ಆಧಾರ್ PVC ಕಾರ್ಡ್ 2026: ಈ ರೀತಿ ಬುಕ್ ಮಾಡಿ ಹೊಸ ಪ್ಲಾಸ್ಟಿಕ್ ಕಾರ್ಡ್! ₹50 ಮನೆಗೆ ಬರಲಿದೆ ಹೈ-ಟೆಕ್ ಆಧಾರ್!

Belagavi Voice Author
February 20, 2026 8:24 PM
ಆಧಾರ್ PVC ಕಾರ್ಡ್ 2026: ಈ ರೀತಿ ಬುಕ್ ಮಾಡಿ ಹೊಸ ಪ್ಲಾಸ್ಟಿಕ್ ಕಾರ್ಡ್! ₹50 ಮನೆಗೆ ಬರಲಿದೆ ಹೈ-ಟೆಕ್ ಆಧಾರ್!

ಸರ್ಕಾರ ಆಧಾರ್ ಕಾರ್ಡ್ ಹೊಂದಿರುವ ಎಲ್ಲಾ ಜನರಿಗೆ ಹೊಸ PVC ಕಾರ್ಡ್ ಬಿಡುಗಡೆ ಮಾಡಿದ್ದಾರೆ ಹಾಗೂ ಇದನ್ನು ನಿಮ್ಮ ಮೊಬೈಲ್ ಮೂಲಕ ಬುಕ್ ಮಾಡಿಕೊಳ್ಳಬಹುದು.

ಬುಕ್ ಮಾಡಿರುವ ವಿಳಾಸಕ್ಕೆ ಇದು ಸ್ಪೀಡ್ ಪೋಸ್ಟ್ ಮೂಲಕ ಬಂದು ತಲುಪುತ್ತದೆ.

ಸ್ನೇಹಿತರೆ ನೀವೇನಾದರೂ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಅಡ್ರೆಸ್ ಅಥವಾ ಮೊಬೈಲ್ ನಂಬರ್ ಹಾಗೂ ಯಾವುದಪ್ಪ ಅಪ್ಡೇಟ್ ಮಾಡಿಸಿದ್ದೀರಾ ಅಥವಾ ನೀವು ಇನ್ನು ಲ್ಯಾಮಿನೇಟೆಡ್ ಆಧಾರ್ ಕಾರ್ಡನ್ನು ಬಳಸುತ್ತಿದ್ದರೆ. ಈಗ ಸರ್ಕಾರ ಬಿಡುಗಡೆ ಮಾಡಿರುವ ಹೊಸ PVC ಕಾರ್ಡನ್ನು ನಿಮ್ಮ ಮೊಬೈಲಿನಲ್ಲಿ ಎರಡು ನಿಮಿಷಗಳಲ್ಲಿ ಬುಕ್ ಮಾಡಿಕೊಳ್ಳಬಹುದು. ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಿಮ್ಮ ಬಳಿ ಇಲ್ಲ ಅಂದರೂ ಕೂಡ ನೀವು ಈ ಕಾರ್ಡಿಗೆ ಅಪ್ಲೈ ಮಾಡಬಹುದು ಹಾಗೂ ಸರ್ಕಾರದ ಈ ಹೊಸ PVC ಕಾರ್ಡ್ ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ಮನೆಗೆ ಬಂದು ತಲುಪುತ್ತದೆ.

ಇದರ ಬಗ್ಗೆ ಸಂಪೂರ್ಣ ವಿವರಣೆ ಇಲ್ಲಿ ನೀಡಿದ್ದೇವೆ ಆದ್ದರಿಂದ ಪೂರ್ತಿಯಾಗಿ ಓದಿ.

ಆಧಾರ್ PVC ಕಾರ್ಡ್ ಪ್ರಮುಖ ಮಾಹಿತಿ

  • ಸೇವೆ: ಆಧಾರ್ PVC ಕಾರ್ಡ್ ಆರ್ಡರ್ (Plastic Card).
  • ಲಿಂಕ್ ಅನಿವಾರ್ಯವಲ್ಲ: ಆಧಾರ್‌ಗೆ ಮೊಬೈಲ್ ನಂಬರ್ ಲಿಂಕ್ ಇಲ್ಲದಿದ್ದರೂ ಆರ್ಡರ್ ಮಾಡಬಹುದು.
  • ತಲುಪುವ ವಿಧಾನ: ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ವಿಳಾಸಕ್ಕೆ ನೇರವಾಗಿ ಬರಲಿದೆ.
  • ಶುಲ್ಕ: ₹50 (ಜಿಎಸ್ಟಿ ಮತ್ತು ಪೋಸ್ಟಲ್ ಶುಲ್ಕ ಸೇರಿ).

ಆಧಾರ್ PVC ಕಾರ್ಡ್ ಬುಕ್ ಮಾಡುವ ಹಂತಗಳು

ಆಧಾರ್ PVC ಕಾರ್ಡ್ ಬುಕ್ ಮಾಡುವ ಹಂತಗಳು
  • ವೆಬ್‌ಸೈಟ್‌ಗೆ ಭೇಟಿ ನೀಡಿ: ಗೂಗಲ್‌ನಲ್ಲಿ ‘My Aadhaar’ ಎಂದು ಸರ್ಚ್ ಮಾಡಿ ಅಧಿಕೃತ ವೆಬ್‌ಸೈಟ್ ಓಪನ್ ಮಾಡಿ.
  • ಆಯ್ಕೆ ಮಾಡಿ: ಹೋಮ್ ಪೇಜ್‌ನಲ್ಲಿರುವ ‘Order Aadhaar PVC Card’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. myaadhaar.uidai.gov.in
  • ವಿವರ ನಮೂದಿಸಿ: ನಿಮ್ಮ 12 ಅಂಕಿಯ ಆಧಾರ್ ನಂಬರ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ಟೈಪ್ ಮಾಡಿ.
  • ಮೊಬೈಲ್ ನಂಬರ್ ಆಯ್ಕೆ: ಲಿಂಕ್ ಆಗಿರುವ ನಂಬರ್ ಇದ್ದರೆ ‘Send OTP’ ಕ್ಲಿಕ್ ಮಾಡಿ.
    • ಲಿಂಕ್ ಇಲ್ಲದಿದ್ದರೆ, ‘My mobile number is not registered’ ಬಾಕ್ಸ್ ಟಿಕ್ ಮಾಡಿ, ನಿಮ್ಮ ಬಳಿ ಇರುವ ಯಾವುದೇ ನಂಬರ್ ನೀಡಿ OTP ಪಡೆಯಿರಿ.
  • ಪಾವತಿ: ಒಟಿಪಿ ವೆರಿಫಿಕೇಶನ್ ನಂತರ ₹50 ಆನ್‌ಲೈನ್ ಪಾವತಿ (Online Payment) ಮಾಡಿ.
  • ರೆಸಿಪ್ಟ್ ಡೌನ್‌ಲೋಡ್: ಪಾವತಿ ಯಶಸ್ವಿಯಾದ ನಂತರ ‘Acknowledgment Receipt’ ಡೌನ್‌ಲೋಡ್ ಮಾಡಿಕೊಳ್ಳಿ.
  • ಸ್ಟೇಟಸ್ ಟ್ರ್ಯಾಕ್: ಅದರಲ್ಲಿರುವ SRN ನಂಬರ್ ಬಳಸಿ ನಿಮ್ಮ ಕಾರ್ಡ್ ಎಲ್ಲಿ ಬಂದಿದೆ ಎಂದು ಟ್ರ್ಯಾಕ್ ಮಾಡಬಹುದು.

FAQ

ಹಳೆಯ ಲ್ಯಾಮಿನೇಟೆಡ್ ಆಧಾರ್ ಕಾರ್ಡ್ ಬದಲಿಗೆ ಹೊಸ PVC ಕಾರ್ಡ್ ಪಡೆಯಬಹುದೇ?

ಹೌದು, ನಿಮ್ಮ ಹಳೆಯ ಕಾರ್ಡ್ ಬದಲಿಗೆ ಸರ್ಕಾರ ಬಿಡುಗಡೆ ಮಾಡಿರುವ ಹೈ-ಟೆಕ್ ಸೆಕ್ಯೂರಿಟಿ ಫೀಚರ್ಸ್ ಇರುವ ಹೊಸ ಪ್ಲಾಸ್ಟಿಕ್ PVC ಕಾರ್ಡ್ ಅನ್ನು ನೀವು ಸುಲಭವಾಗಿ ಬುಕ್ ಮಾಡಬಹುದು.

ಆಧಾರ್ PVC ಕಾರ್ಡ್ ಪಡೆಯಲು ಎಷ್ಟು ಹಣ ಪಾವತಿಸಬೇಕು?

ಈ ಕಾರ್ಡ್ ಪಡೆಯಲು ನೀವು ಕೇವಲ 50 ರೂಪಾಯಿಗಳನ್ನು ಆನ್‌ಲೈನ್ ಮೂಲಕ ಪಾವತಿಸಬೇಕಾಗುತ್ತದೆ.

ಆಧಾರ್‌ಗೆ ಮೊಬೈಲ್ ನಂಬರ್ ಲಿಂಕ್ ಇಲ್ಲ, ನಾನು ಆರ್ಡರ್ ಮಾಡಬಹುದೇ?

ಹೌದು, ಲಿಂಕ್ ಇಲ್ಲದಿದ್ದರೂ ‘Non-registered mobile number’ ಆಯ್ಕೆ ಬಳಸಿ ನಿಮ್ಮ ಬಳಿ ಇರುವ ಯಾವುದೇ ಮೊಬೈಲ್ ನಂಬರ್ ಮೂಲಕ ನೀವು ಆರ್ಡರ್ ಮಾಡಬಹುದು.

ಆರ್ಡರ್ ಮಾಡಿದ ಎಷ್ಟು ದಿನಕ್ಕೆ ಕಾರ್ಡ್ ಮನೆಗೆ ಬರುತ್ತದೆ?

ನೀವು ಆರ್ಡರ್ ಮಾಡಿದ ನಂತರ ಆಧಾರ್ ಸಂಸ್ಥೆಯು ಇದನ್ನು ಪ್ರಿಂಟ್ ಮಾಡಿ ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ಆಧಾರ್‌ನಲ್ಲಿರುವ ವಿಳಾಸಕ್ಕೆ ಕಳುಹಿಸಿಕೊಡುತ್ತದೆ.

ನನ್ನ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಪಾವತಿ ಮಾಡಿದ ನಂತರ ಸಿಗುವ SRN (Service Request Number) ಬಳಸಿ ಆಧಾರ್ ವೆಬ್‌ಸೈಟ್‌ನಲ್ಲಿ ನಿಮ್ಮ ಕಾರ್ಡ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಬಹುದು

Read More:

ಆಧಾರ್ ಕಾರ್ಡ್ Address ಬದಲಾವಣೆ: OTP ಬೇಡ, Face ಸ್ಕ್ಯಾನ್ ಮೂಲಕ Address ಬದಲಿಸಿ! ಈ ರೀತಿ ಚೇಂಜ್ ಮಾಡಿ

ಈ-ಸ್ವತ್ತು ಪೇಮೆಂಟ್ ಆದ್ರೂ ಖಾತಾ ಡೌನ್‌ಲೋಡ್ ಆಗ್ತಿಲ್ಲವಾ? ಇಲ್ಲಿದೆ ಹೊಸ ಪರಿಹಾರ!

belagavivoice - writeups

Pavan CS

Pavan CS is a final year Robotics Engineering student with a passion for writing. He contributes to the blog with a focus on Education and Government Schemes, helping Karnataka people stay informed about opportunities that matter to them

Leave a Comment