ಪ್ರತಿಯೊಬ್ಬರಿಗೂ ವಂಶಾವಳಿ ಪ್ರಮಾಣಪತ್ರ ಅಥವಾ ವಂಶವೃಕ್ಷ ಪ್ರಮಾಣಪತ್ರ ತುಂಬಾನೇ ಮುಖ್ಯ. ಇದು ಕುಟುಂಬದ ಸದಸ್ಯರ ಹೆಸರು, ಸಂಬಂಧಗಳನ್ನು ಸರ್ಕಾರವೇ ದೃಢೀಕರಿಸುವ ದಾಖಲೆ ಅಂದ್ರೆ ತಪ್ಪಾಗಲ್ಲ.
ಈ ಪ್ರಮಾಣಪತ್ರ ಯಾಕೆ ಬೇಕು, ಎಲ್ಲಿ ಸಿಗುತ್ತೆ, ಸಿಗದಿದ್ರೆ ಏನಾಗುತ್ತೆ ಅನ್ನೋ ಕುರಿತು ಸಾಕಷ್ಟು ಗೊಂದಲಗಳು ಇರುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಪಕ್ಕಾ ಮಾಹಿತಿ.
ವಂಶಾವಳಿ ಪ್ರಮಾಣಪತ್ರ ಅಂದ್ರೆ ಏನು? ಯಾಕೆ ಬೇಕು?
ವಂಶಾವಳಿ ಪ್ರಮಾಣಪತ್ರ ಅಂದ್ರೆ ಕುಟುಂಬದ ಎಲ್ಲ ಸದಸ್ಯರ ಹೆಸರು, ಅವರ ಸಂಬಂಧವನ್ನು ಸರ್ಕಾರ ದೃಢೀಕರಿಸುವ ದಾಖಲೆ. ಅಜ್ಜ, ಅಪ್ಪ, ಅಮ್ಮ, ಮಕ್ಕಳು ಅಂತ ಎಲ್ಲರ ವಂಶಾವಳಿಯನ್ನ ಇದು ತೋರಿಸುತ್ತೆ.
ಈ ಒಂದು ದಾಖಲೆ, ಕುಟುಂಬದ ಗುರುತಿನ ಪತ್ರದಂತೆ ಕೆಲಸ ಮಾಡುತ್ತೆ. ಹಲವಾರು ಮುಖ್ಯ ಸಂದರ್ಭಗಳಲ್ಲಿ ಇದು ಬೇಕೇ ಬೇಕಾಗುತ್ತೆ. ಇದರ ಉಪಯೋಗಗಳು ಬಹಳಷ್ಟಿವೆ.
ಎಲ್ಲಿ ಅರ್ಜಿ ಹಾಕೋದು? ಏನೆಲ್ಲಾ ದಾಖಲೆಗಳು ಬೇಕು?
ಈ ಪ್ರಮಾಣಪತ್ರ ನಿಮ್ಮ ತಾಲೂಕಿನ ತಹಸೀಲ್ದಾರ್ ಕಚೇರಿ ಅಥವಾ ನಾಡಕಚೇರಿಯಲ್ಲಿ ಅಧಿಕೃತವಾಗಿ ಸಿಗುತ್ತೆ. ಇತ್ತೀಚೆಗೆ ನಿಮ್ಮ ಗ್ರಾಮದಲ್ಲಿರುವ ಬಾಪೂಜಿ ಕೇಂದ್ರದಲ್ಲೂ ಅರ್ಜಿ ಹಾಕಿ ಪಡೆಯುವ ವ್ಯವಸ್ಥೆ ಜಾರಿಯಾಗಿದೆ.
ಈ ಪ್ರಮಾಣಪತ್ರಕ್ಕೆ ಅರ್ಜಿ ಹಾಕಬೇಕಾದ್ರೆ ಕೆಲವೊಂದು ಪ್ರಮುಖ ದಾಖಲೆಗಳು ಬೇಕಾಗುತ್ತವೆ. ಅವು ಇಲ್ಲದಿದ್ರೆ ಅರ್ಜಿಯನ್ನು ಸ್ವೀಕರಿಸೋಲ್ಲ.
ಅರ್ಜಿ ಪ್ರಕ್ರಿಯೆ, ಶುಲ್ಕ ಮತ್ತು ಸಿಗುವ ಸಮಯ!
ವಂಶಾವಳಿ ಪ್ರಮಾಣಪತ್ರ ಪಡೆಯಲು ನೀವು ಸೇವಾ ಸಿಂಧು ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲಾ ಅಂದ್ರೆ ನಾಡಕಚೇರಿ ಅಥವಾ ಗ್ರಾಮದಲ್ಲಿರುವ ಬಾಪೂಜಿ ಕೇಂದ್ರದಲ್ಲೂ ಸಹ ಅರ್ಜಿ ಹಾಕಬಹುದು.
ಅರ್ಜಿ ಹಾಕಿದ ನಂತರ ಇದು ಎಷ್ಟು ದಿನದಲ್ಲಿ ಸಿಗುತ್ತೆ, ಶುಲ್ಕ ಎಷ್ಟು ಅನ್ನೋ ಡೌಟ್ಸ್ ಸಹ ಇರುತ್ತೆ. ದಾಖಲೆಗಳು ಸರಿಯಿದ್ರೆ ಬೇಗ ಸಿಗುತ್ತೆ.
ವಂಶಾವಳಿ ಪ್ರಮಾಣಪತ್ರದ ವ್ಯಾಲಿಡಿಟಿ ಮತ್ತು ತಪ್ಪುಗಳ ತಿದ್ದುಪಡಿ!
ಈ ಪ್ರಮಾಣಪತ್ರದಲ್ಲಿ ಹೆಸರು ತಪ್ಪಾಗಿದ್ರೆ ಏನು ಮಾಡಬೇಕು ಅನ್ನೋ ಗೊಂದಲ ಇರುತ್ತೆ. ಸಾಮಾನ್ಯವಾಗಿ ಎಲ್ಲವೂ ಆಧಾರ್ ಕಾರ್ಡ್ ಪ್ರಕಾರ ಸೇರಿಸಲಾಗುತ್ತೆ. ತಪ್ಪುಗಳಿಗೆ ಅವಕಾಶ ಇರುವುದಿಲ್ಲ.
ಒಂದು ವೇಳೆ ಗೊತ್ತಿಲ್ಲದೇ ತಪ್ಪಾದ್ರೂ ಕೂಡ, ಹೊಸದಾಗಿ ಅರ್ಜಿ ಸಲ್ಲಿಸಿ ಪುನಃ ಹೊಸ ಪ್ರಮಾಣಪತ್ರ ಪಡೆಯಲು ಅವಕಾಶ ಇದೆ. ಈ ದಾಖಲೆ ಕೋರ್ಟ್‌ನಲ್ಲಿ ಮಾನ್ಯವಾಗುತ್ತಾ ಅನ್ನೋ ಪ್ರಶ್ನೆ ಸಹ ಇರುತ್ತೆ.
ಪ್ರಮುಖ ಪ್ರಶ್ನೆಗಳು: ಅರ್ಜಿ ತಿರಸ್ಕೃತವಾದರೆ ಏನು? ಇತರೆ ಡೌಟ್ಸ್!
ಕೆಲವೊಮ್ಮೆ ಎಲ್ಲಾ ದಾಖಲೆಗಳು ಸರಿಯಿದ್ದರೂ ಅರ್ಜಿ ತಿರಸ್ಕೃತವಾದರೆ ಏನು ಮಾಡೋದು ಅಂತ ಚಿಂತೆ ಆಗುತ್ತೆ. ಈಗ ಆನ್‌ಲೈನ್ ಮೂಲಕ ಎಲ್ಲವೂ ನಡೀತಿರೋದ್ರಿಂದ ಯಾರು ಒಪ್ಪಿಲ್ಲ ಅಂತ ಗೊತ್ತಾಗುತ್ತೆ.
ಉದಾಹರಣೆಗೆ ವಿಲೇಜ್ ಅಕೌಂಟೆಂಟ್ ಅಥವಾ ಕಂದಾಯ ನಿರೀಕ್ಷಕರು ಒಪ್ಪದಿದ್ದರೆ ಅಥವಾ ರಿಜೆಕ್ಟ್ ಮಾಡಿದ್ರೆ, ನೀವು ತಹಸೀಲ್ದಾರರಿಗೆ ಲಿಖಿತವಾಗಿ ಮೇಲ್ಮನವಿ ಸಲ್ಲಿಸಬಹುದು ಅಥವಾ ಆನ್‌ಲೈನ್ ಮೂಲಕವೇ ಮನವಿ ಮಾಡಬಹುದು.
ವಂಶಾವಳಿ ಪ್ರಮಾಣಪತ್ರ ಕುಟುಂಬದ ಗುರುತಿಗೆ ಮತ್ತು ಆಸ್ತಿ-ಪಾಸ್ತಿ, ಸರ್ಕಾರಿ ಕೆಲಸಗಳಿಗೆ ತುಂಬಾನೇ ಅವಶ್ಯಕ. 40 ರೂಪಾಯಿ ಶುಲ್ಕ ಪಾವತಿಸಿ, ಸರಿಯಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ 7 ದಿನದಲ್ಲಿ ಪಡೆಯಬಹುದು. ಯಾವುದೇ ಗೊಂದಲಗಳಿದ್ರೆ ಮೇಲ್ಮನವಿ ಹಾಕಬಹುದು.





