Ration Card: BPL ಕಾರ್ಡ್ ಹಿಂತಿರುಗಿಸಲು ಕಾಲಾವಕಾಶ.! ಇಲ್ಲಿದೆ ಮಾಹಿತಿ 

January 11, 2025 6:25 AM
Ration Card: BPL ಕಾರ್ಡ್ ಹಿಂತಿರುಗಿಸಲು ಕಾಲಾವಕಾಶ.! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ. ಸ್ನೇಹಿತರೆ ರೇಷನ್ ಕಾರ್ಡ್ ಹೊಂದಿರುವವರಿಗೆ ರೇಷನ್ ಕಾರ್ಡ್ ಸಂಬಂಧವಾಗಿ ವಿಶೇಷವಾದ ಅಪ್ಡೇಟ್ಗಳು ಬಂದಿದೆ. ಕರ್ನಾಟಕದಲ್ಲಿ ರೇಷನ್ ಕಾರ್ಡ್ ಹೊಂದಿರುವವರು ಎಲ್ಲರೂ ಈ ಹೊಸ ವಿಶೇಷವಾದ ಸೂಚನೆಯನ್ನು ತಿಳಿದುಕೊಳ್ಳಲೇಬೇಕು.

ಕರ್ನಾಟಕದಲ್ಲಿ ನೆನ್ನೆ ಅಧಿಕಾರಿಗಳು ನಡೆಸಿರುವ ಆಹಾರ ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ವಿಶೇಷ ಸೂಚನೆಗಳನ್ನು ಹೊರಹಾಕಿದ್ದಾರೆ.  ಇದರ ಬಗ್ಗೆ ವಿವರವಾಗಿ ತಿಳಿಯಲಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

ರೇಷನ್ ಕಾರ್ಡ್ ವಿಚಾರವಾಗಿ ಮುಖ್ಯಮಂತ್ರಿ ಅಧಿಕಾರಿಗಳ ಜೊತೆ ಮೀಟಿಂಗ್:

ಸ್ನೇಹಿತರೆ ನೆನ್ನೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಜೊತೆ ಆಹಾರ ಇಲಾಖೆಯ ಅಧಿಕಾರಿಗಳು ಮೀಟಿಂಗ್ ಮಾಡಿದ್ದಾರೆ.  ಈ ಮೀಟಿಂಗ್ನಲ್ಲಿ ರೇಷನ್ ಕಾರ್ಡ್ ವಿಚಾರವಾಗಿ ಕೆಲವು ವಿಶೇಷ ಸೂಚನೆಗಳನ್ನು ಬಹಿರಂಗಪಡಿಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಆಹಾರ ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನ ಸಭೆಯಲ್ಲಿ ಕೆಲವೊಂದು ಮುಖ್ಯವಾದ ಮಾಹಿತಿಗಳನ್ನು ಹೊರಹಾಕಿದ್ದಾರೆ.

ಪ್ರಗತಿಪರಿಶೀಲನ್ ಸಭೆಯಲ್ಲಿ ರೇಷನ್ ಕಾರ್ಡ್ ಕುರಿತು ಸೂಚನೆಗಳು ಬಹಿರಂಗಪಡಿಸಲಾಗಿದೆ:

ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮನದಂಡಗಳನ್ನು ಪೂರೈಸದ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಅನರ್ಹರನ್ನು ಗುರುತಿಸಿ ಅಂತಹ ಹಂತವಾಗಿ ತೆಗೆದು ಹಾಕಬೇಕು.

ಅರ್ಹರ ಬಿಪಿಎಲ್ ಕಾರ್ಡ್ಗಳನ್ನು ರದ್ದಾಗದಂತೆ ನೋಡಿಕೊಳ್ಳಬೇಕು. ಅನರ್ಹ ಬಿಪಿಎಲ್ ಕಾರ್ಡ್ ಹೊಂದಿರುವವರು  ತಮ್ಮ ಬಿಪಿಎಲ್ ಕಾರ್ಡ್ಗಳನ್ನು ಸ್ವಯಂ ಹಿಂತಿರುಗಿಸಲು ಕಾಲಾವಕಾಶ ನೀಡಬೇಕು. ಹಿಂತಿರುಗಿಸದಿದ್ದಲ್ಲಿ ಅಂತವರಿಗೆ ನೋಟಿಸ್ ನೀಡಿ ಕಾರ್ಡ್ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು

ಅನ್ನಭಾಗ್ಯ ಯೋಜನೆ ನೇರ ವರ್ಗಾವಣೆ ಅಡಿ 4,692 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು  ಅಕ್ಟೋಬರ್ ಅಂತ್ಯದವರೆಗೆ 3,253 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.

4,44,48,294 ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಪಡಿತರ ಹಾಗೂ ಆಹಾರ ಧಾನ್ಯ  ವಿತರಣೆ ವ್ಯವಸ್ಥೆಯನ್ನು ತಳಹಂತದಲ್ಲಿ ಬಲಪಡಿಸುವ ಮೂಲಕ ಜಾಗೃತಿ ಸಮಿತಿಗಳಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸಬೇಕು. ಸಮಿತಿ ನಿಯಮಿತವಾಗಿ  ಸಭೆಯನ್ನು ನಡೆಸುವುದನ್ನು ಖಾತ್ರಿಪಡಿಸಬೇಕು. 

ಇದನ್ನೂ ಓದಿ: BSNL Recharge Plan: ಕಡಿಮೆ ಬೆಲೆಯ BSNL 199.ರೂ ರಿಚಾರ್ಜ್ ಪ್ಲಾನ್ಸ್.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment