Diabetes ಕಾಯಿಲೆ ಬರದಿರುದರಂತೆ ಈ ರೀತಿ ಮಾಡಿ.!

December 4, 2024 12:30 PM
Diabetes ಕಾಯಿಲೆ ಬರದಿರುದರಂತೆ ಈ ರೀತಿ ಮಾಡಿ.!

ಎಲ್ಲರಿಗೂ ನಮಸ್ಕಾರ, ಸಕ್ಕರೆ ಕಾಯಿಲೆ ಒಮ್ಮೆ ಒಕ್ಕರಿಸಿದರೆ ಅದನ್ನ ಕಂಟ್ರೋಲ್ ಮಾಡಬಹುದೇ ವಿನಃ ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ ಹೀಗಾಗಿ ಡಯಾಬಿಟಿಸ್ ಅಪಾಯ ಎದುರಾಗುವಂತಹ ಸಾಧ್ಯತೆಗಳನ್ನು ತಪ್ಪಿಸಲು ಈ ಸರಳ ಬದಲಾವಣೆಗಳನ್ನು ನಿಮ್ಮ ಜೀವನ ಕ್ರಮದಲ್ಲಿ ಮಾಡಿಕೊಂಡು ಮಧುಮೇಹದಿಂದ ಪಾರಾಗಿ ಟೈಪ್ ಟು ಡಯಾಬಿಟಿಸ್ ನಿಂದ ದೂರವಿರಲು ಹೀಗೆ ಮಾಡಿ ಈ ಸರಳ ಬದಲಾವಣೆಯಿಂದ ಮಧುಮೇಹದಿಂದ ಪಾರು ಮಧುಮೇಹ ಎನ್ನುವುದು ದೇಹದಲ್ಲಿ ಜೀವ ಜೀವನ ಪರ್ಯಂತ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು ಮಧುಮೇಹ ಇಂದಿನ ಕಾಲದಲ್ಲಿ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು.

ಇದರ ಬಗ್ಗೆ ಜನಜಾಗೃತಿ ಕೂಡ ಆಗಬೇಕಿದೆ ಜೀವನಶೈಲಿ ಆಹಾರ ಕ್ರಮ ಇತ್ಯಾದಿಗಳು ಇದಕ್ಕೆ ಕಾರಣ ಎನ್ನಬಹುದು ಅದರಲ್ಲೂ ಟೈಪ್ ಟು ಡಯಾಬಿಟಿಸ್ ಅನ್ನೋದು ಮೆದುಜೀರಿಕ ಗ್ರಂಥಿಗಳು ಇನ್ಸುಲಿನ್ ಅನ್ನ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿ ಮಾಡಲು ವಿಫಲವಾಗಿರುವ ಸ್ಥಿತಿ ದೇಹದಲ್ಲಿ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇನ್ಸುಲಿನ್ ಅತಿ ಅಗತ್ಯವಾಗಿ ಬೇಕು ಆದರೆ ಈ ರೀತಿಯ ಮಧುಮೇಹವನ್ನು ಕೂಡ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳಿಂದ ತಡೆಗಟ್ಟಬಹುದು ಐಸಿಎಂಆರ್ ಇತ್ತೀಚಿಗೆ ಬಿಡುಗಡೆ ಮಾಡಿರುವಂತಹ ಅಧ್ಯಯನದ ವರದಿ ಪ್ರಕಾರ ಭಾರತದ ಶೇಕಡ 158 ರಷ್ಟು ಜನರು ಮಧುಮೇಹಕ್ಕೆ ನಿಕಟವಾಗಿದ್ದಾರೆ.

ಜನರು ಸಣ್ಣ ಸಣ್ಣ ಬದಲಾವಣೆಗಳನ್ನ ಮಾಡುತ್ತಾ ಹೋದರು ಮಧುಮೇಹವನ್ನು ತಡೆಯುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ ಭಾರತವನ್ನ ಇಂದು ವಿಶ್ವದ ಮಧುಮೇಹದ ರಾಜಧಾನಿ ಅಂತ ಕರೆಯಲಾಗುತ್ತಿದೆ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಪ್ರಕಾರ 77 ಮಿಲಿಯನ್ ಭಾರತೀಯರು ಟೈಪ್ ಟು ಡಯಾಬಿಟಿಸ್ ರೋಗಿಗಳಾಗಿದ್ದಾರೆ ಹಾಗೆಯೇ ಅಧ್ಯಯನ ಪ್ರಕಾರ ಸರಿಯಾದ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಕ್ರಮ ತೆಗೆದುಕೊಳ್ಳದೆ ಇದ್ದರೆ ಆಗ 2045ರ ವೇಳೆಗೆ ಇದು 134 ಮಿಲಿಯನ್ ಗೆ ಏರಿಕೆಯಾಗಲಿದೆ ಅಂತ ಅಂದಾಜಿಸಲಾಗಿದೆ.

1. ಅತಿಯಾದ ತೂಕ

ಮೊದಲಿಗೆ ಅತಿಯಾದ ತೂಕ ತಗ್ಗಿಸಿ ಜನರು ತಮ್ಮ ತೂಕದ ಶೇಕಡಾ ಏಳರಷ್ಟು ಕಡಿಮೆ ಮಾಡಿದ್ರೆ ಆಗ ಮಧುಮೇಹ ಬರುವ ಸಾಧ್ಯತೆಯು ಶೇಕಡ 60 ರಷ್ಟು ಕಡಿಮೆಯಾಗುವುದು ಅಂತ ಹೇಳಲಾಗಿದೆ ಇದರಿಂದ ಆರೋಗ್ಯಕಾರಿ ತೂಕ ನಿರ್ವಹಿಸುವುದು ಅತಿ ಅಗತ್ಯ ಬಜ್ಜು ದೇಹವಿದ್ದರೆ ಕೂಡಲೇ ತೂಕ ಇಳಿಸಲು ಮುಂದಾಗಬೇಕು ಹಾಗೂ ವೃತ್ತಿಪರ ಮಾರ್ಗದರ್ಶಕರಿಂದಲೇ ತೂಕ ಇಳಿಸಲು ಮಾರ್ಗದರ್ಶನ ಪಡೆದುಕೊಳ್ಳಬೇಕು ಯಾವುದೇ ರೀತಿಯ ವೈದ್ಯಕೀಯ ಸಮಸ್ಯೆಗಳು ಇದ್ದರೆ ಆಗ ಅದನ್ನ ಕಡೆಗಣಿಸಬಾರದು.

ಇನ್ನು ಆರೋಗ್ಯಕಾರಿ ಪೋಷಕಾಂಶಗಳಿರುವ ಆಹಾರ ಟೈಪ್ ಟು ಮಧುಮೇಹಕ್ಕೆ ಪ್ರಮುಖ ಕಾರಣವೇ ಬೊಜ್ಜು ಪೋಷಕಾಂಶಗಳು ಇರುವ ಆಹಾರವನ್ನು ಕಡೆಗಣಿಸಿ ಅದರ ಬದಲಿಗೆ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಸ್ ಇರುವ ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್ ಗಳು ಮತ್ತು ಫ್ರಕ್ಟೋಸ್ ಅಧಿಕವಾಗಿರುವ ಆಹಾರಗಳನ್ನ ಸೇವನೆ ಮಾಡೋದು ಇದರ ಬದಲಿಗೆ ಹೆಚ್ಚು ಸಸ್ಯಜನ್ಯ ಆಹಾರದ ಕಡೆಗೆ ಗಮನಹರಿಸಿದರೆ ಒಳ್ಳೆಯದು ಇದು ಸಾಕಷ್ಟು ನಾರಿನಂಶ ವಿಟಮಿನ್ ಮತ್ತು ಖನಿಜಾಂಶಗಳನ್ನ ದೇಹಕ್ಕೆ ಒದಗಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಲು ಸಹಕಾರಿಯಾಗಿದೆ.

2. ವ್ಯಾಯಾಮ

ಸೂಕ್ತ ವ್ಯಾಯಾಮ ಮತ್ತು ಜೀವನಶೈಲಿ ಜಡ ಜೀವನಶೈಲಿಯಿಂದಾಗಿ ಮಧುಮೇಹ ಮಾತ್ರವಲ್ಲದೆ ಇತರ ಕೆಲವು ಅನಾರೋಗ್ಯಗಳಾದ ಕೊಲೆಸ್ಟ್ರಾಲ್ ರಕ್ತದೊತ್ತಡ ತೂಕ ಹೆಚ್ಚಳ ಹೃದಯದ ಆರೋಗ್ಯ ಸಮಸ್ಯೆಗಳು ಮತ್ತು ಇನ್ನಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು ಇದೆಲ್ಲವನ್ನು ತಡೆಯಲು ಮತ್ತು ಮಧುಮೇಹವನ್ನ ದೂರವಿಡಲು ನಿತ್ಯವೂ ಸರಿಯಾಗಿ ವ್ಯಾಯಾಮ ಮಾಡಿದ್ರೆ ತುಂಬಾ ಒಳ್ಳೆಯದು ನಿಯಮಿತವಾಗಿ ವ್ಯಾಯಾಮ ಮಾಡಿದ್ರೆ ಆಗ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಬಹುದು ಹಾಗೆ ಆರೋಗ್ಯಕಾರಿ ತೂಕ ಕಾಪಾಡಲು ಕೂಡ ಇದು ಸಹಕಾರಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಕಾರಣವಾಗಿರುವ ಹಾರ್ಮೋನ್ ಇನ್ಸುಲಿನ್ ಸೂಕ್ಷ್ಮತೆಯನ್ನು ವೃದ್ಧಿಸುತ್ತೆ.

3. ತಪಾಸಣೆ

ನಿಯಮಿತ ತಪಾಸಣೆ ಮುನ್ನೆಚ್ಚರಿಕೆ ಕ್ರಮವಾಗಿ ನಿಯಮಿತವಾಗಿ ಎಲ್ಲರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು ಇದರಿಂದ ದೇಹವನ್ನು ಸರಿಯಾಗಿ ತಿಳಿದುಕೊಳ್ಳಲು ಆಗುತ್ತೆ ಹಾಗೆಯೇ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಕೆಯಾಗಿದ್ರೆ ಅದು ತಿಳಿದು ಬರುತ್ತೆ ಆಗ ಪರಿಸ್ಥಿತಿಯನ್ನ ತಡಿಬಹುದು ಹಾಗೆ ಮಧುಮೇಹವನ್ನ ದೂರವಿಡಬಹುದು ಕೆಲವು ಜೀವನಶೈಲಿ ಬದಲಾವಣೆ ಮತ್ತು ವೈದ್ಯಕೀಯ ನೆರವು ಪಡೆದರೆ ಆಗ 15 ರಿಂದ 35 ಶೇಕಡದಷ್ಟು ಜನರು ಮಧುಮೇಹವನ್ನ ತಡೆಯಬಹುದು ಅಂತ ಅಧ್ಯಯನಗಳು ಹೇಳಿವೆ.

ಒತ್ತಡವನ್ನ ನಿಭಾಯಿಸಿ ಮೆದೋಜೀರಕ ಗ್ರಂಥಿಗಳು ಇನ್ಸುಲಿನ್ ಅನ್ನ ಸರಿಯಾದ ರೀತಿಯಲ್ಲಿ ಉತ್ಪತ್ತಿ ಮಾಡದೆ ಇರಲು ಒತ್ತಡವು ಪ್ರಮುಖ ಕಾರಣ ಒತ್ತಡವನ್ನು ನಿಭಾಯಿಸಿದರೆ ಆಗ ಜೀವನ ಮಟ್ಟವು ಉತ್ತಮವಾಗುತ್ತೆ ಹಾಗೆಯೇ ಇದರಿಂದಾಗಿ ಗ್ಲೈಸೆಮಿಕ್ ಇಂಡೆಕ್ಸ್ ಕೂಡ ಒಳ್ಳೆಯದಾಗಲಿದೆ ಆತಂಕವನ್ನು ಉಂಟುಮಾಡುವ ವಾತಾವರಣದಿಂದ ದೂರವಿರಿ ಆಲ್ಕೋಹಾಲ್ ಮತ್ತು ಧೂಮಪಾನ ಕಡೆಗಣಿಸಿ ಧೂಮಪಾನದಿಂದಾಗಿ ಮಧುಮೇಹದ ಅಪಾಯವು ಶೇಕಡ 30 ರಿಂದ 40 ರಷ್ಟು ಹೆಚ್ಚಾಗುತ್ತೆ ಹಾಗೆಯೇ ಆಲ್ಕೋಹಾಲ್ ಮೆದುಜೀರಕ ಗ್ರಂಥಿಗಳ ಉರಿಯುತ ಹೆಚ್ಚು ಮಾಡುವುದರ ಜೊತೆಗೆ ಇದರಿಂದಾಗಿ ಸರಿಯಾಗಿ ಇನ್ಸುಲಿನ್ ಉತ್ಪತ್ತಿಯಾಗುವುದಿಲ್ಲ ಮಧುಮೇಹ ಅಥವಾ ಬೊಜ್ಜಿನ ಇತಿಹಾಸವಿದ್ದರೆ ಆಗ ಇದರ ಬಗ್ಗೆ ಆದಷ್ಟು ಹೆಚ್ಚಿನ ಮುಂಜಾಗ್ರತೆ ತೆಗೆದುಕೊಂಡರೆ ಒಳ್ಳೆಯದು ಧೂಮಪಾನ ಮತ್ತು ಆಲ್ಕೋಹಾಲ್ ನಿಂದ ದೂರವಿರಲು ಸಲಹೆ ನೀಡಲಾಗುತ್ತೆ.

ಇವೆರಡರಿಂದ ಮಧುಮೇಹದ ಅಪಾಯ ಹೆಚ್ಚು ಧೂಮಪಾನ ಮತ್ತು ಮದ್ಯಪಾನದಿಂದಾಗಿ ವ್ಯಾಯಾಮ ಹಾಗೂ ಒತ್ತಡ ನಿರ್ವಹಣೆಗೂ ಕೂಡ ತೊಡಕುಂಟಾಗಬಹುದು ಹೀಗಾಗಿ ಈ ಸಲಹೆಗಳನ್ನು ಪಾಲಿಸುವುದರಿಂದಾಗಿ ಟೈಪ್ ಟು ಡಯಾಬಿಟಿಸ್ ಅಪಾಯದಿಂದ ಪಾರಾಗಬಹುದು.

ಇದನ್ನೂ ಓದಿ: ಈ 6 ಬಗೆಯ ಯೋಗಾಸನಗಳನ್ನು ಮಾಡಿ.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment