ಎಲ್ಲರಿಗೂ ನಮಸ್ಕಾರ, Budget ನಲ್ಲಿ ಮಿತ್ರ ಕೂಟಕ್ಕೆ ಮೋದಿ ಬಂಪರ್ ಬಿಹಾರ, ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಮೋದಿ 3.0 ಸರ್ಕಾರದ ಈ ಬಾರಿಯ ಬಜೆಟ್ ಮಂಡನೆ ನಿಜಕ್ಕೂ ಸವಾಲಿನ ಕೆಲಸದಾಗಿತ್ತು ಯಾಕಂದ್ರೆ ಬಿಜೆಪಿ ಎನ್ಡಿಎ ಮಿತ್ರ ಕೂಟಗಳ ಸಹಾಯದಿಂದ ಸರ್ಕಾರ ರಚನೆ ಮಾಡಿದೆ ಸಹಜವಾಗಿ ಮಿತ್ರ ಪಕ್ಷಗಳು ನಮಗೆ ಇಂತಿಷ್ಟೇ ಪ್ಯಾಕೇಜ್ ಬೇಕು ಅಂತ ಡಿಮ್ಯಾಂಡ್ ಮಾಡಿರುತ್ತವೆ ಅದರಂತೆ NDA ನ ಪ್ರಮುಖ ಮಿತ್ರ ಪಕ್ಷಗಳಾದ ಟಿಡಿಪಿ ಹಾಗೂ ಜೆಡಿಯು ಮೋದಿ ಮುಂದೆ ದೊಡ್ಡ ಬೇಡಿಕೆಯನ್ನ ಇಟ್ಟಿದ್ದವು ಬಜೆಟ್ ನಲ್ಲಿ ನಮಗೆ ವಿಶೇಷ ಪ್ಯಾಕೇಜ್ ಬೇಕೇ ಬೇಕು ಅಂತ ಪಟ್ಟು ಹಿಡಿದಿದ್ದರು ಅದರಂತೆ ಪ್ರಧಾನಿ ಮೋದಿಯವರು ಜೆಡಿಯು ಪ್ರತಿನಿಧಿಸುವ ಬಿಹಾರ ಹಾಗೂ ಟಿಡಿಪಿ ಆಡಳಿತ ಇರುವ ಆಂಧ್ರಪ್ರದೇಶಕ್ಕೆ ಭರಪೂರ ಕೊಡುಗೆಯನ್ನು ಕೊಟ್ಟಿದ್ದಾರೆ.
ಬಜೆಟ್ ನಲ್ಲಿ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡುಗೆ ಸಿಕ್ಕ ವಿಶೇಷ ಪ್ಯಾಕೇಜ್ ಏನು
ಬಜೆಟ್ ನಲ್ಲಿ ಬಂಪರ್ ಮಿತ್ರ ಪಕ್ಷಗಳು ಖುಶ್ NDA ಸರ್ಕಾರದ ಅತಿ ಪ್ರಮುಖ ಆಧಾರ ಸ್ತಂಭಗಳಾಗಿರುವ ಟಿಡಿಪಿ ಮತ್ತು ಜೆಡಿಯು ಪಕ್ಷಗಳ ಬೇಡಿಕೆಗಳನ್ನ ತಣಿಸುವ ಮೂಲಕ ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನ ಮಾಡಿದ್ದಾರೆ ಹಾಗಾದರೆ ಮೊದಲು ಬಿಹಾರ ರಾಜ್ಯಕ್ಕೆ ಏನೇನು ವಿಶೇಷ ಪ್ಯಾಕೇಜ್ ಸಿಕ್ಕಿದೆ ಅನ್ನೋದನ್ನ ನೋಡೋದಾದ್ರೆ ಬಜೆಟ್ ನಲ್ಲಿ ಬಿಹಾರಕ್ಕೆ ಮೋದಿಯವರು ಭರಪೂರ ಕೊಡುಗೆಯನ್ನ ಕೊಟ್ಟಿದ್ದಾರೆ ಬಿಹಾರ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಬರೋಬರಿ 26,000 ಕೋಟಿ ಅನುದಾನವನ್ನ ನೀಡಿದ್ದಾರೆ.
ಹೊಸ ವಿಮಾನ ನಿಲ್ದಾಣಗಳು ವೈದ್ಯಕೀಯ ಸೌಲಭ್ಯಗಳು ಮತ್ತು ಕ್ರೀಡಾ ಸೌಕರ್ಯಗಳನ್ನು ಒದಗಿಸಲಾಗುವುದು ಪ್ರವಾಹ ತಡೆಯಲು 11,000 ಕೋಟಿ ರೂಪಾಯಿನ ಮೀಸಲಿಡಲಾಗಿದೆ. ಜೊತೆಗೆ ದೊಡ್ಡ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ಅವರ ಜೊತೆಗೆ ಬಕ್ಸರ್ ಬಾಗಲ್ಪುರ್ ಎಕ್ಸ್ಪ್ರೆಸ್ ವೇ ನಿರ್ಮಾಣ, ಪಾಟ್ನ ಪೂರ್ಣ ಎಕ್ಸ್ಪ್ರೆಸ್ ವೇ ನಿರ್ಮಾಣ, ದರ್ಬಾಂಗ್ ರಸ್ತೆ ಸಂಪರ್ಕದ ಅಭಿವೃದ್ಧಿಗೆ ಹೆಚ್ಚು ಒತ್ತು ಬೋದ್ಗಯ್ಯ ರಾಜ್ಕರಿ ವೈಶಾಲಿ ರಸ್ತೆ ಸಂಪರ್ಕವನ್ನ ಅಭಿವೃದ್ಧಿ ಪಡಿಸಲಾಗುವುದು ಅಂತ ಹೇಳಿದ್ದಾರೆ.
ಇದಿಷ್ಟೇ ಅಲ್ಲ ಬಕ್ಸರ್ ನಲ್ಲಿ ಗಂಗಾ ನದಿಗೆ ಅಡ್ಡಲಾಗಿ ಎರಡು ಲೇನ್ ಸೇತುವೆಯನ್ನ 26,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಪೀರ್ ಪಯಾಂತಿಯಲ್ಲಿ 21,400 ಕೋಟಿ ರೂಪಾಯಿ ವೆಚ್ಚದಲ್ಲಿ 2,400 ಮೆಗಾವ್ಯಾಟ್ ವಿದ್ಯುತ್ ಯೋಜನೆ, ಯೋಜನೆ ಸೇರಿದಂತೆ ಹಲವು ವಿದ್ಯುತ್ ಯೋಜನೆಗಳನ್ನ ಆರಂಭಿಸಲಾಗುವುದು ಬೋದ್ಗಯದಲ್ಲಿ ಮಹಾಬೋಧಿ ದೇವಸ್ಥಾನ ಕಾರಿಡಾರ್ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಅವಕಾಶ ನೀಡಲಾಗುವುದು.
ನಳಂದವನ್ನ ವಿಶ್ವ ದರ್ಜೆಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ನೆರವು ನೀಡಲಾಗುವುದು ಈ ಮೂಲಕ ನಳಂದವನ್ನ ಪ್ರವಾಸೋದ್ಯಮ ಹಬ್ಬಾಗಿ ಪರಿವರ್ತಿಸಲಾಗುವುದು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗಯಾದಲ್ಲಿ ವಿಷ್ಣುಪತ ದೇಗುಲ ನಿರ್ಮಾಣ ಮಾಡಲಾಗುವುದು ಇದಿಷ್ಟು ಬಿಹಾರಕ್ಕೆ ಸಿಕ್ಕ ಕೊಡುಗೆ.
ಆಂಧ್ರಪ್ರದೇಶಕ್ಕೆ ಸಿಕ್ಕ ಕೊಡುಗೆ ಏನು
ಆಂಧ್ರಪ್ರದೇಶಕ್ಕೆ ವಿಶೇಷ ಆರ್ಥಿಕ ನೆರವನ್ನ ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದ್ದಾರೆ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ವಿಶೇಷ ರಾಜ್ಯ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿತ್ತು ಆದರೆ ಅದನ್ನ ಈಡೇರಿಸದೆ ಇದ್ದರೂ ಕೂಡ ಅದಕ್ಕೆ ಪೂರಕವಾದ ಆರ್ಥಿಕ ನೆರವನ್ನು ಪ್ರಕಟಿಸಲಾಗಿದೆ ಆಂಧ್ರಪ್ರದೇಶದ ಮರು ಸಂಘಟನಾ ಕಾಯ್ದೆಯ ಭರವಸೆಗಳನ್ನು ಈಡೇರಿಸಲಾಗುವುದು ಅಂತ ನಿರ್ಮಲ ಸೀತಾರಾಮನ್ ತಿಳಿಸಿದರು.
ಹೊಸ ರಾಜಧಾನಿಯ ನಿರ್ಮಾಣಕ್ಕಾಗಿ ಕಾಯ್ದೆ ಇಡಿ 15,000 ಕೋಟಿ ರೂಪಾಯಿ ಅನುದಾನವನ್ನ ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಡುಗಡೆ ಮಾಡಲಾಗುವುದು ಮುಂಬರುವ ವರ್ಷಗಳಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುತ್ತೆ ಅಂತ ಭರವಸೆಯನ್ನು ನೀಡಿದ್ದಾರೆ.
ಬಹುಪಕ್ಷೀಯ ಸಂಸ್ಥೆಗಳ ಮೂಲಕ ವಿಶೇಷ ಆರ್ಥಿಕ ಬೆಂಬಲ ಒದಗಿಸಲಾಗುವುದು ಅಲ್ಲದೆ ಆಂಧ್ರಪ್ರದೇಶ ಸರ್ವಾಂಗಿನ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು ಇಂಧನ ರೈಲು ರಸ್ತೆ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುವುದು ಕೋಲಾವರಂ ಪ್ರಾಜೆಕ್ಟ್ ಗೆ ಕೇಂದ್ರ ಸರ್ಕಾರದಿಂದ ಅನುದಾನವನ್ನ ನೀಡಲಾಗುವುದು.
ವಿಶಾಖಪಟ್ಟಣ ಚೆನ್ನೈ ಕೈಗಾರಿಕ ಕಾರ್ಡ ನಿರ್ಮಾಣಕ್ಕೆ ಚಾಲನೆ ನೀಡಲಿದೆ ಇದರ ಜೊತೆಗೆ ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡಲಾಗುವುದು ಅಂತ ಹೇಳಿದ್ದಾರೆ ಮಿತ್ರ ಪಕ್ಷಗಳ ವಿಶ್ವಾಸ ತೆಗೆದುಕೊಳ್ಳುವ ನಿಟ್ಟಿನಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಮೋದಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ಈ ಘೋಷಣೆ ಮಿತ್ರ ಪಕ್ಷಗಳಿಗೆ ಸಮಾಧಾನ ತಂದಿದೆಯಾ ಬಜೆಟ್ ಬಗ್ಗೆ ಟಿಡಿಪಿ ಹಾಗೂ ಜೆಡಿಯು ಯಾವ ರೀತಿ ಪ್ರತಿಕ್ರಿಯಿಸುತ್ತೆ ಅನ್ನುವುದೇ ಸದ್ಯದ ಕುತೂಹಲ.
ಇದನ್ನೂ ಓದಿ: ಚಿನ್ನ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕವನ್ನ ಕಡಿತಗೊಳಿಸಿದ್ದಾರೆ!!





