Money Management Tips Kannada!! ಯಾವ ರೀತಿ ನಾವು ಮನೆಯಲ್ಲಿ ಕುಳಿತುಕೊಂಡು ಹಣವನ್ನು ಉಳಿಸಬಹುದು!

October 14, 2024 1:50 PM
Money Management Tips Kannada!! ಯಾವ ರೀತಿ ನಾವು ಮನೆಯಲ್ಲಿ ಕುಳಿತುಕೊಂಡು ಹಣವನ್ನು ಉಳಿಸಬಹುದು!

ಎಷ್ಟೇ ಸಂಪಾದನೆ ಇದ್ದರೂ ಸಾಕಾಗಲ್ಲ ಎಷ್ಟೇ ವರ್ಷಗಳಿಂದ ದುಡಿತಾ ಇದ್ದರೂ ಕೈಯಲ್ಲಿ ದುಡ್ಡು ಉಳಿತಾ ಇಲ್ಲ ಏನು ಮಾಡೋದು ಅಂತ ಗೊತ್ತಾಗ್ತಾನೆ ಇಲ್ಲ ಅನ್ನೋದು ಬಹುತೇಕ ಮಂದಿಯ ಕಾಯಂ ಸಮಸ್ಯೆ? ನಾನು ಇತ್ತೀಚೆಗೆ YouTube ಒಂದರಲ್ಲಿ ಹಿರಿಯ ಹಣಕಾಸು ಸಲಗಾರರೊಬ್ಬರ ಮಾತನ್ನು ಕೇಳ್ತಾ ಇದ್ದೆ ಸ್ವತಃ ಹಣಕಾಸು ತಜ್ಞರಾಗಿದ್ದರು 55 ವರ್ಷವಾಗಿ ಆಗುವ ತನಕ ಸ್ವಲ್ಪವೂ ಕೂಡ ಹಣ ಉಳಿತಾಯ ಮಾಡಿರಲಿಲ್ಲ.

ನಿವೃತ್ತಿಯ ಜೀವನಕ್ಕೆ ಬೇಕಾದಷ್ಟು ಹಣದ ಯೋಜನೆ ನಾನು ಮಾಡಿಕೊಂಡಿರಲಿಲ್ಲ ಅಂತ ಅವರು ಹೇಳ್ತಾ ಇದ್ರು ನೋಡಿ ಹಣದ ಉಳಿತಾಯ ಎಷ್ಟು ಕಷ್ಟ ಅಲ್ವಾ ಯಾಕೆ ಹೀಗಾಗುತ್ತೆ ಗೊತ್ತಾ?

Money Management Tips – ಹಣವನ್ನು ಉಳಿಸುವುದು ಏಕೆ ತುಂಬಾ ಕಷ್ಟ

ಈಗಂತೂ ಅನೇಕ ಮಂದಿ ಪದೇಪದೇ ನಾನಾ ಫುಡ್ ಡೆಲಿವರಿ ಆಪ್ ಗಳಿಂದ ಆಹಾರ ಮನೆಗೆ ತರಿಸಿಕೊಳ್ಳುತ್ತಾರೆ ಇದು ಒಂದು ಉದಾಹರಣೆ ನಾನು ಹೇಳ್ತಾ ಇರುವಂತದ್ದು ಅಪರೂಪಕ್ಕೆ ತರಿಸಿಕೊಂಡರೆ ಪರವಾಗಿಲ್ಲ ಆದರೆ ಅದುವೇ ಚಾಳಿ ಆಗ್ಬಿಟ್ರೆ ಒಂದಿಲ್ಲ ಒಂದು ದಿವಸ ಯೋಚನೆ ಮಾಡಬೇಕಾಗುತ್ತೆ. ಈ ಕಾಮರ್ಸ್ ಮೂಲಕ ಅಗತ್ಯ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಆಲೋಚನೆ ಮಾಡದೆ ನಾನಾ ವಸ್ತುಗಳನ್ನು ಜನ ತರಿಸಿಕೊಳ್ಳುತ್ತಾರೆ ಭಾರಿ ಡಿಸ್ಕೌಂಟ್ ದರದಲ್ಲಿ ಸಿಗುತ್ತೆ ಅಂತ ಅಂದುಕೊಂಡು ಹಲವಾರು ಬಟ್ಟೆ ಬರಗಳನ್ನು ಒಟ್ಟಿಗೆ ಕರಿಸಿ ವಾರ್ಡ್ರೋಬ್ ತುಂಬಿಸುತ್ತಾರೆ ಮೊಬೈಲ್ ಫೋನ್ ಐಪ್ಯಾಡ್ ಏರ್ಪಾಡ್ ಸ್ಪೀಕರ್ಸ್ ಅಂತ ನಿಜಕ್ಕೂ ಬೇಕೇ ಬೇಡವೇ ಎಂಬುದನ್ನ ಯೋಚಿಸಿಕೊಳ್ಳುತ್ತಾರೆ ಬೇರೆಯವರ ಬಳಿ ಇದೆ ಅಂತ ಅಗತ್ಯ ಇಲ್ಲದೆ ಇದ್ದರೂ ದುಬಾರಿ ಕಾರನ್ನ ರಸಬೆಲ್ಲಿ ಇಟ್ಟು ಕವರ್ ಹಾಕಿ ಮುಚ್ಚಿಡ್ತಾರೆ ಅದರ ನಿರ್ವಹಣೆ ಖರ್ಚು ಬೇರೆ.

ಆದಾಯ ಕ್ರಮೇಣ ಹೆಚ್ಚಿತು ಅಂತ ಇಟ್ಕೊಳ್ಳಿ ಖರ್ಚು ಕೂಡ ಸರವೇಗದಲ್ಲಿ ಏರ್ತಾ ಇರುತ್ತೆ ಜೊತೆಗೆ ಪ್ರತಿ ವರ್ಷ ಹಣದುಬ್ಬರದ ಹೊಡೆತ ಬೇರೆ ಇರುತ್ತೆ ಆದರೆ ದುಡ್ಡು ಇಲ್ಲದೆ ಇದ್ದರೂ ಕೂಡ ಸಾಲ ಮಾಡಿಯಾದರೂ ಶಾಪಿಂಗ್ ಮುಂದುವರೆಯುತ್ತಾ ಇರುತ್ತೆ ಇದಕ್ಕೆ ಪೂರಕವಾಗಿ ಕ್ರೆಡಿಟ್ ಕಾರ್ಡ್ ಇರುತ್ತೆ ನೋ ಕಾಸ್ಟ್ ಇಎಂಐ ಅಥವಾ ಇಂಟರೆಸ್ಟ್ ಫ್ರೀ ಎಂಬ EMI ಯೋಜನೆ ಇರುತ್ತೆ ಬೈ ನೋ ಪೇ ಲೇಟರ್ ಆಫರ್ ಗಳು ಕೂಡ ಇರುತ್ತೆ ಇವೆಲ್ಲವೂ ಕೂಡ ನಿಮ್ಮನ್ನ ಆಕರ್ಷಣೆ ಮಾಡ್ತಾ ಇರುತ್ತೆ ಈ ತಿಂಗಳು ಅಲ್ಲದೆ ಇದ್ದರೂ ಮುಂದಿನ ತಿಂಗಳು ಕೊಟ್ರೆ ಆಯ್ತು ಇಲ್ಲದೆ ಇದ್ದರೆ ಇಎಂಐ ಯಾಕೆ ಹೇಗೂ ಇದೆ ಅಲ್ವಾ ಅಂತ ಮನಸ್ಸು ಆಲೋಚನೆ ಮಾಡುತ್ತೆ.

ಹೀಗಾಗಿ ಹಣದ ಉಳಿತಾಯ ಅನ್ನುವುದು ಕೊನೆಯ ಆದ್ಯತೆಯಾಗಿ ಕಡು ಕಷ್ಟ ಅನ್ನುವಂತಾಗಿ ಬಿಡುತ್ತೆ ಜೊತೆಗೆ ಕುಟುಂಬ ಅಂತ ಅಂದಾಗ ಹಣಕಾಸು ಖರ್ಚು ವೆಚ್ಚಗಳಿಗೆ ಸಂಬಂಧಪಟ್ಟ ಹಾಗೆ ಒಮ್ಮತ ಮೂಡಿಸುವಂತದ್ದು ಕಷ್ಟ ಆಗ್ಬಿಡುತ್ತೆ ಗೊತ್ತಿದ್ದರೂ ಮನೆಯ ಮಂದೆಯ ಒತ್ತಡಕ್ಕೆ ಮಣಿದು ಅನಾವಶ್ಯಕವಾಗಿ ಲಕ್ಷಾಂತರ ರೂಪಾಯಿ ದುಡ್ಡು ಪೋಲಾಗುತ್ತೆ ಇದೆಲ್ಲವೂ ಒಂದು ಹಂತದವರೆಗೆ ಸುಗಮವಾಗಿ ನಡೆಯುತ್ತದೆ ಆದರೆ ಬಳಿಕ ಅದು ಅಪಾಯಕಾರಿಯಾಗಿ ಆರ್ಥಿಕ ಪರಿಸ್ಥಿತಿಯನ್ನು ಸಂಕಷ್ಟಮಯವನ್ನಾಗಿಸುತ್ತದೆ.

ಹಣ ನಿರ್ವಹಣೆ ಸಲಹೆಗಳು

ಸುಮ್ಮನೆ ಹೆದರಿಸುವುದು ಎಚ್ಚರಿಕೆಯ ಉದ್ದೇಶ ಅಲ್ಲ ನಿಮ್ಮನ್ನು ವಿವೇಚನಾ ರಹಿತವಾಗಿ ಖರ್ಚು ಮಾಡಲು ಪ್ರೇರೇಪಿಸುವಂತಹ ಒಂದು ಮಾರುಕಟ್ಟೆ ತಂತ್ರಗಳು ಕೂಡ ಚಾಲ್ತಿಯಲ್ಲಿದೆ ಇದರ ಹಿಂದೆ ದೊಡ್ಡ ಆಯಾಮವೇ ಇರುತ್ತೆ ಈಗ ಅದನ್ನು ಕೂಡ ಬಹಳ ವಿವರವಾಗಿ ನೋಡೋಣ ಅವುಗಳನ್ನು ಅರ್ಥಮಾಡಿಕೊಂಡರೆ ಪ್ರಲೋಭನೆಗಳಿಗೆ ಒಳಗಾಗದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

ಸಾಮಾನ್ಯವಾಗಿ ನಾವು ಇದರನ್ನು ನೋಡಿ ಅನುಕರಿಸಲು ಹೋಗುತ್ತೇವೆ ಇದು ಮನುಷ್ಯರ ಸಹಜ ಸ್ವಭಾವ ಆದ್ದರಿಂದ ಅರಿವು ಇಲ್ಲದಂತೆಯೂ ಅನುಸರಿಸುತ್ತೇವೆ ಆಗ ನಮ್ಮ ನಿಜವಾದ ಅಗತ್ಯಗಳು ಏನು ಯಾವುದು ವಾಸ್ತವವಾಗಿ ಬೇಕು ಎಂಬ ವಸ್ತುನಿಷ್ಠ ಆಲೋಚನೆ ಬರಲ್ಲ ಹೀಗಾಗಿ ನಮ್ಮ ತನವನ್ನು ತೋರಿಸಿಕೊಳ್ಳಲು ಇತರರನ್ನು ಅನುಕರಿಸುತ್ತೇವೆ ಇದಕ್ಕೆ ಸಾಮಾಜಿಕ ಜಾಲತಾಣಗಳು ಪರೋಕ್ಷವಾಗಿ ಕುಮ್ಮಕ್ಕು ನೀಡ್ತಾ ಇರುತ್ತೆ. ಅಲ್ಲಿ ನಮ್ಮ ಸ್ನೇಹಿತರು ಯಾರೋ Celebrity ಪ್ರದರ್ಶಿಸುವ ಜೀವನಶೈಲಿಯನ್ನು ಅನುಕರಿಸಬೇಕು ಎಂಬ ಒಂದು ಅನಾವಶ್ಯಕ ಆಕಾಂಕ್ಷೆ ಉಂಟಾಗುತ್ತೆ ಇದು ವೈಯಕ್ತಿಕ ಹಣಕಾಸಿನ ಮೇಲೆ ನೇರವಾಗಿ ಪ್ರಭಾವ ಬೀರುತ್ತೆ.

ಆಗ ಅಗತ್ಯ ಇಲ್ಲದೆ ಇದ್ದರೂ ಜನ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗ್ತಾರೆ ಲಕ್ಸರಿ ಕಾರನ್ನ ಸಾಲದಲ್ಲಿ ಕೊಡ್ತಾರೆ ಮತ್ತಷ್ಟು ಬೇಕು ಬೇಕು ಅಂತ ಮನಸ್ಸು ಹೇಳ್ತಾ ಇರುತ್ತೆ ಮಾರುಕಟ್ಟೆ ತಂತ್ರಗಾರಿಕೆ ಈಗ ಬಹಳ ಶಕ್ತಿಶಾಲಿಯಾಗಿದೆ ಮಾರುಕಟ್ಟೆ ನಿಮ್ಮಲ್ಲೊಂದು ಕೊರತೆ ಇದೆ ಹಾಗೂ ಅದಕ್ಕೆ ತನ್ನ ಬಳಿ ಬಹಳ ಅತ್ಯುತ್ತಮವಾದ ಉತ್ಪನ್ನ ಮತ್ತು ಸೇವೆ ಅಥವಾ ಪ್ರಾಡಕ್ಟ್ ಆರ್ ಸರ್ವಿಸ್ ಇದ್ದು ಅದನ್ನ ನೀವು ಖರೀದಿ ಮಾಡಿದ್ರೆ ನಿಮ್ಮ ಸಮಸ್ಯೆ ಕ್ಲಿಯರ್ ಆಗುತ್ತೆ ಪರಿಹಾರ ಆಗುತ್ತೆ ಅಂತ ಮನವಲಿಸುತ್ತೆ ಕಾರ್ಪೊರೇಟ್ ಬ್ರಾಂಡ್ ಗಳು ಮಾರ್ಕೆಟಿಂಗ್ ಮತ್ತು ಜಾಹಿರಾತುಗಳಿಗೆ ಕೋಟ್ಯಾಂತರ ರೂಪಾಯಿಗಳನ್ನ ಖರ್ಚು ಮಾಡುತ್ತವೆ ನಿಮ್ಮ ಖರೀದಿ ನಿರ್ಧಾರಗಳ ಮೇಲೆ ಪ್ರಭಾವ ಬೀರುವುದೇ ಇದರ ಉದ್ದೇಶ ಆಗಿರುತ್ತೆ ಗ್ರಾಹಕರ ಮನಸ್ಸಿನ ಮೇಲೆ ಹೇಗೆ?

ಪ್ರಭಾವ ಬೀರಬಹುದು ಕಂಪನಿಗಳ ಉತ್ಪನ್ನಗಳನ್ನು ಹೇಗೆ ಪ್ರಚಾರ ಮಾಡುವುದು ಎಂಬುದರ ಬಗ್ಗೆ ಬಾರಿ ಸಂಶೋಧನೆಗಳನ್ನು ನಡೆಯುತ್ತೆ ನ್ಯೂರೋ ಮಾರ್ಕೆಟಿಂಗ್ ಎಂಬ ವಿಭಾಗವೇ ಹುಟ್ಟಿಕೊಂಡಿದೆ ನರ ವಿಜ್ಞಾನವನ್ನು ಆಧರಿಸಿ ಮನುಷ್ಯನ ಮೆದುಳು ಮತ್ತು ಆಲೋಚನೆಗಳ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂದು ಅದರಿಂದ ಕಂಪನಿಗಳು ಮಾರುಕಟ್ಟೆಯಲ್ಲಿ ತಮ್ಮ ಬ್ರಾಂಡ್ ಗಳ ವ್ಯಾಪಾರವನ್ನು ಹೇಗೆ ಹೆಚ್ಚಿಸಬಹುದು ಗ್ರಾಹಕರ ಜೊತೆಗೆ ಸಂಬಂಧವನ್ನು ಹೇಗೆ ವೃದ್ಧಿಸಬಹುದು ಹೂಡಿಕೆಗೆ ತಕ್ಕ ಲಾಭವನ್ನು ಹೇಗೆ ಗಳಿಸಬಹುದು ಎಂಬುದನ್ನು ಈ ನ್ಯೂರೋ ಮಾರ್ಕೆಟಿಂಗ್ ನಲ್ಲಿ ಸಂಶೋಧನೆ ಮಾಡ್ತಾರೆ.

ನಮ್ಮ ಆದಾಯ ಮತ್ತು ಖರ್ಚಿನ ಮೇಲೆ ನಿಗಾ ವಹಿಸುವುದರಿಂದ ಅಥವಾ ಟ್ರ್ಯಾಕ್ ಮಾಡುವುದರಿಂದ ಎಲ್ಲಿ

ಉಳಿತಾಯದ ಮೊದಲ ಹೆಜ್ಜೆಯೇ ದಿನನಿತ್ಯದ ಮತ್ತು ಪ್ರಮುಖ ಖರ್ಚುಗಳನ್ನ ಲೆಕ್ಕ ಇಡೋದು ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಇರಬಹುದು ಯುಪಿಐ ವರ್ಗಾವಣೆಗಳ ಡೇಟಾವನ್ನ ನಿಮ್ಮ ಮೊಬೈಲ್ನಲ್ಲಿ ಪರಿಶೀಲನೆ ಮಾಡಬಹುದು ಇದು ಸಾಧ್ಯ ಇಲ್ಲ ಅಂತ ಅಂದುಕೊಂಡ್ರೆ ಚಿಂತೆ ಬೇಡ ಒಂದು ಡೈರಿಯೋ ಪುಸ್ತಕದಲ್ಲಿಯೋ ಬರೆಯುವುದು ಕೂಡ ಬಹಳ ಒಳ್ಳೆಯದು ಆಹಾರ ಬಾಡಿಗೆ ಸಾಲದ ಇಎಂಐ ಮಕ್ಕಳ ಶಿಕ್ಷಣ ಆರೋಗ್ಯ ವಿಹಾರಗಳಿಗೆ ಸಂಬಂಧಪಟ್ಟ ಖರ್ಚುಗಳನ್ನ ದಾಖಲಿಸಿ ಇಟ್ಕೊಳ್ಳಿ ಪ್ರತಿ ತಿಂಗಳ ಖರ್ಚು ಮತ್ತು ಆದಾಯವನ್ನ ದಾಖಲಿಸಿದ ಬಳಿಕ ಎಲ್ಲಿ ಉಳಿತಾಯ ಮಾಡಬಹುದು ಅನಾವಶ್ಯಕ ಖರ್ಚನ್ನ ಹೇಗೆ ಅಂತ ನೀವು ಗುರುತಿಸಿ ಅದನ್ನ ಹಣಕಾಸು ಪ್ಲಾನಿಂಗ್ ಮೂಲಕ ಒಂದು ಯೋಜನೆಯಾಗಿ ಒಂದು ಪ್ರಮುಖ ಹಂತದಲ್ಲಿ ಅದನ್ನ ಮಾರ್ಪಾಟು ಮಾಡಬಹುದು.

ಇದಾದ ಬಳಿಕ ಉಳಿತಾಯ ಮಾಡಲಿಕ್ಕೆ ಒಂದು ಗುರಿಯನ್ನು ನಿಗದಿಪಡಿಸಿ ಪಿಎಫ್ ಇರಬಹುದು ಮ್ಯೂಚುವಲ್ ಫಂಡ್ ಎನ್ ಪಿಎಸ್ ಶೇರು ಬಾಂಡ್ ಗಳಲ್ಲಿ ನಿರ್ದಿಷ್ಟ ಅಮೌಂಟ್ ಅನ್ನ ಹೂಡಿಕೆ ಮಾಡಲು ನೀವು ಶುರು ಮಾಡಬೇಕು ಈಗಂತೂ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಗುರಿಗಳಿಗೆ ಸೂಕ್ತವಾಗುವಂತಹ ಹಲವಾರು ಇನ್ವೆಸ್ಟ್ಮೆಂಟ್ ಅಪಾರ್ಚುನಿಟಿಗಳು ಲಭ್ಯ ಇದೆ ಅವುಗಳನ್ನ ಅರಿತುಕೊಂಡು ಬಳಸಿಕೊಳ್ಳಿ ಒಂದಕ್ಕಿಂತ ಹೆಚ್ಚು ಆದಾಯದ ಮೂಲವನ್ನ ನಿಮ್ಮದಾಗಿಸಿ ಆಗ ವೈಯಕ್ತಿಕ ಹಣಕಾಸು ಸುಧಾರಿಸುವನ್ನ ನೀವೇ ನೋಡಬಹುದು.

ಜೀವನ ಯಾವತ್ತೂ ಕೂಡ ಸದಾ ಹೊಸ ಸವಾಲುಗಳನ್ನು ಕೊಡ್ತಾನೆ ಇರುತ್ತೆ ಅವುಗಳನ್ನ ಮೊದಲೇ ಗ್ರಹಿಸಲು ಕೂಡ ಆಗಲ್ಲ ಆದರೆ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ಸದಾ ಪ್ರಿಪರೇಷನ್ ಅಥವಾ ಸಿದ್ಧತೆಗಳನ್ನು ಮಾಡಬೇಕಾಗುತ್ತೆ ಅಂತ ಸಿದ್ಧತೆಗಳಲ್ಲಿ ಹಣದ ಉಳಿತಾಯ ಕೂಡ ಅತ್ಯಂತ ಮಹತ್ವ ಎಂಬುದನ್ನ ಯಾವತ್ತೂ ಮರಿಬಾರದು ಆದ್ದರಿಂದಲೇ ಅಮೆರಿಕದ ಖ್ಯಾತ ಹೂಡಿಕೆದಾರ ವಾರೆನ್ ಬೆಬೆಟ್ ಅವರು ಖರ್ಚೆಲ್ಲ ಕಳೆದ ನಂತರ ಉಳಿತಾಯ ಮಾಡ್ತಾ ಇದ್ದೇನೆ ಅಂತ ನೀವು ಯಾವತ್ತೂ ಭಾವಿಸಬೇಡಿ ಉಳಿತಾಯ ಆದ ಬಳಿಕ ಮಿಕ್ಕಿದ್ದನ್ನು ಖರ್ಚು ಮಾಡಬೇಕು ಅನ್ನುವಂತಹ ಒಂದು ದೃಢ ಸಂಕಲ್ಪ ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕು ಅಂತ ಅವರು ಹೇಳ್ತಾರೆ.

ಇದನ್ನೂ ಓದಿ: Aadhaar Card ಬಳಸಿಕೊಂಡು Scam ಮಾಡುತ್ತಾರೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment