Tax ಯಾವ ರೀತಿ Save ಮಾಡುವುದು ಎಂಬ Tips ಇಲ್ಲಿದೆ!!

November 12, 2024 3:12 AM
Tax ಯಾವ ರೀತಿ Save ಮಾಡುವುದು ಎಂಬ Tips ಇಲ್ಲಿದೆ!!

ಎಲ್ಲರಿಗೂ ನಮಸ್ಕಾರ, ಬಹುತೇಕ ಜನರು ಅದರಲ್ಲೂ ನೌಕರರು ತಮ್ಮ ಒಂದುವರೆ ಲಕ್ಷ ರೂಪಾಯಿ ಇರುವ ATC ಡಿಡಕ್ಷನ್ ಲಿಮಿಟ್ ಅನ್ನ ಇಪಿಎಫ್ ಮಕ್ಕಳ ಟ್ಯೂಷನ್ ಫೀ ಮತ್ತು ಲೈಫ್ ಇನ್ಸೂರೆನ್ಸ್ ನಿಂದಲೇ ತುಂಬಿಕೊಂಡಿರುತ್ತಾರೆ ಇಂತಹ ಸಂದರ್ಭದಲ್ಲಿ ತೆರಿಗೆ ಉಳಿಸುವುದು ಹೇಗೆ ಇದಕ್ಕೆ ಚಿಂತೆ ಮಾಡುವ ಅಗತ್ಯವಿಲ್ಲ ಯಾಕೆಂದರೆ ಎಟಿಸಿ ಹೊರತಾಗಿಯೂ ತೆರಿಗೆ ಉಳಿಸುವುದಕ್ಕೆ ಇತರ ಆಯ್ಕೆಗಳಿವೆ ಅವು ಯಾವುವು? ಎಂದು ಒಂದೊಂದಾಗಿ ನೋಡೋಣ

1. ನ್ಯಾಷನಲ್ ಪೆನ್ಶನ್ ಸಿಸ್ಟಮ್

ATC ಬಿಟ್ಟು ತೆರಿಗೆಯನ್ನು ಉಳಿಸುವುದಕ್ಕೆ ಇರುವ ಮೊದಲ ಆಯ್ಕೆ ನ್ಯಾಷನಲ್ ಪೆನ್ಶನ್ ಸಿಸ್ಟಮ್ ಅಥವಾ ಎನ್ ಪಿಎಸ್ ಸಿಸ್ಟಮ್ 15 ಲಕ್ಷ ರೂಪಾಯಿ ಎಟಿಸಿ ಲಿಮಿಟ್ ಮುಗಿದ ಮೇಲೆ 80 ಸಿಸಿಡಿ 1/B ಇದು ನಮ್ಮ ನೆರವಿಗೆ ಬರುತ್ತೆ ಎನ್ ಪಿಎಸ್ ಟೈಯರ್ ಒನ್ ಅಕೌಂಟ್ ನಲ್ಲಿ ಮಾಡಿದ ಹೂಡಿಕೆಗೆ ಸೆಕ್ಷನ್ 80 ಸಿಸಿಡಿ 1/B ಅಡಿಯಲ್ಲಿ ಹೆಚ್ಚುವರಿ 50000 ಡಿಡಕ್ಷನ್ ಸಿಗುತ್ತೆ ಇದು ಎಟಿಸಿ ಯಲ್ಲಿ ನಮಗೆ ಸಿಗುವ 15 ಲಕ್ಷ ರೂಪಾಯಿ ಲಿಮಿಟ್ ಗೆ ಹೆಚ್ಚುವರಿಯಾಗಿ ಇರುತ್ತೆ.

2. Health Insurance

ಚಿಕಿತ್ಸೆ ವೆಚ್ಚ ಹೆಚ್ಚಳವಾಗುತ್ತಿರುವ ಸಮಯದಲ್ಲಿ ಹೆಲ್ತ್ ಇನ್ಸೂರೆನ್ಸ್ ಎಂಬುದು ಕಡ್ಡಾಯ ಹೆಲ್ತ್ ಇನ್ಸೂರೆನ್ಸ್ ನ ಒಂದು ಹೆಚ್ಚುವರಿ ಪ್ರಯೋಜನವೆಂದರೆ ಅದರಲ್ಲಿ ತೆರಿಗೆ ಉಳಿತಾಯವು ಕೂಡ ಆಗುತ್ತೆ ಸೆಕ್ಷನ್ 80 ಡಿ ಅಡಿಯಲ್ಲಿ ನೀವು ಬಾಳ ಸಂಗಾತಿ ಮತ್ತು ಮಕ್ಕಳಿಗೆ ಆರೋಗ್ಯ ವಿಮೆ ಪ್ರೀಮಿಯಂ ಮೇಲೆ 25,000 ವರೆಗೆ ಡಿಡಕ್ಷನ್ ಇರುತ್ತೆ.

60 ಹಾಗೂ ಹೆಚ್ಚು ವರ್ಷದ ಹಿರಿಯ ನಾಗರಿಕರಿಗೆ ಡಿಡಕ್ಷನ್ ಸಮಿತಿ 50,000 ಇದೆ.

ನಿಮಗೆ ಮತ್ತು ಹಿರಿಯ ನಾಗರಿಕರಾಗಿರುವ ಪಾಲಕರಿಗೆ ನೀವು ಹೆಲ್ತ್ ಇನ್ಸೂರೆನ್ಸ್ ಖರೀದಿ ಮಾಡಿದರೆ 75,000 ವರೆಗೆ ಡಿಡಕ್ಷನ್ ಕ್ಲೇಮ್ ಮಾಡುವುದಕ್ಕೆ ಅರ್ಹತೆ ಇರುತ್ತೆ.

3. Home Loan

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 ರ ಅಡಿಯಲ್ಲಿ ಮನೆ ಖರೀದಿ ಅಥವಾ ನಿರ್ಮಾಣಕ್ಕೆ ತೆಗೆದುಕೊಂಡ ಹೋಂ ಲೋನ್ ಮೇಲು ತೆರಿಗೆಯ ವಿನಾಯತಿ ಇದೆ. ಸ್ವಂತಕ್ಕೆ ಪ್ರಾಪರ್ಟಿ ಖರೀದಿ ಮಾಡಿದರೆ ಹೋಂ ಲೋನ್ ಮೇಲೆ ಕಟ್ಟಿದ ಬಡ್ಡಿಗೆ 2 ಲಕ್ಷ ರೂಪಾಯಿ ವರೆಗೆ ಡಿಡಕ್ಷನ್ ಸಿಗುತ್ತೆ ಇನ್ನೊಂದು ಕಡೆಗೆ ಸಾಲದ ಮೂಲಕ ಮನೆ ಖರೀದಿ ಮಾಡಿದ್ದು ಅದನ್ನ ಬಾಡಿಗೆಗೆ ನೀಡಿದರೆ ಇಡೀ ಬಡ್ಡಿ ಮತ್ತು ಮೇಲೆ ಡಿಡಕ್ಷನ್ ಕ್ಲೇಮ್ ಮಾಡಬಹುದು. ಹೋಂ ಲೋನ್ ನ ಅಸಲು ಮರುಪಾವತಿ ಮಾಡಿದಾಗ ಸೆಕ್ಷನ್ 80c ಅಡಿಯಲ್ಲಿ ಡಿಡಕ್ಷನ್ ಮಾಡಬಹುದು. 

4. Education Loan

ಉನ್ನತ ಶಿಕ್ಷಣಕ್ಕೆ ಸಾಲ ಪಡೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ ಎಜುಕೇಶನ್ ಲೋನ್ ತೆಗೆದುಕೊಂಡ ವಿದ್ಯಾರ್ಥಿಗಳು ಸೆಕ್ಷನ್ 80 ಈ ಅಡಿಯಲ್ಲಿ ಸಾಲದ ಮೇಲಿನ ಬಡ್ಡಿಗೆ ತೆರಿಗೆ ಡಿಡಕ್ಷನ್ ಪಡೆಯಬಹುದು ಸಾಲವನ್ನು ಮರುಪಾವತಿ ಮಾಡ್ತಾ ಇರುವ ಮಗು ಅಥವಾ ಪಾಲಕರು ಇದರ ಪ್ರಯೋಜನವನ್ನ ಕ್ಲೇಮ್ ಮಾಡಬಹುದು ಎಜುಕೇಶನ್ ಲೋನ್ ಆರಂಭ ಆಗುವ ವರ್ಷದಿಂದ ಡಿಡಕ್ಷನ್ ಅನ್ನ ಕ್ಲೇಮ್ ಮಾಡಬಹುದು.

ನೀವು ಸಾಲ ರಿಪೇ ಮಾಡುವಷ್ಟು ವರ್ಷಗಳವರೆಗೂ ಡಿಡಕ್ಷನ್ ಕ್ಲೇಮ್ ಮಾಡಬಹುದು ಆದರೆ ಡಿಡಕ್ಷನ್ ಪ್ರಯೋಜನವನ್ನ ಗರಿಷ್ಠ 7 ವರ್ಷಗಳವರೆಗೆ ಮಾತ್ರ ಪಡೆಯಬಹುದು.

ಉದಾಹರಣೆಗೆ: 10 ವರ್ಷಗಳಿಗೆ ಶಿಕ್ಷಣ ಸಾಲವನ್ನ ರಿಪೇ ಮಾಡಿದರೆ 7 ವರ್ಷಗಳವರೆಗೆ ಮಾತ್ರ ಈ ಪ್ರಯೋಜನವನ್ನ ಪಡೆಯಬಹುದು ಬಡ್ಡಿ ಪಾವತಿ ಮಾಡುವುದಕ್ಕೆ ಡಿಡಕ್ಷನ್ ಕ್ಲೇಮ್ ಮಾಡುವುದರ ಮೇಲೆ ಯಾವುದೇ ಮಿತಿ ಇಲ್ಲ ದಾನ ಮಾಡಿದಾಗ ನಿಮಗೆ ಪುಣ್ಯದ ಜೊತೆಗೆ ತೆರಿಗೆಯು ಕೂಡ ಉಳಿತಾಯ ಆಗುತ್ತೆ. ಆಯುಧ ರಿಲೀಫ್ ಫಂಡ್ ಗಳು ಅಥವಾ ದತ್ತಿ ಸಂಸ್ಥೆಗಳಿಗೆ ದಾನ ಮಾಡಿ.

ಉದಾಹರಣೆಗೆ: ಪ್ರೈಮ್ ಮಿನಿಸ್ಟರ್ ನ್ಯಾಷನಲ್ ರಿಲೀಫ್, ಫಂಡ್ ನ್ಯಾಷನಲ್ ಡಿಫೆನ್ಸ್ ಫಂಡ್ ಗೆ ಹಣವನ್ನು ಕೊಟ್ಟರೆ ಸೆಕ್ಷನ್ 80 ಜಿ ಅಡಿಯಲ್ಲಿ ನೀವು ಡಿಡಕ್ಷನ್ ಕ್ಲೇಮ್ ಮಾಡಬಹುದು. ನೀವು ಯಾವ ಸಂಸ್ಥೆಗೆ ದಾನ ನೀಡುತ್ತಿರೋ ಡೊನೇಷನ್ ಮೊತ್ತದ 50 ಅಥವಾ 100% ಡಿಡಕ್ಷನ್ ಅನ್ನ ನೀವು ಕ್ಲೇಮ್ ಮಾಡಬಹುದು.

ನಗದು ರೂಪದಲ್ಲಿ 2000ಕ್ಕಿಂತ ಹೆಚ್ಚು ದಾನ ಮಾಡಿದರೆ ಆಗ ಅದು ತೆರಿಗೆಯ ಡಿಡಕ್ಷನ್ ಗೆ ಹರವಾಗುವುದಿಲ್ಲ ಸರಕುಗಳ ರೂಪದಲ್ಲಿ ಮಾಡಿದ ಡೊನೇಷನ್ ಗಳು ಟ್ಯಾಕ್ಸ್ ಡಿಡಕ್ಷನ್ ಗೆ ಹರವಾಗಿರುವುದಿಲ್ಲ ತೆರಿಗೆ ಡಿಡಕ್ಷನ್ ಪ್ರಯೋಜನ ಪಡೆದುಕೊಳ್ಳುವುದು ತೆರಿಗೆದಾರರು ಕೆಲವು ಶರತ್ತುಗಳನ್ನು ಪೂರೈಸಬೇಕಾಗುತ್ತೆ. 

ಈ ಶರತ್ತುಗಳು ಯಾವುವು ಎಂಬುದನ್ನ ನೋಡೋಣ 

ಅವಲಂಬಿತ ಅಂಗವಿಕಲ ವ್ಯಕ್ತಿಯ ಚಿಕಿತ್ಸೆಗೆ ನೀವು ಖರ್ಚು ಮಾಡಿದರೆ ಸೆಕ್ಷನ್ 80 ಡಿ ಅಡಿಯಲ್ಲಿ ತೆರಿಗೆ ಡಿಡಕ್ಷನ್ ಕ್ಲೇಮ್ ಮಾಡಬಹುದು. ಅವಲಂಬಿತರು 40% ಅಥವಾ ಹೆಚ್ಚು ಅಂಗವಿಕಲರಾಗಿದ್ದರೆ. ವೈದ್ಯಕೀಯ ವೆಚ್ಚಗಳಿಗೆ ಮಾಡಿದ 75,000 ವರೆಗೆ ಡಿಡಕ್ಷನ್ ಮಾಡಬಹುದು.

80% ಅಥವಾ ಹೆಚ್ಚು ಡಿಸೆಬಿಲಿಟಿ ಇದ್ದರೆ 1,25,000 ವರೆಗೆ ಡಿಡಕ್ಷನ್ ಕ್ಲೇಮ್ ಮಾಡಬಹುದು.

ಆಟಿಸಂ, ಸೆರೆಬ್ರಲ್ ಪಾಲಿಸಿ, ಬ್ಲೈಂಡ್ನೆಸ್, ದೃಷ್ಟಿ ದೋಷ, ಶ್ರವಣ ದೋಷ ಕೂಡ ಇದರಲ್ಲಿ ಕವರ್ ಆಗುತ್ತೆ.

ವೈದ್ಯಕೀಯ ಸಂಸ್ಥೆಯಿಂದ ಡಿಸೆಬಿಲಿಟಿ ಸರ್ಟಿಫಿಕೇಟ್ ಇದ್ರೆ ಕ್ಲೇಮ್ ಮಾಡೋದಕ್ಕೆ ಸಾಲುತ್ತೆ ನಿಮ್ಮ ಅವಲಂಬಿತರು ಯಾವುದಾದರೂ ಗಂಭೀರವಾದ ಕಾಯಿಲೆಯಿಂದ ಬಳಲುತ್ತಾ ಇದ್ರೆ ಅಂದ್ರೆ ಕ್ಯಾನ್ಸರ್, ಡಿಮೆನ್ಸಿಯಾ, ಪಾರ್ಕಿನ್ಸನ್ಸ್ ಮೋಟಾರ್ ನ್ಯೂರಾನ್ ರೋಗದಿಂದ ಬಳಲುತ್ತಾ ಇದ್ದರೆ ಸೆಕ್ಷನ್ 80 ಡಿಬಿ ಅಡಿಯಲ್ಲಿ ತೆರಿಗೆಯ ರಿಯಾಯಿತಿಯನ್ನ ಪಡೆಯಬಹುದು. 60 ವರ್ಷಗಳಿಗಿಂತ ಹೆಚ್ಚಿನ ವಯಸ್ಸಿನವರಿಗೆ ಡಿಡಕ್ಷನ್ ಲಿಮಿಟ್ 40,000 ಅಥವಾ ಚಿಕಿತ್ಸೆಗೆ ಎಷ್ಟು ಖರ್ಚು ಮಾಡಿದ್ದೀರೋ ಆ ಮೊತ್ತ ಆಗಿರುತ್ತೆ.

ಇನ್ನು ಅತಿ ಹಿರಿಯ ನಾಗರಿಕರಿಗೆ ಒಂದು ಲಕ್ಷ ರೂಪಾಯಿ ವರೆಗೆ ಡಿಡಕ್ಷನ್ ಲಿಮಿಟ್ ಇದೆ.

ಬಾಡಿಗೆ ಮನೆಯಲ್ಲಿರುವ ನೌಕರರು ಹೌಸ್ ರೆಂಟ್ ಅಲೋವೆನ್ಸ್ ಅಂದ್ರೆ ಹೆಚ್ ಆರ್ ಎ ಅಡಿಯಲ್ಲಿ ತೆರಿಗೆ ರಿಯಾಯಿತಿಯ ಕ್ಲೇಮ್ ಮಾಡಬಹುದು. ಕಂಪನಿಯಿಂದ ಹೆಚ್ ಆರ್ ಎ ಬರಬೇಕು ಮತ್ತು ಬಾಡಿಗೆ ಮನೆ ಸ್ವಂತದ್ದಾಗಿರಬಾರದು ಹೆಚ್ ಆರ್ ಎ ಕ್ಲೇಮ್ ಮಾಡೋದಕ್ಕೆ ಕೆಲವು ಶರತ್ತುಗಳಿವೆ ಮೊದಲು ಹೆಚ್ ಆರ್ ಎಂಬುದಾಗಿ ಸ್ವೀಕರಿಸಿದ ಅಸಲು ಮೊತ್ತ ಎರಡನೆಯದು ಮೆಟ್ರೋ ನಗರಗಳಲ್ಲಿ 50% ಬೇಸಿಕ್ ಸಂಬಳ ಡಿಎ ಹಾಗೂ ಮೆಟ್ರೋ ಹೊರತಾದ ನಗರಗಳಲ್ಲಿ ಬೇಸಿಕ್ ಸಂಬಳ ಮತ್ತು ಡಿಎ ಯ 40% ಇನ್ನು ಮೂರನೆಯದು ವಾರ್ಷಿಕ ಬೇಸಿಕ್ ಸಂಬಳ ಹಾಗೂ ಡಿಎ ಇಂದ ವಾರ್ಷಿಕ ಬಾಡಿಗೆಯ 10% ಕಡಿತದ ನಂತರ ಉಳಿದ ಮೊತ್ತ.

ಈ ಮೂರು ಮೊತ್ತಗಳ ಪೈಕಿ ಅತಿ ಕಡಿಮೆಯ ಮೊತ್ತ ಡಿಡಕ್ಷನ್ ಆಗುತ್ತೆ ಸಣ್ಣ ಸಂಸ್ಥೆಯಲ್ಲಿ ಕೆಲಸ ಮಾಡುವಂತಹ ಅಸಂಘಟಿತ ವಲಯದಲ್ಲಿ ನೌಕರರಾಗಿರುವವರು ಅಥವಾ ಸ್ವಯಂ ಉದ್ಯೋಗದಲ್ಲಿದ್ದು ಎಚ್ ಆರ್ ಎ ಪಡೆಯದಿರುವವರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಜಿ ಅಡಿಯಲ್ಲಿ ಒಂದು ಹಣಕಾಸು ವರ್ಷದಲ್ಲಿ ಬಾಡಿಗೆ ಮೇಲೆ 60000 ದವರೆಗೆ ಗರಿಷ್ಠ ಡಿಡಕ್ಷನ್ ಅನ್ನ ಕ್ಲೇಮ್ ಮಾಡಬಹುದು ದಿನೇಶ್ ರೀತಿಯಲ್ಲಿ ನಿಮ್ಮ 80 ಸಿ ಲಿಮಿಟ್ ಕೂಡ ಮುಗಿದಿದ್ರೆ ನಿಮ್ಮ ತೆರಿಗೆ ಹೊಣೆಗಾರಿಕೆಯನ್ನ ಕಡಿಮೆ ಮಾಡಿಕೊಂಡು ಈ ಡಿಡಕ್ಷನ್ ಗಳ ಅನುಕೂಲವನ್ನ ಪಡೆದುಕೊಂಡು ಹಣ ಉಳಿತಾಯ ಮಾಡಬಹುದು.

ಹಳೆಯ ತೆರಿಗೆ ವ್ಯವಸ್ಥೆಯನ್ನ ಆಯ್ಕೆ ಮಾಡಿಕೊಳ್ಳುವ ತೆರಿಗೆದಾರರು ಈ ಡಿಡಕ್ಷನ್ ಗಳನ್ನ ಪಡೆಯಬಹುದು 2023 24 ವಿತ್ತ ವರ್ಷಕ್ಕೆ ತೆರಿಗೆ ಉಳಿತಾಯ ಹೂಡಿಕೆಗಳನ್ನ ಮಾಡೋದಕ್ಕೆ 2024 ಮಾರ್ಚ್ 31 ರವರೆಗೆ ಸಮಯ ಇದೆ ಇನ್ನು ತಡಮಾಡದೆ ಸೆಕ್ಷನ್ 80d 80 ಜಿ ಅನುಕೂಲಗಳನ್ನ ಪಡೆದುಕೊಳ್ಳಿ ಹೊಸ ಹಣಕಾಸು ವರ್ಷ 2024-25ರ ತೆರಿಗೆ ಯೋಜನೆಯಲ್ಲೂ ಕೂಡ ನೀವು ಇದನ್ನ ಸೇರಿಸಿಕೊಳ್ಳಬಹುದು.

ಇದನ್ನೂ ಓದಿ: Top 6 News: HDFC ಉದ್ಯೋಗಿಗಳಿಗೆ ಕೇವಲ 30 ದಿನ ನೋಟಿಸ್!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment