೆಂಗಳೂರು ಟ್ರಾಫಿಕ್ ರೋಡ್ ಇದ್ದ ಹಾಗೆ. ಆದರೆ AI ಭೂತಕ್ಕೆ ಇಂತಹ ಸಾಮಾನ್ಯ ರೋಡ್ ಸಾಕಾಗಲ್ಲ, ಅದಕ್ಕೆ 10 ಲೇನ್ ಇರುವ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವೇ ಬೇಕು. ಆ ಎಕ್ಸ್‌ಪ್ರೆಸ್ ವೇ ಹೆಸರೇ HPM.

ಟೆಕ್ ಕಂಪನಿಗಳ ಬಿಸಿನೆಸ್ ತಂತ್ರ: HPM ಕಡೆಗೆ ಶಿಫ್ಟ್

Samsung, SK Hynix, ಮತ್ತು Micron – ಈ ಮೂರು ಕಂಪನಿಗಳು ಜಗತ್ತಿನ 90% ಮೆಮೊರಿ ಮಾರುಕಟ್ಟೆಯನ್ನು ನಿಯಂತ್ರಿಸುತ್ತವೆ. ಅವರಿಗೆ ಈಗ ಎರಡು ಆಯ್ಕೆಗಳಿವೆ: ಹೆಚ್ಚು ಕಷ್ಟಪಟ್ಟು ಕಮ್ಮಿ ಲಾಭ ಬರುವ ನಿಮ್ಮ ಮೊಬೈಲ್ RAM ತಯಾರು ಮಾಡೋದು ಅಥವಾ ಹೆಚ್ಚು ಲಾಭ ತರುವ HPM ಚಿಪ್‌ಗಳನ್ನು AI ಕಂಪನಿಗಳಿಗೆ ತಯಾರಿಸಿಕೊಡೋದು. ಯಾವುದೇ ಬಿಸಿನೆಸ್‌ಮ್ಯಾನ್ ಹೆಚ್ಚು ಲಾಭ ಬರುವ ಕಡೆಗೆ ಹೋಗ್ತಾನೆ ಅಲ್ವಾ? ಹಾಗಾಗಿ, ಈ ಕಂಪನಿಗಳು ತಮ್ಮ ಫ್ಯಾಕ್ಟರಿಗಳಲ್ಲಿ ಸಾಮಾನ್ಯ RAM ಮಾಡೋದನ್ನ ಕಡಿಮೆ ಮಾಡಿ, ಎಲ್ಲಾ ಮಷೀನ್‌ಗಳನ್ನು HPM ಉತ್ಪಾದನೆಗೆ ಶಿಫ್ಟ್ ಮಾಡಿದ್ದಾರೆ.

ಕೃತಕ ಅಭಾವ: ಲಾಭದ ಹೊಸ ದಾರಿ

ಇದು ಬರೀ ಟೆಕ್ನಾಲಜಿ ಬದಲಾವಣೆ ಅಷ್ಟೇ ಅಲ್ಲ, ಇದೊಂದು ಪಕ್ಕಾ ಪ್ಲಾನ್ಡ್ ಬಿಸಿನೆಸ್ ಗೇಮ್ ಅಂತ ಹೇಳಲಾಗುತ್ತಿದೆ. ಕೃತಕ ಅಭಾವ (Artificial Scarcity) ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಇದೆ. 2023ರಲ್ಲಿ ಮಾರ್ಕೆಟ್ ಡಲ್ ಆಗಿ, RAM, SSD ಬೆಲೆಗಳು ಪಾತಾಳಕ್ಕೆ ಬಿದ್ದಿದ್ದಾಗ, Samsung ಮತ್ತು Hynix ಸುಮಾರು 1.3 ಲಕ್ಷ ಕೋಟಿ ರೂಪಾಯಿ ನಷ್ಟ ಮಾಡಿಕೊಂಡಿದ್ವು. ಆ ನಷ್ಟವನ್ನು ವಸೂಲಿ ಮಾಡೋಕೆ ಈಗ ಅವರು ‘ಪ್ರಾಫಿಟ್ ಫಸ್ಟ್’ ಸ್ಟ್ರಾಟಜಿಯನ್ನು ಫಾಲೋ ಮಾಡ್ತಿದ್ದಾರೆ. ಇದರಿಂದ ರಿಟೇಲ್ ಮಾರುಕಟ್ಟೆಯಲ್ಲಿ ಸ್ಟಾಕ್ ಸಿಗದೆ ಬೆಲೆ ಗಗನಕ್ಕೇರುತ್ತಿದೆ.

SSD ಮೇಲೂ AI ಎಫೆಕ್ಟ್: ಬೆಲೆ ಏರಿಕೆ ನಿಶ್ಚಿತ

ಗಾಯದ ಮೇಲೆ ಬರೆ ಎಳೆದಂತೆ RAM ಜೊತೆಗೆ SSD (Solid State Drive) ಬೆಲೆಯೂ ಗಗನಕ್ಕೇರಿದೆ. ನಿಮ್ಮ ಲ್ಯಾಪ್ಟಾಪ್ ಅಥವಾ ಫೋನಿನಲ್ಲಿ ಫೋಟೋ, ವಿಡಿಯೋ ಸೇವ್ ಮಾಡುವ ಸ್ಟೋರೇಜ್‌ಗೂ ಈಗ ಬರಗಾಲ ಬಂದಿದೆ. AI ಸರ್ವರ್‌ಗಳಿಗೆ ಡೇಟಾವನ್ನು ಮಿಂಚಿನ ವೇಗದಲ್ಲಿ ಓದೋಕೆ ಎಂಟರ್‌ಪ್ರೈಸ್ SSD ಗಳು ಬೇಕಾಗುತ್ತೆ. ಜಗತ್ತಿನ 80% NAND ಫ್ಲ್ಯಾಶ್ ಚಿಪ್‌ಗಳು ಈಗ ಡೇಟಾ ಸೆಂಟರ್‌ಗಳ ಪಾಲಾಗುತ್ತಿವೆ. ಇದರಿಂದ ಒಂದು TB SSD ಬೆಲೆ 8,500 ರಿಂದ 10,000 ರೂಪಾಯಿ ದಾಟಿದೆ.

“ಶ್ರಿಂಕ್‌ಫ್ಲೇಶನ್” ಮತ್ತು ಸಾಲ್ಡರ್ಡ್ RAM ಎಚ್ಚರಿಕೆ!

  • ನೇರ ಬೆಲೆ ಏರಿಕೆ: 50 ಸಾವಿರದ ವಸ್ತು 60 ಸಾವಿರ ಆಗಿರುತ್ತೆ, ಇದು ನಿಮಗೆ ಗೊತ್ತಾಗುತ್ತೆ.
  • ಶ್ರಿಂಕ್‌ಫ್ಲೇಶನ್: ಕಂಪನಿಗಳು ಬೆಲೆನ ಹಳೆಯದಾಗಿಯೇ ಇಟ್ಟು, RAM, ಪ್ರೊಸೆಸರ್ ಅಥವಾ ಸ್ಕ್ರೀನ್ ಕ್ವಾಲಿಟಿಯನ್ನು ಸೈಲೆಂಟ್‌ ಆಗಿ ಕಡಿಮೆ ಮಾಡಿರುತ್ತಾರೆ. ನೋಡೋಕೆ ಹೊಸದಾಗಿ ಕಾಣಿಸಿದರೂ ಪರ್ಫಾರ್ಮೆನ್ಸ್ ಮಾತ್ರ ಕಳಪೆ ಆಗಿರುತ್ತೆ.

ಪರಿಹಾರವೇನು? ಈಗಲೇ ಖರೀದಿಯೇ ಉತ್ತಮ ಆಯ್ಕೆ?

ತಜ್ಞರ ಪ್ರಕಾರ ಈ ಬಿಕ್ಕಟ್ಟು 2026-27ರವರೆಗೂ ಇರುತ್ತೆ. ಹೊಸ ಫ್ಯಾಕ್ಟರಿಗಳು ಬರೋಕೆ 2027 ಆಗಬಹುದು. ಅಲ್ಲಿಯವರೆಗೂ ಈ AI ಟ್ಯಾಕ್ಸ್ ಇರುತ್ತೆ ಅಂತ ಹೇಳ್ತಿದ್ದಾರೆ. ಹಾಗಾಗಿ, ನೀವು ಪಿಸಿ ಬಿಲ್ಡ್ ಮಾಡಬೇಕು ಅಥವಾ ಲ್ಯಾಪ್ಟಾಪ್ ತಗೋಬೇಕು ಅಂತ ಪ್ಲಾನ್ ಮಾಡ್ತಿದ್ರೆ, ಹೆಚ್ಚಿನ ತಜ್ಞರ ಪ್ರಕಾರ, ‘ಇವತ್ತೇ ರೈಟ್ ಟೈಮ್’ ಅಂತ ಹೇಳ್ತಿದ್ದಾರೆ. ಸದ್ಯಕ್ಕೆ ಲ್ಯಾಪ್ಟಾಪ್‌ಗಳ ಮೇಲೆ ಒಳ್ಳೆ ಆಫರ್ಸ್ ಕೂಡ ಸಿಗ್ತಾ ಇದೆ. ಇದು ನಿಮ್ಮ ಜೇಬಿಗೆ ಕೊಂಚ ನೆಮ್ಮದಿ ನೀಡಬಹುದು.

ಕನಿಷ್ಠ 16GB RAM ಮತ್ತು ಅಪ್‌ಗ್ರೇಡ್ ಆಯ್ಕೆ

  • ಇವತ್ತಿನ ಆ್ಯಪ್‌ಗಳಿಗೆ, AI ಜನರೇಶನ್ ಸಾಫ್ಟ್‌ವೇರ್‌ಗಳಿಗೆ 8GB RAM ಸಾಕಾಗಲ್ಲ. ವಿಂಡೋಸ್ ಆದ್ರೆ 16GB RAM ಸಹ 2-3 ವರ್ಷದಲ್ಲಿ ಸ್ಲೋ ಅನ್ಸೋಕೆ ಶುರುವಾಗುತ್ತೆ. ಹಾಗಾಗಿ 8GB RAM ಇರೋ ಲ್ಯಾಪ್ಟಾಪ್ ಅಥವಾ ಫೋನ್ ಕಡೆ ನೋಡಬೇಡಿ, ಕನಿಷ್ಠ 16GB ಬೇಕೇ ಬೇಕು.
  • ನಿಮ್ಮ ಹಳೆಯ ಲ್ಯಾಪ್ಟಾಪ್‌ನಲ್ಲಿ RAM ಅಪ್‌ಗ್ರೇಡ್ ಅಥವಾ SSD ಅಪ್‌ಗ್ರೇಡ್ ಮಾಡೋ ಅವಕಾಶ ಇದ್ರೆ, ಅದು ಹೊಸದು ಕೊಳ್ಳುವುದಕ್ಕಿಂತ ಉತ್ತಮ ಆಯ್ಕೆ ಆಗಬಹುದು. ನಿಮ್ಮ ಹತ್ತಿರದ ತಜ್ಞರಿಂದ ಪರಿಶೀಲಿಸಿಕೊಳ್ಳಿ.

ತೀರ್ಮಾನ: ಒಟ್ಟಿನಲ್ಲಿ, ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಮುಂದಿನ ದಿನಗಳು ಬೆಲೆ ಏರಿಕೆ ಬಿಸಿ ಏರುತ್ತೆ ಅನ್ನೋದು ಸ್ಪಷ್ಟ. AI ತಂತ್ರಜ್ಞಾನದ ಪ್ರಗತಿಯು ನಮ್ಮ ಗ್ಯಾಡ್ಜೆಟ್‌ಗಳ ಬೆಲೆಗೆ ಬೆಂಕಿ ಇಡುವಂತೆ ಕಾಣುತ್ತಿದೆ. ಈ ಕೃತಕ ಅಭಾವದ ವಾತಾವರಣದಿಂದಾಗಿ ಗ್ರಾಹಕರು ಹೆಚ್ಚೆಚ್ಚು ಬೆಲೆ ತೆರಬೇಕಾದ ಪರಿಸ್ಥಿತಿ ಬಂದಿದೆ. ಹಾಗಾಗಿ, ನೀವು ಯಾವುದೇ ಹೊಸ ಮೊಬೈಲ್ ಅಥವಾ ಲ್ಯಾಪ್ಟಾಪ್ ಕೊಳ್ಳುವ ಯೋಚನೆಯಲ್ಲಿದ್ದರೆ, ಇಂದೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಲೆ ತೆರುವ ಅನಿವಾರ್ಯತೆ ಎದುರಾಗಬಹುದು. ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಅಂದುಕೊಂಡಿದ್ದೇವೆ.

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment