2024 ರಲ್ಲಿ ಯಾವ Stock ಮಾರುಕಟ್ಟೆ ಏರುತ್ತದೆ!! ಈ ಪೈಕಿ 13 ಕಂಪನಿಗಳಲ್ಲಿ ಹೂಡಿಕೆಯನ್ನ ಮಾಡಿ

November 14, 2024 2:33 AM
2024 ರಲ್ಲಿ ಯಾವ Stock ಮಾರುಕಟ್ಟೆ ಏರುತ್ತದೆ

ಎಲ್ಲರಿಗೂ ನಮಸ್ಕಾರ, ನಾವು ಈ ಪ್ರೈಮರಿ ಮಾರ್ಕೆಟ್ ಬಗ್ಗೆ ಒಂದಷ್ಟು ಡೀಟೇಲ್ ಆಗಿ ತಿಳಿದುಕೊಳ್ಳುವಂತಹ ಪ್ರಯತ್ನವನ್ನ ಮಾಡ್ತಾ ಹೋಗೋಣ ಹಣಕಾಸು ವರ್ಷ 2023 24 ರಲ್ಲಿ ಪ್ರಾಥಮಿಕ ಮಾರುಕಟ್ಟೆ ಮಹತ್ವದ ಕ್ರಮಕ್ಕೆ ಸಾಕ್ಷಿಯಾಗಿದೆ. ಇದು ಸರಿಸುಮಾರು ಸೆಕೆಂಡರಿ ಸ್ಟಾಕ್ ಮಾರ್ಕೆಟ್ ನಲ್ಲಿ ಏನಾಗ್ತಾ ಇದೆಯೋ ಅದೇ ರೀತಿನೇ ಇತ್ತು ಹಣಕಾಸು ವರ್ಷ 24 ರಲ್ಲಿ ಸುಮಾರು 76 ಕಂಪನಿಗಳು IPO ಮಾರ್ಕೆಟ್ ಮೂಲಕ ಸುಮಾರು 63,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿವೆ ಇದು ಕಳೆದ ಹಣಕಾಸು ವರ್ಷ 23 ಹೋಲಿಸಿದರೆ ಶೇಕಡ 21 ರಷ್ಟು ಹೆಚ್ಚಿದೆ ಆದರೆ ಹಣಕಾಸು ವರ್ಷ 25 ರಲ್ಲಿ IPO ಮಾರುಕಟ್ಟೆ ಸ್ಥಿತಿಗತಿ ಹೇಗಿರುತ್ತೆ.

ಈ ಹಣಕಾಸು ವರ್ಷದಲ್ಲಿ ಎಷ್ಟು ಕಂಪನಿಗಳು IPO ಗಳಿಂದ ಸಮರ್ಥವಾಗಿ ಮೇಲೆ ಬರೋಕೆ ಸಾಧ್ಯ ಇದೆ ನೋಡಿ ಐಪಿಓ ಮೂಲಕ ಎಷ್ಟು ಹಣವನ್ನು ಸಂಗ್ರಹಿಸುವುದಕ್ಕೆ ಕಂಪನಿಗಳು ಎದುರು ನೋಡ್ತಾ ಇವೆ. ಪ್ರೈಮರಿ ಮಾರ್ಕೆಟ್ ನಲ್ಲಿ ನಿಮ್ಮ ಸ್ಟ್ರಾಟಜಿ ಹೇಗಿರಬೇಕು ಇದೆಲ್ಲವನ್ನು ಕೂಡ ನಾವೀಗ ಅರ್ಥಮಾಡಿಕೊಳ್ಳುತ್ತಾ ಹೋಗೋಣ.

ಭಾರತದ ಆರ್ಥಿಕತೆ ಶೇಕಡಾ ಏಳಕ್ಕಿಂತ ಹೆಚ್ಚಿನ ದರದಲ್ಲಿ ಬೆಳವಣಿಗೆ

ಕಾರ್ಪೊರೇಟ್ ಭಾರತಕ್ಕೆ ಪ್ರತಿವರ್ಷ ಸುಮಾರು ಹೀಗೆ 2.5 ಲಕ್ಷ ಕೋಟಿ ರೂಪಾಯಿಯಷ್ಟು Equity ಕ್ಯಾಪಿಟಲ್ ಬೇಕಾಗುತ್ತೆ. ಇವೆರಡು ಅಂಶಗಳನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಕಾರ್ಪೊರೇಟ್ ಭಾರತ IPO ವಿಧಾನದಲ್ಲಿ ಹಣಕಾಸು ವರ್ಷ 25 ರಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಬಹುದು.

ಕಂಪನಿಗಳು ಪ್ರಾಥಮಿಕ ಮಾರುಕಟ್ಟೆಯಿಂದ ಹಣ ಸಂಗ್ರಹಿಸುವುದಕ್ಕೆ ಕಾತರದಿಂದ ಕಾಯ್ತಾ ಇವೆ ಅನ್ನೋದು ಫಂಡ್ ರೈಸಿಂಗ್ ಓಡ್ತಾ ಇರೋ ವೇಗವನ್ನು ಸೂಚಿಸುತ್ತೆ ಅನ್ನೋದು ಇನ್ವೆಸ್ಟ್ಮೆಂಟ್ ಬ್ಯಾಂಕರ್ ಅಭಿಪ್ರಾಯ ಒಟ್ಟು 56 ಕಂಪನಿಗಳು ಸುಮಾರು 70,000 ಕೋಟಿ ರೂಪಾಯಿ ಸಂಗ್ರಹಿಸುವುದಕ್ಕೆ ಮಾರುಕಟ್ಟೆ ನಿಯಂತ್ರಕ ಸೇವೆಗೆ ಅರ್ಜಿಯನ್ನ ಸಲ್ಲಿಸಿವೆ ಈ ಪೈಕಿ 19 ಕಂಪನಿಗಳಿಗೆ 25,000 ಕೋಟಿ ರೂಪಾಯಿ ಸಂಗ್ರಹಿಸೋಕೆ ಸೇವೆಯಿಂದ ಈಗಾಗಲೇ ಅನುಮತಿ ಕೂಡ ಸಿಕ್ಕಿದೆ ಈ ಮಧ್ಯೆ 37 ಹೆಚ್ಚುವರಿ ಕಂಪನಿಗಳು ಕೂಡ 45,000 ಕೋಟಿ ರೂಪಾಯಿ ಸಂಗ್ರಹಕ್ಕೆ ಸೇವೆಯ ಅನುಮೋದನೆಗೆ ಕಾಯ್ತಾ ಇವೆ ಈ 56 ಕಂಪನಿಗಳ ಪೈಕಿ 9 ಕಂಪನಿಗಳು ತಂತ್ರಜ್ಞಾನ ಆಧಾರಿತ ಸಂಸ್ಥೆಗಳಾಗಿದ್ದು ಒಟ್ಟಾರೆಯಾಗಿ 21,000 ಕೋಟಿ ರೂಪಾಯಿ ಸಂಗ್ರಹಿಸೋಕೆ ಎದುರು ನೋಡ್ತಾ ಇವೆ.

ಈ ಕಂಪನಿಗಳ ಪೈಕಿ ಚಿರಪರಿಚಿತ ಸಂಸ್ಥೆ

ಸ್ವಿಗ್ಗಿ, OLA ಎಲೆಕ್ಟ್ರಿಕ್ ಟಾಟಾ ಪ್ಲೇ ಮತ್ತು ಗೋ ಡಿಜಿಟ್ ಜನರಲ್ ಇನ್ಸೂರೆನ್ಸ್ ಕೂಡ ಸೇರಿದೆ ಹಣಕಾಸು ವರ್ಷ 24 ರಲ್ಲಿ ಒಟ್ಟು 76 IPO ಗಳ ಪೈಕಿ ಶೇಕಡ 70 ಕ್ಕಿಂತ ಹೆಚ್ಚು ಅಂದ್ರೆ ಸುಮಾರು 55 ಕಂಪನಿಗಳ ಶೇರುಗಳು ಸೆಕೆಂಡರಿ ಮಾರ್ಕೆಟ್ ನಲ್ಲಿ ಅಂದ್ರೆ ಶೇರು ಮಾರುಕಟ್ಟೆಯಲ್ಲಿ ತಮ್ಮ ತಮ್ಮ ಇಶ್ಯೂ ಪ್ರೈಸ್ ಗಿಂತ ಹೆಚ್ಚಿನ ದರದಲ್ಲಿ ವಹಿವಾಟನ್ನ ನಡೆಸಿವೆ ಈ ಪೈಕಿ 13 ಕಂಪನಿಗಳಲ್ಲಿ ಹೂಡಿಕೆಯನ್ನ ಮಾಡಿ ಹೂಡಿಕೆದಾರರು ತಮ್ಮ ಹಣವನ್ನು ದ್ವಿಗುಣಗೊಳಿಸಿಕೊಂಡಿದ್ದಾರೆ.

IPO ಗಳ ಉತ್ತಮವಾದ ಪರ್ಫಾರ್ಮೆನ್ಸ್ ನ ಹಿಂದೆ ಹಲವಾರು ಕಾರಣಗಳು ಕೂಡ ಇವೆ ಮೊದಲನೆಯದಾಗಿ ಶೇರು ಮಾರುಕಟ್ಟೆಯಲ್ಲಿ ಆ ರೀತಿಯಾದ ವೇಗ ಇತ್ತು ಎರಡನೆಯದಾಗಿ ಚಿಲ್ಲರೆ ಹೂಡಿಕೆದಾರರು ಐಪಿಓ ಗಳಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ ಇನ್ನು ಮೂರನೆಯದಾಗಿ ಸಾಂಸ್ತಿಕ ಹೂಡಿಕೆದಾರರಿಂದ ದೃಢವಾದ ಖರೀದಿ ವ್ಯಕ್ತವಾಗಿದೆ ಸದೃಢವಾದ ಆರ್ಥಿಕ ಪ್ರಗತಿಯ ಕಾರಣದಿಂದಾಗಿ ಐಪಿಓ ಮಾರುಕಟ್ಟೆ ಕ್ರಿಯಾಶೀಲವಾಗಿದೆ ಅನ್ನೋದು ಕೂಡ ವಿಶ್ಲೇಷಕರ ಅಭಿಪ್ರಾಯ ಇದಲ್ಲದೆ ಅನೇಕ ಹೊಸ ಹೊಸ ಕಂಪನಿಗಳು ಕೂಡ ಮಾರುಕಟ್ಟೆ ಪ್ರವೇಶ ಮಾಡಿದ್ದು ತಮ್ಮ ಅದೃಷ್ಟ ಪರೀಕ್ಷೆಯನ್ನ ಮಾಡ್ತಾ ಇವೆ ಹೀಗೆ ಮಾರುಕಟ್ಟೆಗೆ ಹಣಕಾಸು ವರ್ಷ 25 ಉತ್ತಮವಾದ ವರ್ಷ ಕೂಡ ಆಗಬಹುದಾಗಿದೆ.

ಪ್ರಾಥಮಿಕ ಮಾರುಕಟ್ಟೆಯಲ್ಲಿ ಸ್ಥಳೀಯ ಫಂಡ್ಗಳ ಲಭ್ಯತೆ ಹೆಚ್ಚಳ ಕಾರ್ಪೊರೇಟ್ ಗವರ್ನೆನ್ಸ್ ಸಂಬಂಧವಾಗಿ ತೆಗೆದುಕೊಂಡಿರುವ ಕ್ರಮಗಳು ಮತ್ತು ಸರ್ಕಾರದಿಂದ ಜಾರಿಯಾಗಿರುವಂತಹ ಅನುಕೂಲಕರ ನೀತಿ ನಿರೂಪಣೆಗಳಿಂದ ಈ ಉತ್ತಮವಾದ ಪರ್ಫಾರ್ಮೆನ್ಸ್ ಸಾಧ್ಯ ಆಗಿದೆ ಇದಕ್ಕಿಂತ ಮಿಗಿಲಾಗಿ ದೇಶದಲ್ಲಿ ಹಣಕಾಸು ಸಾಕ್ಷರತೆಯ ಹೆಚ್ಚಳ ಮತ್ತು ಸಾಂಸ್ತಿಕ ಹೂಡಿಕೆದಾರರ ಬದ್ಧತೆಯಿಂದಾಗಿ ಸಕಾರಾತ್ಮಕವಾದ ವ್ಯತ್ಯಾಸವನ್ನ ಗಮನಿಸಬಹುದಾಗಿದೆ ಹೀಗೆ ವಿದೇಶಿ ಮಾರುಕಟ್ಟೆಯಿಂದ ಯಾವುದೇ ನಕಾರಾತ್ಮಕವಾದ ಸುದ್ದಿ ಇಲ್ಲ ಅಥವಾ ಭೌಗೋಳಿಕ ರಾಜಕೀಯ ಸಂಘರ್ಷಗಳು ಹೆಚ್ಚಾಗಲಿಲ್ಲ ಅಂತಾದ್ರೆ ಈ ವರ್ಷ ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಬಹುದು ಶೇರು ಮಾರುಕಟ್ಟೆಯ ತಜ್ಞ ಅರುಣ್ ಕೇಜರಿವಾಲ್ ಅವರ ಮಾತುಗಳ ಪ್ರಕಾರ ಹಣದ ಹರಿವು ಮಾರುಕಟ್ಟೆಯ ಸೆಳೆತ ಒಂದು ಐಪಿಓ ದಿಂದ ಇನ್ನೊಂದರ ನಡುವಿನ ಅಂತರ ಇವುಗಳು ಜನರ ಪ್ರಾಥಮಿಕ ಮಾರುಕಟ್ಟೆಯಿಂದ ಹಣ ಗಳಿಸೋಕೆ ನೆರವಾಗಿವೆ ಅಂತ ಅವರು ಹೇಳ್ತಾರೆ.

ಇನ್ನು ಪ್ರತಿಯೊಬ್ಬರ ಮನಸ್ಸಿನಲ್ಲಿ ಇರುವ ಮತ್ತೊಂದು ಪ್ರಮುಖವಾದ ಪ್ರಶ್ನೆ:

ಹಣಕಾಸು ವರ್ಷ 25 ರಲ್ಲಿ ಹೂಡಿಕೆದಾರರು ಪ್ರಾಥಮಿಕವಾದ ಮಾರುಕಟ್ಟೆಯಲ್ಲಿ ಯಾವ ಸ್ಟ್ರಾಟಜಿಯನ್ನ ಅನುಸರಿಸಬೇಕು ಅನ್ನೋದು ಹಣಕಾಸು ವರ್ಷ 24ರ ಆರಂಭಿಕ ತಿಂಗಳುಗಳಲ್ಲಿ ಜನ ಐಪಿಓ ದಿಂದ ಹಣ ಗಳಿಸೋಕೆ ಸಾಧ್ಯ ಆಯ್ತು ಯಾಕೆಂದರೆ ವ್ಯಾಲ್ಯುವೇಷನ್ ಉತ್ತಮವಾಗಿತ್ತು.

ಆದರೆ ಕಳೆದ ಎರಡುವರೆ ತಿಂಗಳಲ್ಲಿ ದುಬಾರಿ ಉತ್ತಮ ಪರ್ಫಾರ್ಮೆನ್ಸ್ ಇಲ್ಲ ಅನ್ನೋ ವಿಚಾರಗಳು ಕೂಡ ಮುನ್ನೆಲೆಗೆ ಬಂದಿವೆ ಅಂತ ಅರುಣ್ ಕೇಜರಿವಾಲ್ ಹೇಳ್ತಾರೆ ಅದೇ ರೀತಿ ಹಣಕಾಸು ವರ್ಷ 25 ರಲ್ಲೂ ಕೂಡ ವ್ಯಾಲ್ಯುವೇಷನ್ ಉತ್ತಮವಾಗಿದ್ದರೆ IPO ಗಳು ಚೆನ್ನಾಗಿ ಪರ್ಫಾರ್ಮ್ ಮಾಡುತ್ತೆ ಆಗ ಜನ ಹಣವನ್ನು ಮಾಡಬಹುದು ola ಎಲೆಕ್ಟ್ರಿಕ್ ಸ್ವಿಗ್ಗಿ ಮತ್ತು ಟಾಟಾ ಪ್ಲೇನ್ ನಲ್ಲಿ ಹೂಡಿಕೆ ಆಸಕ್ತಿದಾಯಕವಾಗಿರುತ್ತೆ.

ಆದರೆ ಇವುಗಳ ವ್ಯಾಲ್ಯೂಷನ್ ಚೆನ್ನಾಗಿರಬೇಕು ಅಷ್ಟೇ ಒಟ್ಟಾರೆಯಾಗಿ ಹಣಕಾಸು ವರ್ಷ 25 ರಲ್ಲಿ ಪ್ರಾಥಮಿಕ ಮಾರುಕಟ್ಟೆಯಲ್ಲಿ ಹಣಕಾಸು ವರ್ಷ 24 ಮಹತ್ವದ ಕ್ರಿಯೆಗಳು ನಡೆಯಬಹುದಾದ ಸಾಧ್ಯತೆ ಇದೆ ಇದು ನವೀನ ಕಂಪನಿಗಳಲ್ಲಿ ಹೂಡಿಕೆಗೆ ಹೊಸ ಅವಕಾಶವನ್ನು ಕೊಡಲಿದೆ ಆದರೆ ಈ ಕಂಪನಿಗಳಲ್ಲಿನ ಹೂಡಿಕೆ ನಿರ್ಧಾರ ವ್ಯಾಲ್ಯೂಷನ್ ಮತ್ತು ಫಂಡಮೆಂಟಲ್ಸ್ ಅಂದ್ರೆ ಮೌಲ್ಯಮಾಪನ ಮತ್ತು ಮೂಲಭೂತ ತತ್ವಗಳನ್ನ ಆಧರಿಸಿರಬೇಕು.

ಇದನ್ನೂ ಓದಿ: Will Probate ಅಂದ್ರೇನು 2024?

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment