ನಮ್ ಬೆಂಗಳೂರಿನಲ್ಲಿ, ಇಲ್ಲ ಕರ್ನಾಟಕದ ಯಾವುದೇ ಮೂಲೆಯಲ್ಲಿ ಒಂದು ಮನೆಬಾಡಿಗೆ ಕರಾರು ಮಾಡಿಸಬೇಕು ಅಂದ್ರೆ, ಅಥವಾ ಆಸ್ತಿ ನೊಂದಣಿ ಮಾಡಿಸಬೇಕು ಅಂದ್ರೆ ಮೊದ್ಲೆಲ್ಲಾ ಸ್ಟಾಂಪ್ ಪೇಪರ್ ಹುಡುಕೋದು, ಅಂಗಡಿಗಳಿಗೆ ಅಲೆಯೋದು ಒಂದು ದೊಡ್ಡ ತಲೆನೋವಿತ್ತು.
ಮಧ್ಯವರ್ತಿಗಳಿಗೆ ದುಡ್ಡು ಕೊಟ್ಟು ಕಾಯೋದು, ಕಲರ್ ಜೆರಾಕ್ಸ್ ಕಾಪಿಯಿಂದ ನಕಲಿ ಸ್ಟಾಂಪ್ ಪೇಪರ್ ಸಮಸ್ಯೆಗಳು ಇವೆಲ್ಲಾ ಕಾಮನ್ ಆಗಿತ್ತು. ಆದ್ರೆ ಇನ್ಮುಂದೆ ಈ ತಲೆನೋವುಗಳಿಲ್ಲ! ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯಲ್ಲಿ ಒಂದು ಹೊಸ ಕ್ರಾಂತಿ ಮಾಡಿದೆ – ಅದುವೇ ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆ. ಇದು ಹೇಗೆ ಕೆಲಸ ಮಾಡುತ್ತೆ, ಜನರಿಗೆ ಇದರಿಂದ ಆಗುವ ಲಾಭವೇನು, ಅನ್ನೋದನ್ನ ಇವತ್ತು ಡೀಟೇಲ್ ಆಗಿ ತಿಳಿಯೋಣ ಬನ್ನಿ.
Digital E-Stamp ಹೊಸ ಕ್ರಾಂತಿ

ಇನ್ಮುಂದೆ ಅಗ್ರಿಮೆಂಟ್ ಮಾಡೋಕೆ ಸ್ಟಾಂಪ್ ಪೇಪರ್ ಹುಡುಕಿ ಅಲೆಯೋ ತಲೆನೋವು ಇಲ್ಲ. ಕರ್ನಾಟಕ ಸರ್ಕಾರ ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆ ಜಾರಿಗೆ ತಂದಿದೆ. ಇದರ ಮೂಲಕ ನೀವೇ ಮನೆಯಲ್ಲೇ ಕುಳಿತು, ಜಸ್ಟ್ ಐದೇ ನಿಮಿಷದಲ್ಲಿ ನಿಮ್ಮ ಅಫಿಡವಿಟ್, ಬಾಡಿಗೆ ಕರಾರು, ಅಥವಾ ಯಾವುದೇ ಲೀಗಲ್ ಡಾಕ್ಯುಮೆಂಟ್ಗೆ ಬೇಕಾದ ಇ-ಸ್ಟಾಂಪ್ ಪಡೆಯಬಹುದು. ಇದು ಕಂದಾಯ ಇಲಾಖೆಯಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ತಂದಿದೆ. ಇನ್ನು ಮುಂದೆ ನಿಮ್ಮ ಸ್ಟಾಂಪ್ ಪೇಪರ್ ಅನ್ನ ನೀವೇ ಸ್ವತಃ ತಯಾರಿಸಿಕೊಳ್ಳುವ ಅವಕಾಶ ಸಿಕ್ಕಿದೆ.
ಹಳೇ ಸ್ಟಾಂಪ್ ಪೇಪರ್ ವ್ಯವಸ್ಥೆಯ ಸಮಸ್ಯೆಗಳು
ಮೊದಲಿಗೆ ಆಸ್ತಿ ಖರೀದಿ, ಬಾಡಿಗೆ ಕರಾರುಗಳಿಗೆ ಭೌತಿಕ ಸ್ಟಾಂಪ್ ಪೇಪರ್ ಅನಿವಾರ್ಯವಾಗಿತ್ತು. ಅಬ್ದುಲ್ ಕರೀಂ ತೆಲಗಿ ಹಗರಣದ ಬಳಿಕ ನಕಲಿ ಸ್ಟಾಂಪ್ ಪೇಪರ್ಗಳಿಂದ ಸಾವಿರಾರು ಕೋಟಿ ವಂಚನೆ ಆಗುತ್ತಿರುವುದು ಗೊತ್ತಾಯಿತು. ಹಳೆಯ ವ್ಯವಸ್ಥೆಯಲ್ಲಿ ಭದ್ರತೆಯ ಕೊರತೆ, ನಕಲು ಮಾಡುವುದು, ಉದ್ದೇಶ ಬದಲಿಸುವುದು, ಬ್ಯಾಕ್-ಡೇಟ್ ಹಾಕಿ ಸರ್ಕಾರಕ್ಕೆ ವಂಚಿಸುವುದು ಸಾಮಾನ್ಯ ಆಗಿತ್ತು.
ಇದರಿಂದ ಕೋಟ್ಯಂತರ ನಷ್ಟ ಆಗ್ತಿತ್ತು. ಇದೆಲ್ಲಕ್ಕೂ ಈಗ ಡಿಜಿಟಲ್ ವ್ಯವಸ್ಥೆ ಬ್ರೇಕ್ ಹಾಕಿದೆ.
ಏನಿದು ಡಿಜಿಟಲ್ ಇ-ಸ್ಟಾಂಪ್? ಹೇಗೆ ಕೆಲಸ ಮಾಡುತ್ತೆ?
Digital ಇ-ಸ್ಟಾಂಪ್ ಅಂದ್ರೆ ಪೂರ್ತಿ ಕಾಗದ ರಹಿತ (Paperless) ವ್ಯವಸ್ಥೆ. ಇಲ್ಲಿ ಸ್ಟಾಂಪ್ ಪೇಪರ್ ಅಂತ ಪ್ರತ್ಯೇಕವಾಗಿ ಇರೋದಿಲ್ಲ. ನಿಮ್ಮ ಒಪ್ಪಂದದ ಬರಹವೇ ಸ್ಟಾಂಪ್ ಪೇಪರ್ನ ಭಾಗವಾಗಿರುತ್ತದೆ. ಯಾವುದೇ ಮಧ್ಯವರ್ತಿಗಳಿಲ್ಲದೆ, ಲಂಚದ ಹಾವಳಿ ಇಲ್ಲದೆ, ನೀವೇ ನೇರವಾಗಿ ಡಿಜಿಟಲ್ ಇ-ಸ್ಟಾಂಪ್ ತಯಾರಿಸಿಕೊಳ್ಳಬಹುದು.
ಈ ಸೇವೆ 24×7 ಲಭ್ಯವಿದ್ದು, ಇಂಟರ್ನೆಟ್ ಇದ್ದರೆ ಸಾಕು, ಜಗತ್ತಿನ ಯಾವುದೇ ಮೂಲೆಯಿಂದಲೂ ಕರ್ನಾಟಕದ ಸ್ಟಾಂಪ್ ಡ್ಯೂಟಿ ಪಾವತಿಸಿ ಒಪ್ಪಂದ ಮಾಡಿಕೊಳ್ಳಬಹುದು.
ಜನರಿಗಾಗುವ ಪ್ರಮುಖ ಪ್ರಯೋಜನಗಳು
- ಸ್ವಯಂ ಸೇವಾ ಸೌಲಭ್ಯ: ಕ್ಯೂ ನಿಲ್ಲೋದು, ಕಮಿಷನ್ ಕೊಡೋದು ಬೇಕಾಗಿಲ್ಲ. ಮನೆಯಲ್ಲೇ ಆರಾಮಾಗಿ ಕೆಲಸ ಮುಗಿಸಬಹುದು.
- ಸಂಪೂರ್ಣ ಸುರಕ್ಷಿತ: ಆಧಾರ್ ಆಧಾರಿತ ಪರಿಶೀಲನೆ ಇರುವುದರಿಂದ ನಕಲಿ ಸಹಿ ಹಾವಳಿ ಇರೋದಿಲ್ಲ. ಒಮ್ಮೆ ಜನರೇಟ್ ಆದ ಸ್ಟಾಂಪನ್ನು ತಿದ್ದೋಕೆ ಅಥವಾ ನಕಲು ಮಾಡೋಕೆ ಸಾಧ್ಯವೇ ಇಲ್ಲ.
- ಪೇಪರ್ಲೆಸ್ ಮತ್ತು ಕಾನೂನು ಮಾನ್ಯತೆ: ಕಾಗದದ ಬಳಕೆ ಕಡಿಮೆ ಆಗಿ ಪರಿಸರಕ್ಕೂ ಉತ್ತಮ. ಡಿಜಿಟಲ್ ದಾಖಲೆಗಳಿಗೆ ನ್ಯಾಯಾಲಯದಲ್ಲೂ ಸಂಪೂರ್ಣ ಕಾನೂನು ಮಾನ್ಯತೆ ಇದೆ.
ಸುರಕ್ಷಿತ ಮತ್ತು ಭ್ರಷ್ಟಾಚಾರ ಮುಕ್ತ ವ್ಯವಹಾರ
ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆ ನಕಲಿ ದಾಖಲೆಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಯುತ್ತದೆ. ಇಲ್ಲಿ ಆಧಾರ್ ಆಧಾರಿತ ಪರಿಶೀಲನೆ ಕಡ್ಡಾಯ. ಇದರಿಂದ ಯಾವುದೇ ನಕಲಿ ವ್ಯಕ್ತಿಗಳು ಸಹಿ ಮಾಡಲು ಅಥವಾ ಒಪ್ಪಂದದಲ್ಲಿ ಭಾಗಿಯಾಗಲು ಸಾಧ್ಯವೇ ಇಲ್ಲ.
ಒಮ್ಮೆ ಡಿಜಿಟಲ್ ಸ್ಟಾಂಪ್ ಜನರೇಟ್ ಆದ ಮೇಲೆ ಅದರಲ್ಲಿರುವ ಮಾಹಿತಿಗಳನ್ನು ಬದಲಾಯಿಸಲು ಅಸಾಧ್ಯ. ಒಪ್ಪಂದದ ವಿಷಯ ಮತ್ತು ಸ್ಟ್ಯಾಂಪ್ ಶುಲ್ಕದ ವಿವರಗಳು ಒಂದೇ ಕಡತದಲ್ಲಿ ಸುರಕ್ಷಿತವಾಗಿ ವಿಲೀನವಾಗಿರುತ್ತವೆ. ಇದು ಭ್ರಷ್ಟಾಚಾರವನ್ನು ತಡೆಯುವಲ್ಲಿ ಹಾಗೂ ವಂಚನೆಗಳನ್ನು ನಿಲ್ಲಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ.
ಡಿಜಿಟಲ್ ಇ-ಸ್ಟಾಂಪ್ ಪಡೆಯುವುದು ಹೇಗೆ? ಮೊದಲ ಹೆಜ್ಜೆಗಳು
- Step1: ಮೊದಲು ಕರ್ನಾಟಕ ಸರ್ಕಾರದ ಅಧಿಕೃತ ಕಾವೇರಿ ಪೋರ್ಟಲ್ Kavveri.Karnataka.gov.in ಗೆ ಭೇಟಿ ನೀಡಿ.
- Step 2: ಅಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ನೀಡಿ ನೊಂದಣಿ ಮಾಡಿಕೊಳ್ಳಿ. ಇದು ಕೇವಲ ಒಂದು ಬಾರಿ ಮಾತ್ರ ಮಾಡಬೇಕಾದ ಪ್ರಕ್ರಿಯೆ.
- Step 3: ಲಾಗಿನ್ ಆದ ನಂತರ, ನಿಮಗೆ ಯಾವ ರೀತಿಯ ದಸ್ತಾವೇಜು ಬೇಕು ಅಂತ ಆಯ್ಕೆ ಮಾಡಿ. ಉದಾಹರಣೆಗೆ, ಬಾಡಿಗೆ ಒಪ್ಪಂದ ಅಥವಾ ಆಸ್ತಿ ಮಾರಾಟ ಒಪ್ಪಂದ.
ಅರ್ಜಿದಾರರ ಮಾಹಿತಿ ಮತ್ತು ಆಸ್ತಿ ಪರಿಶೀಲನೆ
- Step 4: ಅರ್ಜಿದಾರರು ಮತ್ತು ಸಾಕ್ಷಿದಾರರ ವಿವರಗಳನ್ನು ನಮೂದಿಸಿ. ಇಲ್ಲಿ ಆಧಾರ್ ದೃಢೀಕರಣ ಕಡ್ಡಾಯ. ಇದರಿಂದ ನಕಲಿ ಸಹಿ ಮಾಡುವ ಹಾವಳಿ ತಪ್ಪುತ್ತದೆ ಮತ್ತು ವ್ಯವಹಾರಕ್ಕೆ ಅಧಿಕೃತತೆ ಸಿಗುತ್ತದೆ.
- Step 5: ಒಂದು ವೇಳೆ ನೀವು ಆಸ್ತಿಗೆ ಸಂಬಂಧಿಸಿದ ದಸ್ತಾವೇಜು ಮಾಡುತ್ತಿದ್ದರೆ, ಆಸ್ತಿಯ ವಿವರಗಳನ್ನು ಸಿಸ್ಟಮ್ ತಾನಾಗಿಯೇ ಸರ್ಕಾರದ ಡೇಟಾಬೇಸ್ನಿಂದ ಪರಿಶೀಲಿಸುತ್ತದೆ. ಇದು ತಪ್ಪು ಮಾಹಿತಿಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾರದರ್ಶಕತೆ ತರುತ್ತದೆ.
ಒಪ್ಪಂದದ ವಿಷಯ ಮತ್ತು ಶುಲ್ಕ ಪಾವತಿ
- Step 6: ಈಗ ನೀವು ಒಪ್ಪಂದದ ವಿಷಯ (ಕಂಟೆಂಟ್) ವನ್ನು ಪೋರ್ಟಲ್ನಲ್ಲಿ ಟೈಪ್ ಮಾಡಬಹುದು ಅಥವಾ ನಿಮ್ಮ ಬಳಿ ಸಿದ್ಧವಿದ್ದರೆ ಅದನ್ನು ನೇರವಾಗಿ ಅಪ್ಲೋಡ್ ಮಾಡಬಹುದು. ಇದು ಪೇಪರ್ವರ್ಕ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- Step 7: ನಂತರ ಸ್ಟ್ಯಾಂಪ್ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಿ. UPI, ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಮುಂತಾದ ಹಲವು ಆಯ್ಕೆಗಳು ಲಭ್ಯವಿದ್ದು, ಹಣವನ್ನು ನೇರವಾಗಿ ಸರ್ಕಾರದ ಖಜಾನೆಗೆ ಪಾವತಿಸಲು ಅವಕಾಶವಿದೆ. ಇದು ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಮಧ್ಯವರ್ತಿಗಳ ಅಗತ್ಯವನ್ನು ನಿವಾರಿಸುತ್ತದೆ.
ಡಿಜಿಟಲ್ ದಸ್ತಾವೇಜು ಮತ್ತು ಇ-ಸಹಿ ಪ್ರಕ್ರಿಯೆ
- Step 8: ಶುಲ್ಕ ಪಾವತಿಯಾದ ತಕ್ಷಣ, ಸಿಸ್ಟಮ್ ಒಂದು ಡಿಜಿಟಲ್ ದಸ್ತಾವೇಜನ್ನು ಸೃಷ್ಟಿಸುತ್ತದೆ. ಇದರಲ್ಲಿ QR ಕೋಡ್, ಡಿಜಿಟಲ್ ವಾಟರ್ಮಾರ್ಕ್ ಮತ್ತು ಒಂದು ವಿಶೇಷ ಸಂಖ್ಯೆ ಇರುತ್ತದೆ. ಇದು ನಿಮ್ಮ ದಸ್ತಾವೇಜಿನ ಅಧಿಕೃತತೆಯನ್ನು ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತದೆ.
- Final Step: ಒಪ್ಪಂದದಲ್ಲಿ ಭಾಗಿಯಾದವರೆಲ್ಲರೂ ತಮ್ಮ ಮೊಬೈಲ್ಗೆ ಬರುವ ಲಿಂಕ್ ಮೂಲಕ ‘ಇ-ಸಹಿ’ (eSign) ಅಥವಾ ಡಿಜಿಟಲ್ ಸಹಿ ಮಾಡಿದರೆ, ನಿಮ್ಮ ಲೀಗಲ್ ಡಾಕ್ಯುಮೆಂಟ್ ರೆಡಿ! ಇದನ್ನು ನೀವು ತಕ್ಷಣವೇ ಡೌನ್ಲೋಡ್ ಮಾಡಿಕೊಳ್ಳಬಹುದು.
ಸರ್ಕಾರಕ್ಕಾಗುವ ಲಾಭಗಳು ಮತ್ತು ಪಾರದರ್ಶಕತೆ
- ವಂಚನೆ ತಡೆಗಟ್ಟುವಿಕೆ: ಮೊದಲು 100 ರೂಪಾಯಿ ಸ್ಟಾಂಪ್ ಪೇಪರ್ ಮೇಲೆ ಕೋಟಿ ಬೆಲೆಬಾಳುವ ಆಸ್ತಿ ವ್ಯವಹಾರ ಬರೆದು ವಂಚಿಸುತ್ತಿದ್ದರು. ಈಗ ಡಿಜಿಟಲ್ ವ್ಯವಸ್ಥೆಯಲ್ಲಿ ತಪ್ಪು ವರ್ಗೀಕರಣ ಮಾಡಲು ಸಾಧ್ಯವೇ ಇಲ್ಲ.
- ಬೊಕ್ಕಸಕ್ಕೆ ಉಳಿತಾಯ: ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಈ ಹಿಂದೆ ನೀಡಲಾಗುತ್ತಿದ್ದ ಕಮಿಷನ್ ಹಣ ಇನ್ನು ಮುಂದೆ ಸರ್ಕಾರದ ಬೊಕ್ಕಸಕ್ಕೆ ಉಳಿತಾಯವಾಗಲಿದೆ.
- ಸಂಪೂರ್ಣ ಪಾರದರ್ಶಕತೆ: ಯಾರು, ಯಾವಾಗ, ಎಲ್ಲಿ ಒಪ್ಪಂದ ಮಾಡಿಕೊಂಡರು ಎಂಬುದು ರಿಯಲ್ ಟೈಮ್ನಲ್ಲಿ ದಾಖಲಾಗುತ್ತದೆ. ಬ್ಯಾಕ್-ಡೇಟ್ ಹಾಕಿ ವಂಚಿಸಲು ಇನ್ನು ಮುಂದೆ ಸಾಧ್ಯವೇ ಇಲ್ಲ.
ತೀರ್ಮಾನ: ನೋಡಿದ್ರಲ್ಲ, ತಂತ್ರಜ್ಞಾನ ಎಷ್ಟರ ಮಟ್ಟಿಗೆ ಬೆಳೆದಿದೆ ಅಂತ! ಸಣ್ಣ ಅಫಿಡವಿಟ್ಗೂ ಕಚೇರಿಗಳಿಗೆ ಅಲೆಯುತ್ತಿದ್ದ ದಿನಗಳು ಈಗಿಲ್ಲ. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಈ ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆ ನಿಜಕ್ಕೂ ಸ್ವಾಗತಾರ್ಹ ಹೆಜ್ಜೆ. ಇದರ ಯಶಸ್ವಿ ಅನುಷ್ಠಾನದ ಬಳಿಕ, ಇನ್ನು ಮುಂದೆ ಇದು ರಾಜ್ಯಾದ್ಯಂತ ಕಡ್ಡಾಯವಾಗಲಿದೆ. ಆದ್ದರಿಂದ, ನೀವು ಯಾವುದೇ ಲೀಗಲ್ ಡಾಕ್ಯುಮೆಂಟ್ ಮಾಡಿಸಬೇಕಿದ್ದರೆ, ದಲ್ಲಾಳಿಗಳ ಮೊರೆ ಹೋಗಬೇಡಿ.
ನೇರವಾಗಿ ಕಾವೇರಿ ಪೋರ್ಟಲ್ ಮೂಲಕವೇ ಸುರಕ್ಷಿತವಾಗಿ ನಿಮ್ಮ ದಸ್ತಾವೇಜನ್ನು ಸಿದ್ಧಪಡಿಸಿಕೊಳ್ಳಿ. ಇದು ಭ್ರಷ್ಟಾಚಾರ ಮುಕ್ತ ಆಡಳಿತದತ್ತ ಇಟ್ಟಿರುವ ಒಂದು ದೊಡ್ಡ ಹೆಜ್ಜೆ.
Read More: Sanchar Saathi ಆಪ್ Updates: ನಿಮ್ಮ ಫೋನ್ಗೆ ಸರ್ಕಾರದ ರಕ್ಷಾಕವಚನಾ?





