ಎಲ್ಲರಿಗೂ ನಮಸ್ಕಾರ, ಈ ಬಾರಿಯ RCB ನಾಯಕತ್ವವನ್ನ ಯಾರು ಪಡೆದುಕೊಳ್ಳುತ್ತಾರೆ ಯಾರಾಗ್ತಾರೆ RCB ಯ ಕ್ಯಾಪ್ಟೆನ್ ಅನ್ನೋ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗೋದು ಯಾವಾಗ ಅನ್ನೋ ಗೊಂದಲ ಸದ್ಯ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭಕ್ಕೆ ಇನ್ನು ಮೂರು ತಿಂಗಳು ಬಾಕಿ ಇದೆ.
ಇದಕ್ಕೂ ಮುನ್ನವೇ ಕೊಲ್ಕತ್ತಾ ನೈಟ್ ರೈಡರ್ಸ್ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಮುಂದಿನ ನಾಯಕ ಯಾರಾಗಲಿದ್ದಾರೆ ಅನ್ನೋ ಪ್ರಶ್ನೆಗಳು ಹರಿದಾಡುತ್ತಿವೆ ಅದರಲ್ಲೂ ಈ ಬಾರಿ ಅಳೆದು ತೂಗಿ ಬಲಿಷ್ಠ ತಂಡವನ್ನ ಕಟ್ಟಿರುವ ಆರ್ಸಿಬಿ ಚೊಚ್ಚಲ ಕಪ್ ಎತ್ತಿ ಹಿಡಿಯಬೇಕೆಂದು ಪಣ ತೊಟ್ಟಿದೆ.
ಆದರೆ ಮುಂಬರುವ ಋತುವಿನಲ್ಲಿ RCB ಯಾರಿಗೆ ನಾಯಕತ್ವದ ಜವಾಬ್ದಾರಿಯನ್ನ ನೀಡಲಿದೆ.
ಅನ್ನೋ ಪ್ರಶ್ನೆ ಅಭಿಮಾನಿಗಳಿಗೆ ಕಾಡ್ತಾ ಇದೆ.
ಕಳೆದ ವರ್ಷ ಫಾಪ್ ಡುಪ್ಲೆಸಿಸ್ ಆರ್ ಸಿಬಿ ನಾಯಕರಾಗಿದ್ದರು ಆದರೆ ಈ ವರ್ಷ ಅವರನ್ನ ತಂಡದಲ್ಲಿ ಉಳಿಸಿಕೊಂಡಿಲ್ಲ ಹೀಗಿರುವಾಗ ಆರ್ ಸಿಬಿ ಯಾವ ಆಟಗಾರನಿಗೆ ತಂಡದ ಕಮ್ಯಾಂಡ್ ನೀಡಬಹುದು ಎಂಬ ಕುತೂಹಲ ಕೆರಳಿದೆ.
ಇದನ್ನೂ ಓದಿ: ಹಾವೇರಿ ಜಿಲ್ಲೆಯಲ್ಲಿ ಜನರಿಗೆ ಅಕ್ಕಿ ಕೊಡುವಾಗ ಮಹಾಮೋಸ ಮಾಡಿದ್ದಾರೆ.!





